KCET 2022 Registration: ಏಪ್ರಿಲ್ 18 ರಿಂದ ನೋಂದಣಿಗೆ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ
KCET 2022: KCET ಅಥವಾ Karnataka UGCET ಪರೀಕ್ಷೆಯು ಕರ್ನಾಟಕ ರಾಜ್ಯ ಮಟ್ಟದ ಪರೀಕ್ಷೆ ಆಗಿದೆ. ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಇತರ ಕೆಲವು ಪದವಿಗಳಿಗೆ, ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪರೀಕ್ಚೆ ಆಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examination Authority- KEA) ಕೆಸೆಟ್ (KCET 2022) ಪರೀಕ್ಷೆಗೆ ನೋಂದಣಿ ಪ್ರಕ್ರಿಯೆಯನ್ನು ಏಪ್ರಿಲ್ 18 ರಂದು ಬೆಳಗ್ಗೆ 11 ಗಂಟೆಯಿಂದ ಆರಂಭಿಸಲಿದೆ. ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ kea.kar.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವೇಳಾಪಟ್ಟಿಯ ಪ್ರಕಾರ ಅಭ್ಯರ್ಥಿಗಳಿಗೆ ಜೂನ್ 16 ರ ಬೆಳಗ್ಗೆ ಬಯಾಲಜಿ, ಮಧ್ಯಾಹ್ನ ಗಣಿತ ಪರೀಕ್ಷೆ ಇರಲಿದೆ. ಹಾಗೆಯೇ ಜೂನ್ 17 ರ ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಅಂತಿಮವಾಗಿ ಜೂನ್ 18 ರಂದು ನೆರೆಯ ಅಥವಾ ಇತರ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.
KCET 2022: ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಈ ಕೆಳಕಂಡ ಹಂತಗಳನ್ನು ಅನುಸರಿಸಿ
- ಆಸಕ್ತರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ kea.kar.nic.in ಗೆ ಭೇಟಿ ನೀಡಿ
- ಅಲ್ಲಿನ ಹೋಮ್ ಪೇಜ್ನಲ್ಲಿ ಅಕ್ಸೆಸ್ ಟ್ಯಾಬ್ ಹಾಗೂ ನಂತರ UG CET 2022 ಮೇಲೆ ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸುವ ವಿವರಗಳನ್ನು ತುಂಬಿರಿ ಮತ್ತು ಅರ್ಜಿಯನ್ನು ಸಲ್ಲಿಸಿರಿ
- ಈ ವಿವರಗಳು ಸಲ್ಲಿಕೆ ಮಾಡಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ
- ಬಳಿಕ, ಅರ್ಜಿ ಸಲ್ಲಿಕೆಯ ಖಚಿತತೆಗಾಗಿ ಮತ್ತು ಮುಂದಿನ ಉಲ್ಲೇಖಗಳಿಗಾಗಿ ಅಂತಿಮ ಕನ್ಫರ್ಮೇಷನ್ ಪುಟವನ್ನು ಡೌನ್ಲೋಡ್ ಮಾಡಿ
- ಕನ್ಫರ್ಮೇಷನ್ ಪುಟವನ್ನು ಪ್ರಿಂಟ್ ಕೂಡ ತೆಗೆದಿರಿಸಿಕೊಳ್ಳಿ
ಕೆಸಿಇಟಿ 2022: ಪ್ರಮುಖ ದಿನಾಂಕಗಳು ಕೆಸಿಇಟಿ 2022 ಅರ್ಜಿ ಬಿಡುಗಡೆ ಏಪ್ರಿಲ್ 18, 2022 ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಕೊನೆಯ ದಿನಾಂಕ ಇನ್ನೂ ತಿಳಿಸಿಲ್ಲ ಕೆಸಿಇಟಿ 2022 ಅರ್ಜಿ ಶುಲ್ಕ ಪಾವತಿ ದಿನಾಂಕ ಏಪ್ರಿಲ್ 22, 2022 ಕೆಸಿಇಟಿ ಪರೀಕ್ಷೆಯ ದಿನಾಂಕ 2022 ಜೂನ್ 16 ರಿಂದ 18, 2022 ಕೆಸಿಇಟಿ 2022: ಅರ್ಜಿ ಭರ್ತಿ ಮಾಡಲು ಕ್ರಮಗಳು
KCET ಅಥವಾ Karnataka UGCET ಪರೀಕ್ಷೆಯು ಕರ್ನಾಟಕ ರಾಜ್ಯ ಮಟ್ಟದ ಪರೀಕ್ಷೆ ಆಗಿದೆ. ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಇತರ ಕೆಲವು ಪದವಿಗಳಿಗೆ, ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪರೀಕ್ಚೆ ಆಗಿದೆ.
ಇದನ್ನೂ ಓದಿ: ಇಂದಿನಿಂದ KCET 2022 ನೋಂದಣಿ ಆರಂಭ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಇದನ್ನೂ ಓದಿ: Board Exams 2022 ಸಿಬಿಎಸ್ಇ ,ಸಿಐಎಸ್ಸಿಇ ಟರ್ಮ್ 2ಗಾಗಿ ಸಿದ್ಧತೆ ನಡೆಸುತ್ತಿರುವಿರಾದರೆ ಈ 7 ಸಂಗತಿಗಳನ್ನು ಮಾಡಬೇಡಿ
Published On - 11:07 am, Mon, 18 April 22