ಪರೀಕ್ಷೆ ಹತ್ತಿರ ಬರುತ್ತಿದೆ ವಿದ್ಯಾರ್ಥಿಗಳೇ, ನಿಮ್ಮ ಪೂರ್ವ ತಯಾರಿ ಹೀಗಿರಲಿ, ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 09, 2024 | 6:39 PM

education Lifestyle: ಪ್ರತಿಯೊಬ್ಬ ತಂದೆ ತಾಯಿಗಳು ಮಕ್ಕಳ ಜೀವನದ ಬಗ್ಗೆ ಯೋಚಿಸುತ್ತಾರೆ. ಮಕ್ಕಳು ನಮ್ಮಂತೆ ಆಗುವುದು ಬೇಡ ಚೆನ್ನಾಗಿ ಓದಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲಿ ಎನ್ನುವುದು ಪ್ರತಿಯೊಬ್ಬ ತಂದೆ ತಾಯಿಯ ಆಸೆ. ಹೀಗಾಗಿ ಮಕ್ಕಳ ಆಗುಹೋಗುಗಳ ಜೊತೆಗೆ ವಿದ್ಯಾಭ್ಯಾಸವನ್ನು ನೀಡಲು ಕೈ ಮೀರಿ ಪ್ರಯತ್ನಿಸುತ್ತಾರೆ. ಮಕ್ಕಳ ಪರೀಕ್ಷೆಯ ಸಮಯ ಹತ್ತಿರ ಬಂತೆಂದರೆ ತಂದೆ ತಾಯಿಗಳ ಟೆನ್ಶನ್ ನೋಡಲು ಆಗುವುದಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಓದು ಓದು ಎಂದು ಹೇಳುತ್ತಾ ಪರೀಕ್ಷೆ ಮುಗಿಯುವವರೆಗೂ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಹೀಗಾಗಿ ಪರೀಕ್ಷೆಯ ಸಮಯದಲ್ಲಿನ ತಯಾರಿಗೆ ಒಂದು ರೂಪುರೇಷೆಗಳನ್ನು ಹಾಕಿಕೊಳ್ಳುವುದು ಉತ್ತಮ.

ಪರೀಕ್ಷೆ ಹತ್ತಿರ ಬರುತ್ತಿದೆ ವಿದ್ಯಾರ್ಥಿಗಳೇ, ನಿಮ್ಮ ಪೂರ್ವ ತಯಾರಿ ಹೀಗಿರಲಿ, ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on

ಪರೀಕ್ಷೆ ಎಂದರೆ ಮಕ್ಕಳಿಗಷ್ಟೇ ಅಲ್ಲ, ಹೆತ್ತವರಿಗೂ ಕೂಡ ಭಯ. ಮಕ್ಕಳು ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಗಳಿಸುತ್ತಾರೋ ಕಡಿಮೆ ಬಂದರೆ ಹೇಗೆ, ಹೀಗೆ ನಾನಾ ರೀತಿಯ ಟೆನ್ಶನ್ ನಲ್ಲಿಯೇ ಹೆತ್ತವರು ಇರುತ್ತದೆ. ಅದರಲ್ಲಿ ಮಕ್ಕಳು ಎಸ್ ಎಸ್ ಎಲ್ ಸಿಗೆ ಬಂದರೆ ಕೇಳುವುದೇ ಬೇಡ. ಮಕ್ಕಳಿಗೆ ಟ್ಯೂಷನ್, ಓದು ಎಂದು ಮಕ್ಕಳ ಹಿಂದೆಯೇ ಬಿದ್ದಿರುತ್ತಾರೆ. ಮಕ್ಕಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕಾದರೆ ಪೂರ್ವ ತಯಾರಿಗಳು ಅಗತ್ಯವಾಗಿ ಬೇಕು. ಪರೀಕ್ಷಾ ತಯಾರಿಗೆ ಸಂಬಂಧಪಟ್ಟಂತೆ ಟೈಮ್ ಟೇಬಲ್ ರಚಿಸಿದರೆ ಪರೀಕ್ಷೆಯನ್ನು ಎದುರಿಸಲು ಸಹಾಯಕವಾಗುತ್ತದೆ.

ಪರೀಕ್ಷೆಯ ತಯಾರಿಗೆ ಟೈಮ್ ಟೇಬಲ್ ಹೀಗೆ ಇರಲಿ :

ಪರೀಕ್ಷೆಯ ಪೂರ್ವ ತಯಾರಿ ವೇಳಾಪಟ್ಟಿಯಲ್ಲಿ ರಾತ್ರಿ ಬೇಗ ಮಲಗಿ ಬೆಳಗಿನ ಜಾವ 4 ಗಂಟೆಗೆ ಎದ್ದು ಓದುವುದು ಉತ್ತಮ.

* ಪರೀಕ್ಷೆಯು ಆರಂಭವಾಗಲು ಎಷ್ಟು ದಿನವಿದೆ ಎಂದು ಲೆಕ್ಕಹಾಕಿ ಎಲ್ಲಾ ವಿಷಯಗಳಿಗೆ ಹೊಂದುವಂತೆ ಟೈಮ್ ಟೇಬಲ್ ರಚಿಸಿಕೊಳ್ಳಿ.

* ದಿನದ 24ಗಂಟೆಗಳನ್ನೂ ಸರಿಯಾದ ರೀತಿಯಲ್ಲಿ ವಿಭಾಗ ಮಾಡಿಕೊಂಡು ಆಯಾಯ ವಿಷಯಗಳಿಗೂ ಸಮಯವನ್ನು ಹೊಂದಿಸಿಕೊಳ್ಳಿ.

* ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲು ಪ್ರಯತ್ನಿಸಿ.

* ದಿನನಿತ್ಯದ ಕೆಲಸ, ಮನೋರಂಜನೆಗೂ ಸಮಯವನ್ನು ಮೀಸಲಿಡುವುದು ಮುಖ್ಯ.

* ದಿನ ಓದಿದ ವಿಷಯಗಳನ್ನು ನೋಟ್ ಮಾಡಿಕೊಂಡು ಪುನಾರಾವರ್ತನೆ ಮಾಡಿಕೊಳ್ಳಿ.

* ನಿಮ್ಮ ಕೋಣೆಯ ಗೋಡೆಯಲ್ಲಿ ಫಾರ್ಮುಲಾಗಳು, ಚಿತ್ರಗಳು, ನಕ್ಷೆಗಳನ್ನು ದೊಡ್ಡದಾಗಿ ಬರೆದಿಡಿ. ಆ ಕಡೆ ಓಡಾಡುವಾಗ ಅದರತ್ತ ಒಮ್ಮೆ ಕಣ್ಣು ಹಾಯಿಸಿ.

* ನೀವು ಮಾಡಿಕೊಂಡ ಟೈಮ್ ಟೇಬಲ್ ನಲ್ಲಿ ಏನಾದರೂ ವ್ಯತ್ಯಾಸವು ಬೇಕೆಂದರೆ ಬದಲಾವಣೆಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: ಮಕ್ಕಳು ಶಾಲೆಗೆ ಹೋಗಲ್ಲ ಎಂದು ಹಠ ಮಾಡಿದ್ರೆ ಈ ಟಿಪ್ಸ್ ಫಾಲೋ ಮಾಡಿ

ವಿದ್ಯಾರ್ಥಿಗಳು ಓದುವ ವೇಳೆಯಲ್ಲಿ ಈ ಬಗ್ಗೆ ಗಮನ ಕೊಡಿ:

* ಸರಿಯಾದ ಸಮಯಕ್ಕೆ ಒಂದೇ ಸ್ಥಳದಲ್ಲಿ ಓದುವುದಕ್ಕೆ ಕುಳಿತುಕೊಳ್ಳಿ.

* ಓದಿನ ಸಮಯದಲ್ಲಿ ಮೊಬೈಲ್, ಟಿವಿ, ಕಂಪ್ಯೂಟರ್​​​ಗಳಿಂದ ದೂರವಿರಿ.

* ಓದುವ ಸಮಯದಲ್ಲಿ ಮನೆಯವರು ಕರೆದರೆ ಆದಷ್ಟು ಹೋಗುವುದನ್ನು ತಪ್ಪಿಸಿ. ಇದರಿಂದ ಗಮನ ಬೇರೆಡೆ ಹೋಗಬಹುದು.

* ನಿದ್ದೆ ಬಿಟ್ಟು ಓದುವುದು ಬೇಡ. ದೇಹಕ್ಕೆ 6 ರಿಂದ 7 ಗಂಟೆಗಳ ಕಾಲ ನಿದ್ದೆ ಅಗತ್ಯವಾಗಿ ಬೇಕಾಗುತ್ತದೆ.

* ಅಗತ್ಯ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗಿಯಾಗಿ, ಅನಗತ್ಯವಾಗಿ ಸ್ನೇಹಿತರ ಜೊತೆಗೆ ಔಟಿಂಗ್ ಬೇಡ..

* ಸ್ವಲ್ಪ ಬಿಡುವಿದ್ದಾಗ ಸಂಗೀತ ಟಿವಿ ಸೇರಿದಂತೆ ಮನೋರಂಜನೆಯತ್ತ ಗಮನ ಕೊಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ