AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್-19ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಫ್ರಿ ಅಡ್ಮಿಷನ್: ಕೆವಿಎಸ್​ನಿಂದ ಮಹತ್ವದ ನಿರ್ಧಾರ

ಕೋವಿಡ್​ ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯ ಸಂಗಥನ್ (ಕೆವಿಎಸ್) ಉಚಿತ ಅಡ್ಮಿಷನ್ ನೀಡಲು ನಿರ್ಧರಿಸಿದೆ. ಪಿಎಂ ಕೇರ್ಸ್ ಮಕ್ಕಳ ಯೋಜನೆಯಡಿ ಈ ನಿರ್ಧಾರ ಕೈಗೊಂಡಿದೆ.

ಕೋವಿಡ್-19ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಫ್ರಿ ಅಡ್ಮಿಷನ್: ಕೆವಿಎಸ್​ನಿಂದ ಮಹತ್ವದ ನಿರ್ಧಾರ
ಕೇಂದ್ರೀಯ ವಿದ್ಯಾಲಯ ಸಂಗಥನ್ (ಕೆವಿಎಸ್)
TV9 Web
| Edited By: |

Updated on:May 14, 2022 | 10:23 AM

Share

ಇಡೀ ದೇಶವೇ ಕಳೆದ ಎರಡು ವರ್ಷಗಳಲ್ಲಿ ಕೋವಿಡ್​ಗೆ ತತ್ತರಿಸಿ ಹೊಗಿರುವುದು ನೋಡಿದ್ದೇವೆ. ಈ ಸಂದರ್ಭದಲ್ಲಿ ಸಾವಿರಾರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದು, ಕುಟುಂಬಸ್ಥರ ಆರೈಕೆಯಲ್ಲಿದ್ದಾರೆ. ಇಂಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಕೇಂದ್ರ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಮನವಿ ಮಾಡಿತ್ತು. ಅದರಂತೆ ಕೇಂದ್ರೀಯ ವಿದ್ಯಾಲಯ ಸಂಗಥನ್ (ಕೆವಿಎಸ್) ಶಿಕ್ಷಣ ಸಂಸ್ಥೆಯು ಅಂಥ ಮಕ್ಕಳಿಗೆ ಉಚಿತವಾಗಿ ಅಡ್ಮಿಷನ್ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಕೆವಿಎಸ್ ಆಡಳಿತವು ಮಾಹಿತಿ ನೀಡಿದೆ. ಕೇಂದ್ರದ ನಿರ್ದೇಶನದಂತೆ ಪಿಎಂ ಕೇರ್ಸ್ ಮಕ್ಕಳ ಯೋಜನೆಯಡಿ ದೇಶಾದ್ಯಂತ ಕೋವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಪ್ರವೇಶ ನೀಡಲು ನಿರ್ಧರಕ್ಕೆ ಶಿಕ್ಷಣ ಸಂಸ್ಥೆ ಬಂದಿದೆ.

ಕೆವಿಎಸ್​ ಡೆಪ್ಯೂಟಿ ಕಮಿಷನ್ (ಶಿಕ್ಷಣ ತಜ್ಞರು), ಎಲ್ಲಾ ಪ್ರಾದೇಶಿಕ ಕಚೇರಿಗಳಲ್ಲಿ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಅಡಿಯಲ್ಲಿ ಪ್ರವೇಶದ ಬಗ್ಗೆ ಸೂಚನೆ ನೀಡಿದ್ದಾರೆ. ಸಾಂಕ್ರಮಿಕ ರೋಗದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರವೇಶ ನೀಡುವಂತೆ ಪ್ರಾದೇಶಿಕ ಕಚೇರಿಗಳು ಆಯಾ ಡಿಎಂಗಳೊಂದಿಗೆ ಸಮನ್ವಯ ಸಾಧಿಸಲು ತಮ್ಮ ಪ್ರದೇಶದ ಅಡಿಯಲ್ಲಿನ ಪ್ರಾಂಶುಪಾಲರಿಗೆ ಸೂಚಿಸಬೇಕು ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರೀಯ ವಿದ್ಯಾಲಯ ಸಂಗಥನ್ (ಕೆವಿಎಸ್) ಅಧಿಕಾರಿಗಳು, ಕೋವಿಡ್​ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ವಿವಿಧ ತರಗತಿಗಳಿಗೆ ಸೇರಿಸಿಕೊಳ್ಳಲಾಗುವುದು. ಅಲ್ಲದೆ, ಅವರಿಗೆ 1ನೇ ತರಗತಿಯಿಂದ ಪಿಯುಸಿ ವರೆಗೆ ಉಚಿತವಾಗಿ ಶಿಕ್ಷಣದ ಜೊತೆಗೆ ಬೋಧನಾ ಶುಲ್ಕ, ವಿದ್ಯಾಲಯ ವಿಕಾಸ ನಿಧಿ (ವಿವಿಎನ್) ಶುಲ್ಕಗಳು ಸೇರಿದಂತೆ ಇತ್ಯಾದಿಗಳಿಮದ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಉಚಿತ ಪ್ರವೇಶದ ಬಗ್ಗೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳ ಶಿಫಾರಸಿನ ಮೇರೆಗೆ ಸಂಬಂಧಪಟ್ಟ ಕೆವಿ ಮೂಲಕ ನೀಡಲಾಗುತ್ತದೆ. ಪ್ರತಿ ತರಗತಿಗೆ ಇಬ್ಬರು ವಿದ್ಯಾರ್ಥಿಗಳಂತೆ ಪ್ರತಿ ಶಾಲೆಗೆ ಗರಿಷ್ಠ 10 ವಿದ್ಯಾರ್ಥಿಗಳನ್ನು ಡಿಎಂ ಶಿಫಾರಸು ಮಾಡಲಾಗುವುದು ಎಂದು ಕೆವಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳವಣಿಗೆಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ ಕೆವಿಎಸ್ ವಾರಣಾಸಿ ವಲಯದ ಸಹಾಯಕ ಅಯುಕ್ತ ಬಿ ದಯಾಳ್, ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುವ ಮಕ್ಕಳ ಪಟ್ಟಿಯನ್ನು ಸಂಬಂಧಪಟ್ಟ ಜಿಲ್ಲೆಯ ಡಿಎಂಗೆ ಕಳುಹಿಸಲಾಗಿದೆ. ಡಿಎಂನ ಶಿಫಾರಸು ಮೇರೆಗೆ ಅಂತಹ ಮಕ್ಕಳಿಗೆ ಕೆವಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಪ್ರವೇಶ ನೀಡಲಾಗುವುದು ಎಂದಿದ್ದಾರೆ.

ಯೋಜನೆಯಡಿ ನಿರ್ಧಾರವನ್ನು ಜಾರಿಗೆ ತರಲು ಕೆವಿಎಸ್​ನ ಪ್ರವೇಶ ಮಾರ್ಗಸೂಚಿಗಳನ್ನು ಕೂಡ ತಿದ್ದುಪಡಿ ಮಾಡಲಾಗಿದೆ. ಸಾಂಕ್ರಮಿಕ ರೊಗದಿಂದ ಪೋಷಕರನ್ನು, ದತ್ತು ಪಡೆದ ಪೋಷಕರು ಅಥವಾ ಕಾನೂನು ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರವೇಶ ನೀಡುವುದನ್ನು ಉಲ್ಲೇಖಿಸಿದೆ.

ಯೋಜನೆಯಡಿ 4058 ನೋಂದಾಯಿತ ಅರ್ಹ ಫಲಾನುಭಿಗಳ ಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯದಿಂದ ಸ್ವೀಕರಿಸಲಾಗಿದೆ. ಅದನ್ನು ಆಯಾ ಆರ್​ಒಗಳ ಮೂಲಕ ಕೆವಿಗಳ ಪ್ರಾಂಶುಪಾಲರಿಗೆ ಕಳುಹಿಸಲಾಗಿದೆ. ಯೋಜನೆಯಡಿ ಮಕ್ಕಳ ಪ್ರವೇಶಕ್ಕಾಗಿ ಮಧ್ಯಸ್ಥಗಾರರೊಂದಿಗೆ ಸಮನ್ವಯಕ್ಕಾಗಿ ಪ್ರದೇಶದ ಅಧಿಕಾರಿಯನ್ನು ನೋಡಲು ಅಧಿಕಾರಿಯಾಗಿ ಗೊತ್ತುಪಡಿಸಲಾಗುತ್ತದೆ. ಪ್ರಯಾಗ್​ರಾಜ್​ನಿಂದ ಸುಮಾರು 1 ಡಜನ್ ಮಕ್ಕಳು ಉಪಕ್ರಮದ ಅಡಿಯಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ ಎಂದು ಜಿಲ್ಲಾ ಅಧಿಕಾರಿಗಳು ಹೇಳಿದ್ದಾರೆ.

Published On - 10:23 am, Sat, 14 May 22