ತರಗತಿಯಲ್ಲಿ ಶಿಕ್ಷಕರು ಅತ್ತಿತ್ತ ಚಲಿಸುತ್ತಿರಬೇಕು, ಕುಳಿತುಕೊಳ್ಳಬಾರದು: ಎನ್‌ಸಿಎಫ್​​ ಕರಡು

ಇದೇ ರೀತಿಯಲ್ಲಿ, ಮಕ್ಕಳು ಪರಸ್ಪರ ಬೆರೆಯವುದಕ್ಕಾಗಿ ವೃತ್ತಾಕಾರದ ಗುಂಪುಗಳಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆಯನ್ನು ಕರಡು ಸೂಚಿಸುತ್ತದೆ.2019 ರಲ್ಲಿ, ಮಹಿಳಾ ಆಯೋಗವು ಕೇರಳದ ತಿರುವನಂತಪುರಂನಲ್ಲಿರುವ ಪ್ರಮುಖ ಶಾಲೆಯೊಂದರಲ್ಲಿ ಶಿಕ್ಷಕರಿಗೆ ಎಂಟು ಗಂಟೆಗಳ ಕಾಲ ನೇರವಾಗಿ ಕುಳಿತುಕೊಳ್ಳಲು ಅವಕಾಶ ನೀಡಲಿಲ್ಲ ಎಂದು ಛೀಮಾರಿ ಹಾಕಿದೆ.

ತರಗತಿಯಲ್ಲಿ ಶಿಕ್ಷಕರು ಅತ್ತಿತ್ತ ಚಲಿಸುತ್ತಿರಬೇಕು, ಕುಳಿತುಕೊಳ್ಳಬಾರದು: ಎನ್‌ಸಿಎಫ್​​ ಕರಡು
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Apr 12, 2023 | 6:00 PM

ದೆಹಲಿ: ಶಾಲಾ ಶಿಕ್ಷಣಕ್ಕಾಗಿ (School Education) ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF)ನ ಹೊಸ ಕರಡು ಪ್ರಕಾರ ತರಗತಿಗಳಲ್ಲಿ ಶಿಕ್ಷಕರಿಗೆ ಕುರ್ಚಿಗಳನ್ನು ನೀಡುವ ಅಥವಾ ನೀಡದಿರುವ ತೀರ್ಮಾನ ಶಾಲೆಗೆ ಬಿಟ್ಟಿದ್ದು ಎಂದು ಸೂಚಿಸಿದೆ. ಅಂದರೆ ಶಿಕ್ಷಕರು ನಿಂತಿರಬೇಕು ಅಥವಾ ಅತ್ತಿತ್ತ ಚಲಿಸುತ್ತಿರಬೇಕು ಎಂದು ಕರಡು ಸಲಹೆ ನೀಡಿದೆ. ಕಳೆದ ವಾರ ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿದ ಕರಡು ಮಾರ್ಗಸೂಚಿಗಳು ತರಗತಿ ಕೊಠಡಿಗಳಲ್ಲಿ ಪೀಠೋಪಕರಣಗಳ ವ್ಯವಸ್ಥೆಯು ಶಾಲೆಯ ಬೋಧನೆ-ಕಲಿಕೆ ಪ್ರಕ್ರಿಯೆಗಳ ಮೇಲಿನ ನಂಬಿಕೆಗಳನ್ನು ಸಂವಹಿಸುತ್ತದೆ ಎಂದು ಹೇಳುತ್ತದೆ.’ಚಿಹ್ನೆಗಳು’ ಎಂದು ಕರೆಯಲಾಗುವ ಕರಡು ಎನ್‌ಸಿಎಫ್​​ನ ಒಂದು ವಿಭಾಗದ ಪ್ರಕಾರ, ಶಾಲೆಗಳು ಸಂಕೇತಗಳ ಮೂಲಕ, ಅಂದರೆ ಯಾವುದೇ ರೀತಿಯ ವಿಷುವಲ್ ಸಂಕೇತ, ಗೋಡೆಯ ಮೇಲಿನ ಬರಹಗಳು, ವರ್ಣಚಿತ್ರಗಳು, ವಿಗ್ರಹಗಳು, ಭೌತಿಕ ವಸ್ತುಗಳ ಜೋಡಣೆ ತರಗತಿಗಳಲ್ಲಿ ಸಂವಹನ ನಡೆಸುತ್ತವೆ. ಭೌತಿಕ ವಸ್ತುಗಳ ಆಯ್ಕೆಗಳು ಸಹ ಬಹಳಷ್ಟು ಸಾಂಕೇತಿಕ ಮೌಲ್ಯವನ್ನು ಹೊಂದಿವೆ ಎಂದು ಅದು ಉಲ್ಲೇಖಿಸುತ್ತದೆ. ಉದಾಹರಣೆಗೆ ಪ್ರಾಂಶುಪಾಲರ ಕುರ್ಚಿ  ಸಿಬ್ಬಂದಿಗೆ ಕುರ್ಚಿಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ ಎಂದು ಅದು ಹೇಳಿದೆ.

ಶಾಲೆಗಳು ಪ್ರಜ್ಞಾಪೂರ್ವಕವಾಗಿ ತಮ್ಮ ನೀತಿಗಳೊಂದಿಗೆ ಸಂಕೇತಗಳ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸುವುದು ಎಂಬುದನ್ನು ನಿರ್ಧರಿಸಬೇಕು ಎಂದು ಇವು ಒತ್ತಿಹೇಳುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಅಲ್ಲಿನ ವಾತಾವರಣದಲ್ಲಿ ಕಲಿಯಲು ಸಾಧ್ಯವಾಗುತ್ತದೆ.

ಇದೇ ರೀತಿಯಲ್ಲಿ, ಮಕ್ಕಳು ಪರಸ್ಪರ ಬೆರೆಯವುದಕ್ಕಾಗಿ ವೃತ್ತಾಕಾರದ ಗುಂಪುಗಳಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆಯನ್ನು ಕರಡು ಸೂಚಿಸುತ್ತದೆ. 2019 ರಲ್ಲಿ, ಮಹಿಳಾ ಆಯೋಗವು ಕೇರಳದ ತಿರುವನಂತಪುರಂನಲ್ಲಿರುವ ಪ್ರಮುಖ ಶಾಲೆಯೊಂದರಲ್ಲಿ ಶಿಕ್ಷಕರಿಗೆ ಎಂಟು ಗಂಟೆಗಳ ಕಾಲ ನೇರವಾಗಿ ಕುಳಿತುಕೊಳ್ಳಲು ಅವಕಾಶ ನೀಡಲಿಲ್ಲ ಎಂದು ಛೀಮಾರಿ ಹಾಕಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಎಂದರೇನು?

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಭಾಗವಾಗಿ  ಎನ್‌ಸಿಎಫ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯಾಪಕವಾದ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ. ಈ ಉಪಕ್ರಮವನ್ನು ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ನೇತೃತ್ವ ವಹಿಸುತ್ತಿದೆ, ಇದು K-12 (ಕಿಂಡರ್‌ಗಾರ್ಟನ್‌ನಿಂದ 12 ನೇ ತರಗತಿ) ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುತ್ತದೆ.

ಏಪ್ರಿಲ್ 6 ರಂದು, ಶಿಕ್ಷಣ ಸಚಿವಾಲಯವು ಪ್ರೌಢ ಶಿಕ್ಷಣಕ್ಕಾಗಿ ಕರಡು ಎನ್‌ಸಿಎಫ್ ಪ್ರಕಟಿಸಿದ್ದು ವಿವಿಧ ತಜ್ಞರಿಂದ ಪ್ರತಿಕ್ರಿಯೆಯನ್ನು ಕೋರಿತು. ವಿವಿಧ ರೀತಿಯ ವಿದ್ಯಾರ್ಥಿಗಳ ಅಗತ್ಯತೆಗಳು, ಸೂಚನಾ ತಂತ್ರಗಳು ಮತ್ತು K-12 ನಾದ್ಯಂತ ಕೋರ್ಸ್ ವಿಷಯದ ಕಾರಣದಿಂದಾಗಿ ಪ್ರತಿಕ್ರಿಯೆ ಅತ್ಯಗತ್ಯ ಎಂದು ಸಚಿವಾಲಯ ಹೇಳಿದೆ.

ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕಾಗಿ ಕರಡು ಎನ್‌ಸಿಎಫ್ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ, ಆದರೆ ಶಿಕ್ಷಕರ ಶಿಕ್ಷಣಕ್ಕಾಗಿ ಎನ್‌ಸಿಎಫ್ ಮತ್ತು ವಯಸ್ಕರ ಶಿಕ್ಷಣಕ್ಕಾಗಿ ಎನ್‌ಸಿಎಫ್ ಕೆಲಸವನ್ನು ಪ್ರಾರಂಭಿಸಲಾಗಿದೆ.

ಎನ್‌ಸಿಎಫ್ ಒಮ್ಮೆ CBSE ಮತ್ತು ಇತರ ರಾಜ್ಯ ಮಂಡಳಿಗಳಿಂದ ಅಳವಡಿಸಿಕೊಂಡರೆ, ಪಠ್ಯಪುಸ್ತಕಗಳನ್ನು ಮಾತ್ರವಲ್ಲದೆ ವಿಷಯಗಳ ಆಯ್ಕೆ, ಪಾಠಗಳ ಸಂಘಟನೆ ಮತ್ತು ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡುವ ವಿಧಾನಗಳನ್ನು ಮರುಸಂಘಟಿಸುತ್ತದೆ.ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅಡಿಯಲ್ಲಿ 2005 ರಲ್ಲಿ ಎನ್‌ಸಿಎಫ್ ಅನ್ನು ಕೊನೆಯದಾಗಿ ನವೀಕರಿಸಲಾಯಿತು. ಪ್ರಸ್ತುತ NCERT ಪಠ್ಯಪುಸ್ತಕಗಳೆಲ್ಲವೂ ಕೆಲವು ವಿನಾಯಿತಿಗಳೊಂದಿಗೆ, NCF 2005 ರಿಂದ ಪಡೆಯಲಾಗಿದೆ.NCF ಅನ್ನು 1975, 1988 ಮತ್ತು 2000 ರಲ್ಲಿ 2005 ರ ಮೊದಲು ಮೂರು ಬಾರಿ ನವೀಕರಿಸಲಾಯಿತು.

ಮತ್ತಷ್ಟುಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು