ಕೋಟಿಗಟ್ಟಲೆ ಮೊಬೈಲ್ ಬಳಕೆದಾರರಿಗೆ ದೊಡ್ಡ ಸುದ್ದಿ: ಇನ್ಮುಂದೆ ಈ ಜನರಿಗೆ ಸಿಮ್ ಸಿಗುವುದಿಲ್ಲ

ಸೈಬರ್ ಅಪರಾಧವನ್ನು ತಡೆಗಟ್ಟಲು ದೂರಸಂಪರ್ಕ ಇಲಾಖೆಯು ಕಪ್ಪು ಪಟ್ಟಿಯನ್ನು (ಬ್ಲಾಕ್ ಲಿಸ್ಟ್) ಮಾಡಲು ಪ್ರಾರಂಭಿಸಿದೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವತ್ತ ಸರಕಾರ ಚಿತ್ತ ಹರಿಸಿದೆ. ವರದಿಯ ಪ್ರಕಾರ, ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ನೀಡುವವರು ಅಥವಾ ಮೋಸದ ಸಂದೇಶಗಳನ್ನು ಕಳುಹಿಸುವವರು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ. ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.

ಕೋಟಿಗಟ್ಟಲೆ ಮೊಬೈಲ್ ಬಳಕೆದಾರರಿಗೆ ದೊಡ್ಡ ಸುದ್ದಿ: ಇನ್ಮುಂದೆ ಈ ಜನರಿಗೆ ಸಿಮ್ ಸಿಗುವುದಿಲ್ಲ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 28, 2024 | 2:41 PM

ದೇಶದ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಸೈಬರ್ ವಂಚನೆಯಿಂದ ಮುಕ್ತಿ ನೀಡಲು ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ. ಇನ್ಮುಂದೆ ಯಾರಿಗೆಲ್ಲ ಪುನಃ ಸಿಮ್ ಕಾರ್ಡ್ ನೀಡಲಾಗುವುದಿಲ್ಲ ಎಂಬ ಪಟ್ಟಿಯನ್ನು ಸರ್ಕಾರ ಮಾಡಲು ಪ್ರಾರಂಭಿಸಿದೆ. ಹೊಸ ಸಿಮ್ ಕಾರ್ಡ್ ನಿಯಮದ ಅಡಿಯಲ್ಲಿ, ದೂರಸಂಪರ್ಕ ಇಲಾಖೆ (DoT) ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಶುರುಮಾಡಿದೆ. ಇತ್ತೀಚೆಗೆ, ಟ್ರಾಯ್​ನ ಹೊಸ ನಿಯಮಗಳ ಅಡಿಯಲ್ಲಿ, ನಕಲಿ ಕರೆಗಳು ಮತ್ತು ಎಸ್ ಎಂ ಎಸ್ ಗೆ ಕಡಿವಾಣ ಹಾಕಲು ಅಭಿಯಾನವನ್ನು ಪ್ರಾರಂಭಿಸಲಾಗಿದೆ. ವರದಿ ಮಾಡಿದ ನಂತರ ಲಕ್ಷಾಂತರ ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಮಾಡಲಾಗಿದೆ.

ಸಿಎನ್‌ಬಿಸಿ ಆವಾಜ್‌ನ ವರದಿಯ ಪ್ರಕಾರ, ಸೈಬರ್ ಅಪರಾಧವನ್ನು ತಡೆಗಟ್ಟಲು ದೂರಸಂಪರ್ಕ ಇಲಾಖೆಯು ಕಪ್ಪು ಪಟ್ಟಿಯನ್ನು (ಬ್ಲಾಕ್ ಲಿಸ್ಟ್) ಮಾಡಲು ಪ್ರಾರಂಭಿಸಿದೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವತ್ತ ಸರಕಾರ ಚಿತ್ತ ಹರಿಸಿದೆ. ವರದಿಯ ಪ್ರಕಾರ, ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ನೀಡುವವರು ಅಥವಾ ಮೋಸದ ಸಂದೇಶಗಳನ್ನು ಕಳುಹಿಸುವವರು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ. ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಅಂತಹ ಬಳಕೆದಾರರನ್ನು ಸೈಬರ್ ಭದ್ರತೆಗೆ ಬೆದರಿಕೆ ಹಾಕುವ ವರ್ಗದಲ್ಲಿ ಇರಿಸಲಾಗುತ್ತದೆ.

ಇದನ್ನೂ ಓದಿ: 200MP ಕ್ಯಾಮೆರಾ ಹೊಂದಿರುವ ಈ AI ಫೋನ್ ಮೇಲೆ ಬರೋಬ್ಬರಿ ಶೇ. 51 ರಷ್ಟು ಡಿಸ್ಕೌಂಟ್

3 ವರ್ಷಗಳವರೆಗೆ ನಿಷೇಧ ಹೇರಲಾಗುವುದು:

ಅಂತಹ ಬಳಕೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ, ಸಿಮ್ ಕಾರ್ಡ್ ಅನ್ನು ನಿರ್ಬಂಧಿಸಲಾಗುತ್ತದೆ. ಅಲ್ಲದೆ, 6 ತಿಂಗಳಿಂದ 3 ವರ್ಷಗಳವರೆಗೆ ಅವರ ಹೆಸರಿನಲ್ಲಿ ಯಾವುದೇ ಸಂಪರ್ಕವನ್ನು ನೀಡಲಾಗುವುದಿಲ್ಲ. ಹೊಸ ನಿಯಮಗಳ ಪ್ರಕಾರ, ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ನೀಡುವುದು ಅಪರಾಧ. ಇದಲ್ಲದೆ, ನಕಲಿ ಸಂದೇಶಗಳನ್ನು ಕಳುಹಿಸುವುದನ್ನು ಶಿಕ್ಷಾರ್ಹ ಅಪರಾಧದ ವರ್ಗದಲ್ಲಿ ಇರಿಸಲಾಗಿದೆ.

ಸಿಮ್ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ:

2025 ರಿಂದ, ಅಂತಹ ಬಳಕೆದಾರರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಮತ್ತು ಇವರ ಸಂಪೂರ್ಣ ಮಾಹಿತಿಯನ್ನು ಎಲ್ಲಾ ಟೆಲಿಕಾಂ ಆಪರೇಟರ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ, ಇದರಿಂದಾಗಿ ಅವರ ಹೆಸರಿನಲ್ಲಿ ಮತ್ತೆ ಸಿಮ್ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ. ಸೈಬರ್ ಭದ್ರತಾ ನಿಯಮಗಳ ಅಡಿಯಲ್ಲಿ, ವ್ಯಕ್ತಿಗಳ ಮಾಹಿತಿ ರಚಿಸಲು ಸರ್ಕಾರ ನಿರ್ಧರಿಸಿದೆ. ಅಂತಹ ಬಳಕೆದಾರರ ಪಟ್ಟಿಯನ್ನು ಮಾಡಿದ ನಂತರ, ಅವರಿಗೆ ಸರ್ಕಾರದಿಂದ ನೋಟಿಸ್ ಕಳುಹಿಸಲಾಗುವುದು, ಅವರು 7 ದಿನಗಳಲ್ಲಿ ಉತ್ತರಿಸಬೇಕಾಗುತ್ತದೆ.

ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಲ್ಲಿ, ಸರ್ಕಾರವು ಯಾವುದೇ ಸೂಚನೆಯಿಲ್ಲದೆ ಕ್ರಮ ಕೈಗೊಳ್ಳಬಹುದು. 6 ತಿಂಗಳಿಂದ 3 ವರ್ಷಗಳವರೆಗೆ ಹೊಸ ಸಿಮ್ ಕಾರ್ಡ್ ನೀಡಲಾಗುವುದಿಲ್ಲ. ಸೈಬರ್ ಭದ್ರತೆಗೆ ಸಂಬಂಧಿಸಿದ ಈ ನಿಯಮಗಳನ್ನು ಸರ್ಕಾರವು ಈ ವರ್ಷದ ನವೆಂಬರ್‌ನಲ್ಲಿ ತಿಳಿಸಿತ್ತು. ಇದಕ್ಕೆ ಹಲವು ಹೊಸ ನಿಬಂಧನೆಗಳನ್ನು ಸೇರಿಸಲಾಗಿದ್ದು, ಇದನ್ನು ಬಳಸಿಕೊಂಡು ಸರ್ಕಾರ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್