KCET Results 2023 Highlights: ಸಿಇಟಿ ಫಲಿತಾಂಶ ಪ್ರಕಟ, ರಿಸಲ್ಟ್‌ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

| Updated By: ನಯನಾ ಎಸ್​ಪಿ

Updated on: Jun 15, 2023 | 12:17 PM

Karnataka CET Results 2023 ಸಿಇಟಿ ಫಲಿತಾಂಶ Live Updates: 2023-24ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಕಳೆದ ತಿಂಗಳು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಇಂದು(ಜೂನ್ 15) ಬೆಳಗ್ಗೆ 9.30ಕ್ಕೆ karresults.nic.in ನಲ್ಲಿ ಪ್ರಕಟವಾಗಿದೆ. ರಿಸಲ್ಟ್‌ ನೋಡುವುದು ಹೇಗೆ? ಟಾಪರ್ಸ್​ ಯಾರು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

KCET Results 2023 Highlights: ಸಿಇಟಿ ಫಲಿತಾಂಶ ಪ್ರಕಟ, ರಿಸಲ್ಟ್‌ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

2023-24ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಕಳೆದ ತಿಂಗಳು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ, ಸಿಇಟಿ ಫಲಿತಾಂಶ ಇಂದು(ಜೂನ್ 15) ಪ್ರಕಟವಾಗಿದೆ. ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ಇಂದು ಬೆಳಗ್ಗೆ 9.30ಕ್ಕೆ ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದ್ದಾರೆ, ಬೆಳಗ್ಗೆ 11 ಗಂಟೆಗೆ ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇ 20 ಹಾಗೂ 21ರಂದು ಸಿಇಟಿ ಪರೀಕ್ಷೆಗಳನ್ನು ನಡೆಸಿತ್ತು. ರಾಜ್ಯದ 592 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2.60 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇಂದು ಅದರ ಫಲಿತಾಂಶ karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ದೇಶಕಿ ಎಸ್ .ರಮ್ಯಾ ಮಾಹಿತಿ ನೀಡಿದ್ದಾರೆ.

LIVE NEWS & UPDATES

The liveblog has ended.
  • 15 Jun 2023 11:24 AM (IST)

    KCET Results 2023 Live: CET ಅರ್ಜಿ ಪ್ರಕ್ರಿಯೆ; ದೋಷ-ಮುಕ್ತ ಸಲ್ಲಿಕೆಗಳನ್ನು ಖಚಿತಪಡಿಸಿಕೊಳ್ಳಲು ವಿಶೇಷ ಆ್ಯಪ್

    “ಸಿಇಟಿ ಅರ್ಜಿಯನ್ನು ಭರ್ತಿ ಮಾಡುವಾಗ ವಿದ್ಯಾರ್ಥಿಗಳು ಹೆಚ್ಚು ತಪ್ಪುಗಳನ್ನು ಮಾಡುವುದನ್ನು ನಾವು ಗುರುತಿಸಿದ್ದೇವೆ. ಆದ್ದರಿಂದ, ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ವಿಶೇಷ ಆ್ಯಪ್ ಅನ್ನು ಅಭಿವೃದ್ಧಿಪಡಿಸುವ ನಿರ್ಧಾರವನ್ನು ನಾವು ಮಾಡಿದ್ದೇವೆ. ಇನ್ನು ಮುಂದೆ ಸಿಇಟಿ ಅರ್ಜಿಯನ್ನು ನಿಖರವಾಗಿ ಭರ್ತಿ ಮಾಡಲು ಈ ಆ್ಯಪ್ ಅನ್ನು ಬಳಸಬಹುದು. ಇದು ಅರ್ಜಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ದೋಷಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಆ್ಯಪ್ ಅಭಿವೃದ್ಧಿಯ ಕೆಲಸಗಳು ಈಗಾಗಲೇ ಪ್ರಾರಂಭವಾಗಿದೆ, ಮುಂದಿನ ದಿನಗಳಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು”, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಡಾ. ಎಂ.ಸಿ. ಸುಧಾಕರ್ ಹೇಳಿಕೆ ನೀಡಿದ್ದಾರೆ.

  • 15 Jun 2023 11:11 AM (IST)

    KCET Results 2023 Live: ಫಲಿತಾಂಶ ಪರಿಶೀಲಿಸಲು ನೇರ ಲಿಂಕ್

    ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು karresults.nic.in ನಲ್ಲಿ ಪರಿಶೀಲಿಸಬಹುದು

  • 15 Jun 2023 10:44 AM (IST)

    KCET Results 2023 Live: ಒಟ್ಟು 114,565 ಹುಡುಗರು ಪರೀಕ್ಷೆಗೆ ಹಾಜರಾಗಿದ್ದರು

    ಮತ್ತೊಂದೆಡೆ, 114,565 ಹುಡುಗರು ಪರೀಕ್ಷೆಗೆ ಹಾಜರಾಗಿದ್ದರು, ಅವರಲ್ಲಿ 71,800 ಬಿಎನ್‌ವೈಎಸ್, 96,577 ವಿದ್ಯಾರ್ಥಿಗಳು ಎಂಜಿನಿಯರಿಂಗ್‌ನಲ್ಲಿ ಅರ್ಹತೆ ಪಡೆದಿದ್ದಾರೆ, 71,067 ವಿದ್ಯಾರ್ಥಿಗಳು ಬಿಎಸ್‌ಸಿ ಕೃಷಿಯಲ್ಲಿ ಅರ್ಹತೆ ಪಡೆದಿದ್ದಾರೆ, 71,796 ವಿದ್ಯಾರ್ಥಿಗಳು ಬಿವಿಎಸ್‌ಸಿ ಕೋರ್ಸ್‌ಗೆ ಅರ್ಹತೆ ಪಡೆದಿದ್ದಾರೆ.

  • 15 Jun 2023 10:42 AM (IST)

    KCET Results 2023 Live: ಒಟ್ಟು 129,780 ಬಾಲಕಿಯರು ಕೆಸಿಇಟಿ ಪರೀಕ್ಷೆಗೆ ಹಾಜರು

    ಒಟ್ಟು 129,780 ಬಾಲಕಿಯರು ಕೆಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ, 94,946 ವಿದ್ಯಾರ್ಥಿನಿಯರು BNYS ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ, 106,804 ವಿದ್ಯಾರ್ಥಿನಿಯರು ಎಂಜಿನಿಯರಿಂಗ್‌ನಲ್ಲಿ ಅರ್ಹತೆ ಪಡೆದಿದ್ದಾರೆ, 93,120 ವಿದ್ಯಾರ್ಥಿನಿಯರು BSc ಕೃಷಿ ಮತ್ತು 94,960 ವಿದ್ಯಾರ್ಥಿನಿಯರು ವೆಟರ್ನರಿ ಕೋರ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಹೆಚ್ಚುವರಿಯಾಗಿ, 108,760 ವಿದ್ಯಾರ್ಥಿನಿಯರು ಬಿಫಾರ್ಮ ಕೋರ್ಸ್‌ಗೆ ಅರ್ಹರಾಗಿದ್ದಾರೆ ಮತ್ತು 108,791 ವಿದ್ಯಾರ್ಥಿನಿಯರು ಫಾರ್ಮಡಿಗೆ ಅರ್ಹತೆ ಪಡೆದಿದ್ದಾರೆ. BSc ನರ್ಸಿಂಗ್ ಕ್ಷೇತ್ರದಲ್ಲಿ 94,972 ವಿದ್ಯಾರ್ಥಿನಿಯರು ಅರ್ಹತೆ ಪಡೆದಿದ್ದಾರೆ.

  • 15 Jun 2023 10:33 AM (IST)

    KCET Results 2023 Live: ಬಿಎನ್‌ವೈಎಸ್‌ನಲ್ಲಿ ಪ್ರತೀಕ್ಷಾ ಆರ್​ ಅವರಿಗೆ ಪ್ರಥಮ ರ‍್ಯಾಂಕ್

    ಬೆಂಗಳೂರಿನ ಶ್ರೀ ಕುಮಾರನ್ಸ್ ಕಾಲೇಜಿನ ಪ್ರತೀಕ್ಷಾ ಆರ್ ಬಿಎನ್‌ವೈಎಸ್‌ನಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಭೈರೇಶ್ ಎಸ್.ಎಚ್ ದ್ವಿತೀಯ, ಹುಬ್ಬಳ್ಳಿಯ ಬೇಸ್ ಪಿಯು ಕಾಲೇಜಿನ ಸೃಜನ್ ಎಂ.ಎಚ್ ತೃತೀಯ ರ‍್ಯಾಂಕ್ ಗಳಿಸಿದ್ದಾರೆ.

  • 15 Jun 2023 10:30 AM (IST)

    KCET Results 2023 Live: ಬಿಎಸ್‌ಸಿಯಲ್ಲಿ ಬೈರೇಶ್​ಗೆ ಪ್ರಥಮ ರ‍್ಯಾಂಕ್

    ಮಂಗಳೂರಿನ ಎಕ್ಸ್‌ಪರ್ಟ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಬಿಎಸ್‌ಸಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ರಾಯಚೂರಿನ ಪ್ರಮಾಣ ಪಿಯು ಕಾಲೇಜಿನ ಅನಯಾರಾಗ್ ರಂಜನ್ ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ. ರಾಜಸ್ಥಾನ ರಾಜ್ಯದ ಲೇಡಿ ಅನ್ಸೂಯಾ ಸಿಂಘಾನಿ ಅವರ ಅಕಾಡೆಮಿ ಆಫ್ ಎಜುಕೇಶನ್‌ನ ಕಾರ್ತಿಕ್ ಮನೋಹರ್ ಸಿಂಹಸನ್ ಮೂರನೇ ರ‍್ಯಾಂಕ್ ಗಳಿಸಿದ್ದಾರೆ.

  • 15 Jun 2023 10:28 AM (IST)

    KCET Results 2023 Live: ಬಿ ಫಾರ್ಮಾದಲ್ಲಿ ಪ್ರತೀಕ್ಷಾ ಆರ್ ಪ್ರಥಮ

    ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್ ಕಾಂಪೋಸಿಟ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ ಆರ್, ಬಿ ಫಾರ್ಮಾದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮಹೇಶ್ ಪಿಯು ಕಾಲೇಜಿನ ಮಾಳವಿಕಾ ಕಪೂರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ನಾರಾಯಣ್ ಇ ಟೆಕ್ನೋ ಶಾಲೆಯ ಮಾಧವ್ ಸೂರ್ಯ ತಾಡೆಪಲ್ಲಿ ತೃತೀಯದಲ್ಲಿದ್ದಾರೆ.

  • 15 Jun 2023 10:22 AM (IST)

    KCET Results 2023 Live: ವೆಟನರಿ ಸೈನ್ಸ್ ವಿಭಾಗದಲ್ಲಿ ಮಾಳವಿಕ ಕಾಪೂರ್​ಗೆ ಮೊದಲ ರ‍್ಯಾಂಕ್

    ವೆಟನರಿ ಸೈನ್ಸ್ ವಿಭಾಗದಲ್ಲಿ ಮಾಳವಿಕ ಕಾಪೂರ್​ ಮೊದಲ ರ‍್ಯಾಂಕ್ ಪಡೆದಿದ್ದು, ಸಿಇಟಿಯಲ್ಲಿ ಒಟ್ಟು 97.222 ಅಂಕ ಪಡೆದಿದ್ದಾರೆ. ಇವರು ಚಾಮರಾಜಪೇಟೆಯ ಮಹೇಶ್ ಪಿಯು ಕಲೇಜಿನ ವಿಧ್ಯಾರ್ಥಿಯಾಗಿದ್ದಾರೆ.

  • 15 Jun 2023 10:20 AM (IST)

    KCET Results 2023 Live: ಕೃಷಿ ವಿಭಾಗದಲ್ಲಿ ಬೈರೇಶ್ ಎಸ್.ಎಚ್ ಅವರಿಗೆ ಪ್ರಥಮ ಸ್ಥಾನ

    ಕೃಷಿ ವಿಭಾಗದಲ್ಲಿ ಬೈರೇಶ್ ಎಸ್.ಎಚ್ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಮಂಗಳೂರಿನ ಎಕ್ಸ್​ಪರ್ಟ್ ಯುನಿವರ್ಸಿಟಿ ಕಾಲೇಜ್ ವಿಧ್ಯಾರ್ಥಿಯಾದ ಬೈರೇಶ್, ಕ್ವಾಲಿಫಿಕೇಷನ್​ನಲ್ಲಿ 99.75 ಅಂಕ ಪಡೆದಿದ್ದು, ಸಿಟಿಟಿಯಲ್ಲಿ 93.75 ಅಂಕ ಪಡೆದು ಮೊದಲ ರ‍್ಯಾಂಕ್ ಪಡೆದಿದ್ದಾರೆ.

  • 15 Jun 2023 10:20 AM (IST)

    KCET Results 2023 Live: ನ್ಯಾಚೂರೋಪತಿ ಹಾಗೂ ಯೋಗದಲ್ಲಿ ಪ್ರತೀಕ್ಷಾಗೆ ಮೊದಲ ರ‍್ಯಾಂಕ್

    ನ್ಯಾಚೂರೋಪತಿ ಹಾಗೂ ಯೋಗದಲ್ಲಿ ಪ್ರತೀಕ್ಷಾಗೆ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಪದ್ಮನಾಭನಗರದ ಕುಮಾರನ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ಇವರು 98.661 ಅಂಕ ಪಡೆದು ಇಡೀ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

  • 15 Jun 2023 10:12 AM (IST)

    KCET Results 2023 Live: ಇಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 10 ವಿಧ್ಯಾರ್ಥಿಗಳು ಟಾಪರ್ಸ್

    ವಿಗ್ನೇಶ್ ನಾಟರಾಜ್ ಕುಮಾರ್ ಮೊದಲ ಇಂಜಿನಿಯರಿಂಗ್ ಅಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಇವರು ಕ್ವಾಲಿಫೈ ಪರೀಕ್ಷೆಯಲ್ಲಿ 99.667 ಅಂಕ ಕಳಿಸಿದ್ದು, ಸಿಟಿಇಯಲ್ಲಿ 96.111 ಅಂಕ ಪಡೆದಿದ್ದು. ಒಟ್ಟು 97.111 ಪರ್ಸೆಂಟೇಜ್ ಪಡೆದಿದ್ದಾರೆ

  • 15 Jun 2023 10:09 AM (IST)

    KCET Results 2023 Live: ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಹೇಳಿಕೆ

    ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ” ಈ ಬಾರಿ ರಾಜ್ಯದ 592 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿದ್ವಿ. 592 ಕೇಂದ್ರಗಳಲ್ಲಿ 2,61,610 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ರು. ಆ ಪೈಕಿ 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ರು. ಸರಿ ಉತ್ತರಗಳನ್ನು ಪ್ರಾಧಿಕಾರದ kea.nic.in ವೆಬ್ ಸೈಟ್ ನಲ್ಲಿ ಪ್ರಕಟ ಮಾಡಲಿದೆ” ಎಂದು ಹೇಳಿದರು.

    ಮೆರಿಟ್ ಪಟ್ಟಿ:

    • ಇಂಜಿನಿಯರಿಂಗ್ ಕೋರ್ಸಿಗೆ- 2,03,381
    • ಕೃಷಿ ವಿಜ್ಞಾನ ಕೋರ್ಸಿಗೆ- 1,64,187
    • ಪಶುಸಂಗೋಪನೆ- 166756
    • ಯೋಗ ಮತ್ತು ನ್ಯಾಚುರೋಪತಿ ಗೆ- 2,06191
    • ಬಿ.ಪಾರ್ಮ್ ಮತ್ತು ಡಿ.ಪಾರ್ಮ್ ಕೋರ್ಸ್ ಗೆ- 2,06,340
    • ನರ್ಸಿಂಗ್ ಕೋರ್ಸಿಗೆ – 1,66,808 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ
  • 15 Jun 2023 10:02 AM (IST)

    KCET Results 2023 Live: ಇಂಜಿನಿಯರಿಂಗ್ ವಿಭಾಗದಲ್ಲಿ​ ವಿಘ್ನೇಶ್​ ಪ್ರಥಮ ಸ್ಥಾನ

    ಈ ಬಾರಿ ಸಿಇಟಿಯಲ್ಲೂ ಬಾಲಕಿಯರದ್ದೇ ಮೇಲುಗೈ. ಇಂಜಿನಿಯರಿಂಗ್ ವಿಭಾಗದಲ್ಲಿ​:

    • ವಿಘ್ನೇಶ್​ ಪ್ರಥಮ ಸ್ಥಾನ
    • ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ
    • ಸಮೃದ್ಧ್​ ಶೆಟ್ಟಿ ತೃತೀಯ ಸ್ಥಾನ
    • ಎಸ್.ಸುಮೇಧ್​ಗೆ 4ನೇ ಸ್ಥಾನ
    • ಮಾಧವ ಸೂರ್ಯಗೆ 5ನೇ ಸ್ಥಾನ
  • 15 Jun 2023 10:00 AM (IST)

    KCET Results 2023 Live: ಈ ಬಾರಿ ಸಿಇಟಿಯಲ್ಲೂ ಬಾಲಕಿಯರದ್ದೇ ಮೇಲುಗೈ

    ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬರಿ ಪರೀಕ್ಷೆಯಲ್ಲಿ ಒಟ್ಟು 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ & ನ್ಯಾಚುರೋಪತಿ, ಡಿ ಫಾರ್ಮ ಕೋರ್ಸ್,​ ಬಿಎಸ್ಸಿ ನರ್ಸಿಂಗ್​ಗೆ ಪ್ರವೇಶ ಪರೀಕ್ಷೆ ನಡೆದಿತ್ತು. ಈ ಬಾರಿ ಸಿಇಟಿಯಲ್ಲೂ ಬಾಲಕಿಯರದ್ದೇ ಮೇಲುಗೈ

  • 15 Jun 2023 09:54 AM (IST)

    KCET Results 2023 Live: ಕೆಸಿಇಟಿ 2023 ಫಲಿತಾಂಶ ಪ್ರಕಟ

    ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್​ರಿಂದ ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಒಟ್ಟು 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು

     

  • 15 Jun 2023 09:50 AM (IST)

    KCET Results 2023 Live: CET ಅಧಿಕೃತ ವೆಬ್‌ಸೈಟ್ ಪ್ರತಿಕ್ರಿಯಿಸುತ್ತಿಲ್ಲ

    KCET ಅಧಿಕೃತ ವೆಬ್‌ಸೈಟ್ kea.kar.nic.in ಈ ಕ್ಷಣದಲ್ಲಿ ಪ್ರತಿಕ್ರಿಯಿಸುತ್ತಿಲ್ಲ. KEA ಅಧಿಕೃತ ವೆಬ್‌ಸೈಟ್‌ನಲ್ಲಿ ಯಾವುದೇ ನಿಮಿಷದಲ್ಲಿ KCET 2023 ಫಲಿತಾಂಶವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

  • 15 Jun 2023 09:38 AM (IST)

    KCET Results 2023 Live: KCET ಫಲಿತಾಂಶವನ್ನು ಪರಿಶೀಲಿಸಲು ಲಿಂಕ್

    ಅಧಿಕೃತ ಬಿಡುಗಡೆಯ ನಂತರ, ಬೆಳಿಗ್ಗೆ 11.00 ರಿಂದ CET-2023 ಫಲಿತಾಂಶಗಳನ್ನು KEA ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ಪರಿಶೀಲಿಸಬಹುದು. ಈ ಕೆಳಗಿನ ಲಿಂಕ್ ಬಳಸಿ ನಿಮ್ಮ ಹೆಸರು, ರೋಲ್ ನಂಬರ್, ಇತರ ರುಜುವಾತುಗಳನ್ನು ತುಂಬುವ ಮೂಲಕ ನಿಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.

  • 15 Jun 2023 09:33 AM (IST)

    KCET Results 2023 Live: KCET ಫಲಿತಾಂಶದ ನಂತರ ಮುಂದೇನು?

    KCET 2023 ಫಲಿತಾಂಶಗಳಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳು, ರಾಜ್ಯದಾದ್ಯಂತ ಭಾಗವಹಿಸುವ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಮತ್ತಷ್ಟು ಶಾರ್ಟ್‌ಲಿಸ್ಟ್ ಮಾಡಲು KCET ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ.

  • 15 Jun 2023 07:50 AM (IST)

    ಒಟ್ಟು 2.6 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ

    ಈ ಹಿಂದೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್ 12 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸುಮಾರು 30 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ವಿವರಗಳಲ್ಲಿ ಹೊಂದಾಣಿಕೆಯಾಗದ ಕಾರಣ ಫಲಿತಾಂಶದ ದಿನಾಂಕವನ್ನು ಮುಂದುಡಲಾಗಿತ್ತು. ಮೇ 20 ರಿಂದ ಮೇ 22ರವರೆಗೆ ರಾಜ್ಯಾದ್ಯಂತ 592 ಪರೀಕ್ಷಾ ಕೇಂದ್ರಗಳಲ್ಲಿ ಕೆಸಿಇಟಿ ಪರೀಕ್ಷೆ ನಡೆದಿದ್ದು, ರಾಜ್ಯದಲ್ಲಿ ಒಟ್ಟು 2.6 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

  • 15 Jun 2023 07:47 AM (IST)

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆದಿದ್ದ ಪರೀಕ್ಷೆ

    ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್‌ಸಿ ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿತ್ತು. ಈಗಾಗಲೇ ಈಗಾಗಲೇ ಕೀ ಉತ್ತರಗಳನ್ನ ಪ್ರಕಟ ಮಾಡಲಾಗಿದ್ದು, ಇಂದು ಅಧಿಕೃತ ಫಲಿತಾಂಶ ಪ್ರಕಟಿಸಲಿದೆ.

  • 15 Jun 2023 07:38 AM (IST)

    ರಿಸಲ್ಟ್‌ ನೋಡುವ ವಿಧಾನ ಹೀಗಿದೆ

    • ಕೆಇಎ ಅಧಿಕೃತ ವೆಬ್‌ಸೈಟ್‌https://cetonline.karnataka.gov.in/kea/ಗೆ ಭೇಟಿ ನೀಡಿ.
    • ಮುಖಪುಟದಲ್ಲಿ ಯುಜಿಸಿಇಟಿ -2023 ಫಲಿತಾಂಶ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
    • ಆಗ ನಿಮಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಇನ್ನೊಂದು ಪುಟ ಓಪನ್‌ ಆಗುತ್ತದೆ.
    • ನಂತರ ಓಪನ್‌ ಆದ ಪುಟದಲ್ಲಿ ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಮತ್ತು ಪಾಸ್‌ವರ್ಡ್‌,ನಮೂದಿಸಿ ಲಾಗಿನ್ ಆಗಿ.
    • ಅಗತ್ಯವಿರುವ ವಿವರಗಳನ್ನು ನಮೂದಿಸಿ ಸೈನ್‌ ಇನ್‌ ಮೇಲೆ ಕ್ಲಿಕ್‌ ಮಾಡಿ.
    • ನಂತರ ಪರದೆಯ ಮೇಲೆ ನಿಮ್ಮ ಯುಜಿಸಿಇಟಿ-2023 ಫಲಿತಾಂಶ ಕಾಣಸಿಗುತ್ತದೆ.
    • ಅದನ್ನು ಮುಂದಿನ ರೆಫ್ರೆನ್ಸ್‌ಗಾಗಿ ಫಲಿತಾಂಶ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಂಡು, ಪ್ರಿಂಟ್‌ ತೆಗೆದುಕೊಳ್ಳಿ.

Published On - 7:34 am, Thu, 15 June 23

Follow us on