Kannada News Education Karnataka SSLC, Second PUC Exam-1 and 2 2026 Timetable announced by KSEAB on www.kseab.karnataka.gov.in; Check PUC Exam Schedule
SSLC, 2nd PUC Exam 2026 TimeTable: ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಕರ್ನಾಟಕ SSLC, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿ: ಕರ್ನಾಟಕ ದ್ವಿತೀಯ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿ ವೇಳಾಪಟ್ಟಿ ಪ್ರಕಟವಾಗಿದೆ. ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು (ನವೆಂಬರ್ 05) ಪ್ರಕಟಿಸಿದೆ. ಹಾಗಾದ್ರೆ, ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಸ್(10ನೇ ತರಗತಿ) ಪರೀಕ್ಷೆಗಳು ಯಾವಾಗಿನಿಂದ ಆರಂಭವಾಗಿ ಯಾವಾಗ ಮುಗಿಯಲಿವೆ ಎನ್ನುವ ವೇಳಾಪಪಟ್ಟಿ ಕೆಳಗಿನಂತಿದೆ.
ಬೆಂಗಳೂರು, (ನವೆಂಬರ್ 05): ದ್ವಿತೀಯ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. SSLC, ದ್ವಿತೀಯ PU ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು (ನವೆಂಬರ್ 05) ಪ್ರಕಟಿಸಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯುಲಿದ್ದು, ಇನ್ನು ಪಿಯುಸಿ ಪರೀಕ್ಷೆ-1ರ ಪರೀಕ್ಷೆಗಳು 2026ರ ಫೆಬ್ರವರಿ 28ರಿಂದ ಮಾರ್ಚ್ 17ರ ವರೆಗೆ ನಡೆಯಲಿ. ಹಾಗೆ ಪಿಯುಸಿ ಪರೀಕ್ಷೆ-2 ಏಪ್ರಿಲ್ 25ರಿಂದ ಮೇ9ರವರೆಗೂ ನಡೆಯಲಿವೆ.
2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ಮತ್ತು ಪರೀಕ್ಷೆ-2 ರ ಅಂತಿಮ ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಇಂದು (ನವೆಂಬರ್ 05) ಪ್ರಕಟಿಸಲಾಗಿದೆ. ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ, ಕಾಲೇಜುಗಳ ಪ್ರಕಟಣಾ ಫಲಕದಲ್ಲಿ (ನೋಟಿಸ್ ಬೋರ್ಡ್) ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ತಿಳಿಸಿದೆ ಪರೀಕ್ಷಾ ಮಂಡಳಿ ತಿಳಿಸಿದೆ.