ಪ್ರಶ್ನೆಪತ್ರಿಕೆ ಲೀಕ್ ತಡೆಗೆ ಕಠಿಣ ಕ್ರಮ: ಆರೋಪಿಗಳಷ್ಟೇ ಅಲ್ಲ ಕಾಲೇಜುಗಳೂ ಬ್ಲಾಕ್ ಲಿಸ್ಟ್​ಗೆ, ಮಾನ್ಯತೆ, ಅನುದಾನಕ್ಕೂ ಕತ್ತರಿ

ಪಿಯುಸಿ, ಎಸ್ಎಸ್ಎಲ್​ಸಿ ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ಕಿಡಿಗೇಡಿಗಳು ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ಮುಂದಾಗುತ್ತಿದ್ದಾರೆ. ಇನ್ನು ಕೆಲವರು ಸಮಾಜಿಕ ಜಾತಣದಲ್ಲಿ ಪ್ರಶ್ನೆ ಪತ್ರಿಕೆ ಲೀಕ ಮಾಡಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದು, ಇತಂಹ ಕಿಡಗೇಡಿಗಳನ್ನು ಮಟ್ಟ ಹಾಕಲು ಪಿಯು ಬೋರ್ಡ್ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಪ್ರಶ್ನೆಪತ್ರಿಕೆ ಲೀಕ್ ತಡೆಗೆ ಕಠಿಣ ಕ್ರಮ: ಆರೋಪಿಗಳಷ್ಟೇ ಅಲ್ಲ ಕಾಲೇಜುಗಳೂ ಬ್ಲಾಕ್ ಲಿಸ್ಟ್​ಗೆ, ಮಾನ್ಯತೆ, ಅನುದಾನಕ್ಕೂ ಕತ್ತರಿ
ಪ್ರಶ್ನೆಪತ್ರಿಕೆ ಲೀಕ್ ತಡೆಗೆ ಕಠಿಣ ಕ್ರಮ (ಸಾಂದರ್ಭಿಕ ಚಿತ್ರ)
Edited By:

Updated on: Jan 17, 2026 | 9:44 AM

ಬೆಂಗಳೂರು, ಜನವರಿ 17: ಪಿಯುಸಿ ಪರೀಕ್ಷೆ (PUC Exam) ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ (Question Paper Leak) ಮಾಡಿ ಮಕ್ಕಳಲ್ಲಿ ಪೋಷಕರಲ್ಲಿ ಆತಂಕ ತಂದಿದ್ದಾರೆ. ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ ಜನವರಿ 6ರಂದು ನಡೆದ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಮಾಡಲಾಗಿತ್ತು. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಮಾಡಲಾಗಿತ್ತು. ಈ ಬಗ್ಗೆ ಟಿವಿ9 ಸುದ್ದಿ ಪ್ರಸಾರದ ಬಳಿಕ ಎಚ್ಚೆತ್ತುಗೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಅಲರ್ಟ್ ಆಗಿದೆ. ಪ್ರಶ್ನೆಪತ್ರಿಕೆ ಲೀಕ್ ಮಾಡುವ ಉಪನ್ಯಾಸಕರು ಕೆಲಸ ಮಾಡುವ ಕಾಲೇಜುಗಳನ್ನು ಬ್ಲಾಕ್ ಲಿಸ್ಟ್​ಗೆ ಸೇರಿಸಲು ಮುಂದಾಗಿದೆ. ಕಪ್ಪು ಪಟ್ಟಿಗೆ ಸೇರುವ ಜೊತೆಗೆ ಮಾನ್ಯತೆ ಹಾಗೂ ಅನುದಾನಕ್ಕೂ ಕತ್ತರಿ ಹಾಕಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.

ಇನ್ಮುಂದೆ ಪ್ರಶ್ನೆ ಪತ್ರಿಕೆ ಲೀಕ್ ಆದರೆ ಯಾವ ಕಾಲೇಜಿನಿಂದ ಲೀಕ್ ಆಯಿತೋ ಆ ಕಾಲೇಜನ್ನು ಕಪ್ಪು ಪಟ್ಟಿಗೆ ಸೇರಿಸಲು ಹಾಗೂ ಮಾನ್ಯತೆ, ಅನುದಾನಕ್ಕೆ ಕತ್ತರಿ ಹಾಕುವ ಬಗ್ಗೆಯೂ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಸರ್ಕಾರಿ ಕಾಲೇಜುಗಳಾದರೆ ಅನುದಾನದ ಜೊತೆಗೆ ಕಪ್ಪುಪಟ್ಟಿಗೆ ಸೇರಿಸುವುದು ಹಾಗೂ ಅನುದಾನ ರಹಿತ ಕಾಲೇಜಾದರೆ ಅಂತಹ ಖಾಸಗಿ ಕಾಲೇಜಿನ ಮಾನ್ಯತೆ ರದ್ದು ಮಾಡುವ ಬಗ್ಗೆ ಕ್ರಮಕ್ಕೆ ಮುಂದಾಗಿದೆ.

ಪ್ರಶ್ನೆಪತ್ರಿಕೆ ಲೀಕ್ ಮಾಡಿದ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಾಮೀಲಾದ ಶಿಕ್ಷಕರ ಮೇಲೆಯೂ ಕಾನೂನು ಕ್ರಮಕ್ಕೆ ಹಾಗೂ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ: ಒರಿಜಿನಲ್ ಅಂತ ನಕಲಿ 2nd PU ಪ್ರಶ್ನೆಪತ್ರಿಕೆ ಹರಿಬಿಟ್ಟಿದ್ದ ಕಿಡಿಗೇಡಿಗಳು: ಯೂಟ್ಯೂಬ್ ಚಾನೆಲ್ ವಿರುದ್ಧ ದೂರು

ಸಾಮಾಜಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಲೀಕ್ ಮಾಡಿ ವೈರಲ್ ಮಾಡುವ ಕಿಡಗೇಡಿಗಳ ವಿರುದ್ಧವೂ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಣದಲ್ಲಿನ ಕಿಡಗೇಡಿಗಳ ಖಾತೆಗಳ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.