KCET Admit Card 2021: ಕೆಸಿಇಟಿ ಪರೀಕ್ಷೆ ಪ್ರವೇಶ ಪತ್ರ ನಾಳೆ ಬಿಡುಗಡೆ; ಆನ್​ಲೈನ್ ಮೂಲಕ ಹೀಗೆ ಡೌನ್​ಲೋಡ್ ಮಾಡಿಕೊಳ್ಳಿ..

Karnataka Common Entrance Test Admit Card 2021: ಒಮ್ಮೆ ಪ್ರವೇಶ ಪತ್ರವನ್ನು ಡೌನ್​ಲೋಡ್ ಮಾಡಿಕೊಂಡ ಬಳಿಕ ಅದರಲ್ಲಿರುವ ವಿವರಗಳೆಲ್ಲ ಸರಿಯಾಗಿದೆಯೇ ಎಂಬುದನ್ನು ಅಭ್ಯರ್ಥಿಗಳು ಪರಿಶೀಲನೆ ಮಾಡಿಕೊಳ್ಳಬೇಕು. ಏನೇ ಸಮಸ್ಯೆಯಿದ್ದರೂ ತಕ್ಷಣವೇ ನಿರ್ವಾಹಕರಿಗೆ ಕರೆ ಮಾಡಿ ಸರಿಪಡಿಸಿಕೊಳ್ಳಬೇಕು.

KCET Admit Card 2021: ಕೆಸಿಇಟಿ ಪರೀಕ್ಷೆ ಪ್ರವೇಶ ಪತ್ರ ನಾಳೆ ಬಿಡುಗಡೆ; ಆನ್​ಲೈನ್ ಮೂಲಕ ಹೀಗೆ ಡೌನ್​ಲೋಡ್ ಮಾಡಿಕೊಳ್ಳಿ..
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Aug 12, 2021 | 4:02 PM

ದೆಹಲಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಾಳೆ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET -2021)ಯ ಪ್ರವೇಶ ಪತ್ರ (Admit Card)ವನ್ನು ನಾಳೆ (ಆಗಸ್ಟ್​ 13) ಬಿಡುಗಡೆ ಮಾಡಲಿದೆ. ಪರೀಕ್ಷಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು https://cetonline.karnataka.gov.in/kea ವೆಬ್​ಸೈಟ್ ಮೂಲಕ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ಮೊದಲು ತಮ್ಮ ಅರ್ಜಿಯಲ್ಲಿರುವ ನಂಬರ್​, ಹುಟ್ಟಿದ ದಿನಾಂಕ ಬಳಸಿ ಲಾಗಿನ್​ ಆಗಬೇಕು.

ಈ ಕೆಸಿಇಟಿ ಪ್ರವೇಶ ಪತ್ರದಲ್ಲಿ ಪರೀಕ್ಷೆಯ ದಿನಾಂಕ, ಆಯಾ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಉಲ್ಲೇಖ ಇರುತ್ತದೆ. ಇದರೊಂದಿಗೆ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಾಲಿಸಬೇಕಾದ ಮಾರ್ಗಸೂಚಿ, ನಿಯಮಗಳೂ ಇರುತ್ತವೆ.

ಕೆಸಿಇಟಿ ಅಡ್ಮಿಟ್​ ಕಾರ್ಡ್ ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ ಇಲ್ಲಿದೆ.. 1.ಮೊದಲು cetonline.karnataka.gov.in/kea ವೆಬ್​ಸೈಟ್​ಗೆ ಭೇಟಿ ನೀಡಿ 2.ಅಲ್ಲಿ ನಿಮ್ಮ ಅರ್ಜಿಯ ಸಂಖ್ಯೆ ಮತ್ತು ಡೇಟ್ ಆಫ್ ಬರ್ತ್​ ನಮೂದಿಸಿ, ಸಬ್​ಮಿಟ್​ ಎಂಬಲ್ಲಿ ಕ್ಲಿಕ್​ ಮಾಡಿ. 3. ಆಗ ಕೆಸಿಇಟಿ 2021ರ ಅಡ್ಮಿಟ್ ಕಾರ್ಡ್​ ಸ್ಕ್ರೀನ್​ ಮೇಲೆ ಕಾಣಿಸಿಕೊಳ್ಳುತ್ತದೆ. 4. ಅದನ್ನು ಡೌನ್​ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದುಕೊಳ್ಳಿ

ನಿಮ್ಮ ಪ್ರವೇಶ ಪತ್ರದಲ್ಲಿ ಏನೆಲ್ಲ ವಿವರಗಳು ಇರುತ್ತವೆ? 1. ಅಭ್ಯರ್ಥಿಯ ಹೆಸರು (ಅಂದರೆ ನಿಮ್ಮ ಹೆಸರು), ಫೋಟೋ ಮತ್ತು ಸಹಿ 2. ನೋಂದಣಿ ಸಂಖ್ಯೆ 3. ಪರೀಕ್ಷೆಯ ದಿನಾಂಕ, ಸಮಯ ಮತ್ತು ಪರೀಕ್ಷಾ ಕೇಂದ್ರದ ವಿಳಾಸ 4. ಪರೀಕ್ಷೆ ದಿನ ಅಭ್ಯರ್ಥಿಗಳು ಪಾಲಿಸಬೇಕಾದ ಮಾರ್ಗಸೂಚಿಗಳು

ಒಮ್ಮೆ ಪ್ರವೇಶ ಪತ್ರವನ್ನು ಡೌನ್​ಲೋಡ್ ಮಾಡಿಕೊಂಡ ಬಳಿಕ ಅದರಲ್ಲಿರುವ ವಿವರಗಳೆಲ್ಲ ಸರಿಯಾಗಿದೆಯೇ ಎಂಬುದನ್ನು ಅಭ್ಯರ್ಥಿಗಳು ಪರಿಶೀಲನೆ ಮಾಡಿಕೊಳ್ಳಬೇಕು. ಏನೇ ಸಮಸ್ಯೆಯಿದ್ದರೂ ತಕ್ಷಣವೇ ನಿರ್ವಾಹಕರಿಗೆ ಕರೆ ಮಾಡಿ ಸರಿಪಡಿಸಿಕೊಳ್ಳಬೇಕು. ಪರೀಕ್ಷೆಗೆ ಹೋಗುವಾಗ ಅಡ್ಮಿಟ್ ಕಾರ್ಡ್ ಕೊಂಡೊಯ್ಯುವುದು ಕಡ್ಡಾಯವಾಗಿದೆ. ಹಾಗೊಮ್ಮೆ ಮರೆತು ಹೋದರೆ ಪರೀಕ್ಷೆ ಬರೆಯುವುದರಿಂದ ವಂಚಿತರಾಗಬೇಕಾಗುತ್ತದೆ. ಅಡ್ಮಿಟ್​ ಕಾರ್ಡ್​ ಜತೆ ಐಡಿ ಕಾರ್ಡ್ ತೆಗೆದುಕೊಂಡುಹೋಗುವುದನ್ನೂ ಮರೆಯಬಾರದು.

ಪರೀಕ್ಷೆ ಯಾವಾಗ? ಕೆಸಿಇಟಿ ಪರೀಕ್ಷೆ ಆಗಸ್ಟ್​ 28 ಮತ್ತು 29ರಂದು ನಡೆಯಲಿದೆ. ಈಗಾಗಲೇ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದೆ. ರಾಜ್ಯದ ಸುಮಾರು 500 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: ಯುವ ನಟಿಯ ಖಾಸಗಿ​ ವಿಡಿಯೋ ಲೀಕ್​; ‘ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ’ ಎಂದ ನಟಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ