Karnataka NEET UG Counselling 2024: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ, ಪರಿಶೀಲಿಸುವುದು ಹೇಗೆ? ಇಲ್ಲಿದೆ ಲಿಂಕ್

ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶದ 2ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. kea.kar.nic.in ನಲ್ಲಿ ನೀಡಲಾದ ಸರಳ ಹಂತಗಳನ್ನು ಅನುಸರಿಸುವ ಮೂಲಕ ಅಥವಾ ಕೆಳಗೆ ನೀಡಲಾದ ನೇರ ಲಿಂಕ್ ಮೂಲಕ ಸೀಟು ಹಂಚಿಕೆ ಫಲಿತಾಂಶವನ್ನು ನೋಡಬಹುದಾಗಿದೆ.

Karnataka NEET UG Counselling 2024: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ, ಪರಿಶೀಲಿಸುವುದು ಹೇಗೆ? ಇಲ್ಲಿದೆ ಲಿಂಕ್
ಸಾಂದರ್ಭಿಕ ಚಿತ್ರ
Follow us
|

Updated on: Sep 19, 2024 | 11:41 AM

ಬೆಂಗಳೂರು, ಸೆ.19: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಎರಡನೇ ಸುತ್ತಿನ ಯುಜಿ ನೀಟ್ 2024 (UG NEET) ಅಖಿಲ ಭಾರತ ಸೀಟು ಹಂಚಿಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಎರಡನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಮ್ಮನ್ನು ನೋಂದಾಯಿಸಿಕೊಂಡ ಅಭ್ಯರ್ಥಿಗಳು ಈಗ ಅಧಿಕೃತ ವೆಬ್‌ಸೈಟ್‌ನಲ್ಲಿ ಕರ್ನಾಟಕ NEET ಸೀಟು ಹಂಚಿಕೆ ಫಲಿತಾಂಶ 2024 ಅನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. kea.kar.nic.in ನಲ್ಲಿ ನೀಡಲಾದ ಸರಳ ಹಂತಗಳನ್ನು ಅನುಸರಿಸುವ ಮೂಲಕ ಅಥವಾ ಕೆಳಗೆ ನೀಡಲಾದ ನೇರ ಲಿಂಕ್ ಮೂಲಕ ಸೀಟು ಹಂಚಿಕೆ ಫಲಿತಾಂಶವನ್ನು ನೋಡಬಹುದಾಗಿದೆ.

ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶದ 2ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಸುತ್ತಿನ ಸೀಟು ಹಂಚಿಕೆಗೆ ಸೆ.13ರ ಮಧ್ಯಾಹ್ನ 2 ಗಂಟೆವರೆಗೆ ನಮೂದಿಸಿದ ಆಪ್ಷನ್‌ಗಳನ್ನು ಪರಿಗಣಿಸಲಾಗಿದೆ. ಇದು ತಾತ್ಕಾಲಿಕ ಫ‌ಲಿತಾಂಶವಾಗಿರುವ ಕಾರಣ ಅಭ್ಯರ್ಥಿಗಳು ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆಯುವಂತಿಲ್ಲ. ಯಾವುದಾದರೂ ನಿರ್ದಿಷ್ಟ ಆಕ್ಷೇಪಣೆಗಳಿದ್ದಲ್ಲಿ ಸೆ.19ರ ಬೆಳಗ್ಗೆ 10 ಗಂಟೆಯೊಳಗೆ ಕೆಇಎಗೆ ಇ-ಮೇಲ್‌ ಮೂಲಕ ಸಲ್ಲಿಸಬಹುದು. ಆಕ್ಷೇಪಣೆ ಪರಿಶೀಲಿಸಿದ ಅನಂತರ ಅಂತಿಮ ಫ‌ಲಿತಾಂಶ ಪ್ರಕಟಿಸಲಾಗುವುದು.

ಇದನ್ನೂ ಓದಿ: ಆಹಾರ ನಿಗಮದಲ್ಲಿ ಮ್ಯಾನೇಜರ್​​ ಹುದ್ದೆಗಳಿಗೆ ನೇಮಕಾತಿ: ಅಧಿಕೃತ ವೆಬ್‌ಸೈಟ್‌ ಮೂಲಕ್ ತಕ್ಷಣ ಅರ್ಜಿ ಹಾಕಿ

KEA KCET, ಕರ್ನಾಟಕ NEET UG 2024 ಸೀಟು ಹಂಚಿಕೆ ಫಲಿತಾಂಶವನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: KEAಯ ಅಧಿಕೃತ ವೆಬ್‌ಸೈಟ್ – kea.kar.nic.in ಗೆ ಭೇಟಿ ನೀಡಿ

ಹಂತ 2: ಮುಖಪುಟದಲ್ಲಿ, ಕರ್ನಾಟಕ NEET UG ಸೀಟ್ ಹಂಚಿಕೆ ಫಲಿತಾಂಶ 2024 ಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ

ಹಂತ 3: ಹೊಸದಾಗಿ ತೆರೆಯಲಾದ ಪುಟದಲ್ಲಿ, ನಿಮ್ಮ ಲಾಗಿನ್ ನಮೂದಿಸಿ

ಹಂತ 4: ಸಲ್ಲಿಸು ಕ್ಲಿಕ್ ಮಾಡಿ ಮತ್ತು ನಿಮ್ಮ ಕರ್ನಾಟಕ NEET UG 2 ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಪಟ್ಟಿಯು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ

ಹಂತ 5: PDF ಅನ್ನು ಡೌನ್‌ಲೋಡ್ ಮಾಡಿ

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ