AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Walking: ವಾಕಿಂಗ್ ಪ್ರಯೋಜನ ಸಿಗಬೇಕೆಂದರೆ ಈ 3 ತಪ್ಪುಗಳನ್ನೆಂದೂ ಮಾಡಬೇಡಿ

ತೂಕ ಇಳಿಸಬೇಕೆಂದು ಅಥವಾ ದೇಹಕ್ಕೆ ಸರಿಯಾದ ವ್ಯಾಯಾಮ ಸಿಗಬೇಕೆಂದು ಹಲವು ಜನ ದಿನವೂ ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಮಾಡುತ್ತಾರೆ. ಕೆಲವರು ಎರಡೂ ಹೊತ್ತು ವಾಕಿಂಗ್ ಮಾಡುತ್ತಾರೆ. ಆದರೂ ಅವರ ದೇಹದಲ್ಲಿ ಹೆಚ್ಚೇನೂ ಬದಲಾವಣೆ ಕಾಣುವುದಿಲ್ಲ ಎಂದು ಬೇಸರಿಸಿಕೊಳ್ಳುತ್ತಾರೆ. ಹೀಗಿದ್ದಾಗ ಅವರು ಕೆಲವು ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ಅರ್ಥ. ವಾಕಿಂಗ್ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು?

Walking: ವಾಕಿಂಗ್ ಪ್ರಯೋಜನ ಸಿಗಬೇಕೆಂದರೆ ಈ 3 ತಪ್ಪುಗಳನ್ನೆಂದೂ ಮಾಡಬೇಡಿ
ವಾಕಿಂಗ್Image Credit source: iStock
ಸುಷ್ಮಾ ಚಕ್ರೆ
|

Updated on: Feb 09, 2024 | 5:08 PM

Share

ಆರೋಗ್ಯಕರ ಜೀವನಶೈಲಿಗಾಗಿ ವಾಕಿಂಗ್ (Walking Benefits) ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ. ನಿಮ್ಮ ವ್ಯಾಯಾಮವನ್ನು (Exercise) ಪುನರಾರಂಭಿಸಲು ನೀವು ಯೋಚಿಸುತ್ತಿದ್ದರೆ ವಾಕಿಂಗ್ ಮೂಲಕ ನಿಮ್ಮ ವ್ಯಾಯಾಮ ಆರಂಭಿಸಬಹುದು. ಆರೋಗ್ಯಕರ ಹೃದಯ ಮತ್ತು ಆರೋಗ್ಯಕರ ದೇಹಕ್ಕಾಗಿ ತಜ್ಞರು ಯಾವಾಗಲೂ ದಿನಕ್ಕೆ ಕನಿಷ್ಠ 1000 ಹೆಜ್ಜೆಗಳನ್ನು ನಡೆಯಲು ಶಿಫಾರಸು ಮಾಡುತ್ತಾರೆ. ಪ್ರತಿ ಬಾರಿ ಊಟವಾದ ನಂತರವೂ ಸಣ್ಣ ವಾಕ್ ಮಾಡುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಇದು ನೀವು ದೈನಂದಿನ ಜೀವನಶೈಲಿಯಲ್ಲಿ (Lifestyle) ಅಳವಡಿಸಿಕೊಳ್ಳುವ ಉತ್ತಮ ಅಭ್ಯಾಸವಾಗಿದೆ. ಆದರೆ, ವಾಕಿಂಗ್ ನಿಯಮಗಳ ಬಗ್ಗೆಯೂ ನೀವು ಗಮನ ಹರಿಸಬೇಕು.

ವಾಕಿಂಗ್ ವೇಳೆ ನಾವು ಧರಿಸುವ ಬಟ್ಟೆಯಿಂದ ಹಿಡಿದು ನಡೆಯುವ ದಾರಿಯವರೆಗೂ ಪ್ರತಿಯೊಂದೂ ಮುಖ್ಯವಾಗುತ್ತದೆ. ರಸ್ತೆಯಲ್ಲಿ ವಾಕ್ ಮಾಡುವಾಗ ಸಾಮಾನ್ಯವಾಗಿ ಕಡೆಗಣಿಸುವ ಕೆಲವು ತಪ್ಪುಗಳು ಇಲ್ಲಿವೆ.

ಇದನ್ನೂ ಓದಿ: ಚಳಿಗಾಲದಲ್ಲಿ ವ್ಯಾಯಾಮ ಮಾಡುವಾಗ ನೀವು ಮಾಡುವ ತಪ್ಪು ಹೃದಯಾಘಾತಕ್ಕೆ ಕಾರಣವಾಗಬಹುದು!

ಸರಿಯಾದ ಶೂಗಳನ್ನು ಹಾಕದಿರುವುದು:

ಯಾವುದೇ ರೀತಿಯ ವ್ಯಾಯಾಮದಲ್ಲಿ ಪಾದರಕ್ಷೆಗಳು ಪ್ರಮುಖ ಪಾತ್ರ ವಹಿಸುತ್ತವೆ. ವಾಕಿಂಗ್ ಶೂಗಳು ನಿಮ್ಮ ಕಾಲಿಗೆ ಸೂಕ್ತವಾಗಿ ಹೊಂದುವಂತಿರಬೇಕು. ಕಾಲಿನ ಗಾಯಗಳಾದ ಪ್ಲಾಂಟರ್ ಫ್ಯಾಸಿಟಿಸ್, ಶಿನ್ ಸ್ಪ್ಲಿಟ್ಸ್ ಇತ್ಯಾದಿಗಳು ಸರಿಯಾದ ಶೂ ಧರಿಸದೇ ಇರುವಾಗ ಹೆಚ್ಚಾಗುತ್ತವೆ. ಹೊರಹೋಗುವ ಮೊದಲು ನೀವು ಸರಿಯಾದ ವಾಕಿಂಗ್ ಶೂ ಧರಿಸಿದ್ದೀರಾ ಎಂದು ಗಮನಿಸಿ.

ಸರಿಯಾದ ಭಂಗಿ:

ಜನರು ನಿರ್ಲಕ್ಷಿಸುವ ಮತ್ತೊಂದು ಅಂಶವೆಂದರೆ ನಡೆಯುವ ಭಂಗಿ. ಪಾದದ ಸ್ಥಾನ, ಬೆನ್ನು ಮತ್ತು ಭುಜದ ಭಂಗಿ ಮುಖ್ಯ. ಯಾವಾಗಲೂ ಬೆನ್ನನ್ನು ನೇರವಾಗಿ ಇರಿಸಿ ವಾಕ್ ಮಾಡಿ. ಜೋರಾಗಿ ವಾಕಿಂಗ್ ಮಾಡಬೇಡಿ. ಭುಜಗಳನ್ನು ಅಗಲವಾಗಿ ಇರಿಸಿ ನಡೆಯಿರಿ.

ಇದನ್ನೂ ಓದಿ: ವಾಕಿಂಗ್​ನಿಂದ ಆಗುವ ಪ್ರಯೋಜನೆಗಳೇನು?; ನಡಿಗೆಯನ್ನು ಹೆಚ್ಚಿಸುವುದು ಹೇಗೆ?

ವಾರ್ಮ್ ಅಪ್ ಮತ್ತು ಕೂಲ್ ಡೌನ್:

ಯಾವುದೇ ತಾಲೀಮು ಅವಧಿಯ ಮೊದಲು ಈ ಎರಡು ವಿಷಯಗಳು ಕಡ್ಡಾಯವಾಗಿರುತ್ತವೆ. ತಜ್ಞರು ಯಾವಾಗಲೂ ವಾಕಿಂಗ್ ಮೊದಲು ವಾರ್ಮ್ ಅಪ್ ಆಗಲು ಮತ್ತು ವಾಕ್ ಮಾಡಿದ ನಂತರ ದೇಹವನ್ನು ತಣ್ಣಗಾಗಿಸಲು ಶಿಫಾರಸು ಮಾಡುತ್ತಾರೆ. ವಾರ್ಮ್ ಅಪ್ ಆಗುವುದು ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ, ರಕ್ತದ ಹರಿವನ್ನು ಹೆಚ್ಚಿಸುತ್ತದೆ. ವ್ಯಾಯಾಮ ಮತ್ತು ಹಿಗ್ಗಿಸುವಿಕೆಗಾಗಿ ಸ್ನಾಯುಗಳನ್ನು ಸಿದ್ಧಪಡಿಸುತ್ತದೆ. ಮತ್ತೊಂದೆಡೆ, ಕೂಲ್ ಡೌನ್ ಆಗುವುದು ಸ್ನಾಯುವಿನ ನೋವನ್ನು ಕಡಿಮೆ ಮಾಡಲು, ನಮ್ಯತೆಯನ್ನು ಸುಧಾರಿಸಲು ಮತ್ತು ಚೇತರಿಕೆಯ ಪ್ರಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌