ರೆಕಾರ್ಡ್..ರೆಕಾರ್ಡ್..ರೆಕಾರ್ಡ್..; ನಾಲ್ಕೇ ದಿನದಲ್ಲಿ 29 ದಾಖಲೆ ಬರೆದ ‘ಕೆಜಿಎಫ್ ಚಾಪ್ಟರ್ 2’
KGF Chapter 2 Records: ಕೆಲವೇ ದಿನಗಳಲ್ಲಿಈ ಚಿತ್ರ ಬಾಲಿವುಡ್ ಮಾರುಕಟ್ಟೆಯಿಂದ 300 ಕೋಟಿ ಕಮಾಯಿ ಮಾಡಲಿದೆ ಎಂಬುದು ಲೆಕ್ಕಾಚಾರ ಬಲ್ಲ ಪಂಡಿತರ ಊಹೆ. ಹಾಗಾದರೆ, ಈ ಸಿನಿಮಾ ಬರೆದ ದಾಖಲೆಗಳೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಕೆಜಿಎಫ್ ಚಾಪ್ಟರ್ 2’ ಹಲವು ದಾಖಲೆ (KGF Chapter 2 Records)ಬರೆಯಲಿದೆ ಎಂಬುದನ್ನು ಮೊದಲೇ ಊಹಿಸಲಾಗಿತ್ತು. ಆದರೆ, ಈ ಸಿನಿಮಾ ಮುಟ್ಟಿದ್ದೆಲ್ಲ ರೆಕಾರ್ಡ್ ಆಗಲಿದೆ ಎಂದು ಯಾರೂ ಊಹಿಸಿರಲಿಲ್ಲ. ಐದು ಭಾಷೆಗಳಲ್ಲಿ ರಿಲೀಸ್ ಆದ ಈ ಸಿನಿಮಾ ಒಂದಲ್ಲ, ಎರಡಲ್ಲ ಬರೋಬ್ಬರಿ 29 ದಾಖಲೆಗಳನ್ನು ಬರೆದಿದೆ. ಅದು ಕೇವಲ ನಾಲ್ಕು ದಿನಗಳಲ್ಲಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಈ ವಿಚಾರ ಇಡೀ ಚಿತ್ರತಂಡಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಯಶ್ (Yash) ಫ್ಯಾನ್ಸ್ ಅಕ್ಷರಶಃ ಹಬ್ಬವನ್ನೇ ಮಾಡುತ್ತಿದ್ದಾರೆ. ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಈ ಸಿನಿಮಾದಿಂದ ಇನ್ನೂ ಹಲವು ದಾಖಲೆಗಳು ಬರೆಯಲ್ಪಡಲಿದೆ.
‘ಕೆಜಿಎಫ್ 2’ ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಬಾಲಿವುಡ್ ಚಿತ್ರಗಳೇ ಮಾಡದ ದಾಖಲೆಗಳನ್ನು ಈ ಸಿನಿಮಾ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿಈ ಚಿತ್ರ ಬಾಲಿವುಡ್ ಮಾರುಕಟ್ಟೆಯಿಂದ 300 ಕೋಟಿ ಕಮಾಯಿ ಮಾಡಲಿದೆ ಎಂಬುದು ಲೆಕ್ಕಾಚಾರ ಬಲ್ಲ ಪಂಡಿತರ ಊಹೆ. ಹಾಗಾದರೆ, ಈ ಸಿನಿಮಾ ಬರೆದ ದಾಖಲೆಗಳೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
- ಹಿಂದಿ ಬೆಲ್ಟ್ನಲ್ಲಿ ರೆಕಾರ್ಡ್ ಓಪನಿಂಗ್
- ಹಿಂದಿಯಲ್ಲಿ ರೆಕಾರ್ಡ್ ವೀಕೆಂಡ್ ಕಲೆಕ್ಷನ್
- ಹಿಂದಿ ಬೆಲ್ಟ್‌ಗಳಲ್ಲಿ ಒಂದೇ ದಿನ ಅತಿಹೆಚ್ಚು ಗಳಿಕೆ
- ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಎರಡನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
- ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಭಾನುವಾರ ಅತಿ ಹೆಚ್ಚು ಹಣ ಬಾಚಿದ ಚಿತ್ರ
- ಹಿಂದಿ ಬೆಲ್ಟ್ನಲ್ಲಿ ನಾಲ್ಕು ದಿನಗಳಲ್ಲಿ ಹೆಚ್ಚು ದುಡ್ಡು ಮಾಡಿದ ಚಿತ್ರ
- ಕರ್ನಾಟಕದಲ್ಲಿ ರೆಕಾರ್ಡ್ ಓಪನಿಂಗ್
- ಕರ್ನಾಟಕದಲ್ಲಿ ವೀಕೆಂಡ್ ಅವಧಿಯಲ್ಲಿ ‘ಕೆಜಿಎಫ್ 2’ ದಾಖಲೆಯ ಕಲೆಕ್ಷನ್
- ಕರ್ನಾಟಕದಲ್ಲಿ ಎರಡನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
- ಕರ್ನಾಟಕದಲ್ಲಿ ಮೂರನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
- ಕರ್ನಾಟಕದಲ್ಲಿ ನಾಲ್ಕನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
- ಕರ್ನಾಟಕದಲ್ಲಿ ಭಾನುವಾರ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
- ಕರ್ನಾಟಕದಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ
- ಕೇರಳದಲ್ಲೂ ರೆಕಾರ್ಡ್ ಓಪನಿಂಗ್
- ಕೇರಳದ ಬಾಕ್ಸ್ ಆಫೀಸ್ನಲ್ಲಿ ಮೊದಲ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
- ಕೇರಳದಲ್ಲಿ ಎರಡನೇ ದಿನ ಅತಿ ಹೆಚ್ಚು ದುಡ್ಡು ಮಾಡಿದ ಸಿನಿಮಾ
- ಕೇರಳದಲ್ಲಿ ಮೂರನೇ ದಿನ ಅತಿ ಹೆಚ್ಚು ದುಡ್ಡು ಮಾಡಿದ ಸಿನಿಮಾ
- ಕೇರಳದಲ್ಲಿ ನಾಲ್ಕನೇ ದಿನ ಅತಿ ಹೆಚ್ಚು ದುಡ್ಡು ಮಾಡಿದ ಸಿನಿಮಾ
- ಕೇರಳದಲ್ಲಿ ಒಂದೇ ದಿನ ಅತಿ ಹೆಚ್ಚು ದುಡ್ಡು ಮಾಡಿದ ಸಿನಿಮಾ
- ಕೇರಳದ ಸಂಡೇ ಬಾಕ್ಸ್ ಆಫೀಸ್ನಲ್ಲಿ ಧಮಾಕಾ
- ಟಾಲಿವುಡ್ನಲ್ಲಿ ರೆಕಾರ್ಡ್ ಓಪನಿಂಗ್
- ವಾರಾಂತ್ಯದಲ್ಲಿ ಟಾಲಿವುಡ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
- ಟಾಲಿವುಡ್ನಲ್ಲಿ ಎರಡನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
- ಟಾಲಿವುಡ್ನಲ್ಲಿ ಮೂರನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
- ಟಾಲಿವುಡ್ನಲ್ಲಿ ನಾಲ್ಕನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
- ಟಾಲಿವುಡ್ನಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
- ಟಾಲಿವುಡ್ನಲ್ಲಿ ಭಾನುವಾರದ ಕಲೆಕ್ಷನ್ನಲ್ಲಿ ತೆಲುಗೇತರ ಸಿನಿಮಾ ಪೈಕಿ ‘ಕೆಜಿಎಫ್ 2’ಗೆ ಮೊದಲ ಸ್ಥಾನ
- ಭಾರತದಲ್ಲಿ ಐಮ್ಯಾಕ್ಸ್ ಕಲೆಕ್ಷನ್ನಲ್ಲಿ ದಾಖಲೆ
- ಸ್ಯಾಂಡಲ್ವುಡ್ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
Published On - 3:06 pm, Mon, 18 April 22