ಹೃದಯಘಾತ ಪ್ರಕರಣ ಹೆಚ್ಚಳ: ಶಾಲಾ-ಕಾಲೇಜು ಮಕ್ಕಳಿಗೆ CPR ತರಬೇತಿಗೆ ಶಿಕ್ಷಣ ಇಲಾಖೆ ಚಿಂತನೆ!
ಕೋವಿಡ್ ಬಳಿಕ ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚಾಗಿವೆ. ಜೊತೆಗೆ ಶಾಲಾ ಕಾಲೇಜು ಹಂತದಲ್ಲಿ ಮಕ್ಕಳಿಗೆ ನಾನಾ ಖಾಯಿಲೆಗಳು ಕಂಡು ಬರುತ್ತಿವೆ. ಪುಟಾಣಿ ಮಕ್ಕಳಿಂದ ಹಿಡಿದು ಶಾಲಾ ಮಕ್ಕಳಲ್ಲಿ ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇನ್ನು ಕೋವಿಡ್ ಬಳಿಕ ಹಾರ್ಟ್ ಅಟ್ಯಾಕ್ ಕಾಡುತ್ತಿದೆ. ಚಿಕ್ಕ-ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆ, ಮಕ್ಕಳಿಗೆ ಸಿಪಿಆರ್ ಕ್ಲಾಸ್ ಮಾಡಲು ಮುಂದಾಗಿದೆ.
ಬೆಂಗಳೂರು, (ಸೆಪ್ಟೆಂಬರ್ 03): ಪಿಯು ಕಾಲೇಜು ಹಾಗೂ ಪ್ರೌಢ ಶಾಲಾ ಮಕ್ಕಳಿಗೆ CPR ಕ್ಲಾಸ್ ಮಾಡಲು ಕರ್ನಾಟಕ ಶಿಕ್ಷಣ ಇಲಾಖೆ ಮುಂದಾಗಿದೆ. ಹೃದಯಘಾತವಾದಗ ತಕ್ಷಣಕ್ಕೆ ಏನು ಮಾಡಬೇಕು? ಹೇಗೆ ನಿರ್ವಹಿಸಬೇಕು? ಗೋಲ್ಡನ್ ಟೈಮ್ ನಲ್ಲಿ ಏನು ಮಾಡಿದ್ರೆ ಜೀವ ಉಳಿಸಬಹುದು ಎನ್ನುವ ಜ್ಞಾನ ಬಹುತೇಕ ಜನರಲ್ಲಿ ಇಲ್ಲ. ಹೃದಯಘಾತದ ವೇಳೆ ತಕ್ಷಣದ ಚಿಕಿತ್ಸೆ ನೀಡದೆ ಗೊಂದಲದಲ್ಲಿ ಅನೇಕ ಜನರು ಜೀವ ಕೈಚೆಲ್ಲುತ್ತಿದ್ದಾರೆ. ಹೀಗಾಗಿ CPR ಶಿಕ್ಷಣವನ್ನ ಪ್ರೌಢ ಹಾಗೂ ಕಾಲೇಜು ಹಂತದ 10,11,12 ನೇ ತರಗತಿಯ ಮಕ್ಕಳಿಗೆ ನೀಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ವಾರದಲ್ಲಿ 40 ನಿಮಿಷ ಒಂದು ತರಗತಿಯ ಅವಧಿಯಲ್ಲಿ ಸಿಪಿಆರ್ ಅಂದ್ರೇನು? ಹೇಗೆ ಯಾವ ಸಮಯದಲ್ಲಿ ಇದನ್ನ ಮಾಡಿದ್ರೆ ಜೀವ ಉಳಿಸಬಹುದು? ಹಾಗೂ ಪ್ರಥಮ ದರ್ಜೆ ಚಿಕಿತ್ಸೆ ಹೇಗೆ ನೀಡಬೇಕು.? ಎಂಬ ಎಲ್ಲ ತರಬೇತಿಯ ಶಿಕ್ಷಣವನ್ನ ಶಾಲಾ ಮಕ್ಕಳಿಗೆ ನೀಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಮೂಲಕ ಶಾಲಾ ಹಂತದಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ತರಬೇತಿ ಹಾಗೂ ಪ್ರಾಥಮಿಕ ಚಿಕಿತ್ಸೆಯ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಇನ್ಮುಂದೆ ಫೇಸಿಯಲ್ ಅಟೆಂಡೆನ್ಸ್..!
ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಪ್ರಕರಣ ಹೆಚ್ಚಾಗುತ್ತಿದೆ. ಅದರಲ್ಲೂ ಶಾಲಾ ಮಕ್ಕಳಲ್ಲಿಯೂ ಹೃದಯಘಾತ ಕಂಡು ಬರುತ್ತಿದೆ. ಹೀಗಾಗಿ ಶೈಕ್ಷಣಿಕ ಪಠ್ಯದಲ್ಲಿ ಸಿಪಿಆರ್ ವಿಷಯ ಸೇರ್ಪಡೆಗೆ ಮುಂದಾಗಿದೆ. ಅನೇಕ ಜನರು ಸಿಪಿಆರ್ ಸಿಗದೇ ದಾರಿಯಲ್ಲಿ ಮೃತಪಡುತ್ತಿರುವ ಪ್ರಕರಣಗಳು ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಹೀಗಾಗಿ ಶಾಲಾ ಮಕ್ಕಳಿಗೆ ಈ ತರಬೇತಿ ಬಗ್ಗೆ ಚಿಂತನೆ ನಡೆಸಿದೆ.
ಒಟ್ಟಿನಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಒಂದಲ್ಲ ಒಂದು ಖಾಯಿಲೆಗಳು ಹೆಚ್ಚಾಗುತ್ತಿದ್ದು ಅದರಲ್ಲೂ ಹೃದಯಘಾತ ಪ್ರಕರಣಗಳ ಸಂಖ್ಯೆ ಏರಿಕೆಯಾಗ್ತಿದ್ದು.. ಶಾಲಾ ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದು ಉತ್ತಮ ಬೆಳೆವಣಿಯಾಗಿದೆ.
Published On - 10:51 pm, Tue, 3 September 24