Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಿದರೆ ಜಾಬ್ ಸಿಗೋದು ಗ್ಯಾರಂಟಿ, ಇಲ್ಲಿದೆ ಮಾಹಿತಿ

ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿಯೂ ಎಸ್ ಎಸ್ ಎಲ್ ಸಿ ಒಂದು ಮೈಲಿಗಲ್ಲು. ಪ್ರೌಢಶಾಲಾ ಶಿಕ್ಷಣ ಮುಗಿಯುತ್ತಿದ್ದಂತೆ ಮುಂದೇನು ಎನ್ನುವ ಗೊಂದಲ ಸಹಜ. ಹತ್ತನೇ ತರಗತಿಯ ಪರೀಕ್ಷೆ ಬರೆದು ಮುಗಿಸುತ್ತಿದ್ದಂತೆ ಏನು ಮಾಡಬೇಕು? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು? ಹೀಗೆ ನಾನಾ ರೀತಿಯ ಈ ಗೊಂದಲ ಕಾಡಲು ಶುರುವಾಗುತ್ತದೆ. ಈ ವೇಳೆಯಲ್ಲಿ ನೀವು ತೆಗೆದುಕೊಳ್ಳುವ ಕೋರ್ಸ್ ನಿಮ್ಮ ವೃತ್ತಿ ಜೀವನದ ಆಯ್ಕೆಗೆ ದಾರಿಯಾಗುತ್ತದೆ. ಹೀಗಾಗಿ ಯಾವ ಕೋರ್ಸ್ ಸೂಕ್ತ ಹಾಗೂ ಪಿಯುಸಿ ಮಾಡಿದ ಬಳಿಕ ಕೋರ್ಸ್ ತೆಗೆದುಕೊಳ್ಳುವುದೇ ಹೀಗೆ ನಾನಾ ರೀತಿಯ ಗೊಂದಲಗಳಿಗೆ ಪೋಷಕರು, ಶಿಕ್ಷಕರು, ತಜ್ಞರೊಂದಿಗೆ ಚರ್ಚಿಸಿ ಮುಂದೆ ಸಾಗುವುದು ಉತ್ತಮ, ಇದಕ್ಕೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ.

SSLC ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಿದರೆ ಜಾಬ್ ಸಿಗೋದು ಗ್ಯಾರಂಟಿ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 20, 2025 | 10:28 AM

ವಿದ್ಯಾರ್ಥಿಗಳ ಜೀವನದಲ್ಲಿ ಬಹು ದೊಡ್ಡ ಘಟ್ಟಗಳೆಂದರೆ ಅದುವೇ ಎಸ್‌ಎಸ್ಎಲ್‌ಸಿ (SSLC) ಹಾಗೂ ಪಿಯುಸಿ (PUC). ಆದರೆ ಈ ಎಸ್ಎಸ್ಎಲ್‌ಸಿ ಬಳಿಕ ಮುಂದೇನು ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳನ್ನು ಕಾಡುತ್ತದೆ. ಪೋಷಕರು ಫಲಿತಾಂಶ (Result) ಬಂದ ಕೂಡಲೇ ಅಂಕ (Mark) ಗಳ ಆಧಾರದ ಮೇಲೆ ಈ ಕೋರ್ಸ್ (Course) ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಸ್ ಎಸ್ ಎಲ್ ಸಿ ಮುಗಿದ ತಕ್ಷಣ ತಾವು ಏನಾಗಬೇಕು? ವೃತ್ತಿ ಆಯ್ಕೆಯೇನು? ಎನ್ನುವುದರ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಹಾಗಾದ್ರೆ ಹತ್ತನೇ ತರಗತಿಯ ಬಳಿಕ ಮುಂದೇನು ಎನ್ನುವ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಕೆಲವು ಟಿಪ್ಸ್.

  • ವಿಜ್ಞಾನ ವಿಭಾಗ : ಸಾಮಾನ್ಯವಾಗಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವುದೇ ಪಿಯುಸಿಯಲ್ಲಿ ವಿಜ್ಞಾನ ವಿಭಾಗ. ಹತ್ತನೇ ತರಗತಿ ಬಳಿಕ ಪಿಯುಸಿಯಲ್ಲಿ ಪಿಸಿಎಂ ವಿಷಯಗಳನ್ನು ಅಧ್ಯಯನ ಮಾಡಿದರೆ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸಸ್, ರಕ್ಷಣಾ ಸೇವೆಗಳು, ಮರ್ಚೆಂಟ್ ನೇವಿ ಹೀಗೆ ಹಲವಾರು ಆಯ್ಕೆಗಳಿವೆ. ಅದಲ್ಲದೇ, ಪಿಸಿಎಂಬಿ ವಿಷಯಗಳನ್ನು ಆಯ್ಕೆ ಮಾಡಿಕೊಂಡರೆ ಔಷಧ, ಫಿಸಿಯೋಥೆರಪಿ, ಕೃಷಿ, ಪೋಷಣೆ ಹಾಗೂ ಆಹಾರ ಪದ್ಧತಿ, ದಂತವೈದ್ಯಶಾಸ್ತ್ರ ಹೀಗೆ ಹತ್ತಾರು ಕೋರ್ಸ್ ಗಳಲ್ಲಿ ಮುಂದುವರೆಯಬಹುದು. ಹೀಗಾಗಿ ಯಾವ ವಿಜ್ಞಾನದಲ್ಲಿ ನೀವು ಯಾವ ವಿಷಯ ಆಯ್ಕೆ ಮಾಡಿಕೊಳ್ಳುತ್ತಿರಿ ಎನ್ನುವುದರ ಆಧಾರದ ಮೇಲೆ ನಿಮ್ಮ ವೃತ್ತಿ ಕ್ಷೇತ್ರ ನಿರ್ಧಾರವಾಗುತ್ತದೆ.
  • ವಾಣಿಜ್ಯ ವಿಭಾಗ : ವ್ಯವಹಾರಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದು ಬೆಸ್ಟ್. ಅದರಲ್ಲೇ ಮುಂದುವರೆಯಬೇಕೆನ್ನುವ ಆಸಕ್ತಿಯಿರುವ ವಿದ್ಯಾರ್ಥಿಗಳು ಬಿಕಾಂ ಡಿಗ್ರಿ ಮಾಡಬಹುದು. ಇಲ್ಲದಿದ್ದರೆ ಬಿಬಿಎಂ ಸೇರಿದಂತೆ ವಿವಿಧ ಡಿಗ್ರಿ ಪಡೆಯಬಹುದು. ಅದಲ್ಲದೇ, ಬ್ಯಾಂಕಿಂಗ್, ವಿಮೆ, ಹಣಕಾಸು ವಿವಿಧ ವೃತ್ತಿ ಆಯ್ಕೆಗಳಿವೆ. ಇನ್ನೊಂದು ಅತ್ಯುತ್ತಮ ಆಯ್ಕೆಯೆಂದರೆ ಚಾರ್ಟರ್ಡ್ ಅಕೌಂಟೆನ್ಸಿ. ವಾಣಿಜ್ಯ ವಿಭಾಗದಲ್ಲಿಯೇ ಡಿಗ್ರಿ ಪಡೆದು ಚಾರ್ಟರ್ಡ್ ಅಕೌಂಟೆಟ್ ಪೂರ್ಣಗೊಳಿಸಿದರೆ ಒಳ್ಳೆಯ ಸಂಬಳ ಪಡೆಯಬಹುದು.
  • ಕಲಾ ವಿಭಾಗ : ಎಸ್ ಎಸ್ ಎಲ್ ಸಿಯಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಹೆಚ್ಚಾಗಿ ಕಲಾವಿಭಾಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ವಿಭಾಗದಲ್ಲಿಯೂ ವೃತ್ತಿ ಆಯ್ಕೆಗಳು ಸಾಕಷ್ಟಿವೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಪಿಯುಸಿಯ ಕಲಾವಿಭಾಗದಲ್ಲಿ ಸಮಾಜಶಾಸ್ತ್ರ, ಇತಿಹಾಸ, ಸಾಹಿತ್ಯ, ರಾಜ್ಯಶಾಸ್ತ್ರ, ಮನೋವಿಜ್ಞಾನ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಲಲಿತಕಲೆ ವಿವಿಧ ವಿಷಯಗಳ ಆಯ್ಕೆಗಳಿವೆ. ಈ ವಿಭಾಗದಲ್ಲಿಯೇ ಮುಂದುವರೆದರೆ ಆಯಾಯ ವಿಷಯಕ್ಕೆ ಸಂಬಂಧಪಟ್ಟಂತೆ ಪತ್ರಿಕೋದ್ಯಮ, ಸಾಹಿತ್ಯ ಬರವಣಿಗೆ, ಶಿಕ್ಷಕರು ಹೀಗೆ ಹುದ್ದೆಗಳಿವೆ.
  • ವೃತ್ತಿಪರ ಕೋರ್ಸ್‌ಗಳು : ಎಸ್‌ಎಸ್‌ಎಲ್‌ಸಿ ಬಳಿಕ ವೃತ್ತಿಪರ ಕೋರ್ಸ್‌ಗಳು ಇವೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್, ಫ್ಯಾಶನ್ ಡಿಸೈನಿಂಗ್, ಡೆಸ್ಕ್‌ಟಾಪ್ ಪಬ್ಲಿಷಿಂಗ್ , ಆಭರಣ ವಿನ್ಯಾಸ, ಪ್ರಯಾಣ ಮತ್ತು ಪ್ರವಾಸೋದ್ಯಮ, ಐಟಿಐ ಹೀಗೆ ವಿವಿಧ ಕೋರ್ಸ್‌ಗಳು ಮಾಡಿದರೆ ಉದ್ಯೋಗ ಗ್ಯಾರಂಟಿ ಸಿಗುತ್ತದೆ.
  • ಪ್ಯಾರಾ ಮೆಡಿಕಲ್ ಕೋರ್ಸ್‌ಗಳು : ಎಸ್ ಎಸ್ ಎಲ್ ಸಿ ಬಳಿಕ ಪಿಯುಸಿಯ ಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ಆ ಬಳಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಬಗೆಯ ಕೋರ್ಸ್ ಗಳನ್ನು ಮಾಡಬಹುದು. ಈ ಕ್ಷೇತ್ರದಲ್ಲಿ ಎಕ್ಸ್-ರೇ ತಂತ್ರಜ್ಞ, ಡಯಾಲಿಸಿಸ್ ತಂತ್ರಜ್ಞ, ನರ್ಸಿಂಗ್ ಅಸಿಸ್ಟೆನ್ಸ್, ನೇತ್ರ ತಂತ್ರಜ್ಞ ಹೀಗೆ ಹಲವಾರು ಅವಕಾಶಗಳಿವೆ.
  • ಪಾಲಿಟೆಕ್ನಿಕ್ ಕೋರ್ಸ್‌ಗಳು : ಹತ್ತನೇ ತರಗತಿಯ ಬಳಿಕ ಕೋರ್ಸ್ ಆಯ್ಕೆ ಮಾಡಿಕೊಂಡು ಬೇಗನೇ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂದುಕೊಂಡಿದ್ದರೆ ಪಾಲಿಟೆಕ್ನಿಕ್ ಕೋರ್ಸ್‌ಗಳು ಆಯ್ಕೆ ಮಾಡಿಕೊಳ್ಳಬಹುದು. ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್, ಕಂಪ್ಯೂಟರ್, ಆಟೋಮೊಬೈಲ್ ಮುಂತಾದ ಪಾಲಿಟೆಕ್ನಿಕ್ ಕೋರ್ಸ್‌ಗಳಿವೆ. ಮೂರು, ಎರಡು ಹಾಗೂ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತವೆ. ಅಲ್ಪಾವಧಿಯಲ್ಲಿ ಉದ್ಯೋಗ ಪಡೆಯಲು ಈ ಕೋರ್ಸ್ ಗಳು ಉತ್ತಮವಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
Image
ಸುನಿತಾ ವಿಲಿಯಮ್ಸ್ ನಂತೆ ವಿಜ್ಞಾನಿಯಾಗಲು ಬಯಸುವಿರಾ? ಸಿದ್ದತೆ ಹೇಗಿರಬೇಕು?
Image
AI ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಹಲವು ಅವಕಾಶಗಳಿವೆ!
Image
9 ವಿವಿ ಮುಚ್ಚಲ್ಲ: ಬಿಎಸ್​​ವೈ ಮೊಮ್ಮಗನ ಉದಾಹರಣೆಯೊಂದಿಗೆ ಡಿಕೆಶಿ ಸ್ಪಷ್ಟನೆ
Image
SSLC ಪ್ರಶ್ನೆ ಪತ್ರಿಕೆ ಲೀಕ್: ಯೂಟ್ಯೂಬ್, ಇನ್​ಸ್ಟಾದಲ್ಲಿ ವೈರಲ್​!

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ