ಮಕ್ಕಳು ಶಾಲೆಗೆ ಹೋಗಲ್ಲ ಎಂದು ಹಠ ಮಾಡಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಎಲ್ಲರೂ ಕೂಡ ತಮ್ಮ ಬಾಲ್ಯದ ದಿನಗಳಲ್ಲಿ ಒಂದಲ್ಲ ಒಂದು ತುಂಟಾಟಗಳನ್ನು ಮಾಡಿರುತ್ತಾರೆ. ಇವತ್ತಿಗೂ ಆ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಮುಖದಲ್ಲಿ ನಗುವೊಂದು ಮೂಡುತ್ತದೆ. ಬಾಲ್ಯದ ದಿನಗಳಲ್ಲಿ ನಾವು ಕೂಡ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತು ಬಿಡುತ್ತಿದ್ದೆವು. ಈಗಲೂ ಕೆಲವು ಮಕ್ಕಳಿದ್ದಾರೆ, ಶಾಲೆ ಹೆಸರು ಕೇಳಿದ ಕೂಡಲೇ ಮಾರುದ್ದ ದೂರ ಓಡಿ ಬಿಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಇವತ್ತು ಶಾಲೆಗೆ ಹೋಗಲ್ಲ ಎಂದು ಹಠ ಹಿಡಿಯುವ ಮಕ್ಕಳನ್ನು ಸಮಾಧಾನ ಪಡಿಸಿ ಶಾಲೆಗೆ ಕಳುಹಿಸುವುದು ಅಮ್ಮಂದಿರ ಪಾಲಿಗೆ ಸವಾಲಿನ ವಿಷಯ. ಮಾತಿನಲ್ಲಿ ಬಗ್ಗದಿದ್ದರೆ ಒಂದೆರಡು ಏಟು ಕೊಟ್ಟು ಶಾಲೆಗೆ ಬಿಡುವಷ್ಟರಲ್ಲಿ ಸಾಕು ಸಾಕಾಗಿ ಬಿಡುತ್ತದೆ. ಆ ಪರಿಸ್ಥಿತಿಯನ್ನು ಎಂದು ನೀವು ಅನುಭವಿಸುತ್ತಿರಬಹುದು. ನಿಮ್ಮ ಮಕ್ಕಳು ಕೂಡ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಿರಬಹುದು. ಮಕ್ಕಳನ್ನು ಪೋಷಕರು ಮಾತಿನಲ್ಲಿಯೇ ಮರುಳು ಮಾಡಿ ಶಾಲೆಗೆ ಕಳುಹಿಸುವ ಕಲೆ ಗೊತ್ತಿದ್ದರೆ ಒಳ್ಳೆಯದು.

ಮಕ್ಕಳು ಶಾಲೆಗೆ ಹೋಗಲ್ಲ ಎಂದು ಹಠ ಮಾಡಿದ್ರೆ ಈ ಟಿಪ್ಸ್ ಫಾಲೋ ಮಾಡಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 09, 2024 | 6:36 PM

ಇಂದಿನ ಮಕ್ಕಳು ತುಂಬಾನೇ ಅಪ್ಡೇಟ್ ಆಗಿದ್ದಾರೆ. ಹಾಗಂದ ಮಾತ್ರಕ್ಕೆ ಶಾಲೆಗೆ ಹೋಗುವಲ್ಲಿ ಕೆಲ ಮಕ್ಕಳು ಸ್ವಲ್ಪ ಹಿಂದೆಯೇ. ಮೊದ ಮೊದಲು ಶಾಲೆಗೆ ಹೋಗುವಾಗ ಹಠ ಹಿಡಿದು ಅಳುತ್ತಾ ಕೂರುವುದು ಸಹಜ. ನಾಲ್ಕು ವರ್ಷಗಳವರೆಗೆ ಮನೆಯಲ್ಲೇ ಇದ್ದ ಮಕ್ಕಳಿಗೆ ತಂದೆ ತಾಯಿಯರನ್ನು ಬಿಟ್ಟು ಇರುವುದು ಗೊತ್ತಿರುವುದಿಲ್ಲ. ಶಾಲೆಗೆ ಹೋದಾಗ ತಂದೆ ತಾಯಿಯನ್ನು ಬಿಟ್ಟಿರಬೇಕಾಗುತ್ತದೆ. ಶಾಲೆಯಲ್ಲಿ ಯಾರ ಗುರುತು ಪರಿಚಯವಿಲ್ಲದ ಕಾರಣ ಹಠ ಹಿಡಿಯುತ್ತಾರೆ. ಈ ಸಮಯದಲ್ಲಿ ಮಕ್ಕಳ ಮನವೊಲಿಸಿ ಶಾಲೆಗೆ ಬಿಟ್ಟು ಬರುವುದು ಕೂಡ ಮುಖ್ಯ.

* ಮಗುವಿಗಿರುವ ಭಯವನ್ನು ಕಡಿಮೆ ಮಾಡಿ : ನಾಳೆ ಶಾಲೆಗೆ ಹೋಗಬೇಕು ಎನ್ನುತ್ತಿದ್ದಂತೆ ಬಹುತೇಕ ಮಕ್ಕಳು ಅಳಲು ಶುರು ಮಾಡುತ್ತದೆ. ಹೀಗಾಗಿ ಶಾಲೆಯ ಕುರಿತು ಮಕ್ಕಳಿಗಿರುವ ಭಯವನ್ನು ದೂರ ಮಾಡುವ ಕೆಲಸವನ್ನು ತಾಯಿಯಾದವಳು ಮಾಡಬೇಕು. ಶಾಲೆಯ ಬಗ್ಗೆ ಒಳ್ಳೆಯದನ್ನು ಹೇಳಿಕೊಟ್ಟು, ನಿನ್ನ ಜೊತೆಗೆ ಶಿಕ್ಷಕರು, ಸ್ನೇಹಿತರು ಇರುತ್ತಾರೆ ಎಂದು ಹೇಳಿಕೊಡುವ ಮಕ್ಕಳ ಭಯವನ್ನು ದೂರ ಮಾಡಬಹುದು.

* ಶಾಲೆಯಲ್ಲಿ ನಿನಗಾಗಿ ಯಾರೆಲ್ಲಾ ಇದ್ದಾರೆ ಎಂದೇಳಿ: ಮಕ್ಕಳ ಬಳಿ ಶಾಲೆಯಲ್ಲಿ ಶಿಕ್ಷಕರು ಆಟ ಪಾಠಗಳನ್ನು ಹೇಳಿಕೊಡುತ್ತಾರೆ. ನಿನಗಾಗಿ ಸ್ನೇಹಿತರು ಇರುತ್ತಾರೆ, ಸ್ನೇಹಿತರ ಜೊತೆಗೆ ಆಟ ಆಡಬಹುದು ಎನ್ನುವುದನ್ನು ಹೇಳಿ ಶಾಲೆಗೆ ಹೋಗುವತ್ತ ತಯಾರಿಸಿ ನಡೆಸುವುದು.

* ಶಾಲೆಗೆ ಕಳುಹಿಸುತ್ತೇವೆ ಎಂದು ಹೆದರಿಸಬೇಡಿ : ಶಾಲೆಗೆ ಹೋಗಲು ಶುರು ಮಾಡುವುದಕ್ಕೂ ಮೊದಲೇ ಕೆಲವು ಪೋಷಕರು ಮಕ್ಕಳು ಹಠ ಮಾಡಿದ ಕೂಡಲೇ ಶಾಲೆಗೆ ಕಳುಹಿಸುತ್ತೇನೆ ಎಂದು ಹೆದರಿಸಿಬಿಡುವುದಿದೆ. ಹೆತ್ತವರ ಈ ಮಾತುಗಳಿಂದ ಮಕ್ಕಳು ಶಾಲೆಯ ಹೆಸರು ಕೇಳಿದ ಕೂಡಲೇ ಭಯ ಪಟ್ಟುಕೊಳ್ಳುತ್ತಾರೆ. ಮಕ್ಕಳು ಚಿಕ್ಕವರಿರುವಾಗಲೇ ಶಾಲೆಯ ಹೆಸರು ಹೇಳಿ ಹೆದರಿಸುವ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಲೇಬೇಡಿ.

* ಡಬ್ಬಿಯಲ್ಲಿ ಮಕ್ಕಳ ಇಷ್ಟದ ತಿಂಡಿ ತಿನಿಸುಗಳಿರಲಿ: ಮಕ್ಕಳಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ನೀಡುವುದರಿಂದ ಸ್ವಲ್ಪ ಮಟ್ಟಿಗೆ ಸಮಾಧಾನವಾಗುತ್ತಾರೆ. ಹೀಗಾಗಿ ಮಕ್ಕಳು ಶಾಲೆಗೆ ಹೋಗಲ್ಲ ಎಂದು ಹೇಳುವ ಎನ್ನುವ ಅಭ್ಯಾಸವಿದ್ದರೆ ಅವರಿಗೆ ಇಷ್ಟವಾದ ತಿಂಡಿಗಳನ್ನು ಟಿಫನ್ ಬಾಕ್ಸ್ ಗೆ ಹಾಕಿ ಕೊಡಿ, ಮಧ್ಯಾಹ್ನ ಸ್ನೇಹಿತರಿಗೆ ಕೊಟ್ಟು ತಿನ್ನು ಎಂದು ಹೇಳಿ. ಹೀಗೆ ಮಾಡುವುದರಿಂದ ಮಕ್ಕಳು ಶಾಲೆಗೆ ಹೋಗುವತ್ತ ಮನಸ್ಸು ಮಾಡುತ್ತಾರೆ.

* ಸುಳ್ಳು ಹೇಳುತ್ತಿದ್ದಾರೆಯೇ ಎಂದು ಗಮನಿಸಿ: ಮಕ್ಕಳು ಶಾಲೆಗೆ ಹೋಗುವುದನ್ನು ತಪ್ಪಿಸಲು ಹುಷಾರಿಲ್ಲ ಎಂದು ಸುಳ್ಳು ಹೇಳಬಹುದು. ಹೀಗೆಂದಾಗ ಮಕ್ಕಳ ಆರೋಗ್ಯದ ಬಗ್ಗೆ ಗಮನಿಸಿ, ಸುಳ್ಳು ಹೇಳುತ್ತಿದ್ದರೆ ಬುದ್ಧಿ ಹೇಳಿ ಶಾಲೆಗೆ ಕಳುಹಿಸುವುದು ಒಳ್ಳೆಯದು.

ಇದನ್ನೂ ಓದಿ: ಪೋಷಕರು ಮಕ್ಕಳಿಗೆ ಹೀಗೂ ಹೆಸರಿಡುತ್ತಾರಾ? ಮಕ್ಕಳ ಹೆಸರು ಕೇಳಿ ಶಾಕ್ ಆದ ಫೋಟೋಗ್ರಾಫರ್!

* ಶಿಕ್ಷಕರ ಬಳಿ ಮಕ್ಕಳ ನಡವಳಿಕೆಯ ಬಗ್ಗೆ ಕೇಳಿ ತಿಳಿದುಕೊಳ್ಳಿ : ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿಯುವ ಮಕ್ಕಳು ಶಾಲೆಯಲ್ಲಿ ಉಳಿದ ಮಕ್ಕಳ ಜೊತೆಗೆ ಹೊಂದಿಕೊಂಡು ಹೋಗುತ್ತಾರೆಯೇ ಎಂದು ಖಚಿತ ಪಡಿಸಿಕೊಳ್ಳಿ. ಆಟ ಪಾಠಗಳಲ್ಲಿ ಮಕ್ಕಳು ಹೇಗಿದ್ದಾರೆ ಎನ್ನುವುದನ್ನು ವಿಚಾರಿಸುವುದು ಸೂಕ್ತ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Fri, 9 February 24

ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ