50ನೇ ದಿನದತ್ತ ‘ಕನ್ನೇರಿ’ ಗೆಲುವಿನ ಹೆಜ್ಜೆ
ಚಿತ್ರದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ, ಅರುಣ್ ಸಾಗರ್, ಅನಿತಾ ಭಟ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಹಲವು ಕಲಾವಿದರ ತಾರಾಬಳಗವಿದೆ.
ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಸಿನಿಮಾ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ಪರಿಸರ, ಅದರೊಳಗೆ ಬದುಕು ಕಟ್ಟಿಕೊಂಡು ಉಸಿರಾಗಿಸಿಕೊಂಡ ಜನರ ಬಗ್ಗೆ, ನೆಲದ ಆಚಾರ, ಸಂಸ್ಕೃತಿ ಬಗ್ಗೆ, ಅಧಿಕಾರಿಗಳ ಅಧಿಕಾರದ ದರ್ಪ ಹೀಗೆ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುವ ಮಹಿಳಾ ಪ್ರಧಾನ ಚಿತ್ರ ಕನ್ನೇರಿ. ಅರಿವು ಮೂಡಿಸುವ, ಎಚ್ಚರಿಸುವ, ಪ್ರತಿಯೊಬ್ಬ ನೋಡುಗನನ್ನೂ ಯೋಚನೆಗೆ ಹಚ್ಚುವ ಈ ಚಿತ್ರ ಪ್ರೇಕ್ಷಕ ಪ್ರಭುಗಳ ಪ್ರೀತಿಗೆ ಪಾತ್ರವಾಗಿತ್ತು. ಸಿನಿಮಾ ಬಗ್ಗೆ ಉತ್ತಮ ವಿಮರ್ಶೆ ಕೇಳಿ ಬಂದಿತ್ತು. ಇದೇ ಪ್ರೀತಿಯಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತ 50ನೇ ದಿನದತ್ತ ಹೆಜ್ಜೆ ಇಟ್ಟಿದೆ ಕನ್ನೇರಿ ಸಿನಿಮಾ.
ನೈಜ ಘಟನೆ ಹಾಗೂ ಕಾದಂಬರಿಯಿಂದ ಸ್ಪೂರ್ತಿ ಪಡೆದ ‘ಕನ್ನೇರಿ’ ಚಿತ್ರದ ಸೂತ್ರಧಾರ ನೀನಾಸಂ ಮಂಜು. ಕಾಡುಗಳಲ್ಲಿ ಬದುಕು ಕಟ್ಟಿಕೊಂಡ ಜನರನ್ನು ಒಕ್ಕೆಲೆಬ್ಬಿಸಿ ಪಟ್ಟಣಕ್ಕೆ ಅಟ್ಟಿದಾಗ ಅದಕ್ಕೆ ಹೊಂದಿಕೊಳ್ಳಲು ಆಗದೇ ಪಡುವ ಪಡಿಪಾಟಲು. ನಗರದತ್ತ ದುಡಿಮೆಗೆ ಸೇರುವ ಹೆಣ್ಣುಮಕ್ಕಳ ಅಮಾಯಕತೆಯನ್ನು ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳಲಾಗುತ್ತೆ ಎನ್ನುವುದರ ಜೊತೆಗೆ ಸೂಕ್ಷ್ಮ ಸಂದೇಶ ಸಾರುವ ಕಥೆಯನ್ನು ಕನ್ನೇರಿ ಒಳಗೊಂಡಿದೆ. ಸಿನಿರಸಿಕರ ಮನಸ್ಸಿಗೆ ಹಿಡಿಸಿದ ಈ ಚಿತ್ರ ಉತ್ತರ ಕರ್ನಾಟಕ ಭಾಗದಲ್ಲಿ ಅಪಾರ ಪ್ರೀತಿಯನ್ನು ಗಳಿಸಿಕೊಂಡಿದೆ. ರಾಯಬಾಗದ ದತ್ತ ಚಿತ್ರಮಂದಿರದಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತ 50ನೇ ದಿನದತ್ತ ಹೆಜ್ಜೆ ಹಾಕುತ್ತಿದೆ. ಇಲ್ಲಿನ ಜನರ ಪ್ರೀತಿ ಅಭಿಮಾನ ಕಂಡು ಸಿನಮಾ ತಂಡ ಕೂಡ ಸಂತಸ ವ್ಯಕ್ತಪಡಿಸಿದೆ.
ಚಿತ್ರದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ, ಅರುಣ್ ಸಾಗರ್, ಅನಿತಾ ಭಟ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಹಲವು ಕಲಾವಿದರ ತಾರಾಬಳಗವಿದೆ. ಕದ್ರಿ ಮಣಿಕಾಂತ್ ಸಂಗೀತವಿರುವ ಈ ಚಿತ್ರ ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ.ಹೆಬ್ಬಾರ್ ಹಾಗೂ ಚಂದ್ರಶೇಖರ್ ನಿರ್ಮಾಪಕರು.
ಇದನ್ನೂ ಓದಿ: ‘ಕೆಜಿಎಫ್ 2’ ಅಬ್ಬರದಿಂದ ಮಲ್ಟಿಪ್ಲೆಕ್ಸ್ಗಳಲ್ಲಿ ‘ಬೀಸ್ಟ್’ಗೆ ಸಿಗಲಿಲ್ಲ ಸ್ಕ್ರೀನ್; ನಿರ್ಮಾಪಕನ ಅಸಮಾಧಾನ?
Sanjay Dutt: ಸತತ 2-3 ಗಂಟೆ ಕಣ್ಣೀರು ಹಾಕಿದ್ದ ‘ಕೆಜಿಎಫ್ 2’ ಅಧೀರ; ಕಾರಣವೇನು?
Published On - 1:26 pm, Mon, 18 April 22