NEET PG 2023: ಪರೀಕ್ಷೆಯ ದಿನದ ಮಾಹಿತಿ, ಅಗತ್ಯವಿರುವ ದಾಖಲೆಗಳು ಮತ್ತು ಪರೀಕ್ಷೆಯ ಸಮಯವನ್ನು ಇಲ್ಲಿ ಪರಿಶೀಲಿಸಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 04, 2023 | 8:58 AM

NEET PG ಪರೀಕ್ಷೆ 2023: ಸ್ನಾತಕೋತ್ತರ ಪದವೀಧರರಿಗೆ (NEET PG) ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಮಾರ್ಚ್ 5, 2023 ರಂದು ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅನುಸರಿಸಬೇಕಾದ  NEET PG ಪರೀಕ್ಷೆಯ ದಿನದ ಮಾರ್ಗಸೂಚಿಗಳು ಇಂತಿವೆ.

NEET PG 2023: ಪರೀಕ್ಷೆಯ ದಿನದ ಮಾಹಿತಿ, ಅಗತ್ಯವಿರುವ ದಾಖಲೆಗಳು ಮತ್ತು ಪರೀಕ್ಷೆಯ ಸಮಯವನ್ನು ಇಲ್ಲಿ ಪರಿಶೀಲಿಸಿ
ಸಾಂದರ್ಭಿಕ ಚಿತ್ರ
Follow us on

NEET PG Exam 2023: ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ (NBE) ಮಾರ್ಚ್ 5, 2023 ರಂದು 26,168 ಡಾಕ್ಟರ್ ಆಫ್ ಮೆಡಿಸಿನ್ (MD), 13,649 ಮಾಸ್ಟರ್ ಆಫ್ ಸರ್ಜರಿ (MS) ಮತ್ತು 922 ಸರ್ಕಾರಿ, 926 PG, ಡಿಪ್ಲೋಮಾ, ಡಿಪ್ಲೋಮಾ ಪ್ರವೇಶಕ್ಕಾಗಿ NEET PG ಪರೀಕ್ಷೆಯನ್ನು ನಡೆಸಲಿದೆ.  NEET PG 2023 ಕ್ಕೆ ಹಾಜರಾಗುವ ಎಲ್ಲ ನೋಂದಾಯಿತ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಪ್ರವೇಶ ಕಾರ್ಡ್‌ಗಳನ್ನು ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಅಂತಹವರಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿಸಲಾಗುವುದಿಲ್ಲ.

ಇದರೊಂದಿಗೆ, ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗುವಾಗ ಅವರು NEET PG ಮಾರ್ಗಸೂಚಿಗಳು ಮತ್ತು ಸೂಚನೆಗಳನ್ನು ಅನುಸರಿಸಬೇಕು. ಇಲ್ಲಿ NEET PG ಪರೀಕ್ಷೆಯ ದಿನದ ಮಾರ್ಗಸೂಚಿಗಳು, ಸಮಯ, ಅಗತ್ಯವಿರುವ ದಾಖಲೆಗಳು ಮತ್ತು ಇತರ ಪ್ರಮುಖ ಮಾಹಿತಿಯ ವಿವರಗಳು ಇಂತಿವೆ.

NEET PG 2023 ಯ ಪರೀಕ್ಷೆ ಸಮಯ

NEET PG ಅನ್ನು ಮೂರು ಗಂಟೆ ಮೂವತ್ತು ನಿಮಿಷಗಳ ಕಾಲ ನಡೆಸಲಾಗುವುದು. ಬೆಳಿಗ್ಗೆ 9:00 ಗಂಟೆಗೆಯಿಂದ 12.30 ರವೆರೆಗೆ ನಡೆಯುತ್ತದೆ.

ಇದನ್ನೂ ಓದಿ:Aerospace Education and research: ಏರೋಸ್ಪೇಸ್ ಶಿಕ್ಷಣ, ಸಂಶೋಧನೆಯಲ್ಲಿ ಏರ್‌ಬಸ್‌ನೊಂದಿಗೆ ಸೇರಿದ IISc

ಅಭ್ಯರ್ಥಿಗಳು ಸಂಪೂರ್ಣ ಪರೀಕ್ಷೆಯ ವೇಳಾಪಟ್ಟಿಯನ್ನು ಕೆಳಗೆ ಪರಿಶೀಲಿಸಬಹುದು

ಪರೀಕ್ಷಾ ಕೇಂದ್ರ ಪ್ರವೇಶ ಮತ್ತು ಬಯೋಮೆಟ್ರಿಕ್ ವೆರಿಫಿಕೇಷನ್: ಬೆಳಿಗ್ಗೆ 7 ಗಂಟೆ

ಪರೀಕ್ಷಾ ಕೇಂದ್ರದೊಳಗೆ ಪ್ರವೇಶವಾಗಬೇಕು: ಬೆಳಿಗ್ಗೆ 8.30 ಗಂಟೆ

ಅಭ್ಯರ್ಥಿ ಲಾಗಿನ್ : ಬೆಳಿಗ್ಗೆ 8.45 ಗಂಟೆ

ಸೂಚನೆಗಳನ್ನು ಓದುವ ಸಮಯ : ಬೆಳಿಗ್ಗೆ 8.50 ಗಂಟೆ

ಪರೀಕ್ಷೆ ಶುರುವಾಗುವ ಸಮಯ : ಬೆಳಿಗ್ಗೆ 9 ಗಂಟೆ

ಪರೀಕ್ಷೆ ಮುಗಿಯುವ ಸಮಯ : ಮಧ್ಯಾಹ್ನ 12.30 ಗಂಟೆ

NEET PG 2023 ಪರೀಕ್ಷಾ ಕೇಂದ್ರದಲ್ಲಿ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು

ಅಭ್ಯರ್ಥಿಗಳು NEET PG 2023 ಪ್ರವೇಶ ಕಾರ್ಡ್‌ನ ಪ್ರತಿಯನ್ನು ಅದರೊಂದಿಗೆ ಇತ್ತೀಚಿನ ಪಾಸ್‌ಪೋರ್ಟ್ ಭಾವಚಿತ್ರವನ್ನು ಅಂಟಿಸಬೇಕು.

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (MCI) ಅಥವಾ ಸ್ಟೇಟ್ ಮೆಡಿಕಲ್ ಕೌನ್ಸಿಲ್ (SMC) ನೀಡಿದ ನೋಂದಣಿ ಪ್ರಮಾಣಪತ್ರದ ಮೂಲ ಮತ್ತು ಫೋಟೊಕಾಪಿ.

ಮಾನ್ಯವಾದ ಗುರುತಿನ ಪುರಾವೆಗಳಿಗಾಗಿ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಆಧಾರ್ ಕಾರ್ಡ್

ಇದನ್ನೂ ಓದಿ:ಕಾಪಿ ಪೇಸ್ಟ್ ಆಗುತ್ತಿರುವ ಶಿಕ್ಷಣ! ವಿದ್ಯಾರ್ಥಿಗಳನ್ನು ಕವಲುದಾರಿಗೆ ತಳ್ಳುತ್ತಿರುವ ಚ್ಯಾಟ್ ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ

ಪರೀಕ್ಷಾ ಕೇಂದ್ರಕ್ಕೆ ಇವುಗಳನ್ನು ತೆಗೆದುಕೊಂಡು ಹೋಗಬಾರದು

ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್, ಟ್ಯಾಬ್ಲೆಟ್, ಕ್ಯಾಲ್ಕುಲೇಟರ್, ವಾಚ್, ಬ್ಲೂಟೂತ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.

ಉಂಗುರಗಳು, ಕಿವಿಯೋಲೆಗಳು, ಚೈನ್‌ಗಳು, ಬಳೆಗಳು ಮುಂತಾದ ಯಾವುದೇ ಆಭರಣಗಳು ಮತ್ತು ವ್ಯಾಲೆಟ್‌ಗಳು, ಬೆಲ್ಟ್‌ಗಳು, ಕನ್ನಡಕಗಳು ಇತ್ಯಾದಿಗಳನ್ನು ಅನುಮತಿಸಲಾಗುವುದಿಲ್ಲ.

ಯಾವುದೇ ತಿನ್ನಬಹುದಾದ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ಯಬಾರದು.

NEET PG 2023 ಪರೀಕ್ಷಾ ದಿನದ  ಮಾರ್ಗಸೂಚಿಗಳು 

ಫೋಟೋ ಐಡಿಯಲ್ಲಿ ನಮೂದಿಸಲಾದ ಹೆಸರು ಮತ್ತು ವಿವರಗಳು NEET PG ಪ್ರವೇಶ ಕಾರ್ಡ್‌ನಲ್ಲಿರುವ ವಿವರಗಳಿಗೆ ಹೊಂದಿಕೆಯಾಗುತ್ತವೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. ಯಾವುದೇ ವ್ಯತ್ಯಾಸಗಳಿದ್ದಲ್ಲಿ, ವಿವರಗಳ ಬದಲಾವಣೆಯನ್ನು ತೋರಿಸಲು ಅವರು ಸಂಬಂಧಿಸಿದ ದಾಖಲೆಗಳನ್ನು ತರಬೇಕು.

NEET ಪ್ರವೇಶ ಪತ್ರವಿಲ್ಲದೆ ಪರೀಕ್ಷಾ ಹಾಲ್‌ಗೆ ಅಭ್ಯರ್ಥಿಗೆ ಪ್ರವೇಶವಿರುವಿದಿಲ್ಲ.

ಸಮಯಕ್ಕೆ ಸರಿಯಾಗಿ NEET PG ಪರೀಕ್ಷಾ ಕೇಂದ್ರವನ್ನು ತಲುಪಬೇಕು.

NEET PG 2023 ಪರೀಕ್ಷೆಗೆ ಹಾಜರಾಗುವ ವಿದೇಶಿ ಪ್ರಜೆಗಳು ತಮ್ಮ ಪಾಸ್‌ಪೋರ್ಟ್ ಮತ್ತು ತಮ್ಮ ದೇಶದಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಪುರಾವೆಯನ್ನು ಹೊಂದಿರಬೇಕು.

ನೀಟ್ ಪಿಜಿ ಪರೀಕ್ಷೆಯನ್ನು ತೆಗೆದುಕೊಳ್ಳುವಾಗ ಪ್ರತಿಯೊಬ್ಬ ಅಭ್ಯರ್ಥಿಯು ಕಂಪ್ಯೂಟರ್ ಪರದೆಯ ಮೇಲೆ ಪ್ರದರ್ಶಿಸಲಾದ ಸೂಚನೆಗಳನ್ನು ಅನುಸರಿಸಬೇಕು.

ಯಾವುದೇ ಅಭ್ಯರ್ಥಿಗೆ ಯಾವುದೇ ಪ್ರಶ್ನೆಗಳು/ಅನುಮಾನಗಳಿದ್ದರೆ, ಅವರು ಕೈ ಎತ್ತುವ ಮೂಲಕ ಇನ್ವಿಜಿಲೇಟರ್‌ಗೆ ಕರೆ ಮಾಡಬಹುದು.

ಇನ್ನಷ್ಟು ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್  ಮಾಡಿ

Published On - 8:45 am, Sat, 4 March 23