KCET Results 2021: ಸಿಇಟಿ ಫಲಿತಾಂಶ ಪ್ರಕಟ; ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

| Updated By: ganapathi bhat

Updated on: Sep 20, 2021 | 5:14 PM

Karnataka CET Result 2021 updates | ಕರ್ನಾಟಕ ಸಿಇಟಿ ಫಲಿತತಾಂಶ 2021: ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಆ ಬಳಿಕ ಸಿಇಟಿ ಫಲಿತಾಂಶ ಪ್ರಕಟವಾಗುತ್ತದೆ.

KCET Results 2021: ಸಿಇಟಿ ಫಲಿತಾಂಶ ಪ್ರಕಟ; ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ
KCET 2021

ಇಂದು (ಸೆ.20) 2020- 21 ನೇ ಸಾಲಿನ ಕೆಸಿಇಟಿ ಫಲಿತಾಂಶ (KCET Result 2021) ಪ್ರಕಟವಾಗಿದೆ. ಆಗಸ್ಟ್ 28, 29, 30 ರಂದು ಸಿಇಟಿ ಪರೀಕ್ಷೆ ನಡೆದಿತ್ತು. ಇಂದು ಸಂಜೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ (Ashwath Narayan) ಸುದ್ದಿಗೋಷ್ಠಿ ನಡೆಸಿದ್ದಾರೆ. ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್​ಸೈಟ್​ನಲ್ಲಿ ಫಲಿತಾಂಶ ನೋಡಬಹುದು. kea.kar.nic.in ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.  

LIVE NEWS & UPDATES

The liveblog has ended.
  • 20 Sep 2021 05:12 PM (IST)

    ಮೇಘನ್ ಹೆಚ್​ಕೆ ಕಿರು ಪರಿಚಯ

    ಸಿಇಟಿ ಪರೀಕ್ಷೆಯಲ್ಲಿ ಮೈಸೂರಿನ ಮೇಘನ್ ಹೆಚ್ ಕೆ ಮೊದಲ ಸ್ಥಾನ ಪಡೆದಿದ್ದಾರೆ. ನಾಲ್ಕು ವಿಭಾಗದಲ್ಲೂ‌ ಮೊದಲ ಸ್ಥಾನ ಗಳಿಸಿಕೊಂಡಿದ್ದಾರೆ. ಕುವೆಂಪು ನಗರದಲ್ಲಿ ಇರುವ ಪ್ರಮತಿ ಕಾಲೇಜಿನಲ್ಲಿ ಸಿಬಿಎಸ್ಇ ವ್ಯಾಸಂಗ ಮಾಡಿದ್ದ ಮೇಘನ್, ಸಿಬಿಎಸ್​ಇ ನಲ್ಲಿ 500 ಅಂಕಗಳಿಗೆ 494 ಅಂಕ ಗಳಿಸಿದ್ದರು. ಮೇಘನ್ ತಂದೆ ಮತ್ತು ತಾಯಿ ಇಬ್ಬರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂದೆ ಕೃಷ್ಣಯ್ಯ ಕೆ ಆರ್ ನಗರದ ಕಾಲೇಜೊಂದರಲ್ಲಿ ಪ್ರಾಂಶುಪಾಲರು ಹಾಗೂ ತಾಯಿ ಲೀಲಾವತಿ ರಾಮಕೃಷ್ಣನಗರದ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇಘನ್ ಮೈಸೂರಿನ ರಾಮಕೃಷ್ಣನಗರದ ನಿವಾಸಿ ಆಗಿದ್ದಾರೆ.

  • 20 Sep 2021 05:10 PM (IST)

    ಮೂಲ ದಾಖಲೆ ಪರಿಶೀಲನೆಗೆ ಸೌಲಭ್ಯ ಕೇಂದ್ರ ಓಪನ್

    ಸೆಪ್ಟೆಂಬರ್​ 30ರಿಂದ ದಾಖಲಾತಿ ಪರಿಶೀಲನೆ ಪ್ರಾರಂಭ ಆಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ನಾರಾಯಣ ಹೇಳಿಕೆ ನೀಡಿದ್ದಾರೆ. ಮೂಲ ದಾಖಲೆ ಪರಿಶೀಲನೆಗೆ ಸೌಲಭ್ಯ ಕೇಂದ್ರ ಓಪನ್ ಮಾಡಲಾಗುವುದು. ದಾಖಲೆ ಪರಿಶೀಲನೆಗೆ ಸೌಲಭ್ಯ ಕೇಂದ್ರ ತೆರೆಯಲಾಗುತ್ತೆ. ಸೌಲಭ್ಯ ಕೇಂದ್ರಗಳಲ್ಲಿ ಆನ್​​ಲೈನ್ ವೆರಿಫಿಕೇಷನ್ಸ್ ಸಾಫ್ಟ್‌ವೇರ್ ಮೂಲಕ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಸಚಿವ ಡಾ. ಅಶ್ವತ್ಥ್​ ನಾರಾಯಣ ಹೇಳಿಕೆ ನೀಡಿದ್ದಾರೆ.


  • 20 Sep 2021 04:18 PM (IST)

    ಸಚಿವ ಅಶ್ವತ್ಥ್ ನಾರಾಯಣ ಸುದ್ದಿಗೋಷ್ಠಿ ಇಲ್ಲಿದೆ

  • 20 Sep 2021 04:12 PM (IST)

    ಪಶುವೈದ್ಯಕೀಯ ವಿಜ್ಞಾನ ವಿಭಾಗದ 5 ಟಾಪ್ ವಿದ್ಯಾರ್ಥಿಗಳು

    ಪಶುವೈದ್ಯಕೀಯ ವಿಜ್ಞಾನ ವಿಭಾಗದ 5 ಟಾಪರ್ಸ್
    ಮೇಘನ್ ಹೆಚ್​.ಕೆ – ಮೈಸೂರಿನ ಪ್ರಮತಿ ಹಿಲ್ ವೀವ್ ಅಕಾಡೆಮಿ
    ವರುಣ್ ಆದಿತ್ಯಾ- ಶ್ರೀಚೈತನ್ಯ ಟೆಕ್ನೋ ಕಾಲೇಜು, ಮಾರತಹಳ್ಳಿ
    ರೀತಮ್ ಬಿ. – ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು
    ಮೊಹಮ್ಮದ್ ಕೈಫ್ ಕೆ ಮುಲ್ಲಾ – ಆರ್​ಎಲ್​ ಪಿಯು ಕಾಲೇಜು, ಬೆಳಗಾವಿ
    ಎಂ. ಹಯವದನ.ಎಸ್. – ವಿದ್ಯಾಕಿರಣ ಪಿಯು ಕಾಲೇಜು, ಬಳ್ಳಾರಿ

  • 20 Sep 2021 04:11 PM (IST)

    ಬ್ಯಾಚುಲರ್ ಆಫ್ ನ್ಯಾಚುರೋಪತಿ, ಯೋಗಿಕ್ ಸೈನ್ಸ್‌ ಟಾಪ್ 5 ವಿದ್ಯಾರ್ಥಿಗಳು

    ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ ಟಾಪ್ 5 ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ:
    ಮೇಘನ್ ಹೆಚ್.ಕೆ – ಮೈಸೂರಿನ ಪ್ರಮತಿ ಹಿಲ್ ವೀವ್ ಅಕಾಡೆಮಿ
    ವರುಣ್ ಆದಿತ್ಯಾ- ಶ್ರೀಚೈತನ್ಯ ಟೆಕ್ನೋ ಕಾಲೇಜು, ಮಾರತಹಳ್ಳಿ
    ರೀತಮ್ ಬಿ. – ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು
    ಮೊಹಮ್ಮದ್ ಕೈಫ್ ಕೆ ಮುಲ್ಲಾ – ಆರ್​ಎಲ್ ಪಿಯು ಕಾಲೇಜು, ಬೆಳಗಾವಿ
    ಎಂ. ಹಯವದನ.ಎಸ್. – ವಿದ್ಯಾಕಿರಣ ಪಿಯು ಕಾಲೇಜು, ಬಳ್ಳಾರಿ

  • 20 Sep 2021 04:09 PM (IST)

    ಸಿಇಟಿ ಕೃಷಿ ವಿಭಾಗದಲ್ಲಿ 5 ಟಾಪ್ ವಿದ್ಯಾರ್ಥಿಗಳು

    ಸಿಇಟಿ ಕೃಷಿ ವಿಭಾಗದಲ್ಲಿ 5 ಟಾಪ್ ವಿದ್ಯಾರ್ಥಿಗಳ ವಿವರ ಇಲ್ಲಿದೆ:
    ಮೇಘನ್‌ ಹೆಚ್.ಕೆ – ಮೈಸೂರು ಪ್ರಮತಿ ಹಿಲ್‌ ವೀವ್‌ ಅಕಾಡೆಮಿ
    ರೀತಮ್ ಬಿ. – ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು
    ಆದಿತ್ಯ ಪ್ರಭಾಸ್ – ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆ.ಆರ್. ಪುರಂ
    ತೇಜಸ್ – ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು
    ಸುಜ್ಞಾನ ಆರ್ ಶೆಟ್ಟಿ – ಆಳ್ವಾಸ್ PU ಕಾಲೇಜು, ಮೂಡಬಿದ್ರೆ

  • 20 Sep 2021 04:08 PM (IST)

    ಸಿಇಟಿ ಇಂಜಿನಿಯರಿಂಗ್ ವಿಭಾಗದ ಟಾಪ್‌ 5 ವಿದ್ಯಾರ್ಥಿಗಳು

    ಸಿಇಟಿ ಇಂಜಿನಿಯರಿಂಗ್ ವಿಭಾಗದ ಟಾಪ್‌ 5 ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ:
    ಮೇಘನ್‌ ಹೆಚ್​.ಕೆ – ಮೈಸೂರು ಪ್ರಮತಿ ಹಿಲ್‌ ವೀವ್‌ ಅಕಾಡೆಮಿ
    ಪ್ರೇಮಾಂಕುರ್ ಸಿ. – ನ್ಯಾಷನಲ್‌ ಪಬ್ಲಿಕ್ ಸ್ಕೂಲ್, ಯಲಹಂಕ
    ಬಿ.ಎನ್. ಅನಿರುದ್ಧ್‌ – ಆಕ್ಸ್‌ಫರ್ಡ್‌ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು
    ನಿರಂಜನರೆಡ್ಡಿ – ಶ್ರೀಚೈತನ್ಯ ಟೆಕ್ನೋ ಸ್ಕೂಲ್, ವೀರಣ್ಣ ಪಾಳ್ಯ
    ಆದಿತ್ಯಾ – ನಾರಾಯಣ ಇ ಟೆಕ್ನೋ ಸ್ಕೂಲ್, ವಿದ್ಯಾರಣ್ಯಪುರ

  • 20 Sep 2021 04:03 PM (IST)

    ಸಿಇಟಿ ಇಂಜಿನಿಯರಿಂಗ್ ವಿಭಾಗದ ಟಾಪ್ 10 ವಿದ್ಯಾರ್ಥಿಗಳ ವಿವರ

    ಸಿಇಟಿ- ಇಂಜಿನಿಯರಿಂಗ್ ವಿಭಾಗದ ಟಾಪ್ 10 ವಿದ್ಯಾರ್ಥಿಗಳ ವಿವರ ಲಭ್ಯವಾಗಿದೆ. ಸಿಇಟಿ ಟಾಪ್‌ 10 ವಿದ್ಯಾರ್ಥಿಗಳು ಬೆಂಗಳೂರಿನ 9 ಮಂದಿ ಹಾಗೂ ಮೈಸೂರಿನ ಒಬ್ಬ ವಿದ್ಯಾರ್ಥಿ ಆಗಿದ್ದಾರೆ. ಮೈಸೂರು ವಿದ್ಯಾರ್ಥಿ ಮೇಘನ್ ಟಾಪ್ ನಾಲ್ಕು ವಿಭಾಗದಲ್ಲಿ ಟಾಪರ್ ಆಗಿದ್ದಾರೆ. ಮೈಸೂರಿನ ಪ್ರಮತಿ ಹಿಲ್ ವೀವ್ ಅಕಾಡೆಮಿಯ ಹೆಚ್​.ಕೆ. ಮೇಘನ್ ನಾಲ್ಕು ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮೈಸೂರು ವಿದ್ಯಾರ್ಥಿ ಮೇಘನ್ ಎಲ್ಲಾ ವಿಭಾಗದಲ್ಲೂ ಟಾಪ್ ಅಂಕ ಗಳಿಸಿದ್ದಾರೆ. ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ವಿಜ್ಞಾನ ವಿಭಾಗ, ನ್ಯಾಚುರೋಪತಿ, ಯೋಗಿಕ್‌ ಸೈನ್ಸ್‌ನಲ್ಲೂ ಹೆಚ್​.ಕೆ. ಮೇಘನ್ ಟಾಪರ್ ಆಗಿದ್ದಾರೆ.

  • 20 Sep 2021 03:41 PM (IST)

    ಸಿಇಟಿಯಲ್ಲಿ ಮೈಸೂರಿನ ಮೇಘನ್ ಹೆಚ್​.ಕೆ.ಗೆ ಮೊದಲ ರ್ಯಾಂಕ್

    ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆಗಸ್ಟ್ 28 ಮತ್ತು 29ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಇಂದು ಸಂಜೆ ಪ್ರಕಟವಾಗಲಿದೆ. ಸಿಇಟಿ ರ್ಯಾಂಕ್ ಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಘೋಷಿಸಿದ್ದಾರೆ. ಮೈಸೂರಿನ ಮೇಘನ್ ಹೆಚ್​.ಕೆ ಸಿಇಟಿ ಇಂಜಿನಿಯರಿಂಗ್​ ಸೇರಿದಂತೆ ಎಲ್ಲ 5 ಕೋರ್ಸ್ ಗಳಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

  • 20 Sep 2021 03:32 PM (IST)

    ಸಿಇಟಿಗೆ ನೋಂದಣಿ ಮಾಡಿದ್ದು 2,01,834 ವಿದ್ಯಾರ್ಥಿಗಳು

    ಈ ಬಾರಿ ಒಟ್ಟು 2,01,834 ವಿದ್ಯಾರ್ಥಿಗಳು ಸಿಇಟಿಗೆ ನೋಂದಣಿ ಮಾಡಿದ್ದರು. ಅದರಲ್ಲಿ 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದರು. ಜೀವಶಾಸ್ತ್ರ ಪರೀಕ್ಷೆಯನ್ನು 1.62 ಲಕ್ಷ ವಿದ್ಯಾರ್ಥಿಗಳು, ರಸಾಯನಶಾಸ್ತ್ರ ಪರೀಕ್ಷೆಯನ್ನು 1.93 ಲಕ್ಷ ವಿದ್ಯಾರ್ಥಿಗಳು, ಭೌತಶಾಸ್ತ್ರ ಪರೀಕ್ಷೆಯನ್ನು 1.93 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.

    ಇಂಜಿನಿಯರಿಂಗ್, ಯೋಗ, ನ್ಯಾಚುರೋಪತಿ, ಬಿ ಫಾರ್ಮ್, ಫಾರ್ಮಾ ಡಿ, ವೆಟರ್ನರಿ ಕೋರ್ಸ್‌ಗಳಿಗೆ ಸಿಇಟಿ ನಡೆದಿತ್ತು. ಇಂದು ಮಧ್ಯಾಹ್ನ ಸಚಿವ ಅಶ್ವತ್ಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಸುದ್ದಿಗೋಷ್ಠಿ ಬಳಿಕ ಸಿಇಟಿ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್‌ನಲ್ಲಿ ಫಲಿತಾಂಶ ಸಿಗಲಿದೆ.

  • 20 Sep 2021 03:30 PM (IST)

    ಇಂದು ಸಂಜೆ 4 ಗಂಟೆಗೆ ಸಿಇಟಿ ಫಲಿತಾಂಶ ಪ್ರಕಟ

    ಇಂದು ಸಂಜೆ 4 ಗಂಟೆಗೆ ಸಿಇಟಿ ಫಲಿತಾಂಶ ಪ್ರಕಟ ಆಗಲಿದೆ. ಬೆಂಗಳೂರಿನಲ್ಲಿ ಸಚಿವ ಅಶ್ವತ್ಥ್​ ನಾರಾಯಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ. ಈ ಬಾರಿ ಒಟ್ಟು 1,93,447 ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು. ಅದರ ಫಲಿತಾಂಶವು ಸಂಜೆ 4 ಗಂಟೆಗೆ ಕೆಇಎ ವೆಬ್​ಸೈಟ್ ನಲ್ಲಿ ಲಭ್ಯವಾಗಲಿದೆ. kea.kar.nic.in ವೆಬ್​ಸೈಟ್​ನಲ್ಲಿ ಫಲಿತಾಂಶ ಲಭ್ಯವಿರಲಿದೆ.

  • 20 Sep 2021 02:10 PM (IST)

    ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯ

    ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು. kea.kar.nic.in ವೆಬ್‌ಸೈಟ್‌ನಲ್ಲಿ‌ ಫಲಿತಾಂಶ ಪ್ರಕಟವಾಗುತ್ತದೆ.

  • 20 Sep 2021 02:09 PM (IST)

    2,01,834 ವಿದ್ಯಾರ್ಥಿಗಳ ಭವಿಷ್ಯ ಕೆಲವೇ ಸಮಯದಲ್ಲಿ

    ಒಟ್ಟು 2,01,834 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದಾರೆ. 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ, 1.62 ಲಕ್ಷ ವಿದ್ಯಾರ್ಥಿಗಳು ಜೀವಶಾಸ್ತ್ರ ಪರೀಕ್ಷೆ, 1.93 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ, 1.93 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಕೆಲವೇ ಸಮಯದಲ್ಲಿ ನಿರ್ಧಾರವಾಗುತ್ತದೆ.

  • 20 Sep 2021 01:55 PM (IST)

    ಮಧ್ಯಾಹ್ನ 2:30ಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ

    ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸುತ್ತಾರೆ. ಸುದ್ದಿಗೋಷ್ಠಿ ಬಳಿಕ 2020-21ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗುತ್ತದೆ.

  • 20 Sep 2021 01:54 PM (IST)

    ಕೆಲವೇ ಹೊತ್ತಿನಲ್ಲಿ 2,01,834 ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ

    ಕೆಲವೇ ಹೊತ್ತಿನಲ್ಲಿ 2020-21ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗುತ್ತದೆ. ಸುಮಾರು ಸಿಇಟಿಗೆ ನೋಂದಣಿ ಮಾಡಿದ್ದ 2,01,834 ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುತ್ತದೆ.

Published On - 1:39 pm, Mon, 20 September 21

Follow us on