ನವದೆಹಲಿ: ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪಿಎಂ ಶ್ರೀ (PM SHRI Scheme) ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಹೊಸದಾಗಿ ಪ್ರಾರಂಭಿಸಲಾದ PM SHRI ಯೋಜನೆ ಅಡಿಯಲ್ಲಿ 14,500 ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಹಾಗೇ, ಅವುಗಳನ್ನು ಪಿಎಂ ಶ್ರೀ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಈ ಪಿಎಂ ಶ್ರೀ ಶಾಲೆಗಳು ಶಿಕ್ಷಣವನ್ನು ನೀಡುವ ಆಧುನಿಕ ಮತ್ತು ಸಮಗ್ರ ವಿಧಾನವನ್ನು ಹೊಂದಿರುತ್ತದೆ. “ಆವಿಷ್ಕಾರ ಆಧಾರಿತ, ಕಲಿಕಾ ಕೇಂದ್ರಿತ ಬೋಧನೆಯ ವಿಧಾನಕ್ಕೆ ಒತ್ತು ನೀಡಲಾಗುವುದು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪಿಎಂ-ಶ್ರೀ ಯೋಜನೆ ಎಂದರೇನು?:
ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಕಾರ, ಈ ಯೋಜನೆಯನ್ನು PM SHRI ಶಾಲೆಗಳು (PM ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 14,500 ಶಾಲೆಗಳನ್ನು ಮರುಅಭಿವೃದ್ಧಿಗೊಳಿಸಲಾಗುವುದು. ಶಿಕ್ಷಣ ಸಚಿವಾಲಯವು ಆಯೋಜಿಸಿದ ಸಮ್ಮೇಳನದಲ್ಲಿ ಈ ಯೋಜನೆಯನ್ನು ಮೊದಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಯಿತು.
NEP ಪಠ್ಯಕ್ರಮದ ರಚನೆ ಮತ್ತು ಬೋಧನಾ ಶೈಲಿಯನ್ನು ವಿವಿಧ ಹಂತಗಳಾಗಿ ವಿಂಗಡಿಸಲಾಗಿದೆ. ಅಡಿಪಾಯ, ಪೂರ್ವಸಿದ್ಧತೆ, ಮಧ್ಯಮ ಮತ್ತು ಮಾಧ್ಯಮಿಕ ಎಂಬ ವಿಭಾಗಗಳಾಗಿವೆ ವಿಭಜಿಸಲಾಗಿದೆ. ಅಡಿಪಾಯದ ವರ್ಷಗಳು (ಪ್ರಿ-ಸ್ಕೂಲ್ ಮತ್ತು 1, 2ನೇ ತರಗತಿ) ಆಟದ ಆಧಾರಿತ ಕಲಿಕೆಯನ್ನು ಒಳಗೊಂಡಿರುತ್ತದೆ. ಪೂರ್ವಸಿದ್ಧತಾ ಹಂತದಲ್ಲಿ (3ರಿಂದ 5ನೇ ತರಗತಿ) ಕೆಲವು ಔಪಚಾರಿಕ ತರಗತಿಯ ಬೋಧನೆಯೊಂದಿಗೆ ಲಘು ಪಠ್ಯಪುಸ್ತಕಗಳನ್ನು ಪರಿಚಯಿಸಬೇಕು. ವಿಷಯ ಶಿಕ್ಷಕರನ್ನು ಮಧ್ಯಮ ಹಂತದಲ್ಲಿ (6ರಿಂದ 8ನೇ ತರಗತಿ) ಪರಿಚಯಿಸಬೇಕು. ಸೆಕೆಂಡರಿ ಹಂತ (9ರಿಂದ 12ನೇ ತರಗತಿ) ಕಲೆ ಮತ್ತು ವಿಜ್ಞಾನ ಅಥವಾ ಇತರ ವಿಭಾಗಗಳನ್ನು ಒಳಗೊಂಡಿರುತ್ತದೆ.
ಕೇಂದ್ರ ಪ್ರಾಯೋಜಿತ ಯೋಜನೆ ಎಂದರೇನು?:
ಕೇಂದ್ರ ಪ್ರಾಯೋಜಿತ ಯೋಜನೆಯು ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನದ ವೆಚ್ಚವನ್ನು 60:40 ಅನುಪಾತದಲ್ಲಿ ವಿಭಜಿಸುವ ಸಾಧ್ಯತೆಯಿದೆ. ಉದಾಹರಣೆಗೆ, ಮಧ್ಯಾಹ್ನದ ಊಟ ಯೋಜನೆ (PM ಪೋಶನ್) ಅಥವಾ PM ಆವಾಸ್ ಯೋಜನೆ ಕೇಂದ್ರ ಪ್ರಾಯೋಜಿತ ಯೋಜನೆಗಳ ಉದಾಹರಣೆಗಳಾಗಿವೆ. ಈಶಾನ್ಯ ರಾಜ್ಯಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಶಾಸಕಾಂಗಗಳಿಲ್ಲದ ಕೇಂದ್ರಾಡಳಿತ ಪ್ರದೇಶಗಳ ಸಂದರ್ಭದಲ್ಲಿ ಕೇಂದ್ರದ ಕೊಡುಗೆಯು ಶೇ. 90ಕ್ಕೆ ಏರಬಹುದು.
ಇದನ್ನೂ ಓದಿ: Narendra Modi: ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ, ಕಡಲ ಜನರಿಗೆ ಕನ್ನಡದಲ್ಲಿ ಧನ್ಯವಾದ ತಿಳಿಸಿದ ಮೋದಿ
ಕೇಂದ್ರೀಯ ವಿದ್ಯಾಲಯಗಳು ಅಥವಾ ಜವಾಹರ್ ನವೋದಯ ವಿದ್ಯಾಲಯಗಳು ಸಂಪೂರ್ಣವಾಗಿ ಕೇಂದ್ರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುತ್ತವೆ. ಕೇಂದ್ರ ವಲಯದ ಯೋಜನೆಗಳ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಅವರಿಗೆ ಸಂಪೂರ್ಣ ಹಣ ನೀಡಲಾಗುತ್ತದೆ. ಕೇಂದ್ರೀಯ ವಿದ್ಯಾಲಯಗಳು ಹೆಚ್ಚಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇಮಕಗೊಂಡಿರುವ ಕೇಂದ್ರ ಸರ್ಕಾರಿ ನೌಕರರ ಮಕ್ಕಳನ್ನು ಪೂರೈಸುತ್ತಿದ್ದರೆ, ದೇಶದ ಗ್ರಾಮೀಣ ಭಾಗಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೋಷಿಸಲು JNVಗಳನ್ನು ಸ್ಥಾಪಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ PM SHRI ಶಾಲೆಗಳು ಕೇಂದ್ರ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಅಸ್ತಿತ್ವದಲ್ಲಿರುವ ಶಾಲೆಗಳ ಅಪ್‌ಗ್ರೇಡ್ ಆಗಿರುತ್ತವೆ.
PM SHRI ಯೋಜನೆಯಡಿ ಆಯ್ಕೆ ಮಾಡಿರುವ ಶಾಲೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಈ PM SHRI ಶಾಲೆಗಳು ತಮ್ಮ ಸುತ್ತಮುತ್ತಲಿನ ಇತರ ಶಾಲೆಗಳಿಗೆ ಮಾರ್ಗದರ್ಶನವನ್ನು ನೀಡುತ್ತವೆ ಎಂದಷ್ಟೇ ಘೋಷಿಸಿದೆ. ಈ ಶಾಲೆಗಳು ಲ್ಯಾಬ್‌ಗಳು, ಸ್ಮಾರ್ಟ್ ಕ್ಲಾಸ್‌ರೂಮ್‌ಗಳು, ಲೈಬ್ರರಿಗಳು, ಕ್ರೀಡಾ ಉಪಕರಣಗಳು, ಕಲಾ ಕೊಠಡಿ ಇತ್ಯಾದಿಗಳನ್ನು ಒಳಗೊಂಡಂತೆ ಆಧುನಿಕ ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿರುತ್ತವೆ. ನೀರಿನ ಸಂರಕ್ಷಣೆ, ತ್ಯಾಜ್ಯ ಮರುಬಳಕೆ, ಇಂಧನ-ಸಮರ್ಥ ಮೂಲಸೌಕರ್ಯ ಮತ್ತು ಪಠ್ಯಕ್ರಮದಲ್ಲಿ ಸಾವಯವ ಜೀವನಶೈಲಿಯ ಏಕೀಕರಣದೊಂದಿಗೆ ಹಸಿರು ಶಾಲೆಗಳಾಗಿ ಅಭಿವೃದ್ಧಿಗೊಳ್ಳುತ್ತವೆ.