ಯುದ್ಧಕ್ಕೆ ಮುನ್ನುಡಿ ಹಾಡಿದ ಪ್ರೇಮ್​; ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಮೈಸೂರಿನಲ್ಲಿ ಮುಹೂರ್ತ

ಒಂದು ಮಾಸ್​ ಕಮರ್ಷಿಯಲ್​ ಸಿನಿಮಾಗೋಸ್ಕರ ಪ್ರೇಮ್ ಮತ್ತು ಧ್ರುವ ಸರ್ಜಾ ಕೈ ಜೋಡಿಸಲಿದ್ದಾರೆ ಎಂಬ ಸುದ್ದಿ ಈ ಮೊದಲಿನಿಂದಲೂ ಕೇಳಿ ಬರುತ್ತಲೇ ಇತ್ತು. ಆದರೆ, ಯಾವುದೂ ಅಧಿಕೃತವಾಗಿರಲಿಲ್ಲ. ಈಗ ಪ್ರೇಮ್ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಯುದ್ಧಕ್ಕೆ ಮುನ್ನುಡಿ ಹಾಡಿದ ಪ್ರೇಮ್​; ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಮೈಸೂರಿನಲ್ಲಿ ಮುಹೂರ್ತ
Follow us
TV9 Web
| Updated By: ಮದನ್​ ಕುಮಾರ್​

Updated on:Apr 19, 2022 | 7:15 AM

ನಿರ್ದೇಶಕ ಪ್ರೇಮ್ (Director Prem)  ಅವರು ಸ್ಯಾಂಡಲ್​ವುಡ್​ನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಅವರ ನಿರ್ದೇಶನದ ‘ಜೋಗಿ’ ಚಿತ್ರವನ್ನು ಸಿನಿಪ್ರಿಯರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅವರ ಅಭಿಮಾನಿ ಬಳಗ ದೊಡ್ಡದು. ಇನ್ನು, ಧ್ರುವ ಸರ್ಜಾ (Dhruva Sarja) ಸ್ಯಾಂಡಲ್​ವುಡ್​ನ ಬೇಡಿಕೆಯ ನಟ. ಅವರು ‘ಅದ್ದೂರಿ’, ‘ಭರ್ಜರಿ’ ಮೊದಲಾದ ಚಿತ್ರಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಈಗ ಇವರಿಬ್ಬರೂ ಒಂದಾಗಿದ್ದಾರೆ. ಧ್ರುವ ಸರ್ಜಾ ಮುಂದಿನ ಚಿತ್ರಕ್ಕೆ ಪ್ರೇಮ್​ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಗ್ಗೆ ಪ್ರೇಮ್ ಅಧಿಕೃತ ಘೋಷಣೆ ಮಾಡಿದ್ದಾರೆ.

ಒಂದು ಮಾಸ್​ ಕಮರ್ಷಿಯಲ್​ ಸಿನಿಮಾಗೋಸ್ಕರ ಪ್ರೇಮ್ ಮತ್ತು ಧ್ರುವ ಸರ್ಜಾ ಕೈ ಜೋಡಿಸಲಿದ್ದಾರೆ ಎಂಬ ಸುದ್ದಿ ಈ ಮೊದಲಿನಿಂದಲೂ ಕೇಳಿ ಬರುತ್ತಲೇ ಇತ್ತು. ಆದರೆ, ಯಾವುದೂ ಅಧಿಕೃತವಾಗಿರಲಿಲ್ಲ. ಈಗ ಪ್ರೇಮ್ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರೇಮ್​ ಅವರು ‘ಏಕ್​ ಲವ್​ ಯಾ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈ ಸಿನಿಮಾ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬಂದಿತ್ತು. ಆ ಬಳಿಕ ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ಹೊಸ ಸಿನಿಮಾ ಕೆಲಸ ಶುರುಮಾಡಿದ್ದಾರೆ ಪ್ರೇಮ್.

‘ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ’ ಎನ್ನುವ ಕ್ಯಾಪ್ಶನ್​ನೊಂದಿಗೆ ಫೋಟೋ ಪೋಸ್ಟ್ ಮಾಡಿದ್ದಾರೆ ಪ್ರೇಮ್​. ಫೋಟೋದಲ್ಲಿ ದೊಡ್ಡ ಕಮಾನಿನ ಮೇಲೆ 1970 ಎಂದು ಬರೆದುಕೊಂಡಿದೆ. ವ್ಯಕ್ತಿಯೋರ್ವ ಬೆನ್ನು ತೋರಿಸಿ ನಿಂತಿದ್ದು, ಕೈಯಲ್ಲಿ ಗನ್ ಹಿಡಿದಿದ್ದಾನೆ. ಈ ಕಥೆ ರೆಟ್ರೋ ಶೈಲಿಯಲ್ಲಿ ಸಾಗಲಿದೆಯೇ ಎನ್ನುವ ಕುತೂಹಲ ಕಾಡುತ್ತಿದೆ.

ಸಿನಿಮಾದ ಮುಹೂರ್ತವನ್ನು ಅಭಿಮಾನಿಗಳ ಜತೆ ನೆರವೇರಿಸಿಕೊಳ್ಳಲು ಪ್ರೇಮ್ ನಿರ್ಧರಿಸಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅವರು, ‘ಏಪ್ರಿಲ್ 24ರಂದು ಬೆಳಿಗ್ಗೆ 9:30ಕ್ಕೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಡೆಯೋ ಮುಹೂರ್ತಕ್ಕೆ ನೀವೇ ಮುಖ್ಯ ಅತಿಥಿ. ಬನ್ನಿ ಒಟ್ಟಿಗೆ ಹಬ್ಬ ಮಾಡೋಣ. ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ, ಹರಸಿ ಹಾರೈಸಿ’ ಎಂದು ಕೋರಿದ್ದಾರೆ. ಈ ಮೂಲಕ ಮೈಸೂರಿನಲ್ಲಿ ಮುಹೂರ್ತ ನೆರವೇರಿಸಿಕೊಳ್ಳಲು ಅವರು ಮುಂದಾಗಿದ್ದಾರೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್​ ನಿರ್ಮಾಣ ಮಾಡುತ್ತಿದ್ದು, ಈ ಪ್ರೊಡಕ್ಷನ್​ಹೌಸ್​ನ ನಾಲ್ಕನೇ ಸಿನಿಮಾ ಇದಾಗಿದೆ.

ಧ್ರುವ ಸರ್ಜಾ ‘ಮಾರ್ಟಿನ್​’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಮಾರ್ಟಿನ್’ ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುವ ನಟನೆಯ ಮೊದಲ ಸಿನಿಮಾ ‘ಅದ್ದೂರಿ’ಗೆ ಆ್ಯಕ್ಷನ್​-ಕಟ್​ ಹೇಳಿದ್ದ ಅವರು ಈಗ ಮತ್ತೊಮ್ಮೆ ಧ್ರುವ ಜತೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ: ರಕ್ಷಿತಾ-ಪ್ರೇಮ್​ ದಾಂಪತ್ಯಕ್ಕೆ 15 ವರ್ಷ; ‘ಹೆಂಗೆ ಕಳೆದೆ ಅಂತ ಯೋಚನೆ ಮಾಡ್ತಾ ಇದೀನಿ’ ಅಂದ್ರು ರಕ್ಷಿತಾ

ಏ.8ರಿಂದ ಜೀ5 ಒಟಿಟಿ ಮೂಲಕ ಪ್ರಸಾರ ಆಗಲಿದೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಸಿನಿಮಾ

Published On - 7:56 pm, Mon, 18 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ