ಬೆಂಗಳೂರು, ಸೆಪ್ಟೆಂಬರ್ 04: ವೈದ್ಯಕೀಯ, ಎಂಜಿನೀಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳು ತಮ್ಮ ಇಚ್ಛೆಯ ಚಾಯ್ಸ್ (Choice) ದಾಖಲು ಮಾಡುತ್ತಿದ್ದಾರೆ. ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇದೇ ಮೊದಲ ಬಾರಿಗೆ ಆನ್ ಲೈನ್ ಪಾವತಿ (Online Payment) ಜಾರಿ ಮಾಡಿದೆ.
ಕೆಇಎ ಇದೇ ಮೊದಲ ಬಾರಿಗೆ ಇಂಟರ್ ನೆಟ್ ಬ್ಯಾಂಕಿಂಗ್, ಡೆಬಿಟ್/ ಕ್ರೆಡಿಟ್ ಕಾರ್ಡ್ ಶುಲ್ಕ ಪಾವತಿಸುವುದಕ್ಕೂ ಅವಕಾಶ ಕಲ್ಪಿಸಿರುವುದರಿಂದ ಇಡೀ ಪ್ರಕ್ರಿಯೆ ಸರಳವಾಗಿದೆ. ಯುಜಿಸಿಇಟಿ-ನೀಟ್ (UGCET-NEET) ಕೋರ್ಸ್ಗಳಿಗೆ ಮೊದಲ ದಿನವೇ 16 ಸಾವಿರಕ್ಕೂ ಮಂದಿ ತಮ್ಮ ಇಚ್ಛೆಯ ಚಾಯ್ಸ್ ದಾಖಲು ಮಾಡಿದ್ದಾರೆ. 3000ಕ್ಕೂ ಹೆಚ್ಚು ಮಂದಿ ಶುಲ್ಕ ಪಾವತಿ ಮಾಡಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅಭ್ಯರ್ಥಿಗಳು ಅಥವಾ ಪೋಷಕರು ತಮ್ಮ ಬ್ಯಾಂಕಿನಿಂದ ಪಾವತಿ ಮಾಡುವ ಮಿತಿಯನ್ನು ಹೆಚ್ವಿಸಿಕೊಳ್ಳಲು ಅವಕಾಶ ಇದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಹೃದಯಘಾತ ಪ್ರಕರಣ ಹೆಚ್ಚಳ: ಶಾಲಾ-ಕಾಲೇಜು ಮಕ್ಕಳಿಗೆ CPR ತರಬೇತಿಗೆ ಶಿಕ್ಷಣ ಇಲಾಖೆ ಚಿಂತನೆ!
ಸೆಪ್ಟೆಂಬರ್ 5 ದಾಖಲಾತಿಗೆ ಡೆಡ್ ಲೈನ್ ಇದೆ. ಆದರೆ, ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜು ದಾಖಲಾತಿಗೆ ಪೋಷಕರಿಗೆ ಸರ್ವರ್ ಸಮಸ್ಯೆ ಎದುರಾಗಿದೆ. ಗಣೇಶ ಹಬ್ಬ ಹಾಗೂ ಕಡಿಮೆ ಅವಧಿ ಹಿನ್ನೆಲೆಯಲ್ಲಿ ದೂರದ ಬೆಳಾಗವಿ, ಕಲುಬುರಗಿ ಬೀದರ್ನಿಂದ ಬರುವ ಪೋಷಕರಿಗೆ ಸಂಕಷ್ಟ ಎದುರಾಗಿದೆ.
ಬೆಂಗಳೂರಿಗೆ ಬಂದು ಚಲನ್ ಪಡೆದು ಬ್ಯಾಂಕಿಗೆ ಹಣ ಕಟ್ಟಿ ಮತ್ತೆ ಕಾಲೇಜಿಗೆ ಹೋಗಿ ದಾಖಲಾತಿ ಪಡೆದುಕೊಳ್ಳುವುದು ಕಷ್ಟವಾಗಿದೆ. ಇದರ ಜೊತೆಗೆ ಚಲನ್ ಡೌನ್ಲೋಡ್ಗೆ ಕೆಇಎನಲ್ಲಿ ಸರ್ವರ್ ಸಮಸ್ಯೆ ಉದ್ಭವಿಸಿದೆ. ಇದರಿಂದ ಮಕ್ಕಳ ದಾಖಲಾತಿಗೆ ಪೋಷಕರು ಪರದಾಡುವಂತಾಗಿದೆ.
ಒಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ ಮೊದಲ ಬಾರಿಗೆ ಆನ್ಲೈನ್ ಪಾವತಿ ಜಾರಿ ಮಾಡಿ ದಾಖಲಾತಿ ಸುಲಭ ಮಾಡಿದೆ. ಆದರೆ ಕೆಲ ಪೋಷಕರಿಗೆ ಸರ್ವರ್ ಕೈ ಕೊಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 am, Wed, 4 September 24