1 ರಿಂದ 8ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸುವ ಕುರಿತು ಮಹತ್ವದ ಸಭೆ: ಚರ್ಚೆಯಾಗಲಿರುವ ಪ್ರಮುಖ ಸಂಗತಿಗಳೇನು?

Karnataka School Reopening: ಕೇರಳ ಹಾಗೂ ಮಹರಾಷ್ಟ್ರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿರುವ ಹಿನ್ನೆಲೆ 1 ರಿಂದ 5 ನೇ ತರಗತಿ ಮಕ್ಕಳಿಗೆ ಶಾಲೆಗೆ ಬರಲು ಅನುಮತಿ ನಿರಾಕರಿಸುವ ಸಾಧ್ಯತೆಯೂ ಇದ್ದು, 6, 7, 8 ನೇ ತರಗತಿ ಆರಂಭಕ್ಕೆ ಮಾತ್ರ ಅವಕಾಶ ನೀಡಬಹುದು ಎಂಬ ಅಭಿಪ್ರಾಯವೂ ಬಲವಾಗಿ ಕೇಳಿಬಂದಿದೆ.

1 ರಿಂದ 8ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸುವ ಕುರಿತು ಮಹತ್ವದ ಸಭೆ: ಚರ್ಚೆಯಾಗಲಿರುವ ಪ್ರಮುಖ ಸಂಗತಿಗಳೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Aug 30, 2021 | 7:18 AM

ಬೆಂಗಳೂರು: ಕೊರೊನಾ ದೆಸೆಯಿಂದಾಗಿ ಶಿಸ್ತುಬದ್ಧ ಶಿಕ್ಷಣ ಪದ್ಧತಿಗೆ (Education System) ದೊಡ್ಡ ಹೊಡೆತ ಬಿದ್ದಿದೆ. ಮೊದಲನೇ ಅಲೆ, ಎರಡನೇ ಅಲೆ ಆತಂಕದಲ್ಲಿ ಮಕ್ಕಳನ್ನು ಮನೆಯಿಂದ ಆಚೆ ಕಳುಹಿಸುವುದೇ ಅಪಾಯ ಎಂಬ ಪರಿಸ್ಥಿತಿಯಿದ್ದ ಕಾರಣ ಆನ್​ಲೈನ್​ ಶಿಕ್ಷಣ (Online Classes) ಅನಿವಾರ್ಯ ಆಗಿತ್ತು. ಆದರೆ, ಕಳೆದ ವಾರದಿಂದ ಕರ್ನಾಟಕದಲ್ಲಿ 9 ರಿಂದ 12ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಬಹುತೇಕ ಭಾಗಗಳಲ್ಲಿ ಉತ್ತಮ ಸ್ಪಂದನೆಯೂ ದೊರೆತಿದೆ. ಈಗ ಅದರ ಬೆನ್ನಲ್ಲೇ 1ರಿಂದ 8ನೇ ತರಗತಿವರೆಗೆ ಶಾಲೆ ಆರಂಭಿಸುವ (School Reopening) ಕುರಿತು ಚಿಂತನೆ ನಡೆಸಲಾಗಿದ್ದು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ತಾಂತ್ರಿಕ ಸಲಹಾ ಸಮಿತಿ ತಜ್ಞರು ಸಭೆ ನಡೆಸಲಿದ್ದಾರೆ.

ಕೊರೊನಾ ಆತಂಕದ ನಡುವೆಯೂ 1 ರಿಂದ 8ನೇ ತರಗತಿ ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳಬೇಕೋ? ಬೇಡವೋ? ಎಂಬ ಪ್ರಶ್ನೆಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ಸೂಕ್ತ ಸಲಹೆ ನೀಡಲಿದ್ದು, ಅವರ ವರದಿಯ ಆಧಾರದ ಮೇಲೆ ಸರ್ಕಾರ, ಶಿಕ್ಷಣ ಇಲಾಖೆ ಮುಂದಿನ ಹೆಜ್ಜೆ ಇರಿಸಲಿದೆ. ಒಂದುವೇಳೆ ತಜ್ಞರು ಶಾಲೆಯಲ್ಲಿ ಭೌತಿಕ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ ತೋರಿಸಿದ್ದೇ ಆದಲ್ಲಿ ಕೊವಿಡ್ ಪಾಸಿಟಿವಿಟಿ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳು ಶುರುವಾಗಲಿವೆ.

ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಸೆಪ್ಟೆಂಬರ್​​ ಮೊದಲ ವಾರದಲ್ಲಿಯೇ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗಿದ್ದು, ತಜ್ಞರು ಒಪ್ಪಿಗೆ ನೀಡಿದರೆ ನಿಗದಿತ ಜಿಲ್ಲೆಗಳಲ್ಲಿ 1 ರಿಂದ 8ನೇ ತರಗತಿ ಆರಂಭಕ್ಕೆ ಶಿಕ್ಷಣ ಇಲಾಖೆ ಸೂಚನೆ ನೀಡಲಿದೆ. ಆದರೆ, ಇದೇ ವೇಳೆಯಲ್ಲಿ ಕೇರಳ ಹಾಗೂ ಮಹರಾಷ್ಟ್ರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿರುವ ಹಿನ್ನೆಲೆ 1 ರಿಂದ 5 ನೇ ತರಗತಿ ಮಕ್ಕಳಿಗೆ ಶಾಲೆಗೆ ಬರಲು ಅನುಮತಿ ನಿರಾಕರಿಸುವ ಸಾಧ್ಯತೆಯೂ ಇದ್ದು, 6, 7, 8 ನೇ ತರಗತಿ ಆರಂಭಕ್ಕೆ ಮಾತ್ರ ಅವಕಾಶ ನೀಡಬಹುದು ಎಂಬ ಅಭಿಪ್ರಾಯವೂ ಬಲವಾಗಿ ಕೇಳಿಬಂದಿದೆ.

ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಎಲ್ಲಾ ಜಿಲ್ಲೆಗಳ ನಿರ್ದೇಶಕರಿಂದ ವರದಿ ಪಡೆದಿರುವ ಶಿಕ್ಷಣ ಇಲಾಖೆ, ಈ ವರದಿ ಆಧಾರದ ಮೇಲೆ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಎಲ್ಲಾ ನಿರ್ದೇಶಕರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಮಗ್ರ ವರದಿ ಸಲ್ಲಿಕೆಯೂ ಆಗಿದ್ದು, ಅದನ್ನು ಇಂದಿನ ಸಭೆಯಲ್ಲಿ ಪ್ರಸ್ತಾಪಿಸಲಾಗುತ್ತದೆ. ತಾಂತ್ರಿಕ ಸಲಹಾ ಸಮಿತಿ ತಜ್ಞರು, ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಭಾಗವಹಿಸಲಿರುವ ಇಂದಿನ ಚರ್ಚೆಯಲ್ಲಿ ಈ ಕೆಳಕಂಡ ಅಂಶಗಳು ಪ್ರಮುಖವಾಗಿ ಚರ್ಚೆಗೆ ಒಳಗಾಗಲಿವೆ ಎಂದು ಹೇಳಲಾಗುತ್ತಿದೆ.

ಇಂದಿನ ಸಭೆಯಲ್ಲಿ ಚರ್ಚೆಯಾಗುವ ವಿಷಯಗಳು ಏನು? 1. ಶಾಲಾ ಆರಂದ ಕುರಿತಾಗಿ ಶಿಕ್ಷಣ ಆಯುಕ್ತರ ಕೈ ಸೇರಿರುವ ವರದಿಯಲ್ಲಿರುವ ಅಂಶಗಳು 2. ಶಾಲೆಗಳಲ್ಲಿ ಮೊದಲು ಯಾವ ತರಗತಿಯನ್ನು ಆರಂಭಿಸಬೇಕು 3. ಯಾವ ದಿನಾಂಕದಿಂದ ಶಾಲೆ ಆರಂಭಿಸಬೇಕು 4. ಯಾವ ರೀತಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು 5. ತರಗತಿಗಳನ್ನು ಎಷ್ಟು ಅವಧಿ ನಡೆಸಬೇಕು 6. ಯಾವ ಹಂತಗಳಲ್ಲಿ ಶಾಲೆಗಳ ಆರಂಭ ಮಾಡಬೇಕು 7. ಏನೆಲ್ಲಾ ಸೌಲಭ್ಯ ಶಾಲೆ ತೆರೆಯೊದಕ್ಕೆ ಮಾಡಿಕೊಳ್ಳಬೇಕು 8. ಶಾಲೆ ಆರಂಭ ಮಾಡಿದರೆ ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು 9. ಶಾಲೆ ಆರಂಭವಾಗದೇ ಇದ್ದಲ್ಲಿ ಆ ತರಗತಿಗಳಿಗೆ ಪೂರಕ ಶಿಕ್ಷಣ ಹೇಗೆ ನೀಡಬೇಕು 10. ಕೊವಿಡ್ ಮಾರ್ಗಸೂಚಿ ಪಾಲನೆ ಹೇಗೆ ‌ಮಾಡಬೇಕು

ಇದನ್ನೂ ಓದಿ: ನಾವು ನಮ್ಮ ಮಕ್ಕಳನ್ನು ಉಳಿಸಬೇಕು: ದೆಹಲಿಯಲ್ಲಿ ಶಾಲೆ ಪುನರಾರಂಭ ಬಗ್ಗೆ ಏಮ್ಸ್ ವೈದ್ಯರ ಸಲಹೆ

ಕೊರೊನಾದಿಂದ ಶಾಲೆಗಳಿಲ್ಲದೆ ಓದಲು..ಬರೆಯಲು ಮರೆತ ಮಕ್ಕಳು; ಇದು ಯಾವ ರಾಜ್ಯದಲ್ಲಿ ಗೊತ್ತಾ?

(Karnataka School Reopening major meeting with CM Basavaraj Bommai on starting Primary School Classes)

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ