SSLC Exams Preparation Tips: ನಾಳೆಯಿಂದ ಎಸ್​​ಎಸ್​​ಎಲ್​​ಸಿ ಪರೀಕ್ಷೆ ಆರಂಭ, ಒಂದು ದಿನದ ಸಿದ್ಧತೆ ಹೀಗಿರಲಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 20, 2025 | 2:18 PM

2025ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯೂ ಮಾರ್ಚ್ 21 ರಿಂದ ಆರಂಭವಾಗುತ್ತಿದ್ದು, ಏಪ್ರಿಲ್ 4ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ಎಷ್ಟೇ ತಯಾರಿ ಮಾಡಿದ್ದರೂ ಕೂಡ ಪರೀಕ್ಷೆ ಎಂದರೆ ಭಯ ಸಹಜ. ವಿದ್ಯಾರ್ಥಿ ಜೀವನದ ಪ್ರಮುಖ ಪರೀಕ್ಷೆಗಳಲ್ಲಿ ಒಂದಾದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಒಂದು ದಿನವಷ್ಟೇ ಬಾಕಿಯಿದ್ದು, ಈ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳಲೇಬೇಕು. ಹೌದು, ಹತ್ತನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಒಂದು ದಿನ ಮಾತ್ರ ಬಾಕಿಯಿರುವಾಗ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು? ಎನ್ನುವ ಕುರಿತಾದ ಕೆಲವು ಸಲಹೆಗಳು ಇಲ್ಲಿದೆ.

SSLC Exams Preparation Tips: ನಾಳೆಯಿಂದ ಎಸ್​​ಎಸ್​​ಎಲ್​​ಸಿ ಪರೀಕ್ಷೆ ಆರಂಭ, ಒಂದು ದಿನದ ಸಿದ್ಧತೆ ಹೀಗಿರಲಿ
ಸಾಂದರ್ಭಿಕ ಚಿತ್ರ
Follow us on

ವಿದ್ಯಾರ್ಥಿಗಳ ಜೀವನದಲ್ಲಿ ಎಸ್ ಎಸ್ ಎಲ್ ಸಿ (SSLC) ಮಹತ್ವದ ಘಟ್ಟವಾಗಿದೆ. ಎಸ್ಎಸ್ಎಲ್​​ಸಿ ಯೂ ವೃತ್ತಿಜೀವನಕ್ಕೆ ಬುನಾದಿಯಾಗಿದ್ದು, ಯಾವ ವೃತ್ತಿಪರ ಕೋರ್ಸ್​ (Vocational course) ಗಳನ್ನು ಆಯ್ಕೆ ಮಾಡಿಕೊಳ್ಳುವುದನ್ನು ಈ ಹಂತದಲ್ಲಿ ನಿರ್ಧರಿಸಲಾಗುತ್ತದೆ. ಆದರೆ, ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯುವುದು ಕೂಡ ಬಹಳ ಮುಖ್ಯ. ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಇದೀಗ ಒಂದೇ ಒಂದು ದಿನ ಬಾಕಿಯಿದ್ದು, ವಿದ್ಯಾರ್ಥಿಗಳ ಕೊನೆಯ ಹಂತದ ಪರೀಕ್ಷಾ ತಯಾರಿ ಹೇಗಿರಬೇಕು? ಎನ್ನುವ ಮಾಹಿತಿ ಇಲ್ಲಿದೆ.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕೊನೆಯ ಹಂತದ ತಯಾರಿ ಈ ರೀತಿ ಇರಲಿ

* ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಒಂದು ದಿನ ಬಾಕಿಯಿರುವಾಗಲೇ, ಮೊದಲ ದಿನ ಯಾವ ವಿಷಯಕ್ಕೆ ಸಂಬಂಧ ಪಟ್ಟ ಪರೀಕ್ಷೆಯಿದೆ ಎನ್ನುವುದನ್ನು ಖಚಿತ ಪಡಿಸಿ ಕೊಳ್ಳಿ.

* ಮೊದಲ ದಿನದ ಪರೀಕ್ಷಾ ವಿಷಯಕ್ಕೆ ಸಂಬಂಧ ಪಟ್ಟಂತೆ ಓದಿದ ಎಲ್ಲಾ ಅಂಶಗಳನ್ನು ಕಿರುಟಿಪ್ಪಣಿ ಮಾಡಿಕೊಂಡಿದ್ದರೆ ಒಮ್ಮೆ ಕಣ್ಣಾಯಿಸಿ ಮನನ ಮಾಡಿಕೊಳ್ಳಿ.

ಇದನ್ನೂ ಓದಿ
ಸುನಿತಾ ವಿಲಿಯಮ್ಸ್ ನಂತೆ ವಿಜ್ಞಾನಿಯಾಗಲು ಬಯಸುವಿರಾ? ಸಿದ್ದತೆ ಹೇಗಿರಬೇಕು?
AI ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಹಲವು ಅವಕಾಶಗಳಿವೆ!
9 ವಿವಿ ಮುಚ್ಚಲ್ಲ: ಬಿಎಸ್​​ವೈ ಮೊಮ್ಮಗನ ಉದಾಹರಣೆಯೊಂದಿಗೆ ಡಿಕೆಶಿ ಸ್ಪಷ್ಟನೆ
SSLC ಪ್ರಶ್ನೆ ಪತ್ರಿಕೆ ಲೀಕ್: ಯೂಟ್ಯೂಬ್, ಇನ್​ಸ್ಟಾದಲ್ಲಿ ವೈರಲ್​!

* ನಾಳೆ ಪರೀಕ್ಷೆಯಿದೆ ಎಂದು ಭಯ ಪಡಬೇಡಿ. ಚೆನ್ನಾಗಿ ಪರೀಕ್ಷೆ ಬರೆಯುವೆನು, ಉತ್ತಮ ರೀತಿಯಲ್ಲಿ ತಯಾರಿ ನಡೆಸಿದ್ದೇನೆ ಎನ್ನುವ ಆತ್ಮವಿಶ್ವಾಸವಿರಲಿ.

* ಪರೀಕ್ಷೆಯ ಹಿಂದಿನ ದಿನವೇ ಎಲ್ಲಾ ತಯಾರಿ ನಿಮ್ಮದಾಗಿರಲಿ. ಪ್ರವೇಶ ಪತ್ರ ಹಾಗೂ ಪರೀಕ್ಷೆಗೆ ಬೇಕಾಗುವ ಎಲ್ಲಾ ಲೇಖನ ಸಾಮಗ್ರಿಗಳನ್ನು ಬ್ಯಾಗ್ ನಲ್ಲಿ ಜೋಡಿಸಿಟ್ಟುಕೊಳ್ಳಿ.

* ಸೇವಿಸುವ ಆಹಾರದ ಬಗ್ಗೆ ವಿಶೇಷ ವಾಗಿ ಕಾಳಜಿ ವಹಿಸಿ. ನಾಳೆ ಪರೀಕ್ಷೆ ಎಂದು ಈ ದಿನ ನಿದ್ದೆಗೆಟ್ಟು ಓದಬೇಡಿ.

* ರಾತ್ರಿ ಬೇಗನೆ ಮಲಗಿ, ಬೆಳಗ್ಗೆ ಬೇಗನೇ ಎದ್ದೇಳಿ. ಮುಂಜಾನೆ ಬೇಗನೇ ಎದ್ದು ಓದಿದ ವಿಷಯಗಳೆಲ್ಲವನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಹೆಚ್ಚು ಒತ್ತಡ ತೆಗೆದುಕೊಳ್ಳಬೇಡಿ.

ಇದನ್ನೂ ಓದಿ: ವಿದ್ಯಾರ್ಥಿಗಳು ಪರೀಕ್ಷೆಯ ಮೊದಲು ಈ ಆಹಾರಗಳನ್ನು ಸೇವನೆ ಮಾಡಿ

ಪರೀಕ್ಷಾ ದಿನ ಬೆಳಗ್ಗೆ ಈ ಸಲಹೆ ತಪ್ಪದೇ ಪಾಲಿಸಿ

* ಪರೀಕ್ಷೆಯ ದಿನ ಬೆಳಿಗ್ಗೆ ಬೇಗ ಎದ್ದು ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಾದ ಎಲ್ಲಾ ಸಾಮಗ್ರಿಗಳನ್ನು ಇಟ್ಟುಕೊಂಡಿರುವ ಬಗ್ಗೆ ಖಾತ್ರಿಮಾಡಿಕೊಳ್ಳಿ.

* ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಹಿರಿಯರ ಹಾಗೂ ತಂದೆ ತಾಯಂದಿರ ಆಶೀರ್ವಾದ ಪಡೆದುಕೊಳ್ಳಿ.

* ಮೊದಲ ದಿನ ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾಗಿ ತಲುಪಿ. ಗಡಿ ಬಿಡಿಯಲ್ಲಿ ಹೋದರೆ ಓದಿದ್ದೆಲ್ಲವು ಮರೆತು ಹೋಗುತ್ತದೆ.

* ಪರೀಕ್ಷಾ ಕೇಂದ್ರ ತಲುಪಿದ ತಕ್ಷಣ ನೋಂದಣಿ ಸಂಖ್ಯೆಯು ಯಾವ ಕೊಠಡಿಯಲ್ಲಿದೆ ಎಂಬ ಬಗ್ಗೆ ಪರಿಶೀಲಿಸಿ. ಪರೀಕ್ಷಾ ಕೇಂದ್ರದಲ್ಲಿ ನೀಡುವ ಸೂಚನೆಗಳನ್ನು ಗಮನಿಸಿ ಕೊಠಡಿಯೊಳಗೆ ತೆರಳಿ.

* ಕೊಠಡಿಯೊಳಗೆ ಪ್ರವೇಶಿಸಿ, ನಿಮ್ಮ ಸ್ಥಳದಲ್ಲಿ ಕುಳಿತ ನಂತರದಲ್ಲಿ ದೀರ್ಘವಾಗಿ ಉಸಿರನ್ನು ತಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಗಾಬರಿಯಾಗಬೇಡಿ.

* ಆ ಬಳಿಕ ನಿಮ್ಮ ಹಾಲ್ ಟಿಕೆಟ್, ಲೇಖನ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಳ್ಳಿ.

* ಉತ್ತರ ಪತ್ರಿಕೆ ಕೊಟ್ಟ ಕೂಡಲೇ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ. ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ತಕ್ಷಣ ಒಮ್ಮೆ ಓದಿಕೊಳ್ಳಿ. ಗೊತ್ತಿರುವ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ಬರೆಯಿರಿ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ