NEET-PG Counselling: ನೀಟ್ ಪಿಜಿ ಕೌನ್ಸೆಲಿಂಗ್ಗೆ ತಡೆ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
NEET-MDS Counselling: ಆಲ್ ಇಂಡಿಯಾ ಕೋಟಾದಡಿ ಒಬಿಸಿ ಹಾಗೂ ಇಡಬ್ಲುಸಿ ಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಸಿಂಧುತ್ವದ ಬಗ್ಗೆ ನಿರ್ಧಾರವಾಗುವವರೆಗೂ ನೀಟ್-ಪಿಜಿ ಕೌನ್ಸೆಲಿಂಗ್ ನಡೆಸದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನವದೆಹಲಿ: ಒಬಿಸಿ (OBC), ಇಡಬ್ಲುಸಿ (EWC Reservation) ಮೀಸಲಾತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಮುಗಿಯುವವರೆಗೂ ನೀಟ್ ಸ್ನಾತಕೋತ್ತರ ಕೋರ್ಸ್ ಕೌನ್ಸೆಲಿಂಗ್ (NEET -PG Course Counselling) ಪ್ರಕ್ರಿಯೆಯನ್ನು ತಡೆಹಿಡಿಯಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಇಂದು ಸೂಚನೆ ನೀಡಿದೆ.
ಕೇಂದ್ರ ಸರ್ಕಾರವು ಎಂಡಿಎಸ್ ಸೀಟ್ಗೆ ಒಬಿಸಿಗೆ ಶೇ. 27ರಷ್ಟು ಮೀಸಲಾತಿ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS) ಶೇ. 10ರಷ್ಟು ಮೀಸಲಾತಿ ನೀಡುವುದಾಗಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆ ಅರ್ಜಿಗಳ ವಿಚಾರಣೆ ಇನ್ನೂ ಮುಗಿದಿಲ್ಲ. ಹೀಗಾಗಿ, ಆಲ್ ಇಂಡಿಯಾ ಕೋಟಾದಡಿ ಒಬಿಸಿ ಹಾಗೂ ಇಡಬ್ಲುಸಿ ಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಸಿಂಧುತ್ವದ ಬಗ್ಗೆ ನಿರ್ಧಾರವಾಗುವವರೆಗೂ ನೀಟ್-ಪಿಜಿ ಕೌನ್ಸೆಲಿಂಗ್ ನಡೆಸದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
Supreme Court asks Centre to put the counselling for NEET-PG on hold until it decides the validity of the Centre’s decision to introduce OBC and EWS reservation in All India Quota (AIQ).
— ANI (@ANI) October 25, 2021
EWS ಕೋಟಾ ಸೀಟು ಪಡೆಯಲು ಕೇಂದ್ರ ಸರ್ಕಾರದಿಂದ ಆದಾಯ ಮಿತಿ ನಿಗದಿ ಮಾಡಲಾಗಿದ್ದು, ವಾರ್ಷಿಕ 8 ಲಕ್ಷ ರೂ. ಆದಾಯ ಮಿತಿ ನಿಗದಿಯಾಗಿದೆ. ಈ 8 ಲಕ್ಷ ಆದಾಯ ಮಿತಿ ನಿಗದಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಎಂಡಿಎಸ್ ಕೋರ್ಸ್ಗಳಿಗೆ ನಡೆಸಬೇಕಾಗಿದ್ದ ಕೌನ್ಸಿಲಿಂಗ್ಗೆ ತಾತ್ಕಾಲಿಕ ತಡೆ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.
ನೀಟ್ ಪಿಜಿ ಫಲಿತಾಂಶವನ್ನು ಈ ಮೊದಲು ಸೆಪ್ಟೆಂಬರ್ 28ರಂದು ಘೋಷಿಸಲಾಯಿತು. ಅಕ್ಟೋಬರ್ 9ರಂದು ನೀಟ್ ಪರೀಕ್ಷೆಯ ಸ್ಕೋರ್ ಕಾರ್ಡ್ ಬಿಡುಗಡೆ ಮಾಡಲಾಗಿತ್ತು. ನೀಟ್ ಪರೀಕ್ಷೆಯನ್ನು ಈ ಬಾರಿ ಇಂಗ್ಲಿಷ್ ಸೇರಿದಂತೆ 10 ಇತರ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗಿದೆ. ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ಪರೀಕ್ಷೆ ನಡೆಸಲಾಗಿದೆ.
NEET Reservation: ನೀಟ್ ಅಖಿಲ ಭಾರತ ಮೀಸಲಾತಿ ಬಗ್ಗೆ ಮದ್ರಾಸ್ ಹೈಕೋರ್ಟ್ ವ್ಯಾಖ್ಯಾನಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ
Published On - 2:04 pm, Mon, 25 October 21