AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung Galaxy S23 Ultra: 200MP ಕ್ಯಾಮೆರಾ ಹೊಂದಿರುವ ಈ AI ಫೋನ್ ಮೇಲೆ ಬರೋಬ್ಬರಿ ಶೇ. 51 ರಷ್ಟು ಡಿಸ್ಕೌಂಟ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಅನ್ನು 1,49,999 ರೂ. ಗೆ ಬಿಡುಗಡೆ ಮಾಡಲಾಗಿತ್ತು. ಕೆಲವು ದಿನಗಳ ಹಿಂದೆ ಈ ಫೋನ್ 76,999 ರೂ. ಗೆ ಲಭ್ಯವಿತ್ತು. ಈಗ ಈ ಫೋನ್ 72,999 ರೂ. ಗೆ ಸೇಲ್ ಆಗುತ್ತದೆ. ಶೇ. 52 ರಷ್ಟು ಬೆಲೆಯನ್ನು ಕಂಪನಿ ಇಳಿಸಿದೆ. ಈ ಸ್ಮಾರ್ಟ್‌ಫೋನ್‌ನ 12GB RAM ಮತ್ತು 256GB ರೂಪಾಂತರವನ್ನು ನೀವು ರೂ. 3,539 ರ ಆರಂಭಿಕ EMI ನಲ್ಲಿ ಖರೀದಿಸಬಹುದು.

Samsung Galaxy S23 Ultra: 200MP ಕ್ಯಾಮೆರಾ ಹೊಂದಿರುವ ಈ AI ಫೋನ್ ಮೇಲೆ ಬರೋಬ್ಬರಿ ಶೇ. 51 ರಷ್ಟು ಡಿಸ್ಕೌಂಟ್
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Dec 27, 2024 | 5:22 PM

Share

ಸ್ಯಾಮ್‌ಸಂಗ್ ತನ್ನ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ 5 ಜಿ ಬೆಲೆಯನ್ನು ಮತ್ತೊಮ್ಮೆ ಕಡಿಮೆ ಮಾಡಿದೆ. ಕೆಲ ದಿನಗಳ ಹಿಂದೆ 76,999 ರೂ. ಗೆ ಲಭ್ಯವಿದ್ದ ಈ ಫೋನ್ ಈಗ ಕೇವಲ 72,999 ರೂ. ಗೆ ಮಾರಾಟ ಆಗುತ್ತದೆ. ಈ ಫೋನ್ ಬೆಲೆಯಲ್ಲಿ 4,000 ರೂಪಾಯಿಗಳ ಫ್ಲಾಟ್ ಬೆಲೆಯನ್ನು ಕಡಿತಗೊಳಿಸಲಾಗಿದೆ. ಸ್ಯಾಮ್‌ಸಂಗ್‌ನ ಈ ಉತ್ತಮ ಫೋನ್ 200 ಮೆಗಾ ಪಿಕ್ಸೆಲ್ ಕ್ಯಾಮೆರಾ, 12GB RAM, 256GB ಸಂಗ್ರಹಣೆ ಮತ್ತು AI ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಸ್ಯಾಮ್‌ಸಂಗ್ ಫೋನ್‌ನ ಖರೀದಿಯ ಮೇಲೆ ಬ್ಯಾಂಕ್ ರಿಯಾಯಿತಿ ಮತ್ತು ನೋ-ಕಾಸ್ಟ್ EMI ಸಹ ಲಭ್ಯವಿರುತ್ತದೆ. ಅಷ್ಟೇ ಅಲ್ಲ, ಹಳೆಯ ಫೋನ್‌ಗಳ ಎಕ್ಸ್‌ಚೇಂಜ್ ಮೇಲೆ ಪ್ರತ್ಯೇಕ ರಿಯಾಯಿತಿ ನೀಡಲಾಗುವುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಅನ್ನು 1,49,999 ರೂ. ಗೆ ಬಿಡುಗಡೆ ಮಾಡಲಾಗಿತ್ತು. ಕೆಲವು ದಿನಗಳ ಹಿಂದೆ ಈ ಫೋನ್ 76,999 ರೂ. ಗೆ ಲಭ್ಯವಿತ್ತು. ಈಗ ಈ ಫೋನ್ 72,999 ರೂ. ಗೆ ಸೇಲ್ ಆಗುತ್ತದೆ. ಶೇ. 52 ರಷ್ಟು ಬೆಲೆಯನ್ನು ಕಂಪನಿ ಇಳಿಸಿದೆ. ಈ ಸ್ಮಾರ್ಟ್‌ಫೋನ್‌ನ 12GB RAM ಮತ್ತು 256GB ರೂಪಾಂತರವನ್ನು ನೀವು ರೂ. 3,539 ರ ಆರಂಭಿಕ EMI ನಲ್ಲಿ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ವೈಶಿಷ್ಟ್ಯಗಳು:

ಈ ಶಕ್ತಿಶಾಲಿ ಸ್ಮಾರ್ಟ್‌ಫೋನ್ 6.81 ಇಂಚಿನ 2X ಡೈನಾಮಿಕ್ AMOLED ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಫೋನ್‌ನ ಡಿಸ್‌ಪ್ಲೇಯ ರೆಸಲ್ಯೂಶನ್ 3088 x 1440 ಪಿಕ್ಸೆಲ್‌ಗಳು ಆಗಿವೆ.

ಫೋನ್‌ನ ಡಿಸ್​ಪ್ಲೇ 120Hz ಹೆಚ್ಚಿನ ರಿಫ್ರೆಶ್ ರೇಟ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ ಮತ್ತು ಇದು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕದಿಂದ ಕೂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್ ಅನ್ನು ಹೊಂದಿದೆ, ಇದರೊಂದಿಗೆ ಇದು 12GB RAM ಮತ್ತು 1TB ಆಂತರಿಕ ಸಂಗ್ರಹಣೆಯೊಂದಿಗೆ ಬೆಂಬಲಿತವಾಗಿದೆ.

ಎಸ್-ಪೆನ್ ಫೋನ್‌ನಲ್ಲಿ ಬೆಂಬಲಿತವಾಗಿದೆ. ಇದಲ್ಲದೇ, ಸ್ಯಾಮ್‌ಸಂಗ್‌ನ ಈ ಗಟ್ಟಿಮುಟ್ಟಾದ ಫೋನ್ 5000mAh ನ ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ, 45W ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯಕ್ಕೆ ಬೆಂಬಲ ಲಭ್ಯವಿರುತ್ತದೆ. ಈ ಫೋನ್ ಆಂಡ್ರಾಯ್ಡ್ 13 ಆಧಾರಿತ OneUI 5 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಏರ್‌ಪ್ಲೇನ್ ಮೋಡ್ ಆನ್ ಮಾಡಿ ಬ್ಯಾಟರಿ ಉಳಿಸುವ ಟ್ರಿಕ್ ನಿಮಗೆ ಗೊತ್ತೇ?

ಈ ಸ್ಯಾಮ್​ಸಂಗ್ ಫೋನ್‌ನ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಫೋನ್ 200MP ಮುಖ್ಯ ಕ್ಯಾಮೆರಾವನ್ನು ಹೊಂದಿರುತ್ತದೆ. ಇದರೊಂದಿಗೆ ಇನ್ನೂ ಮೂರು 10MP, 12MP ಮತ್ತು 10MP ಕ್ಯಾಮೆರಾಗಳನ್ನು ನೀಡಲಾಗಿದೆ. ಫೋನ್‌ನ ಪ್ರಾಥಮಿಕ ಕ್ಯಾಮೆರಾ OIS ಅನ್ನು ಅಂದರೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 12MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ತಂತ್ರಜ್ಞಾನ ಸುಸ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ