AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NIRF Rankings 2023: ದೇಶದ ಅತ್ಯುತ್ತಮ ಎಂಜಿನಿಯರಿಂಗ್ ವಿಶ್ವವಿದ್ಯಾನಿಲಯ ವಿಭಾಗದಲ್ಲಿ IISc ಬೆಂಗಳೂರಿಗೆ ಅಗ್ರಸ್ಥಾನ

ಉತ್ತಮ ವಿಶ್ವವಿದ್ಯಾನಿಲಯ ವಿಭಾಗದಲ್ಲಿ, IISc ಬೆಂಗಳೂರು ಯುನಿವರ್ಸಿಟಿ ಅಗ್ರ ಸ್ಥಾನದಲ್ಲಿದೆ.ಜೆಎನ್​​ಯು (JNU) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಂತರದ ಸ್ಥಾನದಲ್ಲಿದೆ. ಮೂರು ಖಾಸಗಿ ವಿಶ್ವವಿದ್ಯಾಲಯಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

NIRF Rankings 2023: ದೇಶದ ಅತ್ಯುತ್ತಮ ಎಂಜಿನಿಯರಿಂಗ್ ವಿಶ್ವವಿದ್ಯಾನಿಲಯ ವಿಭಾಗದಲ್ಲಿ IISc ಬೆಂಗಳೂರಿಗೆ ಅಗ್ರಸ್ಥಾನ
ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು
TV9 Web
| Edited By: |

Updated on:Jun 06, 2023 | 9:54 AM

Share

ಭಾರತದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳ ಶ್ರೇಯಾಂಕ ಪಟ್ಟಿ ಬಿಡುಗಡೆ ಆಗಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಫ್ರೇಮ್​​ವರ್ಕ್ (NIRF) ಶ್ರೇಯಾಂಕ 2023ರ ಪಟ್ಟಿ ಬಿಡುಗಡೆ ಮಾಡಿದ್ದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಅಗ್ರಸ್ಥಾನದಲ್ಲಿದೆ. ಐಐಟಿ ಮದ್ರಾಸ್ ದೇಶದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಟಾಪ್ 1 ಆಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು (IISc Bangalore)  ಎರಡನೇ ಸ್ಥಾನದಲ್ಲಿದೆ. ಅತ್ಯುತ್ತಮ ವಿಶ್ವವಿದ್ಯಾನಿಲಯ ವಿಭಾಗದಲ್ಲಿ, IISc ಬೆಂಗಳೂರು ಯುನಿವರ್ಸಿಟಿ ಅಗ್ರ ಸ್ಥಾನದಲ್ಲಿದೆ.ಜೆಎನ್​​ಯು (JNU) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಂತರದ ಸ್ಥಾನದಲ್ಲಿದೆ. ಮೂರು ಖಾಸಗಿ ವಿಶ್ವವಿದ್ಯಾಲಯಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಸತತ ಎಂಟನೇ ವರ್ಷಕ್ಕೆ ಅತ್ಯುತ್ತಮ ಎಂಜಿನಿಯರಿಂಗ್ ಸಂಸ್ಥೆಯಾಗಿ ಐಐಟಿ ಮದ್ರಾಸ್ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಟಾಪ್ ಮ್ಯಾನೇಜ್ ಮೆಂಟ್ ಕಾಲೇಜು ಐಐಎಂ-ಅಹಮದಾಬಾದ್ ಆಗಿದ್ದು ಮೂರು ಎಂಜಿನಿಯರಿಂಗ್ ಕಾಲೇಜುಗಳು ಟಾಪ್ 10 ಬಿ-ಸ್ಕೂಲ್ ವರ್ಗದ ಅಡಿಯಲ್ಲಿವೆ.

ಎನ್‌ಐಆರ್‌ಎಫ್ 2023 ರ ಶ್ರೇಯಾಂಕಕ್ಕೆ ಪ್ರತಿಕ್ರಿಯಿಸಿದ ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ ಕಾಮಕೋಟಿ, ಕೇಂದ್ರಶಿಕ್ಷಣ ಸಚಿವಾಲಯ ಪ್ರಕಟಿಸಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ 2023ರಲ್ಲಿ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಐಐಟಿ ಮದ್ರಾಸ್ ಮತ್ತೊಮ್ಮೆ ಟಾಪರ್ ಆಗಿರುವುದು ಸಂತೋಷದ ಸಂಗತಿ. ಇದು ಸಂಶೋಧನೆ ಮತ್ತು ಶಿಕ್ಷಣದಲ್ಲಿ ಜಾಗತಿಕ ನಾಯಕನಾಗಿ ಗುರುತಿಸಿಕೊಳ್ಳುವ ನಮ್ಮ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತದೆ. ಐಐಟಿ ಮದ್ರಾಸ್‌ಗಾಗಿ ವಿವರಿಸಿರುವ ಕಾರ್ಯತಂತ್ರದ ಯೋಜನೆಯಲ್ಲಿ ನಾವು ಟ್ರ್ಯಾಕ್‌ನಲ್ಲಿದ್ದೇವೆ ಎಂಬುದರ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

NIRF 2023 ರ‍್ಯಾಂಕಿಂಗ್: ಟಾಪ್ 5 ಕಾಲೇಜುಗಳು

ರ‍್ಯಾಂಕ್ 1: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್

ರ‍್ಯಾಂಕ್ 2: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು

ರ‍್ಯಾಂಕ್ 3: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿ

ರ‍್ಯಾಂಕ್ 4: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ

ರ‍್ಯಾಂಕ್ 5: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ

NIRF ರ‍್ಯಾಂಕಿಂಗ್: ಒಟ್ಟಾರೆ ಶ್ರೇಯಾಂಕಗಳಲ್ಲಿ ಟಾಪ್ 10 ಕಾಲೇಜುಗಳು

ಐಐಟಿ ಮದ್ರಾಸ್

IISc ಬೆಂಗಳೂರು

ಐಐಟಿ ಬಾಂಬೆ

ಐಐಟಿ ದೆಹಲಿ

ಐಐಟಿ ಕಾನ್ಪುರ

ಐಐಟಿ ಖರಗ್‌ಪುರ

ಐಐಟಿ ರೂರ್ಕಿ

ಐಐಟಿ ಗುವಾಹಟಿ

ಏಮ್ಸ್ ದೆಹಲಿ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ

ಇದನ್ನೂ ಓದಿ:ಸಮಾಜದಲ್ಲಿ ನೈತಿಕತೆ ಮೂಡಿಸುವ ಶಿಕ್ಷಣ ಅವಶ್ಯಕತೆ ಇದೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಕಳೆದ ವರ್ಷ, NIRF 2022 ಶ್ರೇಯಾಂಕದಲ್ಲಿ IIT ಮದ್ರಾಸ್ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜು ಆಗಿತ್ತು

2022ರ ಶ್ರೇಯಾಂಕ ಐಐಟಿ ಮದ್ರಾಸ್

ಐಐಟಿ ದೆಹಲಿ

ಐಐಟಿ ಬಾಂಬೆ

ಐಐಟಿ ಕಾನ್ಪುರ

ಐಐಟಿ ಖರಗ್‌ಪುರ

ಐಐಟಿ ರೂರ್ಕಿ

ಐಐಟಿ ಗುವಾಹಟಿ

ಎನ್ಐಟಿ ತಿರುಚ್ಚಿ

ಐಐಟಿ ಹೈದರಾಬಾದ್

ಎನ್ಐಟಿ ಕರ್ನಾಟಕ

ಜಾದವ್‌ಪುರ ವಿಶ್ವವಿದ್ಯಾಲಯ

ವಿಐಟಿ ವೆಲ್ಲೂರು

ಐಐಟಿ ಬಿಎಚ್​​ಯು

ಐಐಟಿ (ಇಂಡಿಯನ್ ಸ್ಕೂಲ್ ಆಫ್ ಮೈನ್ಸ್)

ಎನ್ಐಟಿ ರೂರ್ಕೆಲಾ

ಐಐಟಿ ಇಂದೋರ್

ಅಣ್ಣಾ ಯುನಿವರ್ಸಿಟಿ

ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ

ಅಮೃತ ವಿಶ್ವ ವಿದ್ಯಾಪೀಠ

ಐಐಟಿ ಮಂಡಿ

ಎನ್ಐಟಿ ವಾರಂಗಲ್

ಐಐಟಿ ರೋಪರ್

ಐಐಟಿ ಗಾಂಧಿನಗರ

ಎಸ್ಆರ್ ಎಂಐಎಸ್​​ಟಿ

ಅಮಿಟಿ ಯುನಿವರ್ಸಿಟಿ

ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Mon, 5 June 23

VIDEO: ಮೊದಲ ಓವರ್​ನಲ್ಲೇ ಗೆರೆ ದಾಟಿ ಔಟಾದ ಬಾಬರ್ ಆಝಂ
VIDEO: ಮೊದಲ ಓವರ್​ನಲ್ಲೇ ಗೆರೆ ದಾಟಿ ಔಟಾದ ಬಾಬರ್ ಆಝಂ
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಕಲ್ಲಿನಿಂದ ಜಜ್ಜಿ ಹಲ್ಲೆ
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಕಲ್ಲಿನಿಂದ ಜಜ್ಜಿ ಹಲ್ಲೆ
ತೆಂಗಿನ ಗರಿಯಲ್ಲಿ ಅರಳಿದ ಡಾ. ಶಿವಕುಮಾರ ಸ್ವಾಮೀಜಿ ಕಲಾಕೃತಿ
ತೆಂಗಿನ ಗರಿಯಲ್ಲಿ ಅರಳಿದ ಡಾ. ಶಿವಕುಮಾರ ಸ್ವಾಮೀಜಿ ಕಲಾಕೃತಿ
ಕಡಿಮೆ ಆಗಿಲ್ಲ ಶ್ರೀನಾಥ್ ಎನರ್ಜಿ; ‘ನೀನೆ ಸಾಕಿದ ಗಿಣಿ’ ಹಾಡಿಗೆ ಡ್ಯಾನ್ಸ್
ಕಡಿಮೆ ಆಗಿಲ್ಲ ಶ್ರೀನಾಥ್ ಎನರ್ಜಿ; ‘ನೀನೆ ಸಾಕಿದ ಗಿಣಿ’ ಹಾಡಿಗೆ ಡ್ಯಾನ್ಸ್
ಉದ್ಘಾಟನೆಗೂ ಮುನ್ನವೇ ಕುಸಿದು ಬಿತ್ತು 21 ಕೋಟಿ ರೂ. ವೆಚ್ಚದ ನೀರಿನ ಟ್ಯಾಂಕ್
ಉದ್ಘಾಟನೆಗೂ ಮುನ್ನವೇ ಕುಸಿದು ಬಿತ್ತು 21 ಕೋಟಿ ರೂ. ವೆಚ್ಚದ ನೀರಿನ ಟ್ಯಾಂಕ್
ಕೆಲಸ ಮಾಡುವ ಕಚೇರಿಯಲ್ಲಿ ಇರಬೇಕಾದ ದೇವರ ಫೋಟೋಗಳು
ಕೆಲಸ ಮಾಡುವ ಕಚೇರಿಯಲ್ಲಿ ಇರಬೇಕಾದ ದೇವರ ಫೋಟೋಗಳು
ಇಂದು ಈ ರಾಶಿಯವರ ವೈವಾಹಿಕ ಜೀವನದಲ್ಲಿ ಅಸ್ಥಿರತೆ!
ಇಂದು ಈ ರಾಶಿಯವರ ವೈವಾಹಿಕ ಜೀವನದಲ್ಲಿ ಅಸ್ಥಿರತೆ!
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು