AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲಾತಿ ಕುಸಿತ: ಬಾಗಿಲು ಮುಚ್ಚುವ ಹಂತಕ್ಕೆ ಸಾವಿರಾರು ಖಾಸಗಿ ಶಾಲೆಗಳು

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಜೆಟ್ ಮತ್ತು ಮಧ್ಯಮ ವರ್ಗದ ಖಾಸಗಿ ಶಾಲೆಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಇಳಿದಿರುವುದು ಪ್ರಮುಖ ಕಾರಣ. ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ, ಕಾರ್ಪೊರೇಟ್ ಶಾಲೆಗಳ ಸ್ಪರ್ಧೆ, ಹಾಗೂ ಮಕ್ಕಳ ಜನನ ಪ್ರಮಾಣ ಕುಸಿತದಿಂದ ನೂರಾರು ಶಾಲೆಗಳು ಮುಚ್ಚುವ ಅಥವಾ ಮಾರಾಟವಾಗುವ ಹಂತಕ್ಕೆ ತಲುಪಿವೆ.

ದಾಖಲಾತಿ ಕುಸಿತ: ಬಾಗಿಲು ಮುಚ್ಚುವ ಹಂತಕ್ಕೆ ಸಾವಿರಾರು ಖಾಸಗಿ ಶಾಲೆಗಳು
ಪ್ರಾತಿನಿಧಿಕ ಚಿತ್ರImage Credit source: Getty images
ವಿನಯ್​ ಕಾಶಪ್ಪನವರ್​
| Edited By: |

Updated on: Oct 07, 2026 | 9:06 PM

Share

ಬೆಂಗಳೂರು, ಅಕ್ಟೋಬರ್​​ 07: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಜೆಟ್​ ಹಾಗೂ ಮಧ್ಯಮ ವರ್ಗದ ಖಾಸಗಿ ಶಾಲೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಒಂದು ಕಾಲದಲ್ಲಿ ಪೋಷಕರ ಮೊದಲ ಆಯ್ಕೆಯಾಗಿದ್ದ ಖಾಸಗಿ ಶಾಲೆಗಳಲ್ಲಿ ಇದೀಗ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ನಿರ್ವಹಣೆ ಸಾಧ್ಯವಾಗದೆ ನೂರಾರು ಶಾಲೆಗಳು ಮಾರಾಟದ ಹಂತಕ್ಕೆ ಬಂದು ನಿಂತಿವೆ.

ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಹಾಗೂ ಕಾರ್ಪೊರೇಟ್​ ಸ್ಪರ್ಧೆ

ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಖಾಸಗಿ ಶಾಲೆಗಳಿಗೆ ಆರ್ಥಿಕ ಸಂಕಷ್ಟ ಶುರುವಾಗಿದೆ. ಮಕ್ಕಳ ದಾಖಲಾತಿ ಕುಸಿತದ ಬೆನ್ನಲ್ಲೇ ನೂರಾರು ಖಾಸಗಿ ಶಾಲೆಗಳು ಮಾರಾಟಕ್ಕೆ ಮುಂದಾಗಿವೆ. ಕಾರ್ಪೊರೇಟ್ ಶಾಲೆಗಳ ಜೊತೆ ಸ್ಪರ್ಧಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದು, ಒಂದೆಡೆ ವಿದ್ಯಾರ್ಥಿಗಳ ಸಂಖ್ಯೆ ಕೂಡ ಇಳಿಕೆ ಆಗಿದೆ. ಮತ್ತೊಂದೆಡೆ ಶಾಲೆಗಳ ನಿರ್ವಹಣಾ ವೆಚ್ಚ ಏರಿಕೆ ಸೇರಿದಂತೆ ಸಿಬ್ಬಂದಿ ವೇತನ, ನೀರು, ವಿದ್ಯುತ್ ವೆಚ್ಚ ಭರಿಸುವುದು ಸವಾಲಾಗಿದೆ. ಹೆಚ್ಚುತ್ತಿರುವ ಖರ್ಚು, ವೆಚ್ಚದಿಂದ ಶಾಲಾ ಕಟ್ಟಡಗಳನ್ನು ಮಾರಾಟ ಮಾಡಲು ಮಾಲೀಕರ ಮುಂದಾಗಿದ್ದಾರೆ.

ಇದನ್ನೂ ಓದಿ: ದಸರಾ ರಜೆಯಲ್ಲೂ ಖಾಸಗಿ ಶಾಲೆಗಳ ಕಳ್ಳಾಟ: ಸಿಡಿದೆದ್ದ ಹಿಂದೂಪರ ಸಂಘಟನೆಗಳು

ಇತ್ತೀಚಿನ ದಿನಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ. ಕೇವಲ ಬೆಂಗಳೂರು ಅಥವಾ ಕರ್ನಾಟಕ ಅಷ್ಟೇ ಅಲ್ಲ ದೇಶದ 23 ರಾಜ್ಯಗಳ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕುಸಿತ ಕಂಡಿದೆ. ಇದರಿಂದ ಮಧ್ಯಮ ವರ್ಗದ ಶಾಲೆಗಳನ್ನ ನಡೆಸಲು ಆಗದೇ ಮುಚ್ಚುವ ಹಂತ ತಲುಪಿವೆ. ಇನ್ನೂ ಇದಕ್ಕೆ ಕಾರಣ ಮಕ್ಕಳು ಹುಟ್ಟುವ ಸಂಖ್ಯೆ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ನಾನಾ ಕಾರಣಗಳಿಂದ ಮಕ್ಕಳ ಜನನ ಪ್ರಮಾಣ ಕುಸಿಯುತ್ತಿರುವುದು ಹಾಗೂ ಹೆಚ್ಚಿನ ಸಂಖ್ಯೆಗಳಲ್ಲಿ ಶಾಲೆಗಳನ್ನ ತೆರೆಯುತ್ತಿರುವುದು. ನಿರಂತರ ದಾಖಲಾತಿ ಕುಸಿತದಿಂದ ಮಧ್ಯಮ ವರ್ಗದ ಬಜೆಟ್ ಶಾಲೆಗಳಿಗೆ ಹೊಡೆತ ಬಿದಿದ್ದೆ. ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳಲ್ಲೂ ದಾಖಲಾತಿ ಕುಸಿತದ ಪರಿಣಾಮ ಶಾಲೆಗಳ ಮಾರಾಟಕ್ಕೆ ಮುಂದಾಗಿವೆ.

LIVE TV

ಕಳೆದ ಬಾರಿ ಅಂದರೆ 2025-26ನೇ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಕೆಲ ಶಾಲೆಗಳಲ್ಲಿ ಶೇ 40ರಷ್ಡು ದಾಖಲಾತಿ ಕುಸಿದಿದೆ. ಮಕ್ಕಳು ಶಾಲೆಗೆ ಬಾರದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಶಾಲೆ ನಿರ್ವಹಣೆ ಸೇರಿದಂತೆ ಎಲ್ಲದಕ್ಕೂ ಹಣಕಾಸಿನ ಸಮಸ್ಯೆ ಎದುರಾಗಿರುವುದರಿಂದ ಮಾಲೀಕರು ಶಾಲೆಗಳನ್ನ‌ ಬಂದ್​ ಮಾಡಲು ಮುಂದಾಗುತ್ತಿದ್ದಾರೆ.

ಪೋಷಕರು ಹೇಳುವುದೇನು?

ಈ ಕುರಿತಾಗಿ ಪೋಷಕರಾದ ವಿದ್ಯಾ ಅವರು ಮಾತನಾಡಿದ್ದು, ‘ಹಲವು ಕಾರಣದಿಂದ ಮಕ್ಕಳು ಹುಟ್ಟುವ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಅಡ್ಮಿಷನ್ ಕಡಿಮೆಯಾಗಿದೆ. ಹೆಚ್ಚಿನ ಹಣ ಕೊಟ್ಟು ದೊಡ್ಡಮಟ್ಟದ ಸ್ಕೂಲ್‌ಗಳಿಗೆ ಕಳುಹಿಸಲು ಅನೇಕ ಪೋಷಕರಿಗೆ ಕಷ್ಟವಾಗುತ್ತಿರುವ ಹಿನ್ನೆಲೆ ಅಡ್ಮಿಷನ್‌ಗಳು ಕಡಿಮೆಯಾಗಿರಬಹುದು’ ಎಂದಿದ್ದಾರೆ.

ದಾಖಲಾತಿಯ ಅಂಕಿ-ಅಂಶಗಳು

ಜಾಗತಿಕವಾಗಿ ಮಕ್ಕಳ ಜನನ ಪ್ರಮಾಣ ಕುಸಿತವೂ ವಿದ್ಯಾರ್ಥಿಗಳ ಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. ದೇಶದ 23 ರಾಜ್ಯಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿತ ಕಂಡುಬರ್ತಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಶಾಲಾ ದಾಖಲಾತಿ ಕುಸಿತವಾಗುತ್ತಿದೆ. 2023-24ನೇ ಸಾಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಒಟ್ಟಾರೆ ವಿದ್ಯಾರ್ಥಿಗಳ ದಾಖಲಾತಿ ಸುಮಾರು 2 ಲಕ್ಷದಷ್ಟು ಇಳಿಕೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ 2023-24ರಲ್ಲಿ 1,19,26,303 ಇದ್ದ ದಾಖಲಾತಿ ಸಂಖ್ಯೆ, 2024-25ರಲ್ಲಿ 1,17,80,251ಕ್ಕೆ ಕುಸಿದು, ಒಂದೇ ವರ್ಷದಲ್ಲಿ 1,46,052 ವಿದ್ಯಾರ್ಥಿಗಳ ಇಳಿಕೆ ದಾಖಲಾಗಿದೆ. ಅಲ್ಲದೆ, ಕಳೆದ 15 ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಶೇಕಡ 30ರಷ್ಟು (ಸುಮಾರು 17 ಲಕ್ಷ ವಿದ್ಯಾರ್ಥಿಗಳು) ಕುಸಿತ ಕಂಡಿದ್ದು, ಈ ಪ್ರವೃತ್ತಿ ಇದೀಗ ಖಾಸಗಿ ಬಜೆಟ್ ಶಾಲೆಗಳ ಮೇಲೂ ತೀವ್ರ ಹೊಡೆತ ಬೀರಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ