AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಏರ್‌ಪ್ಲೇನ್ ಮೋಡ್ ಆನ್ ಮಾಡಿ ಬ್ಯಾಟರಿ ಉಳಿಸುವ ಟ್ರಿಕ್ ನಿಮಗೆ ಗೊತ್ತೇ?

ನಿಮ್ಮ ಫೋನ್‌ನ ಬ್ಯಾಟರಿಯನ್ನು ಏರ್‌ಪ್ಲೇನ್ ಮೋಡ್‌ ಆನ್ ಮಾಡುವ ಮೂಲಕ ಉಳಿಸಬಹುದು ಎಂಬುದು ನಿಮಗೆ ಗೊತ್ತೆ?. ಅಂದರೆ, ಫೋನ್‌ನ ಬ್ಯಾಟರಿಯು ಬೇಗನೆ ಖಾಲಿಯಾಗುತ್ತಿದ್ದರೆ, ಈ ಮೋಡ್ ಅನ್ನು ಆನ್ ಮಾಡುವ ಮೂಲಕ ನಿಮ್ಮ ಫೋನ್‌ನ ಬ್ಯಾಟರಿಯನ್ನು ನೀವು ಉಳಿಸಬಹುದು. ಆದರೆ ಬ್ಯಾಟರಿಯನ್ನು ಉಳಿಸಲು ಈ ಮೋಡ್ ಅನ್ನು ಯಾವಾಗ ಆನ್ ಮಾಡಬೇಕು?.

Tech Tips: ಏರ್‌ಪ್ಲೇನ್ ಮೋಡ್ ಆನ್ ಮಾಡಿ ಬ್ಯಾಟರಿ ಉಳಿಸುವ ಟ್ರಿಕ್ ನಿಮಗೆ ಗೊತ್ತೇ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Dec 27, 2024 | 10:59 AM

Share

ಏರ್‌ಪ್ಲೇನ್ ಮೋಡ್ ಅಥವಾ ಫ್ಲೈಟ್ ಮೋಡ್ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಸಾಧನಗಳಲ್ಲಿನ ಸೆಟ್ಟಿಂಗ್ ಆಗಿದ್ದು ಅದು ಎಲ್ಲಾ ವೈರ್‌ಲೆಸ್ ಟ್ರಾನ್ಸ್‌ಮಿಷನ್‌ಗಳನ್ನು ಸಂಪೂರ್ಣವಾಗಿ ಆಫ್ ಮಾಡುತ್ತದೆ. ಏರ್‌ಪ್ಲೇನ್ ಮೋಡ್ ಆನ್ ಆಗಿರುವಾಗ ಸಾಧನವು ಸೆಲ್ಯುಲಾರ್ ನೆಟ್‌ವರ್ಕ್‌ಗಳಿಗೆ (ಕರೆಗಳು ಮತ್ತು ಡೇಟಾ), ವೈಫೈ, ಬ್ಲೂಟೂತ್ ಮತ್ತು ಜಿಪಿಎಸ್‌ಗೆ ಸಂಪರ್ಕಿಸಲು ಸಾಧ್ಯವಿಲ್ಲ ಎಂದರ್ಥ. ವಿಮಾನದ ಸೂಕ್ಷ್ಮ ಸಂಚರಣೆ ಮತ್ತು ಸಂವಹನ ವ್ಯವಸ್ಥೆಗಳಲ್ಲಿ ಯಾವುದೇ ತೊಂದರೆಗಳನ್ನು ಉಂಟುಮಾಡದಂತೆ ಈ ಸೌಲಭ್ಯವನ್ನು ವಿಶೇಷವಾಗಿ ವಿಮಾನ ಪ್ರಯಾಣದ ಸಮಯದಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ.

ಆದಾಗ್ಯೂ, ನಿಮ್ಮ ಫೋನ್‌ನ ಬ್ಯಾಟರಿಯನ್ನು ಏರ್‌ಪ್ಲೇನ್ ಮೋಡ್‌ ಆನ್ ಮಾಡುವ ಮೂಲಕ ಉಳಿಸಬಹುದು ಎಂಬುದು ನಿಮಗೆ ಗೊತ್ತೆ?. ಅಂದರೆ, ಫೋನ್‌ನ ಬ್ಯಾಟರಿಯು ಬೇಗನೆ ಖಾಲಿಯಾಗುತ್ತಿದ್ದರೆ, ಈ ಮೋಡ್ ಅನ್ನು ಆನ್ ಮಾಡುವ ಮೂಲಕ ನಿಮ್ಮ ಫೋನ್‌ನ ಬ್ಯಾಟರಿಯನ್ನು ನೀವು ಉಳಿಸಬಹುದು. ಆದರೆ ಬ್ಯಾಟರಿಯನ್ನು ಉಳಿಸಲು ಈ ಮೋಡ್ ಅನ್ನು ಯಾವಾಗ ಆನ್ ಮಾಡಬೇಕು?.

ನಿಮ್ಮ ಫೋನ್‌ನಲ್ಲಿ ನೀವು ಏರ್‌ಪ್ಲೇನ್ ಅನ್ನು ಆನ್ ಮಾಡಿದಾಗ, ಎಲ್ಲಾ ರೇಡಿಯೋ ಟ್ರಾನ್ಸ್‌ಮಿಟರ್‌ಗಳನ್ನು ಆಫ್ ಮಾಡುತ್ತದೆ. ಒಟ್ಟಾರೆಯಾಗಿ, ಈ ವೈಶಿಷ್ಟ್ಯವು ನಿಮ್ಮ ಫೋನ್ ಅನ್ನು ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಪ್ರತ್ಯೇಕಿಸುತ್ತದೆ. ಏರ್‌ಪ್ಲೇನ್ ಮೋಡ್ ಬಳಸುವ ಮೂಲಕ ಬ್ಯಾಟರಿ ಬಾಳಿಕೆಯನ್ನು ಉಳಿಸಲು ಫೋನ್ ಚಾರ್ಜ್ ಮಾಡುವಾಗ ನೀವು ಈ ಮೋಡ್ ಅನ್ನು ಆನ್ ಮಾಡಬೇಕು. ಆಗ ಚಾರ್ಜಿಂಗ್ ವೇಗವಾಗಿರುತ್ತದೆ. ಅಲ್ಲದೆ, ನಿಮ್ಮ ಫೋನ್‌ನ ಬ್ಯಾಟರಿ ಕಡಿಮೆಯಾದಾಗ ನೀವು ಈ ಮೋಡ್ ಅನ್ನು ಆನ್ ಮಾಡಿದರೆ, ಫೋನ್ ಬೇಗನೆ ಸ್ವಿಚ್ ಆಫ್ ಆಗುವುದಿಲ್ಲ.

ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿದಾಗ ಎಲ್ಲಾ ವೈರ್‌ಲೆಸ್ ಚಟುವಟಿಕೆಗಳನ್ನು ಆಫ್ ಮಾಡುತ್ತದೆ. ಆಗ ನಿಮ್ಮ ಫೋನ್ ಕಡಿಮೆ ಕೆಲಸ ಮಾಡುತ್ತದೆ. ಆದ್ದರಿಂದ ಕಡಿಮೆ ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ. ನೀವು ಪ್ರಯಾಣಿಸುವಾಗ ಇದು ವಿಶೇಷವಾಗಿ ಉಪಯುಕ್ತವಾಗಿದೆ ಅಲ್ಲದೆ, ನೀವು ಕೆಲಸ ಮಾಡುವಾಗ, ಓದುವಾಗ ಅಥವಾ ವಿಶ್ರಾಂತಿ ಪಡೆಯುವಾಗ ಏರ್‌ಪ್ಲೇನ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು.

ಹಾಗೆಯೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗಳನ್ನು ಸರಿಪಡಿಸಲು ಏರ್‌ಪ್ಲೇನ್ ಮೋಡ್ ಅನ್ನು ಬಳಸಲಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್​ನಲ್ಲಿ ಸರಿಯಾಗಿ ನೆಟ್​ವರ್ಕ್ ಸಿಗುತ್ತಿಲ್ಲ ಎಂದಾದರೆ ಒಮ್ಮೆ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ ಮತ್ತು 2 ನಿಮಿಷಗಳ ನಂತರ ಅದನ್ನು ಆಫ್ ಮಾಡಿ. ಇದರ ಸಹಾಯದಿಂದ ನೀವು ನಿಮ್ಮ ಫೋನ್​ನಲ್ಲಿ ನೆಟ್​ವರ್ಕ್ ಸರಿಪಡಿಸಬಹುದು.

ಇದನ್ನೂ ಓದಿ: ಡಿಸ್‌ಪ್ಲೇ ಒಡೆದಿರುವ ಸ್ಮಾರ್ಟ್‌ಫೋನ್ ಬಳಸುತ್ತಿದ್ದೀರಾ?: ಈ ಮೂರು ವಿಷಯಗಳನ್ನು ಇಂದೇ ನಿಲ್ಲಿಸಿ

ವಿದ್ಯುತ್ಕಾಂತೀಯ ವಿಕಿರಣದ ಅಪಾಯ ಹೆಚ್ಚಿರುವ ಸ್ಥಳಗಳಲ್ಲಿ ಸ್ಮಾರ್ಟ್‌ಫೋನ್‌ನ ಏರ್‌ಪ್ಲೇನ್ ಮೋಡ್ ತುಂಬಾ ಉಪಯುಕ್ತವಾಗಿದೆ. ಆದ್ದರಿಂದ, ನೀವು ಅಂತಹ ಅಪಾಯವಿರುವ ಸ್ಥಳದಲ್ಲಿದ್ದರೆ, ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿದರೆ ಉತ್ತಮ.

ಮೊಬೈಲ್ ಫೋನ್‌ಗಳಿಂದ ಹೊರಹೊಮ್ಮುವ ವಿಕಿರಣವು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅಗತ್ಯವಿಲ್ಲದ ಸಂದರ್ಭದಲ್ಲಿ ಫೋನ್ ಅನ್ನು ಫ್ಲೈಟ್ ಮೋಡ್ ಇಡುವ ಮೂಲಕ, ಈ ವಿಕಿರಣವು ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುವುದನ್ನು ಕಡಿಮೆ ಮಾಡಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ