Breaking News: ಮದ್ರಾಸ್ ಐಐಟಿಗೆ ಮೊದಲ ಸ್ಥಾನ, 2ನೇ ಸ್ಥಾನದಲ್ಲಿ ಬೆಂಗಳೂರಿನ ಐಐಎಸ್​ಸಿ

| Updated By: ಸುಷ್ಮಾ ಚಕ್ರೆ

Updated on: Jul 16, 2022 | 10:43 AM

NIRF Rankings 2022: ಬೆಂಗಳೂರಿನ ಐಐಎಸ್​ಸಿ 2ನೇ ಸ್ಥಾನ ಪಡೆದಿದೆ. ಕಳೆದ ಮೂರು ವರ್ಷಗಳಿಂದಲೂ ಐಐಎಸ್​ಸಿ 2ನೇ ಸ್ಥಾನವನ್ನು ಕಾಪಾಡಿಕೊಂಡಿದೆ.

Breaking News: ಮದ್ರಾಸ್ ಐಐಟಿಗೆ ಮೊದಲ ಸ್ಥಾನ, 2ನೇ ಸ್ಥಾನದಲ್ಲಿ ಬೆಂಗಳೂರಿನ ಐಐಎಸ್​ಸಿ
ಐಐಟಿ ಮದ್ರಾಸ್ ಮತ್ತು ಐಐಎಸ್​ಸಿ ಬೆಂಗಳೂರು (ಸಂಗ್ರಹ ಚಿತ್ರ)
Follow us on

ದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಸೂಚ್ಯಂಕದಲ್ಲಿ (The National Institutional Ranking Framework – NIRF Rankings 2022) ಚೆನ್ನೈನ ‘ಮದ್ರಾಸ್ ಐಐಟಿ’ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ಮೂರು ವರ್ಷಗಳಿಂದಲೂ ‘ಮದ್ರಾಸ್ ಐಐಟಿ’ ಎಂಜಿನಿಯರಿಂಗ್ ಕಾಲೇಜುಗಳ ವಿಭಾಗದಲ್ಲಿ ಹಾಗೂ ಸಮಗ್ರ ರ‍್ಯಾಂಕಿಂಗ್ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಸರ್ವಾಂಗೀಣ ಅತ್ಯುತ್ತಮ ಕಾಲೇಜುಗಳ (Overall Best Category) ಪಟ್ಟಿಯಲ್ಲಿ ಬೆಂಗಳೂರಿನ ‘ಭಾರತೀಯ ವಿಜ್ಞಾನ ಸಂಸ್ಥೆ’ (Indian Institute of Science – IISC) 2ನೇ ಸ್ಥಾನ ಪಡೆದಿದೆ. ಕಳೆದ ಮೂರು ವರ್ಷಗಳಿಂದಲೂ ಐಐಎಸ್​ಸಿ 2ನೇ ಸ್ಥಾನವನ್ನು ಕಾಪಾಡಿಕೊಂಡಿದೆ. ಕಳೆದ ಕೆಲ ದಿನಗಳಿಂದ ಅತ್ಯುತ್ತಮ ಸಂಶೋಧನಾ ಸಂಸ್ಥೆ ಎನ್ನುವ ಶ್ರೇಯಕ್ಕೂ ಐಐಎಸ್​ಸಿ ಪಾತ್ರವಾಗಿದೆ.

ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಸೌಲಭ್ಯ, ಅವಕಾಶ ನೀಡುವ ಶಿಕ್ಷಣ ಸಂಸ್ಥೆಗಳನ್ನು ನ್ಯಾಷನಲ್ ಇನ್​ಸ್ಟಿಟ್ಯೂಟ್ ರ‍್ಯಾಂಕಿಂಗ್ ಫ್ರೇಮ್​ವರ್ಕ್​ (National Institute Ranking Framework – NIRF Ranking) ಪ್ರತಿವರ್ಷ ಘೋಷಿಸುತ್ತದೆ. ಈ ಪಟ್ಟಿಯಲ್ಲಿ ಸರ್ವಾಂಗೀಣವಾಗಿ ಅತ್ಯುತ್ತಮವಾಗಿರುವ ಶಿಕ್ಷಣ ಸಂಸ್ಥೆಗಳ ಪಟ್ಟಿಯ ಜೊತೆಗೆ ಪ್ರತ್ಯೇಕವಾಗಿ ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು, ಮ್ಯಾನೇಜ್​ಮೆಂಟ್, ಫಾರ್ಮಾ, ಆರ್ಕಿಟೆಕ್ಚರ್ ಮತ್ತಿತರ ವಿಭಾಗಗಳ ಕಾಲೇಜುಗಳ ಪಟ್ಟಿಯನ್ನು ನೀಡುತ್ತದೆ.

ಕಳೆದ ಮೂರು ವರ್ಷಗಳಿಂದ ಸರ್ವಾಂಗೀಣ ಅತ್ಯುತ್ತಮ ಕಾಲೇಜು ಎಂಬ ಶ್ರೇಯಕ್ಕೆ ಐಐಟಿ ಮದ್ರಾಸ್ ಪಾತ್ರವಾಗಿದೆ. ಈ ವರ್ಷವೂ ಈ ಸ್ಥಾನವು ಐಐಟಿ ಮದ್ರಾಸ್​ನ ಪಾಲಾಗಿದೆ. ಬೆಂಗಳೂರಿನ ಐಐಎಸ್​ಸಿ 2ನೇ ಸ್ಥಾನದಲ್ಲಿದೆ. ಕಳೆದ ಮೂರು ವರ್ಷಗಳಿಂದ ಐಐಎಸ್​ಸಿ 2ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಈ ಬಾರಿ ದೇಶದ ಅತ್ಯುತ್ತಮ ಸಂಶೋಧನಾ ಸಂಸ್ಥೆ ಎಂಬ ಶ್ರೇಯಕ್ಕೂ ಐಐಎಸ್​ಸಿ ಪಾತ್ರವಾಗಿದೆ.

ರ‍್ಯಾಂಕಿಂಗ್​ಗಾಗಿ ಈ ಬಾರಿ ಒಟ್ಟು 7,254 ಉನ್ನತ ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಕಳೆದ ವರ್ಷ ಅರ್ಜಿ ಸಲ್ಲಿಸಿದ್ದ ಶಿಕ್ಷಣ ಸಂಸ್ಥೆಗಳ ಸಂಖ್ಯೆ 6,272 ಇತ್ತು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಮೌಲ್ಯಮಾಪನ ಮಾಡಲು ಎನ್​ಐಆರ್​ಎಫ್ ನಿರ್ದಿಷ್ಟ ಕ್ರಮವೊಂದನ್ನು ರೂಪಿಸಿದೆ. ಒಟ್ಟು 100 ಅಂಕಗಳ ಮೌಲ್ಯಮಾಪನದಲ್ಲಿ ತಕಾ 30 ಅಂಕಗಳನ್ನು ಬೋಧನೆ, ಶಿಕ್ಷಣ, ಸಂಪನ್ಮೂಲ, ಸಂಶೋಧನೆ ಮತ್ತು ವೃತ್ತಿಪರತೆಗೆ ಹಂಚಿಕೆ ಮಾಡಲಾಗಿದೆ. ಉಳಿದ 10 ಅಂಕವನ್ನು ಎಲ್ಲರನ್ನೂ ಒಳಗೊಳ್ಳುವಿಕೆ, ಔಟ್​ರೀಚ್ ಮತ್ತು ಗ್ರಹಿಕೆಗೆ ನೀಡಲಾಗುತ್ತದೆ.

Overall category lists: ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು

1) ಐಐಟಿ ಮದ್ರಾಸ್
2) ಐಐಎಸ್​ಸಿ ಬೆಂಗಳೂರು
3) ಐಐಟಿ ಬಾಂಬೆ
4) ಐಐಟಿ ದೆಹಲಿ
5) ಐಐಐಟಿ ಕಾನ್​ಪುರ
6) ಐಐಟಿ ಖರಗ್​ಪುರ
7) ಐಐಟಿ ರೂರ್​ಕಿ
8) ಐಐಟಿ ಗುವಾಹತಿ
9) ಎಐಐಎಂಎಸ್ ದೆಹಲಿ
10) ಜೆನ್​ಯು

Engineering Colleges: ಎಂಜಿನಿಯರಿಂಗ್ ಕಾಲೇಜುಗಳು

1) ಐಐಟಿ ಮದ್ರಾಸ್
2) ಐಐಟಿ ದೆಹಲಿ
3) ಐಐಟಿ ಬಾಂಬೆ
4) ಐಐಟಿ ಕಾನ್​ಪುರ
5) ಐಐಟಿ ಖರಗ್​ಪುರ್

Best University: ಅತ್ಯುತ್ತಮ ವಿಶ್ವವಿದ್ಯಾಲಯಗಳು

1) ಐಐಎಸ್​ಸಿ ಬೆಂಗಳೂರು
2) ಜೆಎನ್​ಯು
3) ಜಾಮಿಯಾ ಮಿಲಿಯಾ ಇಸ್ಲಾಮಿಯಾ
4) ಜಾಧವ್​ಪುರ್ ವಿಶ್ವವಿದ್ಯಾಲಯ
5) ಅಮೃತ ವಿಶ್ವ ವಿದ್ಯಾಪೀಠಂ

Best Architecture College: ಆರ್ಕಿಟೆಕ್ಚರ್ ಕಾಲೇಜು

1) ಐಐಟಿ ರೂರ್​ಕಿ
2) ಎನ್​ಐಟಿ ಕ್ಯಾಲಿಕಟ್
3) ಐಐಟಿ ಖರಗ್​ಪುರ್

Best in Research: ಅತ್ಯುತ್ತಮ ಸಂಶೋಧನಾ ಸಂಸ್ಥೆಗಳು

1) ಐಐಎಸ್​ಸಿ ಬೆಂಗಳೂರು
2) ಐಐಟಿ ಮದ್ರಾಸ್
3) ಐಐಟಿ ದೆಹಲಿ

Dental College: ವೈದ್ಯಕೀಯ ಕಾಲೇಜು

1) ಶ್ವೇತಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್​ನಿಕಲ್ ಸೈನ್ಸಸ್ (ಚೆನ್ನೈ)
2) ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ (ಉಡುಪಿ)
3) ಡಾ ಡಿ.ವೈ.ಪಾಟೀಲ ವಿದ್ಯಾಪೀಠ (ಪುಣೆ)

Best Law Colleges: ಕಾನೂನು ಕಾಲೇಜು

1) ಎನ್​ಎಲ್​ಎಸ್​ಯುಐ ಬೆಂಗಳೂರು
2) ಎನ್​ಎಲ್​ಯು ದೆಹಲಿ
3) ಸಿಂಬಿಯಾಸಿಸ್ ಲಾ ಕಾಲೇಜು, ಪುಣೆ

Best Medical College: ಮೆಡಿಕಲ್ ಕಾಲೇಜು
1) ಏಮ್ಸ್​, ದೆಹಲಿ (AIIMS Delhi)
2) ಪಿಜಿಎಂಐಇಆರ್, ಚಂಡಿಗಡ (PGMIER, Chandigarh)
3) ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ವೆಲ್ಲೂರು

Published On - 11:52 am, Fri, 15 July 22