AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ರಜೆಯಲ್ಲೂ ಖಾಸಗಿ ಶಾಲೆಗಳ ಕಳ್ಳಾಟ: ಸಿಡಿದೆದ್ದ ಹಿಂದೂಪರ ಸಂಘಟನೆಗಳು

ಕರ್ನಾಟಕದಲ್ಲಿ ಸರ್ಕಾರ ಘೋಷಿಸಿದ 19 ದಿನಗಳ ದಸರಾ ರಜೆಯಲ್ಲೂ ಕೆಲವು ಖಾಸಗಿ ಶಾಲೆಗಳು ತರಗತಿ ನಡೆಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆಯ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಖಾಸಗಿ ಶಾಲೆಗಳು ರಜೆಗಳನ್ನು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಸಮರ್ಥಿಸಿಕೊಂಡಿವೆ.

ದಸರಾ ರಜೆಯಲ್ಲೂ ಖಾಸಗಿ ಶಾಲೆಗಳ ಕಳ್ಳಾಟ: ಸಿಡಿದೆದ್ದ ಹಿಂದೂಪರ ಸಂಘಟನೆಗಳು
ಪ್ರಾತಿನಿಧಿಕ ಚಿತ್ರ Image Credit source: Getty images
ವಿನಯ್​ ಕಾಶಪ್ಪನವರ್​
| Edited By: |

Updated on: Oct 05, 2026 | 9:50 PM

Share

ಬೆಂಗಳೂರು, ಅಕ್ಟೋಬರ್​​ 05: ‘ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ’ ಎನ್ನುವಂತಾಗಿದೆ ಕೆಲ ಶಾಲಾ ಮಕ್ಕಳ ಪರಿಸ್ಥಿತಿ. ಏಕೆಂದರೆ ದಸರಾ ರಜೆಯಲ್ಲೂ ಶಾಲೆಗೆ ಹೋಗುವಂತಾಗಿದೆ. ಆ ಮೂಲಕ ಶಿಕ್ಷಣ ಇಲಾಖೆಯ ನಿಯಮವನ್ನು ಖಾಸಗಿ ಶಾಲೆಗಳು ಗಾಳಿಗೆ ತೂರಿದವಾ ಎಂಬ ಅನುಮಾನಗಳು ಮೂಡಿದೆ. ದಸರಾ ರಜೆ ಇದ್ದರೂ ತರಗತಿ ನಡೆಸುತ್ತಿರುವ ಖಾಸಗಿ ಶಾಲೆಗಳು ನಡೆ ವಿರುದ್ಧ ಹಿಂದೂಪರ ಸಂಘಟನೆಗಳು ಅಕ್ರೋಶ ಹೊರಹಾಕಿವೆ.

ದಸರಾ ರಜೆಯಲ್ಲಿ ತರಗತಿ: ಭುಗಿಲೆದ್ದ ಆಕ್ರೋಶ

ನಾಡಹಬ್ಬ ದಸರಾಗೆ ರಜೆ ನೀಡದ ಖಾಸಗಿ ಶಾಲೆಗಳ ವಿರುದ್ಧ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅರ್ಧವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಶಿಕ್ಷಣ ಇಲಾಖೆ ಮಕ್ಕಳಿಗೆ ದಸರಾ ರಜೆ ನೀಡುತ್ತೆ. ಈ ಬಾರಿ ಅಕ್ಟೋಬರ್ 3ರಿಂದ ಅಕ್ಟೋಬರ್ 21ರವರೆಗೆ ಒಟ್ಟು 19 ದಿನಗಳ ಕಾಲ ದಸರಾ ರಜೆ ನೀಡಲಾಗಿದೆ. ಅನೇಕ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಊರುಗಳಿಗೆ ತೆರಳಿ ಹಬ್ಬ ಆಚರಿಸುತ್ತಾರೆ. ಆದರೆ ಇದೀಗ  ದಸರಾ ರಜೆಯಲ್ಲಿ ಕೆಲ ಶಾಲೆಗಳು ತರಗತಿ ನಡೆಸುತ್ತಿರುವುದು ಹಿಂದೂ ಪರಹೋರಾಟಗಾರರನ್ನ ಕೆರಳಿಸಿದೆ. ಸರ್ಕಾರದ ಆದೇಶ ಉಲ್ಲಂಘಿಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಗೆ ಮನವಿ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಶಾಲೆಗಳಿಗೆ 19 ದಿನ ದಸರಾ ರಜೆ ಘೋಷಣೆ: ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ

ನಾಡಹಬ್ಬ ದಸರಾ ರಾಜ್ಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ. ದಸರಾ ಹಬ್ಬ ಹಿನ್ನೆಲೆ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. ಆದರೆ ಸರ್ಕಾರ ಘೋಷಿಸಿರುವ ರಜೆಯನ್ನು ಪಾಲಿಸದೇ ಕೆಲವು ಖಾಸಗಿ ಶಾಲೆಗಳು ತರಗತಿ ಹಾಗೂ ಪರೀಕ್ಷೆ ನಡೆಸುತ್ತಿವೆ. ಇದೇ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.

19 ದಿನಗಳ ಕಾಲ ಅಧಿಕೃತ ರಜೆ ಘೋಷಣೆ

2026-27ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ರಾಜ್ಯದ ಶಾಲೆಗಳಿಗೆ ಅಕ್ಟೋಬರ್ 3ರಿಂದ ಅ. 21ರವರೆಗೆ ಸತತ 19 ದಿನಗಳ ಕಾಲ ದಸರಾ ರಜೆ ಘೋಷಿಸಲಾಗಿದೆ. ಅಕ್ಟೋಬರ್ 22ರಿಂದ ಎರಡನೇ ಅವಧಿಯ ಶೈಕ್ಷಣಿಕ ಚಟುವಟಿಕೆಗಳು ಹಾಗೂ ತರಗತಿಗಳು ಪುನರಾರಂಭವಾಗಲಿವೆ. ಆದರೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ದಸರಾ ರಜೆಯನ್ನು ಸಂಪೂರ್ಣವಾಗಿ ಪಾಲಿಸದೆ, ಶಾಲೆ ನಡೆಸುತ್ತಿವೆ. ಹೀಗಾಗಿ ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಡಿಡಿಪಿಐ, ಡಿಸಿಗಳಿಗೆ ಮನವಿ ಪತ್ರ ಕೂಡ ನೀಡಲಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸ್ಪಷ್ಟನೆ 

ಇನ್ನು ಹಿಂದೂಪರ ಸಂಘಟನೆಗಳ ಆರೋಪಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸ್ಪಷ್ಟನೆ ನೀಡಿದ್ದು, ‘ಸರ್ಕಾರದ ರಜೆ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿಲ್ಲ. ಶಾಲೆಗಳ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ರಜೆಗಳನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ’ ಎಂಬುದು ಖಾಸಗಿ ಶಿಕ್ಷಣ ಸಂಸ್ಥೆಗಳ ವಾದವಾಗಿದೆ.

LIVE TV

‘ದಸರಾ ಸಂದರ್ಭದಲ್ಲಿ ಒಂದು ವಾರ ಅಥವಾ ಹತ್ತು ದಿನಗಳವರೆಗೆ ರಜೆ ನೀಡಲಾಗುತ್ತದೆ. ಇನ್ನುಳಿದ ರಜೆಗಳನ್ನು ಕ್ರಿಸ್‌ಮಸ್ ಸೇರಿದಂತೆ ಇತರೆ ಹಬ್ಬಗಳ ಸಂದರ್ಭದಲ್ಲಿ ನೀಡಲಾಗುತ್ತದೆ. ಸ್ಥಳೀಯ ಹಬ್ಬಗಳಿಗೂ ರಜೆಗಳನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಸರಕಾರಿ ಶಾಲೆಗಳಲ್ಲಿ ಮೊದಲೇ ತರಗತಿ ನಡೆಯುತ್ತಿಲ್ಲ, ಎಸ್ಐಆರ್​ ಸಮಯದಲ್ಲಿ ತಿಂಗಳಗಟ್ಟಲೇ ಕ್ಲಾಸ್ ನಡೆದಿಲ್ಲ. ಆಗ ಯಾರೂ ಮಾತನಾಡಿಲ್ಲ, ಈಗ ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ ಎಂದು’ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕ್ಯಾಮ್ಸ್ ಶಶಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: 500 ರೂ.ಗೆ ನವದುರ್ಗಿಯರ ದರ್ಶನ: ಮಂಗಳೂರು ದಸರಾ ಪ್ರವಾಸಕ್ಕೆ ಮತ್ತೊಂದು ಹೊಸ KSRTC ವಿಶೇಷ ಪ್ಯಾಕೇಜ್

ದಸರಾ ರಜೆ ವಿಚಾರ ಇದೀಗ ಖಾಸಗಿ ಶಾಲೆಗಳು ಮತ್ತು ಹಿಂದೂಪರ ಸಂಘಟನೆಗಳ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಸರ್ಕಾರದ ಆದೇಶ ಉಲ್ಲಂಘನೆಯಾಗಿದೆಯೇ ಇಲ್ಲವೇ, ಶಾಲೆಗಳಿಗೆ ರಜೆ ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶವಿದೆಯೇ? ಇದೆಲ್ಲದರ ಬಗ್ಗೆ ಶಿಕ್ಷಣ ಇಲಾಖೆ ಯಾವ ಕ್ರಮಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More