AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pariksha Pe Charcha 2023: ಪರೀಕ್ಷಾ ಪೇ ಚರ್ಚಾ 2023 ನೋಂದಣಿಗೆ ಡಿಸೆಂಬರ್​​​ 30 ಕೊನೇ ದಿನಾಂಕ: ನೋಂದಣಿ, ಥೀಮ್​​​ ಬಗ್ಗೆ ತಿಳಿದುಕೊಳ್ಳಿ

ಅಧಿಕೃತ ವೆಬ್‌ಸೈಟ್ innovateindia.mygov.in ನಲ್ಲಿ PPC 2023 ನೋಂದಣಿ ಮಾಡಬೇಕು. 9, 10, 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು PPC 2023 ರಲ್ಲಿ ಭಾಗವಹಿಸಬಹುದಾಗಿದೆ

Pariksha Pe Charcha 2023: ಪರೀಕ್ಷಾ ಪೇ ಚರ್ಚಾ 2023 ನೋಂದಣಿಗೆ ಡಿಸೆಂಬರ್​​​ 30 ಕೊನೇ ದಿನಾಂಕ: ನೋಂದಣಿ, ಥೀಮ್​​​ ಬಗ್ಗೆ ತಿಳಿದುಕೊಳ್ಳಿ
ಪರೀಕ್ಷಾ ಪೇ ಚರ್ಚಾ
TV9 Web
| Edited By: |

Updated on:Dec 30, 2022 | 3:08 PM

Share

ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Narendra Modi) ಪರೀಕ್ಷಾ ಪೇ ಚರ್ಚಾ (PPC) 2023 ರ ಆರನೇ ಆವೃತ್ತಿಯ ನೋಂದಣಿ ನಾಳೆ, ಡಿಸೆಂಬರ್ 30 ರಂದು ಮುಕ್ತಾಯಗೊಳ್ಳಲಿದೆ. ಪರೀಕ್ಷಾ ಪೇ ಚರ್ಚಾ(Pariksha Pe Charcha) ಒಂದು ಸಂವಾದಾತ್ಮಕ ಕಾರ್ಯಕ್ರಮವಾಗಿದ್ದು ಇದರಲ್ಲಿ ಮೋದಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸುತ್ತಾರೆ. ಈ ಸಂವಾದದಲ್ಲಿ ಅವರು ಪರೀಕ್ಷಾ ಭಯವನ್ನು ಹೋಗಲಾಡಿಸಿ, ಪರೀಕ್ಷೆಯ ಒತ್ತಡವನ್ನು ತೊಡೆದುಹಾಕಲು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಅಧಿಕೃತ ವೆಬ್‌ಸೈಟ್ innovateindia.mygov.in ನಲ್ಲಿ PPC 2023 ನೋಂದಣಿ ಮಾಡಬೇಕು. 9, 10, 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು PPC 2023 ರಲ್ಲಿ ಭಾಗವಹಿಸಬಹುದಾಗಿದೆ. ಆನ್‌ಲೈನ್ ಸೃಜನಶೀಲ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳು PPC 2023 ಗೆ ಆಯ್ಕೆಯಾಗುತ್ತಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಧಾನಮಂತ್ರಿಯವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಅವರು ಕಾರ್ಯಕ್ರಮದ ನಂತರ ಪ್ರಶಂಸಾ ಪತ್ರಗಳು ಮತ್ತು ಪರೀಕ್ಷಾ ಪೆ ಚರ್ಚಾ ಕಿಟ್‌ಗಳನ್ನು ಸ್ವೀಕರಿಸುತ್ತಾರೆ. ಸುಮಾರು 2,050 ಮಂದಿಗೆ ಎನ್‌ಸಿಇಆರ್‌ಟಿಯ ನಿರ್ದೇಶಕರು ಸಹಿ ಮಾಡಿದ ಪ್ರಮಾಣಪತ್ರ ಮತ್ತು ‘ಎಕ್ಸಾಮ್ ವಾರಿಯರ್’ ಪುಸ್ತಕದ ಪ್ರತಿ ನೀಡಲಾಗುವುದು.

ವಿದ್ಯಾರ್ಥಿಗಳಿಗೆ PPC 2023 ಥೀಮ್‌ಗಳು

ನಿಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ತಿಳಿದುಕೊಳ್ಳಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ನನ್ನ ಪುಸ್ತಕ ನನ್ನ ಸ್ಫೂರ್ತಿ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ನನ್ನ ಜೀವನ, ನನ್ನ ಆರೋಗ್ಯ ಆರೋಗ್ಯವಾಗಿರುವುದು ಏಕೆ ಮುಖ್ಯ? ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಏನು ಮಾಡುತ್ತೀರಿ? ನನ್ನ ಸ್ಟಾರ್ಟ್ಅಪ್ ಕನಸು STEM ಶಿಕ್ಷಣ / ಗಡಿಗಳಿಲ್ಲದ ಶಿಕ್ಷಣ ಶಾಲೆಗಳಲ್ಲಿ ಕಲಿಕೆಗಾಗಿ ಆಟಿಕೆಗಳು ಮತ್ತು ಆಟಗಳು

ಶಿಕ್ಷಕರಿಗಾಗಿ PPC 2023 ಥೀಮ್‌ಗಳು

ನಮ್ಮ ಪರಂಪರೆ ಕಲಿಕೆಯ ಪರಿಸರವನ್ನು ಸಕ್ರಿಯಗೊಳಿಸುವುದು ಕೌಶಲ್ಯಕ್ಕಾಗಿ ಶಿಕ್ಷಣ ಕಡಿಮೆ ಪಠ್ಯಕ್ರಮದ ಹೊರೆ ಮತ್ತು ಪರೀಕ್ಷಾ ಭಯ ಇಲ್ಲದಿರುವುದು ಭವಿಷ್ಯದ ಶೈಕ್ಷಣಿಕ ಸವಾಲುಗಳು

ಪೋಷಕರಿಗಾಗಿ ಥೀಮ್‌ಗಳು

ನನ್ನ ಮಗು, ನನ್ನ ಶಿಕ್ಷಕ ವಯಸ್ಕರ ಶಿಕ್ಷಣ- ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡುವುದು ಒಟ್ಟಿಗೆ ಕಲಿಯುವುದು ಮತ್ತು ಬೆಳೆಯುವುದು

PPC 2023 ಕಾರ್ಯಕ್ರಮವು ಜನವರಿ 2023 ರಲ್ಲಿ ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಟೌನ್ ಹಾಲ್ ರೂಪದಲ್ಲಿ ನಡೆಯಲಿದೆ. 2022 ರಲ್ಲಿ 12.12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, 2.71 ಲಕ್ಷ ಶಿಕ್ಷಕರು ಮತ್ತು 90,000 ಪೋಷಕರು ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಮತ್ತಷ್ಟು ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Thu, 29 December 22