Few tips on exam day
Image Credit source: Pinterest
ಎಕ್ಸಾಂ ಎಂದರೆ ಎಲ್ಲಾ ಮಕ್ಕಳಿಗೆ ಭಯ ಸಹಜ. ಎಷ್ಟೇ ಓದಿದ್ದರೂ ಹೇಗೆ ಇರುತ್ತದೆಯೋ ಎನ್ನುವ ಭಯವೊಂದು ಕಾಡುತ್ತಿರುತ್ತದೆ. ಮಕ್ಕಳಿಗೆ ಧೈರ್ಯತುಂಬುವ ಬದಲು ಅದಕ್ಕಿಂತ ಹೆಚ್ಚು ಪೋಷಕರು ಹೆದರಿಕೊಳ್ಳುತ್ತಾರೆ. ಈ ಬಾರಿಯ ಪರೀಕ್ಷೆಯಲ್ಲಿಯಾದರೂ ಒಳ್ಳೆಯ ಅಂಕ ಗಳಿಸಲಿ ಎಂದು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಆದರೆ ಪೋಷಕರು ಮಕ್ಕಳ ಮೇಲೆ ಒತ್ತಡವನ್ನು ಹಾಕದೇ, ಆ ಸಮಯದಲ್ಲಿ ಅವರ ಜೊತೆಗೆ ನಿಲ್ಲಬೇಕಾಗುತ್ತದೆ. ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಡೆಗೆ ಗಮನ ನೀಡುವುದರ ಮಕ್ಕಳಿಗೆ ಆರಾಮದಾಯಕವಾಗಿ ಪರೀಕ್ಷೆಯನ್ನು ಬರೆಯಲು ಸಿದ್ಧಗೊಳಿಸಬೇಕು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಿಂಪಲ್ ಟಿಪ್ಸ್:
- ಪರೀಕ್ಷೆಯ ದಿನದಂದು ಹಾಲ್ ಟಿಕೆಟ್, ಕಾಲೇಜ್ ಐಡಿ ಕಾರ್ಡ್ ನೆನಪಿನಲ್ಲಿ ತೆಗೆದುಕೊಂಡು ಹೋಗುವುದು ಮುಖ್ಯ.
- ಪರೀಕ್ಷೆ ಬರೆಯಲು ಬೇಕಾದ ಪೆನ್ಸಿಲ್, ರಬ್ಬರ್, ಪೆನ್ ಸೇರಿದಂತೆ ಅಗತ್ಯ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳಿ.
- ಪರೀಕ್ಷೆಯ ದಿನ ರಿಜಿಸ್ಟರ್ ನಂಬರ್ ಬರೆದ ಜಾಗವನ್ನು ಪರೀಕ್ಷೆ ಆರಂಭವಾಗುವ ಮೊದಲೇ ಪರಿಶೀಲಿಸಿಕೊಳ್ಳಿ. ಬೆಲ್ ಆದ ಕೂಡಲೇ ಪರೀಕ್ಷಾ ಕೊಠಡಿಯೊಳಗೆ ಹೋಗಿ.
- ಉತ್ತರ ಪತ್ರಿಕೆಯ ಮೇಲೆ ನಿಮ್ಮ ಹಾಲ್ ಟಿಕೆಟ್ ನಂಬರನ್ನು ತಪ್ಪಿಲ್ಲದೇ ಬರೆಯಿರಿ.
- ಪ್ರಶ್ನೆ ಪ್ರತ್ರಿಕೆಯನ್ನು ನೋಡಿ ಗಾಬರಿಯಾಗಬೇಡಿ. ಎಲ್ಲಾ ಪ್ರಶ್ನೆಗಳನ್ನು ಓದಿಕೊಂಡು, ಆ ಬಳಿಕ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸುವ ಅಭ್ಯಾಸವಿರಲಿ.
- ಗಡಿಬಿಡಿಯಲ್ಲಿ ಪ್ರಶ್ನೆಗಳನ್ನು ಸರಿಯಾಗಿ ಓದದೇ ಯಾವುದೋ ಉತ್ತರವನ್ನು ಬರೆಯಬೇಡಿ. ಒತ್ತಡವಿಲ್ಲದೇ ಆರಾಮದಾಯಕವಾಗಿ ಮೂರು ಗಂಟೆಗಳ ಪರೀಕ್ಷೆಯನ್ನು ಚೆನ್ನಾಗಿಯೇ ಬರೆಯಿರಿ.
- ಉತ್ತರ ಬರೆಯುವಾಗ ಪ್ರಶ್ನೆಗಳ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆಯಿರಿ. ಪ್ರಶ್ನೆಗಳ ಸಂಖ್ಯೆಯು ತಪ್ಪಾದರೆ ಅಂಕಗಳನ್ನು ಕಡಿತಗೊಳ್ಳಬಹುದು.
- ಉತ್ತರ ಗೊತ್ತಿದೆ ಎಂದು ಕಡಿಮೆ ಅಂಕದ ಪ್ರಶ್ನೆಗಳಿಗೆ ಪುಟಗಟ್ಟಲೇ ಉತ್ತರ ಬೇಡ. ಇದರಿಂದ ಸಮಯ ವ್ಯರ್ಥವಾಗಿ ಬೇರೆ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಮಯವಿಲ್ಲದಂತಾಗುತ್ತದೆ.
- ಉತ್ತರ ಬರೆದ ಬಳಿಕ ರಿಜಿಸ್ಟರ್ ನಂಬರ್, ಹಾಗೂ ಪ್ರಶ್ನೆಗಳ ಸಂಖ್ಯೆಯೂ ಸರಿಯಾಗಿದೆ ಎಂದು ಖಾತರಿಪಡಿಸಿಕೊಳ್ಳಿ.
- ಪರೀಕ್ಷಾ ಕೊಠಡಿಯಿಂದ ಹೊರ ಬಂದ ಬಳಿಕ ಪರೀಕ್ಷೆಯಲ್ಲಿ ಬರೆದ ಉತ್ತರ ಬಗ್ಗೆ ಚರ್ಚೆ ಮಾಡಬೇಡಿ. ಮುಂದಿನ ಪರೀಕ್ಷೆಗೆ ತಯಾರಿ ನಡೆಸಿದರೆ ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ