KCET 2021: ಸೆ. 20ಕ್ಕೆ ಕೆಸಿಇಟಿ ಫಲಿತಾಂಶ ಪ್ರಕಟ; ಪ್ರಶ್ನೆ ಪತ್ರಿಕೆಗಳ ಸರಿಯುತ್ತರ ಚೆಕ್ ಮಾಡಲು ಹೀಗೆ ಮಾಡಿ

KCET Answer Key: ಫಾರ್ಮಸಿ, ಫಾರ್ಮಾ, ಎಂಜಿನಿಯರಿಂಗ್, ಮೆಡಿಕಲ್, ಅಗ್ರಿಕಲ್ಚರಲ್ ಮತ್ತು ಇತರೆ ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳ ಪ್ರವೇಶಾತಿಗೆ ಕೆಸಿಇಟಿ ಪರೀಕ್ಷೆ ನಡೆಸಲಾಗಿದೆ. ಸೆ. 20ರಂದು ಫಲಿತಾಂಶ ಪ್ರಕಟವಾಗಲಿದೆ.

KCET 2021: ಸೆ. 20ಕ್ಕೆ ಕೆಸಿಇಟಿ ಫಲಿತಾಂಶ ಪ್ರಕಟ; ಪ್ರಶ್ನೆ ಪತ್ರಿಕೆಗಳ ಸರಿಯುತ್ತರ ಚೆಕ್ ಮಾಡಲು ಹೀಗೆ ಮಾಡಿ
ಪರೀಕ್ಷಾ ಫಲಿತಾಂಶ (ಪ್ರಾತಿನಿಧಿಕ ಚಿತ್ರ)
Edited By:

Updated on: Aug 31, 2021 | 6:24 PM

ಬೆಂಗಳೂರು: ಆ. 28 ಮತ್ತು 29ರಂದು ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET-2021) ಎಲ್ಲ ಪತ್ರಿಕೆಗಳ ಸರಿಯುತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಈಗಾಗಲೇ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೆಸಿಇಟಿ ಅಧಿಕೃತ ವೆಬ್‌ಸೈಟ್‌ kea.kar.nic.inಗೆ ಭೇಟಿ ನೀಡಿ ಕೀ ಉತ್ತರಗಳನ್ನು ಚೆಕ್‌ ಮಾಡಬಹುದು. ಸೆಪ್ಟೆಂಬರ್ 20ರಂದು KCET ಫಲಿತಾಂಶ ಪ್ರಕಟವಾಗಲಿದೆ.

ಫಾರ್ಮಸಿ, ಫಾರ್ಮಾ, ಎಂಜಿನಿಯರಿಂಗ್, ಮೆಡಿಕಲ್, ಅಗ್ರಿಕಲ್ಚರಲ್ ಮತ್ತು ಇತರೆ ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳ ಪ್ರವೇಶಾತಿಗೆ ಕೆಸಿಇಟಿ ಪರೀಕ್ಷೆ ನಡೆಸಲಾಗಿದೆ. ಸುಮಾರು 500 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೆ. 20ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆಯಿದೆ.

ಈ ವರ್ಷ ಕೆಸಿಇಟಿ ಪರೀಕ್ಷೆಗೆ ಬೆಂಗಳೂರಿನಲ್ಲಿ 86 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಬೆಂಗಳೂರನ್ನು ಹೊರತುಪಡಿಸಿ 444 ಸೆಂಟರ್​ಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕೊವಿಡ್ ನಿಯಮಾವಳಿಯ ನಡುವೆಯೇ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ವರ್ಷ ಕೆಸಿಇಟಿ ಪರೀಕ್ಷೆ ಬರೆಯಲು 2,01,816 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.

ಕೆಸಿಇಟಿ ಸರಿಯುತ್ತರಗಳನ್ನು ಡೌನ್​ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ…
1. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್​ಸೈಟ್ cetonline.karnataka.gov.in ಗೆ ಭೇಟಿ ನೀಡಿ.
2. ವೆಬ್​ಸೈಟ್​ನ ಹೋಂ ಪೇಜಿನಲ್ಲಿ ಫ್ಲಾಷ್​ ನ್ಯೂಸ್​ ಕೆಳಭಾಗದಲ್ಲಿ KCET 2021 Answer key ಎಂಬ ಆಯ್ಕೆ ಇರುತ್ತದೆ.
3. ಆ ನೋಟಿಫಿಕೇಷನ್​ ಮೇಲೆ ಕ್ಲಿಕ್ ಮಾಡಿ. ಆಗ ಹೊಸ ಪೇಜ್ ಓಪನ್ ಆಗುತ್ತದೆ.
4. ಅಲ್ಲಿ ಅಭ್ಯರ್ಥಿಗಳು ತಮ್ಮ ವಿಷಯವನ್ನು ಆಯ್ಕೆ ಮಾಡಿಕೊಂಡು ಸರಿಯುತ್ತರವನ್ನು ಪಡೆಯಬಹುದು. ನಿಮ್ಮ ಆಯ್ಕೆಯ ವಿಷಯದ ಪಿಡಿಎಫ್ ಕೂಡ ಓಪನ್ ಆಗುತ್ತದೆ.
5. ಸರಿಯುತ್ತರಗಳ ಕಾಪಿಯೊಂದನ್ನು ಡೌನ್​ಲೋಡ್ ಮಾಡಿಟ್ಟುಕೊಂಡರೆ ಮುಂದೆ ಉಪಯೋಗಕ್ಕೆ ಬರುತ್ತದೆ.

ಇದನ್ನೂ ಓದಿ: CET 2021: ಆಗಸ್ಟ್​ 28,29 ಮತ್ತು 30ರಂದು ಸಿಇಟಿ; ಇಲ್ಲಿದೆ ಕೆಲವು ಮುಖ್ಯ ವಿವರ

NEET 2021: ಸೆ. 12ರ ನೀಟ್ ಪರೀಕ್ಷೆ ಮುಂದೂಡಿಕೆಗೆ ವಿದ್ಯಾರ್ಥಿಗಳ ಒತ್ತಾಯ; ಸ್ಪಷ್ಟನೆ ನೀಡಿದ NTA

(KCET 2021: Karnataka CET Answer Key 2021 to release soon on cetonline.karnataka.gov.in How to check KCET Answers)

Follow Us