ಟೆಕ್ ತತ್ವ 2023 ಆಯೋಜಿಸಿದ MIT; ಅಭಿವೃದ್ಧಿಯನ್ನು ವೇಗಗೊಳಿಸುವ ನಾವೀನ್ಯತೆ ಕುರಿತು ವಿಚಾರ ಸಂಕಿರಣ
MIT Tech Tattva 2023: ಟೆಕ್ ತತ್ತ್ವ'23 ರಲ್ಲಿ, MIT ಯ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಯಾದ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವರು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಮಣಿಪಾಲವು ತನ್ನ ಹೆಸರಾಂತ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ಉತ್ಸವ, ‘ಟೆಕ್ ತತ್ತ್ವ 2023’ ಅನ್ನು(Tech Tattva 23) ಅಭಿವೃದ್ಧಿಯನ್ನು ವೇಗಗೊಳಿಸುವುದು” ಎಂಬ ವಿಷಯದ ಅಡಿಯಲ್ಲಿ ನಿನ್ನೆ (October 17) ಆಚರಿಸಿತು. ಈ ಉತ್ಸವವು ತಂತ್ರಜ್ಞಾನದ ಪರಿವರ್ತಕ ಶಕ್ತಿ ಮತ್ತು ನಮ್ಮ ಪ್ರಪಂಚದ ಮೇಲೆ ಅದರ ಮಹತ್ವದ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಟೆಕ್ ತತ್ತ್ವ’23 ವಿಶೇಷವಾಗಿ ಮಹತ್ವದ್ದಾಗಿದೆ ಏಕೆಂದರೆ ಇದು ಮಾಹೆಯ ಸಂಸ್ಥಾಪಕ ಡಾ. ಟಿಎಮ್ಎ ಪೈ ಅವರ 125 ನೇ ವಾರ್ಷಿಕೋತ್ಸವವನ್ನು ಸಹ ಆಚರಿಸುತ್ತಿದೆ.
ಈ ಸಮಾರಂಭವು ನಿರೂಪಕಿಯರಾದ ತ್ರಿಯಾ ಮತ್ತು ಪ್ರಜ್ಞಾ ಅವರ ಆತ್ಮೀಯ ಸ್ವಾಗತಕ್ಕೆ ಸಾಕ್ಷಿಯಾಯಿತು, ಅವರು ಜ್ಞಾನ, ನಾವೀನ್ಯತೆ ಮತ್ತು ಶ್ರೇಷ್ಠತೆಗೆ ಸಂಸ್ಥೆಯ ಸಮರ್ಪಣೆಯನ್ನು ಒತ್ತಿ ಹೇಳಿದರು. ಎಂಐಟಿ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ ಸ್ವಾಗತಿಸಿದರು.
ಟೆಕ್ ತತ್ತ್ವ’23 ರಲ್ಲಿ, MIT ಯ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಯಾದ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವರು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ಗೌರವಾನ್ವಿತ ಮುಖ್ಯ ಅತಿಥಿ “ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಾಹೆ ಆಯೋಜಿಸಿರುವ ಈ ಮಹೋನ್ನತ ತಾಂತ್ರಿಕ ಉತ್ಸವಕ್ಕೆ ಮುಖ್ಯ ಅತಿಥಿಯಾಗಿ ಸೇವೆ ಸಲ್ಲಿಸಲು ನನಗೆ ಸಂಪೂರ್ಣ ಗೌರವವಾಗಿದೆ. ಈ ಸಂಸ್ಥೆಯನ್ನು ವ್ಯಾಪಿಸಿರುವ ಶಕ್ತಿ, ಸ್ವಂತಿಕೆ ಮತ್ತು ಬುದ್ಧಿವಂತಿಕೆಯು ಸ್ಪೂರ್ತಿದಾಯಕವಾಗಿದೆ. ಈ ರೀತಿಯ ಕಾರ್ಯಕ್ರಮಗಳು ಆವಿಷ್ಕಾರವನ್ನು ಹಾಗು ಒಂದು ತಂಡವಾಗಿ ಕೆಲಸ ಮಾಡಲು ಉತ್ತೇಜಿಸುತ್ತದೆ ಮತ್ತು ಇದರಿಂದ ಮುಂದಿನ ಪೀಳಿಗೆಯ ಎಂಜಿನಿಯರ್‌ಗಳು ಮತ್ತು ಆವಿಷ್ಕಾರಕರನ್ನು ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸಲು ಮಾತ್ರವಲ್ಲದೆ ಭವಿಷ್ಯದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ಪ್ರತಿಯೊಬ್ಬರಿಗೂ ಹೊಸ ಆಲೋಚನೆಗಳನ್ನು ಅನ್ವೇಷಿಸಲು, ಅಧ್ಯಯನ ಮಾಡಲು ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸುವುದಕ್ಕೆ ನಾನು ಒತ್ತಾಯಿಸುತ್ತೇನೆ. ಪ್ರಶ್ನೆಗಳನ್ನು ಕೇಳುವುದು, ಮತ್ತು ಉತ್ತಮವಾಗುವುದನ್ನು ಎಂದಿಗೂ ನಿಲ್ಲಿಸಬೇಡಿ. ವೈಫಲ್ಯವನ್ನು ಸಾಧನೆಯ ಮೆಟ್ಟಿಲು ಎಂದು ಸ್ವೀಕರಿಸಿ ಎಂದರು.
ತಮ್ಮ ಭಾಷಣವನ್ನು ಮುಂದುವರಿಸುತ್ತಾ, ನಾನು ಇಲ್ಲಿ ಕಂಡ ಪ್ರತಿಭೆ ಮತ್ತು ಉತ್ಸಾಹದಿಂದ ನಾನು ಖಂಡಿತವಾಗಿಯೂ ಪ್ರಭಾವಿತನಾಗಿದ್ದೇನೆ. ನಾನು ಇಂದು ನೋಡಿದ ಪ್ರಾಜೆಕ್ಟ್‌ಗಳು, ಪ್ರಸ್ತುತಿಗಳು ಮತ್ತು ಸ್ಪರ್ಧೆಗಳು ನಿಮ್ಮ ಕಠಿಣ ಪರಿಶ್ರಮವನ್ನು ಮಾತ್ರವಲ್ಲ, ಸಾಧ್ಯವಿರುವ ಎಲ್ಲೇ ಮೀರಿ ನಡೆಯುವ ನಿಮ್ಮ ಸಮರ್ಪಣೆಯನ್ನೂ ಪ್ರತಿಬಿಂಬಿಸುತ್ತವೆ. ನೆನಪಿಡಿ, ನಾವೀನ್ಯತೆಗೆ ಯಾವುದೇ ಮಿತಿಯಿಲ್ಲ, ಮತ್ತು ನಿಮ್ಮ ಆಲೋಚನೆಗಳು ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದರು.
ಈ ಯುವ ಮಿದುಳುಗಳನ್ನು ಪೋಷಿಸಿದ ಮತ್ತು ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡಿದ ಅಧ್ಯಾಪಕರಿಗೆ ಮತ್ತು ಸಂಘಟಕರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಿಮ್ಮ ಸಲಹೆ ಮತ್ತು ಸಹಾಯವನ್ನು ಬಹಳವಾಗಿ ಪ್ರಶಂಸಿಸಲಾಗುತ್ತದೆ ಎಂದು ಹೇಳಿದರು.
ಎಂಐಟಿಯ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಂಸ್ಥೆಯ ದೃಷ್ಠಿಕೋನ ಮತ್ತು ನಾವೀನ್ಯತೆಯ ವಾತಾವರಣವನ್ನು ಬೆಳೆಸುವ ಬದ್ಧತೆಯ ಬಗ್ಗೆ ತಿಳಿಸಿದರು. ಇದಲ್ಲದೆ, ಟೆಕ್ ತತ್ತ್ವ’23 ರ ಸಂಚಾಲಕರಾದ, ವಿನಮ್ರಾ ಚೌಧರಿ ಮತ್ತು ಮನಸ್ವಿ ಜಾದವ್, ಉತ್ಸವದ ಬಗ್ಗೆ ತಮ್ಮ ದೃಷ್ಟಿಕೋನದ ಒಳನೋಟಗಳನ್ನು ಹಂಚಿಕೊಂಡರು. ರಾಜೀವ್ ಚಂದ್ರಶೇಖರ್ ಅವರಿಂದ ಉದ್ಘಾಟನೆಗೊಂಡ ಟೆಕ್ ತತ್ತ್ವ’23 ನ, ಅನೇಕ ಕಾರ್ಯಾಗಾರಗಳು ಮತ್ತು ಸ್ಪರ್ಧೆಗಳ ಆರಂಭವನ್ನು ಸಂಕೇತಿಸುತ್ತದೆ ಹಾಗೂ ಪ್ರತಿಯೊಂದೂ ಕಾರ್ಯಕ್ರಮವು ತಾಂತ್ರಿಕ ಪ್ರಗತಿಯತ್ತ ಸಾಗುತ್ತಿದೆ.
ಇದನ್ನೂ ಓದಿ: ಇಂಡಿಯಾ ಸ್ಕಿಲ್ಸ್ 2023 ಸ್ಪರ್ಧೆಯನ್ನು ಪ್ರಾರಂಭಿಸಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ಈ ಸಂದರ್ಭದಲ್ಲಿ ನೆರೆದಿದ್ದ ಮಾಹೆಯ ಗೌರವಾನ್ವಿತ ವ್ಯಕ್ತಿಗಳು ಪ್ರೊ ಚಾನ್ಸೆಲರ್ – ಡಾ.ಎಚ್.ಎಸ್.ಬಲ್ಲಾಳ್, ವೈಸ್ ಚಾನ್ಸಲರ್ – ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್, ಪ್ರೊ ವೈಸ್ ಚಾನ್ಸೆಲರ್ – ತಂತ್ರಜ್ಞಾನ ಮತ್ತು ವಿಜ್ಞಾನ – ಡಾ.ನಾರಾಯಣ ಸಭಾಹಿತ್, ಪ್ರೊ ವೈಸ್-ಚಾನ್ಸೆಲರ್ – ಕಾರ್ಯತಂತ್ರ ಮತ್ತು ಯೋಜನೆ – ಡಾ.ಎನ್.ಎನ್.ಶರ್ಮಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ – ಮಾಹೆ ಸಿ ಜಿ ಮುತ್ತಣ್ಣ, ರಿಜಿಸ್ಟ್ರಾರ್ – ಡಾ. ಪಿ. ಗಿರಿಧರ್ ಕಿಣಿ, ರಿಜಿಸ್ಟ್ರಾರ್ ಮೌಲ್ಯಮಾಪನ – ಡಾ ವಿನೋದ್ ವಿ. ಥಾಮಸ್, ಎಂಐಟಿಯ ಜಂಟಿ ನಿರ್ದೇಶಕ ಡಾ.ಸೋಮಶೇಖರ ಭಟ್, ಎಂಐಟಿಯ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಸಹ ನಿರ್ದೇಶಕಿ ಡಾ.ಪೂರ್ಣಿಮಾ ಕುಂದಾಪುರ. ಇವರೆಲ್ಲರೂ MITಯು ಶೈಕ್ಷಣಿಕ ಹಾಗು ಪಠ್ಯೇತರ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವುದಕ್ಕೆ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.
ತಮ್ಮ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು, ಸಂಸ್ಥೆಯು ರಾಜೀವ್ ಚಂದ್ರಶೇಖರ್ ಇವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿತು. ಕುಮಾರಿ ಪರಿಧಿಯವರ ಹೃತ್ಪೂರ್ವಕ ಧನ್ಯವಾದಗಳೊಂದಿಗೆ ಸಮಾರಂಭವು ಮುಕ್ತಾಯವಾಯಿತು
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Wed, 18 October 23