AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಡಿಸ್‌ಪ್ಲೇ ಒಡೆದಿರುವ ಸ್ಮಾರ್ಟ್‌ಫೋನ್ ಬಳಸುತ್ತಿದ್ದೀರಾ?: ಈ ಮೂರು ವಿಷಯಗಳನ್ನು ಇಂದೇ ನಿಲ್ಲಿಸಿ

ಇಂದು ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ನಾನಾ ನಮೂನೆಯ ಮೊಬೈಲ್​ಗಳಿವೆ. ಮಡಚುವ ಫೋನ್​ನಿಂದ ಹಿಡಿದು ಕೀಪೈಡ್ ಮೊಬೈಲ್ ವರೆಗೆ ಖರೀದಿ ಮಾಡುತ್ತಾರೆ. ಮುಖ್ಯವಾಗಿ ಈಗ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್ಸ್ ಸುಲಭದಿಂದ ಸಿಗುತ್ತಿರುವ ಕಾರಣ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುವವರು ಕಮ್ಮಿ. ಹೀಗಾಗಿ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಒಡೆಯುವುದು ಅಥವಾ ಒಡೆದು ಹೋಗುವುದು ಸಾಮಾನ್ಯ. ನೀವು ಡಿಸ್‌ಪ್ಲೇ ಒಡೆದಿರುವ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಒಮ್ಮೆ ಈ ಸ್ಟೋರಿ ಓದಿ.

Tech Tips: ಡಿಸ್‌ಪ್ಲೇ ಒಡೆದಿರುವ ಸ್ಮಾರ್ಟ್‌ಫೋನ್ ಬಳಸುತ್ತಿದ್ದೀರಾ?: ಈ ಮೂರು ವಿಷಯಗಳನ್ನು ಇಂದೇ ನಿಲ್ಲಿಸಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2024 | 12:00 PM

ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಒಡೆಯುವುದು ಅಥವಾ ಒಡೆದು ಹೋಗುವುದು ಸಾಮಾನ್ಯ ಸಂಗತಿ. ಇಂದು ಅತಿ ಕಡಿಮೆ ಬೆಲೆಗೆ ಅನೇಕ ಮೊಬೈಲ್​ಗಳು ಸಿಗುತ್ತಿರುವ ಕಾರಣ ಅದರ ಮೇಲೆ ಹೆಚ್ಚಿನ ಮೋಹ ಅಥವಾ ಜಾಗರೂಕತೆ ಅನೇಕರಿಗೆ ಇಲ್ಲ. ಆದರೆ, ಡಿಸ್‌ಪ್ಲೇ ತುಂಬಾ ಸೂಕ್ಷ್ಮವಾಗಿರುತ್ತದೆ, ಆದ್ದರಿಂದ ಫೋನ್ ಆಕಸ್ಮಿಕವಾಗಿ ಬಿದ್ದರೆ, ಡಿಸ್‌ಪ್ಲೇ ಒಡೆಯಬಹುದು. ಅನೇಕ ಬಾರಿ ಜನರು ಮುರಿದ ಡಿಸ್‌ಪ್ಲೇಯೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಏಕೆಂದರೆ ಸ್ಕ್ರೀನ್ ರಿಪೇರಿ ಮಾಡಿಸಿಕೊಳ್ಳುವುದು ದೊಡ್ಡ ಖರ್ಚು. ಆದರೆ ಹಾಗೆ ಮಾಡುವುದು ತುಂಬಾ ಅಪಾಯಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ.

ಕೊಳಕು ಫೋನ್‌ನ ಒಳಗೆ ಪ್ರವೇಶಿಸಬಹುದು:

ನೀವು ಮುರಿದ ಅಥವಾ ಒಡೆದ ಡಿಸ್‌ಪ್ಲೇಯೊಂದಿಗೆ ಫೋನ್ ಬಳಸುತ್ತಿದ್ದರೆ, ಆ ಬಿರುಕುಗಳ ಮೂಲಕ ಕೊಳಕು ಅಥವಾ ಧೂಳು ಫೋನಿನ ಒಳಕ್ಕೆ ಪ್ರವೇಶಿಸಬಹುದು. ಇದರಿಂದಾಗಿ ಫೋನ್ ಸಂಪೂರ್ಣವಾಗಿ ಹಾನಿಗೊಳಗಾಗಬಹುದು. ಡಿಸ್​ಪ್ಲೇ ಜೊತೆಗೆ ಇತರೆ ಖರ್ಚು ಕೂಡ ನಿಮ್ಮ ಫೋನ್ ಮೇಲೆ ಬೀಳಬಹುದು. ಫೋನ್ ಡಿಸ್‌ಪ್ಲೇಯು ಒಳಗಿನ ಘಟಕಗಳಿಗೆ ಭದ್ರತಾ ಪದರವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪದರವು ಮುರಿದಾಗ, ಕೊಳಕು ಆ ಜಾಗಕ್ಕೆ ತಲುಪಬಹುದು ಮತ್ತು ಫೋನ್ ಹಾನಿಗೊಳಗಾಗಬಹುದು.

ಟಚ್ ರೆಸ್ಪಾನ್ಸ್:

ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಬಿರುಕು ಬಿಟ್ಟರೆ ಅಥವಾ ಒಡೆದರೆ ಆಗ ಹಿಂದಿನಂತೆ ನಮಗೆ ಎಲ್ಲ ಕೆಲಸ ಮಾಡಲು ಸಾಧ್ಯವಿಲ್ಲ. ಏಕೆಂದರೆ ಡಿಸ್‌ಪ್ಲೇ ಫೋನ್‌ನ ಮುಖ್ಯ ಅಂಶವಾಗಿದೆ ಮತ್ತು ಫೋನ್ ಕಾರ್ಯನಿರ್ವಹಿಸಲು ಡಿಸ್‌ಪ್ಲೇ ಬೇಕೇಬೇಕು. ಡಿಸ್‌ಪ್ಲೇಯ ಕ್ರ್ಯಾಕ್‌ನಿಂದಾಗಿ ಒಂದು ಬದಿಯಲ್ಲಿ ಅದು ಕಾರ್ಯನಿರ್ವಹಿಸದಿದ್ದರೆ ಮತ್ತು ನೀವು ಇನ್ನೂ ಇನ್ನೊಂದು ಬದಿಯಿಂದ ಫೋನ್ ಬಳಸುತ್ತಿದ್ದರೆ, ಕೆಲ ದಿನಗಳ ನಂತರ ಅದರ ಟಚ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು.

ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ:

ಫೋನ್‌ನಿಂದ ಹೊರಸೂಸುವ ನೀಲಿ ಬೆಳಕು ಕಣ್ಣುಗಳಿಗೆ ಹಾನಿ ಮಾಡುತ್ತದೆ. ಫೋನ್‌ನ ಡಿಸ್‌ಪ್ಲೇಯು ರಕ್ಷಣೆಯ ಪದರವಾಗಿದೆ, ಆದ್ದರಿಂದ ಈ ಪದರವು ಮುರಿದಾಗ, ಬೆಳಕು ನೇರವಾಗಿ ಬಳಕೆದಾರರ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಕಣ್ಣುಗಳಿಗೆ ಅಪಾಯಕಾರಿ ಎಂದು ಸಾಬೀತಾಗಿದೆ.

ಇದನ್ನೂ ಓದಿ: 5500mAh ಬ್ಯಾಟರಿಯ ಫೋನನ್ನು ಕೇವಲ 13,999 ರೂ. ಗೆ ರಿಲೀಸ್ ಮಾಡಿದ ವಿವೋ

ಡಿಸ್​ಪ್ಲೇ ಮೇಲಿನ ಗೀರುಗಳನ್ನು ತೆಗೆಯುವುದು ಹೇಗೆ?:

ಮೊಬೈಲ್ ಡಿಸ್​ಪ್ಲೇ ಒಂದಲ್ಲ ಒಂದು ರೀತಿಯಲ್ಲಿ ಹಾನಿಯಾಗಿರುತ್ತದೆ. ಡಿಸ್ ಪ್ಲೇಗೆ ಸ್ಕ್ರೀನ್ ಕವರ್ ಹಾಕಿದ್ದರೂ ಅದು ಕೆಲವೊಂದು ಬಾರಿ ಉಪಯೋಗಕ್ಕೆ ಬರುವುದಿಲ್ಲ. ದಿನನಿತ್ಯದ ಬಳಕೆಯ ನಡುವೆ ಸ್ಮಾರ್ಟ್‌ಫೋನ್‌ ಸ್ಕ್ರಾಚ್ ಆಗಿಯೇ ಆಗುತ್ತದೆ. ಆದ್ದರಿಂದ ನಿಮ್ಮ ಫೋನ್​ನಲ್ಲಾದ ಸ್ಕ್ರಾಚ್ ಅನ್ನು ಸುಲಭವಾಗಿ ಹೇಗೆ?.

ಬೇಕಿಂಗ್ ಸೋಡಾ: ಸ್ಕ್ರಾಚ್ ನಿವಾರಣೆಗಾಗಿ ಬೇಕಿಂಗ್ ಸೋಡಾ ಉತ್ತಮ ವಿಧಾನ. ಒಂದು ಪಾತ್ರೆಗೆ ನೀರು ಮತ್ತು ಸೋಡಾವನ್ನು ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ನಿವಾರಣೆ ಮಾಡಿ. ಹಾಗೆಯೆ ಮಾರುಕಟ್ಟೆಯಲ್ಲಿ ಹಲವಾರು ಕಾರು ಸ್ಕ್ರಾಚ್ ರಿಮೂವಲ್ ಕ್ರೀಮ್‌ಗಳಿವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ನಿಮ್ಮ ಫೋನ್ ಡಿಸ್‌ಪ್ಲೇ ಸ್ಕ್ರಾಚ್ ಹೋಗಲಾಡಿಸಿ.

ಮೊಟ್ಟೆಯ ಬಿಳಿಭಾಗ: ಮೊಟ್ಟೆಯ ಬಿಳಿಭಾಗ ಮತ್ತು ಪೊಟ್ಯಾಶಿಯಮ್ ಸಲ್ಫೇಟ್ ಬಳಸಿ ಫೋನ್‌ ಸ್ಕ್ರಾಚ್ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಇವೆರಡನ್ನು ಮಿಶ್ರಣ ಮಾಡಿ. ಮತ್ತು ಈ ಮಿಶ್ರಣದಿಂದ ಸ್ಮಾರ್ಟ್‌ಫೋನ್ ಪರದೆಯನ್ನು ಒರೆಸಿ. ಅಂತೆಯೆ ಬೇಬಿ ಪೌಡರ್ ಮೂಲಕವೂ ಡಿಸ್‌ಪ್ಲೇ ಸ್ಕ್ರಾಚ್ ರಿಮೂವ್ ಮಾಡಬಹುದು ಎಂಬುದು ನಿಮಗೆ ಗೊತ್ತೆ. ಒಂದು ಪಾತ್ರೆಗೆ ನೀರು ಮತ್ತು ಬೇಬಿ ಪೌಡರ್ ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ಆದ ಜಾಗದಲ್ಲಿ ಹಚ್ಚಿರಿ.

ಪೆಟ್ರೋಲಿಯಂ ಜೆಲ್ಲಿಯ ಸಹಾಯವನ್ನು ತೆಗೆದುಕೊಳ್ಳಿ: ಹೆಚ್ಚಿನ ಮನೆಗಳಲ್ಲಿ (ವ್ಯಾಸಲಿನ್ ಪೆಟ್ರೋಲಿಯಂ ಜೆಲ್ಲಿ) ಇರುತ್ತದೆ. ಅದರ ಸಹಾಯದಿಂದ ನೀವು ನಿಮ್ಮ ಫೋನ್ ಪರದೆಯನ್ನು ಫ್ಲಾಶ್ ಮಾಡಬಹುದು. ಫೋನ್ ಪರದೆಯ ಮೇಲೆ ವ್ಯಾಸಲೀನ್ ಹಚ್ಚಿ ಸ್ವಚ್ಛವಾದ ಬಟ್ಟೆಯಿಂದ ಒರೆಸಿದರೂ ಪರದೆಯು ಹೊಳೆಯಲು ಪ್ರಾರಂಭಿಸುತ್ತದೆ ಮತ್ತು ಗೀರುಗಳು ಮಾಯವಾಗುತ್ತವೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ