ಶಾಲೆಗಳಿಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ; 1 ರಿಂದ 8ನೇ ತರಗತಿ ಆರಂಭದ ಬಗ್ಗೆಯೂ ಚರ್ಚೆ
ಮಕ್ಕಳ ಶಿಕ್ಷಕರ ಸಂಬಂಧ ಮತ್ತೆ ಶುರುವಾಗಿದೆ. ವಿದ್ಯಾರ್ಥಿಗಳು ಶಾಲೆ ಆರಂಭದ ಬಗ್ಗೆ ಸಂತೋಷವಾಗಿದ್ದಾರೆ. ಆನ್ಲೈನ್ ಕ್ಲಾಸ್ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ಶಾಲೆ ಆರಂಭಕ್ಕೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ. ಕೊವಿಡ್ ಮಾರ್ಗಸೂಚಿ ಕಠಿಣವಾಗಿ ಅನುಸರಿಸಲು ಹೇಳಲಾಗಿದೆ. ಶಾಲೆ ಆರಂಭ ನನಗೆ ತುಂಬಾ ಸಂತೋಷವಾಗಿದೆ: ಬೊಮ್ಮಾಯಿ
ಬೆಂಗಳೂರು: ಕರ್ನಾಟದಲ್ಲಿ ಇಂದಿನಿಂದ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಸ್ಥೈರ್ಯ ನೀಡುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದು, ಮಾತನಾಡುವ ವೇಳೆ ಆನ್ಲೈನ್ ಕ್ಲಾಸ್ ಬೇಕಾ, ಆಫ್ಲೈನ್ ಕ್ಲಾಸ್ ಬೇಕಾ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಗಳ ಈ ಪ್ರಶ್ನೆಗೆ ಅತ್ಯುತ್ಸಾಹದಿಂದ ಉತ್ತರಿಸಿದ ಮಕ್ಕಳು ಆಫ್ಲೈನ್ ಕ್ಲಾಸ್ ಬೇಕು ಎಂದು ಹೇಳಿದ್ದಾರೆ. ಅಂತೆಯೇ ಸಿಎಂ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಖುಷಿಯಿಂದ ಉತ್ತರಿಸಿದ್ದಾರೆ.
ಸುಮಾರು ಒಂದೂವರೆ ವರ್ಷ ಕೊವಿಡ್ ಕಾರಣಕ್ಕೆ ಶಾಲೆ ಬಂದ್ ಆಗಿದ್ದವು ಆ ಸಂದರ್ಭದಲ್ಲಿ ಪರ್ಯಾಯ ಕ್ರಮದ ಮೂಲಕ ಶಿಕ್ಷಣ ಕೊಡಲಾಗಿದೆ. ವಿದ್ಯಾರ್ಥಿಗಳ ಜತೆ ಶಿಕ್ಷಣ ಇಲಾಖೆ ನಿರಂತರ ಸಂಪರ್ಕದಲ್ಲಿತ್ತು. ಶಿಕ್ಷಣ ಇಲಾಖೆ ಉತ್ತಮವಾದ ಕೆಲಸ ಮಾಡಿದೆ. ಇದೀಗ ಅಧ್ಯಯನ ಮಾಡಿ ತಜ್ಞರ ವರದಿ ಪಡೆದು ಶಾಲೆ ಆರಂಭ ಮಾಡಲಾಗಿದೆ. ಮಲ್ಲೇಶ್ವರಂ ಕಾಲೇಜಿನ ಮಕ್ಕಳು ಹಾಗೂ ಶಿಕ್ಷಕರ ಜತೆ ಚರ್ಚೆ ಮಾಡಿದ್ದೇನೆ. ಇಲ್ಲಿ ಕಳೆದ ಒಂದು ವಾರದಿಂದ ತಯಾರಿ ಮಾಡಲಾಗಿದೆ. ಶಿಕ್ಷಕರು ಹಾಗೂ ಮುಖ್ಯೋಪಾದ್ಯಯರಿಗೆ ಶಾಲೆ ಆರಂಭ ಖುಷಿಯಾಗಿದೆ. ರಾಜ್ಯಾದ್ಯಂತ ಇದೇ ವಾತಾವರಣ ಇದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಮಕ್ಕಳ ಶಿಕ್ಷಕರ ಸಂಬಂಧ ಮತ್ತೆ ಶುರುವಾಗಿದೆ. ವಿದ್ಯಾರ್ಥಿಗಳು ಶಾಲೆ ಆರಂಭದ ಬಗ್ಗೆ ಸಂತೋಷವಾಗಿದ್ದಾರೆ. ಆನ್ಲೈನ್ ಕ್ಲಾಸ್ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ಶಾಲೆ ಆರಂಭಕ್ಕೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ. ಕೊವಿಡ್ ಮಾರ್ಗಸೂಚಿ ಕಠಿಣವಾಗಿ ಅನುಸರಿಸಲು ಹೇಳಲಾಗಿದೆ. ಶಾಲೆ ಆರಂಭ ನನಗೆ ತುಂಬಾ ಸಂತೋಷವಾಗಿದೆ. ಇಂದು ಮಕ್ಕಳಿಗೆ ಕೊವಿಡ್ನಿಂದ ಸ್ವತಂತ್ರ ಸಿಕ್ಕಿದೆ ಎಂದು ಸಂತಸಪಟ್ಟಿದ್ದಾರೆ.
ಗಡಿ ಜಿಲ್ಲೆ ಹಾಗೂ ಕೊವಿಡ್ ಪಾಸಿಟಿವಿಟಿ ರೇಟ್ ಹೆಚ್ಚಿರುವ ಜಿಲ್ಲೆಗಳಲ್ಲಿ ಪರಿಸ್ಥಿತಿ ಸುಧಾರಿಸಿದರೆ ಎಲ್ಲ ಕಡೆ ಶಾಲೆ ಆರಂಭವಾದಂತೆ ಆಗಲಿದೆ. 1 ರಿಂದ 8ನೇ ತರಗತಿಗೆ ಶಾಲೆ ಆರಂಭದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ತಜ್ಞರಿಗೆ ಶಾಲೆಗಳ ಆರಂಭಕ್ಕೆ ವರದಿ ನೀಡುವಂತೆ ಕೇಳಿದ್ದೇವೆ. ತಜ್ಞರ ಜೊತೆ ಚರ್ಚಿಸಿ ಶೀಘ್ರದಲ್ಲಿಯೇ ಪ್ರಾಥಮಿಕ ಶಾಲೆಗಳ ಆರಂಭದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನು ಸ್ವಾಗತಿಸಲು ಸಜ್ಜಾದ ಶಾಲೆಗಳು; ಕೊರೊನಾ ಭೀತಿಯ ನಡುವೆಯೂ ಕಲಿಕೆಯ ಸಂಭ್ರಮ ಶುರು
Published On - 11:06 am, Mon, 23 August 21