ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಇನ್ಮುಂದೆ ಫೇಸಿಯಲ್ ಅಟೆಂಡೆನ್ಸ್..!
Facial Attendance For Students: ಈ ವರ್ಷ SSLC ಪಿಯುಸಿಗೆ ಮೂರು ಪರೀಕ್ಷೆ ಹೆಂಗೂ ಪಾಸ್ ಆಗಬಹುದು.. ಒಂದು ಪರೀಕ್ಷಯಲ್ಲಿ ಫೇಲ್ ಆದ್ರೂ ಪಾಸ್ ಆಗಲು ಎರಡು ಪರೀಕ್ಷೆ ಇದ್ದೆ ಇದೆ ಎಂದು ಶಾಲೆಯಿಂದ ಹೊರಗುಳಿದು ಕ್ಲಾಸ್ಗೆ ಚೆಕ್ಕರ್ ಹಾಕುವ SSLC ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ಶಾಕ್ ಕೊಟ್ಟಿದೆ. ಇನ್ಮುಂದೆ ಶಾಲೆಗೆ ಹಾಜರಾಗದೆ ಇದ್ರೆ ಲಾಕ್ ಆಗೋದು ಪಕ್ಕ ಯಾಕೆ ಅಂತೀರಾ ಈ ಸ್ಟೋರಿ ನೋಡಿ.
ಬೆಂಗಳೂರು, (ಆಗಸ್ಟ್ 21): ಕೊವಿಡ್ ಸಯಮದಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಯ ಮಾಡಿರಲಿಲ್ಲ. ಇದನ್ನೆ ಅಭ್ಯಾಸ ಮಾಡಿಕೊಂಡಿರುವ ಸಾಕಷ್ಟು ವಿದ್ಯಾರ್ಥಿಗಳು ಕ್ಲಾಸ್ ಗೆ ಹಾಜರಾಗುತ್ತಿಲ್ಲ. ಜೊತೆಗೆ ಈ ವರ್ಷ ಹೇಗೋ ಮೂರು ಮೂರು ಅವಕಾಶ ಎಕ್ಸಾಂ ಬರೆಯಲು ಅವಕಾಶ ಇದೇ ಎಂದು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಚೆಕ್ಕರ್ ಹಾಕುತ್ತಿದ್ದಾರೆ. ಇದೀಗ ಕ್ಲಾಸ್ ಬಂಕ್ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದೆ. ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಇನ್ಮುಂದೆ ಫೇಸಿಯಲ್ ಅಟೆಂಡೆನ್ಸ್ ಜಾರಿಗೆ ತರಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಹೌದು.. ಪೋಷಕರೇ ಕೊಂಚ ಇತ್ತ ಗಮನ ಕೊಡಿ. ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗೆ ಫೇಸಿಯಲ್ ಅಟೆಂಡೆನ್ಸ್ ಪರಿಚಯಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಶಾಲೆಗೆ ಮಕ್ಕಳನ್ನ ಕಳುಹಿಸದೆ ಚಕ್ಕರ್ ಹಾಕಿಸೋ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ಶಾಕ್ ಕೊಟ್ಟಿದೆ. ಈಗಾಗಲೇ ಸಾಪ್ಟವೇರ್ ಕಂಪನಿಗಳ ಜೊತೆ ಮಾತುಕಥೆಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಈ ಫೇಸಿಯಲ್ ಸ್ಕ್ರೀನಿಂಗ್ ಅಳವಡಿಸಲು ಇಲಾಖೆ ಮುಂದಾಗಿದೆ.
ಇದನ್ನೂ ಓದಿ: ಕರ್ನಾಟಕ ಶಿಕ್ಷಣದಲ್ಲಿ ಆಂಧ್ರ ಮಾಡೆಲ್: SSLC, PUC ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್
ಶಿಕ್ಷಣ ಇಲಾಖೆಯ ಉದ್ದೇಶವೇನು?
ಮೊಬೈಲ್ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಫೇಸಿಯಲ್ ಹಾಜರಾತಿ ದಾಖಲಾತಿಗೆ ಇಲಾಖೆ ಮುಂದಾಗಿದೆ. ಇದರಿಂದ ಮಕ್ಕಳ ಶಾಲಾ ಹಾಜರಾತಿ ನೇರವಾಗಿ ಇಲಾಖೆಯ ಸ್ಟ್ಯಾಟ್ಸ್ ಗೆ ದಾಖಲಾಗುತ್ತದೆ. ಈ ಮೂಲಕ ಪ್ರತಿದಿನದ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಎಷ್ಟು ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಎಷ್ಟು ಗೈರು ಹಾಜರಾತಿ ಎಂಬ ಕಂಪ್ಲೀಟ್ ಮಾಹಿತಿ ಇಲಾಖೆಗೆ ತಿಳಿಯಲಿದೆ. ಈ ಮೂಲಕ ಶಾಲೆಗೆ ಚಕ್ಕರ್ ಹಾಕುವ ಮಕ್ಕಳು ಹಾಗೂ ವಿದ್ಯಾರ್ಥಿಗಳನ್ನು ಶಾಲೆ ಬಿಡಿಸುವ ಪೋಷಕರ ಮೇಲೆ ಕ್ರಮಕ್ಕೆ ಇಲಾಖೆ ಚಿಂತನೆ ನಡೆಸಿದೆ. ಕಡ್ಡಾಯ ಹಾಜರಾತಿ ಕಡಿಮೆ ಇರುವ ಮಗುವಿಗೆ ಪರೀಕ್ಷೆಗೆ ಹಾಜರಾತಿ ವಿನಾಯತಿ ಕಡಿತದ ಬಗ್ಗೆಯೂ ಚಿತಂನೆ ಮಾಡಿದೆ.
ಒಟ್ಟಿನಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಹಾಗೂ ಶಾಲೆಯಿಂದ ಹೊರಗಡೆ ಉಳಿಯುವ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಜೊತೆಗೆ ಹಾಜರಾತಿ ಹೆಚ್ಚಿಸಲು ಶಾಲಾ ಶಿಕ್ಷಣ ಇಲಾಖೆ ಈ ಪ್ಲ್ಯಾನ್ ಮಾಡಿದೆ. ಹೀಗಾಗಿ ಫೇಸಿಯಲ್ ಅಟೆಂಡೆನ್ಸ್ ಪರಿಚಯಿಸಲು ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ಜಾರಿಗೆ ಆಗುತ್ತೆ ಎಂದು ಕಾದು ನೋಡಬೇಕಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.