KCET Result 2025 LIVE Updates:
ಬೆಂಗಳೂರು, ಮೇ 24: ಇಂದು ಬೆಳಗ್ಗೆ 11.30ಕ್ಕೆ ಯುಜಿಸಿಇಟಿ-2025 ಫಲಿತಾಂಶ ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಫಲಿತಾಂಶವನ್ನು ಪ್ರಕಟಿಸಿದರು. ಮಧ್ಯಾಹ್ನ 2 ಗಂಟೆಗೆ ವೆಬ್ಸೈಟ್ನಲ್ಲಿ ಸಿಇಟಿ (CET) ಫಲಿತಾಂಶ ಲಭ್ಯವಿರಲಿದೆ. ಏಪ್ರಿಲ್ 16, 17ರಂದು ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ ವಿಜ್ಞಾನ ವಿಭಾಗ, ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಸೇರಿದಂತೆ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಯುಜಿಸಿಇಟಿ-2025 ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಾಗಿ ಲೈವ್ ನೋಡಿ.
ಯುಜಿಸಿಇಟಿ-2025 ಫಲಿತಾಂಶ ಸದ್ಯ ವೆಬ್ಸೈಟ್ನಲ್ಲೂ ಲಭ್ಯವಿದೆ. ವಿದ್ಯಾರ್ಥಿಗಳು cetonline.karnataka.gov.in ಅಥವಾ kea.kar.nic.in ನಲ್ಲಿ ಫಲಿತಾಂಶವನ್ನು ಚೆಕ್ ಮಾಡಬಹುದಾಗಿದೆ.
ರಾಸಾಯನ ಶಾಸ್ತ್ರದಲ್ಲಿ ಎರಡು ಪ್ರಶ್ನೆಗೆ ಎರಡು ಸರಿ ಉತ್ತರ ಹಾಗೂ ಜೀವಶಾಸ್ತ್ರದ ಒಂದು ಪ್ರಶ್ನೆಗೆ ಎರಡು ಸಲ ಉತ್ತರ ಬರೆಯಲು ಅವಕಾಶ ನೀಡಲಾಗಿದೆ. ಮೊದಲ ಬಾರಿಗೆ ಪಬ್ಲಿಕ್ ಡೊಮೇನ್‌ನಲ್ಲಿ ಒಎಂಆರ್ ಶೀಟನ್ನು ವೀಕ್ಷಿಸಲು ಅವಕಾಶ ನೀಡಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ವರ್ಷ ಸೀಟ್ ಬ್ಲಾಕಿಂಗ್ ಪ್ರಕರಣ ಬಗ್ಗೆ ತನಿಖೆಯಲ್ಲಿ ಗೊಂದಲ ಇದೆ. ಚಾರ್ಜ್ ಸೀಟ್ನಲ್ಲಿ ಏನೆಲ್ಲ ಹಾಕಿದ್ದಾರೆ ಅಂತಾ ನೋಡಬೇಕಿದೆ. ಚಾರ್ಜ್ ಸೀಟ್ನಲ್ಲಿ ಸರಿಯಾಗಿ ಇಲ್ಲದಿದ್ದರೆ ಮತ್ತೊಮ್ಮೆ ತನಿಖೆಗೆ ಸೂಚಿಸುತ್ತೇವೆ. ಸರಿಯಾಗಿ ಕಾಲೇಜುಗಳಿಗೆ ಹೋಗಿ ತನಿಖೆ ಮಾಡಿದ್ದಾರೋ ಇಲ್ವೋ ಅನ್ನೋ ಅನುಮಾನ ಇದೆ. ಪೊಲೀಸ್ ಕಮಿಷನರ್ ಜೊತೆಗೆ ಚರ್ಚೆ ಮಾಡುತ್ತೇವೆ ಎಂದು ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಸಿಇಟಿಯಿಂದ ವಂಚಿತನಾದ ಸುಚಿವೃತ ಜೊತೆ ನಾನೇ ಮಾತಾಡಿದ್ದೇನೆ. ಬೀದರ್ ಮೂಲದ ವಿದ್ಯಾರ್ಥಿ ಸುಚಿವೃತ ಸಿಇಟಿ ಬರೆದಿಲ್ಲ. ಹೀಗಾಗಿ ಯಾವ ರೀತಿ ನ್ಯಾಯ ಒದಗಿಸಬೇಕೆಂದು ಚರ್ಚಿಸಿದ್ದೆವು. ನಮ್ಮ ಬಳಿ ಎರಡು ಆಯ್ಕೆ ಇತ್ತು, ಒಂದು ಪರೀಕ್ಷೆ ನಡೆಸುವುದು, ಮತ್ತೊಂದು 3 ಪರೀಕ್ಷೆಯ ಸರಾಸರಿ ಮೇಲೆ ಅಂಕ ನೀಡುವುದು. ಈ ವಿಚಾರವಾಗಿ ಸುಚಿವೃತ ಪೋಷಕರ ಬಳಿಯೂ ಕೇಳಿದ್ದೆವು. ಸರಾಸರಿ ಅಂಕ ನೀಡಿ ಅಂತಾ ಬರಹದ ಮೂಲಕ ತಿಳಿಸಿದ್ದಾರೆ ಎಂದು ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಜನಿವಾರ ಗಲಾಟೆಯಿಂದ ಸಿಇಟಿಯಿಂದ ವಂಚಿತನಾದ ಬೀದರ್ನ ಓಲ್ಡ್ ಸಿಟಿ ನಿವಾಸಿ ಸುಚಿವೃತಗೆ ಇಂಜಿನಿಯರಿಂಗ್ ವಿಭಾಗದಲ್ಲಿ 2 ಲಕ್ಷದ 6 ಸಾವಿರದ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಕೆಇಎ ಪರೀಕ್ಷೆಯಲ್ಲಿ ನಾವು ಜನಿವಾರ ತೆಗೆಯಲು ಸೂಚನೆ ನೀಡಿಲ್ಲ. ನಾವು ಜನಿವಾರ ತೆಗಿಬೇಕು ಅಂತ ಪ್ರಕಟನೆ ಮಾಡಿಲ್ಲ. ಇದು ಕೇವಲ ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ನಡೆದಿದೆ ಎಂದು ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಪಶುವೈದ್ಯಕೀಯ ವಿಭಾಗದಲ್ಲಿ ರ‍್ಯಾಂಕ್ ಪಡೆದುಕೊಂಡು ವಿದ್ಯಾರ್ಥಿಗಳು.
ಡಿ ಫಾರ್ಮ್ ವಿಭಾಗದಲ್ಲಿ ರ‍್ಯಾಂಕ್ ಪಡೆದವರು.
ನರ್ಸಿಂಗ್ ವಿಭಾಗದಲ್ಲಿ ಯಲಹಂಕದ ನಾರಾಯಣ ಇ-ಟೆಕ್ನೋದ ಹರಿಶ್ ರಾಜ್ ಪ್ರಥಮ ಸ್ಥಾನ. ಹೆಚ್ಎಸ್ ಆರ್ ಲೇಔಟ್ನ ನ್ಯಾಷನಲ್ ಪಬ್ಲಿಕ್‌ಸ್ಕೂಲ್ ಆತ್ರೇಯ ದ್ವಿತೀಯ ಸ್ಥಾನ ಮತ್ತು ಮಂಗಳೂರಿನ ಶಾಪಲ್ ಶೆಟ್ಟಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕೃಷಿ ವಿಭಾಗದಲ್ಲಿ ಅಕ್ಷಯ್ ಎಂ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಸಾಯಿಶ್ ಶರವಣ ಪಂಡಿತ್ ದ್ವಿತೀಯ ಮತ್ತು ಸುಚಿತ್.ಪಿ. ಪ್ರಸಾದ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕನಕಪುರ ರಸ್ತೆ ಉತ್ತರಹಳ್ಳಿಯ ಚೈತನ್ಯ ಟೆಕ್ನೋ ಸ್ಕೂಲ್ನ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ (99.33%) ಎರಡನೇ ರ‍್ಯಾಂಕ್ ಗಳಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಯುಜಿಸಿಇಟಿ-2025 ಫಲಿತಾಂಶ ಪ್ರಕಟಸಿದ್ದು, ಸಿಇಟಿಯಲ್ಲಿ ಭವೇಶ್ ಜಯಂತಿಗೆ ಮೊದಲ ಸ್ಥಾನ(99.06%) ಪಡೆದುಕೊಂಡಿದ್ದಾರೆ.
ಸಿಇಟಿಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿಗೆ ಹಾಜರಾಗಿದ್ದರು ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಶೀಘ್ರದಲ್ಲೇ ಕರ್ನಾಟಕ ಯುಜಿಸಿಇಟಿ ಫಲಿತಾಂಶವನ್ನು ಕೆಇಎ ಪ್ರಕಟಿಸಲಿದೆ.
ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ ವಿಜ್ಞಾನ ವಿಭಾಗ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ.
Published On - 9:30 am, Sat, 24 May 25