KCET Counselling: ಇನ್ನೊಂದು ತಿಂಗಳಲ್ಲಿ ಸಿಇಟಿ ಕೌನ್ಸಿಲಿಂಗ್ ಆರಂಭ: ಡಾ.ಅಶ್ವತ್ಥ ನಾರಾಯಣ

ಬೆಂಗಳೂರು: ಇನ್ನೊಂದು ತಿಂಗಳಲ್ಲಿ ಸಿಇಟಿ ಕೌನ್ಸಿಲಿಂಗ್ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ತಿಳಿಸಿದರು. NEET ಕೌನ್ಸೆಲಿಂಗ್ ಬಳಿಕ ಮತ್ತೊಮ್ಮೆ CET ಕೌನ್ಸೆಲಿಂಗ್ ನಡೆಸಲಾಗುವುದು. ಈಬಾರಿ 2 ಬಾರಿ ಸಿಇಟಿ ಕೌನ್ಸೆಲಿಂಗ್ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆಗಸ್ಟ್ 28 ಮತ್ತು 29ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಸಿಇಟಿ ರ್ಯಾಂಕ್ ಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಘೋಷಿಸಿದ್ದಾರೆ. […]

KCET Counselling: ಇನ್ನೊಂದು ತಿಂಗಳಲ್ಲಿ ಸಿಇಟಿ ಕೌನ್ಸಿಲಿಂಗ್ ಆರಂಭ: ಡಾ.ಅಶ್ವತ್ಥ ನಾರಾಯಣ
ಅಶ್ವತ್ಥ್ ನಾರಾಯಣ
Edited By:

Updated on: Sep 29, 2021 | 3:08 PM

ಬೆಂಗಳೂರು: ಇನ್ನೊಂದು ತಿಂಗಳಲ್ಲಿ ಸಿಇಟಿ ಕೌನ್ಸಿಲಿಂಗ್ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ತಿಳಿಸಿದರು. NEET ಕೌನ್ಸೆಲಿಂಗ್ ಬಳಿಕ ಮತ್ತೊಮ್ಮೆ CET ಕೌನ್ಸೆಲಿಂಗ್ ನಡೆಸಲಾಗುವುದು. ಈಬಾರಿ 2 ಬಾರಿ ಸಿಇಟಿ ಕೌನ್ಸೆಲಿಂಗ್ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆಗಸ್ಟ್ 28 ಮತ್ತು 29ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಸಿಇಟಿ ರ್ಯಾಂಕ್ ಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಘೋಷಿಸಿದ್ದಾರೆ. ಮೈಸೂರಿನ ಮೇಘನ್ ಹೆಚ್​.ಕೆ ಸಿಇಟಿ ಇಂಜಿನಿಯರಿಂಗ್​ ಸೇರಿದಂತೆ ಎಲ್ಲ 5 ಕೋರ್ಸ್ ಗಳಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ಮೇಘನ್ ಹೆಚ್​.ಕೆ ಇಂಜಿನಿಯರಿಂಗ್, ಬಿ-ಫಾರ್ಮಾ, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿಯಲ್ಲಿ ಕರ್ನಾಟಕಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ.

ಸಿಇಟಿಗೆ ನೋಂದಣಿ ಮಾಡಿದ್ದ 2,01,834 ವಿದ್ಯಾರ್ಥಿಗಳ ಪೈಕಿ 1.93 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ ಗೆ 1,83,231 ರ್ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸಿಗೆ 1,52,518 ಅಭ್ಯರ್ಥಿಗಳು, 1,55,760 ಪಶುಸಂಗೋಪನೆ, 1,55,910 ಯೋಗ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಗಣಿತ ಪರೀಕ್ಷೆ ಬರೆದಿರುವ 1.89 ಲಕ್ಷ ವಿದ್ಯಾರ್ಥಿಗಳು, ಜೀವಶಾಸ್ತ್ರ ಪರೀಕ್ಷೆ ಬರೆದಿರುವ 1.62 ಲಕ್ಷ ವಿದ್ಯಾರ್ಥಿಗಳು, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ 1.93 ಲಕ್ಷ ವಿದ್ಯಾರ್ಥಿಗಳು, ಭೌತಶಾಸ್ತ್ರ ಪರೀಕ್ಷೆ ಬರೆದಿದ್ದ 1.93 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಇಂಜಿನಿಯರಿಂಗ್, ಯೋಗ, ನ್ಯಾಚುರೋಪತಿ, ಬಿ ಫಾರ್ಮ್, ಫಾರ್ಮಾ ಡಿ, ವೆಟರ್ನರಿ ಕೋರ್ಸ್‌ಗಳಿಗೆ ನಡೆದಿದ್ದ ಸಿಇಟಿ ಫಲಿತಾಂಶ kea.kar.nic.in ವೆಬ್‌ಸೈಟ್‌ನಲ್ಲಿ‌ ನೋಡಬಹುದಾಗಿದೆ.

ಇದನ್ನೂ ಓದಿ: 

KCET Results 2021: ಸಿಇಟಿ ಫಲಿತಾಂಶ ಪ್ರಕಟ; ಟಾಪ್ 5 ರ್ಯಾಂಕ್ ಪಡೆದವರ ಪಟ್ಟಿ ಇಲ್ಲಿದೆ

KCET Results 2021: ಸಿಇಟಿಯಲ್ಲಿ ಮೈಸೂರಿನ ಮೇಘನ್ ಹೆಚ್​.ಕೆ.ಗೆ ಮೊದಲ ರ್ಯಾಂಕ್; ವೆಬ್​ಸೈಟ್​ನಲ್ಲಿ ಫಲಿತಾಂಶ ಲಭ್ಯ

Published On - 2:42 pm, Wed, 29 September 21