ಪಿಎಂ ಇಂಟರ್ನ್‌ಶಿಪ್ ಯೋಜನೆ ಆರಂಭದ ದಿನಾಂಕ ಮುಂದೂಡಿಕೆ; ಶೀಘ್ರದಲ್ಲೇ ಹೊಸ ಡೇಟ್ ಘೋಷಣೆ

|

Updated on: Dec 02, 2024 | 5:13 PM

ಪಿಎಂ ಇಂಟರ್ನ್‌ಶಿಪ್ ಯೋಜನೆಯ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಯೋಜನೆಯ ಹೊಸ ಶೀಘ್ರದಲ್ಲೇ ಘೋಷಿಸಲಾಗುವುದು. ಈ ಯೋಜನೆಯನ್ನು ಇಂದು ಡಿಸೆಂಬರ್ 2 ರಂದು ಮೊದಲ ಬ್ಯಾಚ್ ಫಲಾನುಭವಿಗಳಿಗೆ 12 ತಿಂಗಳ ಅವಧಿಯೊಂದಿಗೆ ಪ್ರಾರಂಭಿಸಬೇಕಾಗಿತ್ತು. ಆದರೆ ಈ ಯೋಜನೆಯ ಆರಂಭವನ್ನು ಮುಂದೂಡಲಾಗಿದೆ.

ಪಿಎಂ ಇಂಟರ್ನ್‌ಶಿಪ್ ಯೋಜನೆ ಆರಂಭದ ದಿನಾಂಕ ಮುಂದೂಡಿಕೆ; ಶೀಘ್ರದಲ್ಲೇ ಹೊಸ ಡೇಟ್ ಘೋಷಣೆ
ಪ್ರಧಾನ ಮಂತ್ರಿ
Follow us on

ನವದೆಹಲಿ: ಪಿಎಂ ಇಂಟರ್ನ್‌ಶಿಪ್ ಯೋಜನೆ 2024ರ ಪ್ರಾರಂಭವನ್ನು ಮುಂದೂಡಲಾಗಿದೆ. ಈ ಯೋಜನೆಯ ಆರಂಭದ ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ವರದಿಯ ಪ್ರಕಾರ, ಒಟ್ಟು 1.27 ಲಕ್ಷ ಇಂಟರ್ನ್‌ಶಿಪ್ ಅವಕಾಶಗಳನ್ನು ಕಂಪನಿಗಳು ಯೋಜನೆಗಾಗಿ ಪೋಸ್ಟ್ ಮಾಡಿದೆ. ಇವುಗಳಿಗಾಗಿ ಈಗಾಗಲೇ ಅಂದಾಜು 6.21 ಲಕ್ಷ ಅರ್ಜಿಗಳು ಬಂದಿವೆ. ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಯಡಿ, 12 ತಿಂಗಳ ಅವಧಿಯವರೆಗೆ, ಐದು ವರ್ಷಗಳಲ್ಲಿ ಟಾಪ್ 500 ಕಂಪನಿಗಳಲ್ಲಿ ಒಂದು ಕೋಟಿ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಲಾಗುವುದು.

ಪಿಎಂ ಇಂಟರ್ನ್‌ಶಿಪ್ ಯೋಜನೆಯನ್ನು 2024-25 ಯೂನಿಯನ್ ಬಜೆಟ್‌ನಲ್ಲಿ ಘೋಷಿಸಲಾಯಿತು. ಕಳೆದ ಮೂರು ವರ್ಷಗಳಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ವೆಚ್ಚದ ಆಧಾರದ ಮೇಲೆ ಆಯ್ಕೆ ಮಾಡಲಾದ ಭಾರತದ ಟಾಪ್ 500 ಕಂಪನಿಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆಯನ್ನು ಘೋಷಿಸಲಾಗಿತ್ತು. ಈ ಯೋಜನೆಯ ಮೂಲಕ, ಆಕಾಂಕ್ಷಿಗಳು ವಿವಿಧ ವೃತ್ತಿಗಳು ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ 12 ತಿಂಗಳುಗಳವರೆಗೆ ಮಾನ್ಯತೆ ಪಡೆಯುತ್ತಾರೆ.

ಇದನ್ನೂ ಓದಿ: ಡಿ. 5ರಂದು ಮಹಾರಾಷ್ಟ್ರದ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ; ಪ್ರಧಾನಿ ಮೋದಿ ಭಾಗಿ

ಈ ಯೋಜನೆಗೆ ನೋಂದಣಿ ಗಡುವನ್ನು ನವೆಂಬರ್ 10ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ನಂತರ ಅದನ್ನು ನವೆಂಬರ್ 15ಕ್ಕೆ ವಿಸ್ತರಿಸಲಾಯಿತು. ಈ ಯೋಜನೆಯ ಪ್ರಾಯೋಗಿಕ ಹಂತದೊಂದಿಗೆ, ಮಾರ್ಚ್ 2025ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ 24 ವಲಯಗಳಲ್ಲಿ 1.25 ಲಕ್ಷ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್ ಒದಗಿಸುವ ಗುರಿಯನ್ನು ಹೊಂದಿದೆ. ಐಟಿ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ತೈಲ, ಅನಿಲ ಮತ್ತು ಶಕ್ತಿ, ಲೋಹಗಳು ಮತ್ತು ಗಣಿಗಾರಿಕೆ, ಟೆಲಿಕಾಂ, ಮೂಲಸೌಕರ್ಯ ಮತ್ತು ನಿರ್ಮಾಣ, ಸಿಮೆಂಟ್ ಮತ್ತು ಕಟ್ಟಡ ಸಾಮಗ್ರಿಗಳು, ಆಟೋಮೋಟಿವ್, ಫಾರ್ಮಾಸ್ಯುಟಿಕಲ್, ವಾಯುಯಾನ ಮತ್ತು ರಕ್ಷಣೆ, ಉತ್ಪಾದನೆ ಮತ್ತು ಕೈಗಾರಿಕಾ, ರಾಸಾಯನಿಕ, ಮಾಧ್ಯಮ ಮತ್ತು ಮನರಂಜನೆ, ಕೃಷಿ , ಸಲಹಾ ಸೇವೆಗಳು, ಜವಳಿ ಉತ್ಪಾದನೆ, ರತ್ನಗಳು ಮತ್ತು ಆಭರಣಗಳು, ಪ್ರವಾಸ ಮುಂತಾದ ಕ್ಷೇತ್ರಗಳಲ್ಲಿ ಇಂಟರ್ನ್​ಶಿಪ್​ಗೆ ಅವಕಾಶ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಪಿಎಂ ಇಂಟರ್ನ್‌ಶಿಪ್ ಯೋಜನೆಯ ಪರಿಷ್ಕೃತ ದಿನಾಂಕ:

ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಪರಿಷ್ಕೃತ ದಿನಾಂಕವನ್ನು ಅಧಿಕಾರಿಗಳು ಇನ್ನೂ ಘೋಷಿಸಿಲ್ಲ. ಶೀಘ್ರದಲ್ಲೇ ಹೊಸ ದಿನಾಂಕವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಭ್ಯರ್ಥಿಗಳು ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ ಅಧಿಕೃತ ವೆಬ್‌ಸೈಟ್ www.pminternship.mca.gov.in ಅನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: ಮೋದಿಯಿಂದಲೇ ವಿಜಯೇಂದ್ರ ಬಣಕ್ಕೆ ಟಕ್ಕರ್​ ಕೊಡಿಸಲು ಯತ್ನಾಳ್ ಮೆಗಾ ಪ್ಲ್ಯಾನ್!

ಪ್ರಧಾನ ಮಂತ್ರಿಗಳ ಇಂಟರ್ನ್‌ಶಿಪ್ ಯೋಜನೆ (PMIS) ಎಂದರೇನು?:

ಪ್ರಧಾನ ಮಂತ್ರಿಗಳ ಇಂಟರ್ನ್‌ಶಿಪ್ ಯೋಜನೆಯು ಭಾರತದ 500 ಉನ್ನತ ಕಂಪನಿಗಳಲ್ಲಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರದ ಉಪಕ್ರಮವಾಗಿದೆ. ಈ ಯೋಜನೆಯು 5 ವರ್ಷಗಳಲ್ಲಿ ಯುವಕರಿಗೆ 1 ಕೋಟಿ ಇಂಟರ್ನ್‌ಶಿಪ್‌ಗಳನ್ನು ನೀಡುವ ಗುರಿಯನ್ನು ಹೊಂದಿದೆ.

ಇಂಟರ್ನ್‌ಶಿಪ್‌ನ ಅವಧಿ ಎಷ್ಟು?:

ಪಿಎಂ ಇಂಟರ್ನ್‌ಶಿಪ್ ಯೋಜನೆಯಡಿಯಲ್ಲಿ ಇಂಟರ್ನ್‌ಶಿಪ್ ಒಂದು ವರ್ಷ (12 ತಿಂಗಳುಗಳು) ಇರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ