AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CET 2021: ಆಗಸ್ಟ್​ 28,29 ಮತ್ತು 30ರಂದು ಸಿಇಟಿ; ಇಲ್ಲಿದೆ ಕೆಲವು ಮುಖ್ಯ ವಿವರ

ಈ ಬಾರಿ ಸಿಇಟಿ ಪರೀಕ್ಷೆಗೆ ಹೆಚ್ಚು ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

CET 2021: ಆಗಸ್ಟ್​ 28,29 ಮತ್ತು 30ರಂದು ಸಿಇಟಿ; ಇಲ್ಲಿದೆ ಕೆಲವು ಮುಖ್ಯ ವಿವರ
ಸಾಂಕೇತಿಕ ಚಿತ್ರ
TV9 Web
| Updated By: guruganesh bhat|

Updated on: Aug 08, 2021 | 3:08 PM

Share

ಬೆಂಗಳೂರು: ಕೊವಿಡ್ ಸೋಂಕು ಹರಡದಂತೆ ಎಲ್ಲ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಆಗಸ್ಟ್ 28,29,30 ರಂದು ಸಿಇಟಿ (CET 2021) ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದರು.

ಸಾಮಾನ್ಯ ಪ್ರವೇಶ ಪರೀಕ್ಷೆ 2021, ಮುಂಬರುವ ಆಗಸ್ಟ್ 28 ಮತ್ತು ಆಗಸ್ಟ್ 29ರಂದು ನಡೆಯಲಿರುವ ಬಗ್ಗೆ ದಿನಾಂಕ ಘೋಷಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ನಲ್ಲಿ ನಿಗದಿತ ಲಿಂಕ್ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.  ಈ ಬಾರಿ ಸಿಇಟಿ ಪರೀಕ್ಷೆಗೆ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಕಳೆದ ವರ್ಷ 1,75,349 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ವರ್ಷ 2,00,215 ವಿದ್ಯಾರ್ಥಿಗಳಿಂದ ನೊಂದಣಿಯಾಗಿದೆ. ಈ ಪೈಕಿ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರು ಹಾಗೂ 98 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಈ ಬಾರಿ ಓರ್ವ ತೃತೀಯ ಲಿಂಗಿ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ.

ಜುಲೈ 16ರವರೆಗೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನೀಟ್ ಪರೀಕ್ಷೆ ಹೆಚ್ಚು ವಿದ್ಯಾರ್ಥಿಗಳು ತಯಾರಾಗದ ಕಾರಣ. ಈ ಬಾರಿ ಕೆಲ ವಿದ್ಯಾರ್ಥಿಗಳು ಸಿಇಟಿಗೆ ಒಲವು ತೋರಿಸಿದ್ದಾರೆ. ಹೀಗಾಗಿ ಹೆಚ್ಚು ವಿದ್ಯಾರ್ಥಿಗಳಿಂದ ಸಿಇಟಿಗೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಕೆಇಎ ಬೋರ್ಡ್ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 

CET-KSET Free Coaching: ವಿದ್ಯಾರ್ಥಿಗಳೇ ಗಮನಿಸಿ: ಸಿಇಟಿ, ಕೆಸಿಇಟಿ ಪರೀಕ್ಷೆಗಳಿಗೆ ಉಚಿತ ತರಬೇತಿ; ಎಲ್ಲಿ ಎಂಬ ವಿವರ ಇಲ್ಲಿದೆ

SSLC Results 2021: ಆಗಸ್ಟ್ 9, ಸೋಮವಾರದಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ: ನೂತನ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಧಿಕೃತ ಘೋಷಣೆ

(Karnataka CET 2021 on August 28 29 and 30 Here is the details)