ಪೋಷಕರು ಮಕ್ಕಳಿಗೆ ಹೀಗೂ ಹೆಸರಿಡುತ್ತಾರಾ? ಮಕ್ಕಳ ಹೆಸರು ಕೇಳಿ ಶಾಕ್ ಆದ ಫೋಟೋಗ್ರಾಫರ್!
ಒಬ್ಬ ವ್ಯಕ್ತಿಯನ್ನು ಗುರುತಿಸುವುದು ಅವರ ಹೆಸರಿನಿಂದಲೇ, ಹೀಗಾಗಿ ಈ ಹೆಸರು ಎನ್ನುವುದು ಒಬ್ಬ ವ್ಯಕ್ತಿಗೆ ಬಹಳ ಮುಖ್ಯ. ಹೆತ್ತವರು ತಮ್ಮ ಮಕ್ಕಳ ಹೆಸರನ್ನು ಸ್ವಲ್ಪ ಭಿನ್ನವಾಗಿಯೇ ಇಡುತ್ತಾರೆ. ಒಂದು ಕಾಲದಲ್ಲಿ ಹುಟ್ಟಿದ ಮಕ್ಕಳಿಗೆ ದೇವರ ಹೆಸರನ್ನು ಇಡುತ್ತಿದ್ದರು. ಇದೀಗ ಕಾಲಕ್ಕೆ ತಕ್ಕಂತೆ ವಿನೂತನ ಹೆಸರುಗಳ ಆಯ್ಕೆಯನ್ನು ಮಾಡುತ್ತಾರೆ. ಕೆಲವು ವ್ಯಕ್ತಿಗಳ ಹೆಸರು ಕೇಳಿದರೆ ಹೀಗೂ ಹೆಸರು ಇರುತ್ತಾ ಎಂದೆನಿಸಿದರೆ ತಪ್ಪೇನಿಲ್ಲ. ಕೆಲವು ಈ ವಿಚಿತ್ರ ಹೆಸರನ್ನು ಹೊಂದಿರುವ ಬಗ್ಗೆ ಹೇಳಿದರೂ ನಂಬುವುದಕ್ಕೆ ಕಷ್ಟ. ಆದರೆ ಇದೀಗ ಪ್ರಪಂಚದಲ್ಲಿರುವ ಕೆಲವು ವಿಚಿತ್ರ ಹೆಸರುಗಳು ಎಲ್ಲರ ಗಮನ ಸೆಳೆಯುತ್ತಿವೆ.
ಎಲ್ಲರಿಗೂ ಕೂಡ ಅವರವರ ಹೆಸರುಗಳೇ ಪ್ರೀತಿ. ಯಾರದರೂ ಎಲ್ಲರ ಮುಂದೆ ತಮ್ಮ ಹೆಸರನ್ನು ಕರೆದರೆ ಅತೀವ ಆನಂದ. ಒಬ್ಬ ವ್ಯಕ್ತಿಯನ್ನು ಹೆಸರಿಲ್ಲದೇ ಕರೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಕೆಲವೊಮ್ಮೆ ತನ್ನ ಸಾಧನೆಯಿಂದ ಗುರುತಿಸಿಕೊಂಡರೂ, ಅವರ ಹೆಸರಿಗೆ ಮತ್ತಷ್ಟು ತೂಕ ಬರುತ್ತದೆ. ಆದರೆ ಇವಾಗಿನ ಕಾಲದ ಹೆಸರುಗಳಿಗೆ ತಲೆ ಬುಡ ಯಾವುದು ಇರುವುದಿಲ್ಲ. ಕೆಲವು ಹೆಸರುಗಳನ್ನು ಕೇಳಿದರಂತೂ ಅರ್ಥವೆನಿರಬಹುದು ಎಂದು ಯೋಚಿಸುವವರೇ ಹೆಚ್ಚು.
ಇನ್ನು ಕೆಲವು ಹೆಸರು ಕೇಳಿದ ಮೇಲೆ ಇದು ಯಾವ ಭಾಷೆಯಲ್ಲಿದೆ ಎನ್ನುವ ಗೊಂದಲವು ಮೂಡುತ್ತದೆ. ಮನೆಯಲ್ಲಿ ವೃದ್ಧರಂತೂ ಇದ್ದು ಬಿಟ್ಟರೆ ಉಚ್ಚಾರಣೆ ಬಾರದೆ ಮತ್ತೆನನ್ನೊ ಕರೆದು ಬಿಡುತ್ತಾರೆ. ಶಾಲೆಯಲ್ಲಿ ಮಕ್ಕಳ ಛಾಯಾಚಿತ್ರ ತೆಗೆಯುವಾಗ ಅವರನ್ನು ಭೇಟಿಯಾದ ಫೋಟೋಗ್ರಾಫ್ ರೊಬ್ಬರು ತನಗೆ ಎದುರಾದ ಕೆಲವು ವಿಚಿತ್ರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ.
ಕೆಲವು ಪೋಷಕರು ತಮ್ಮ ಮಕ್ಕಳನ್ನು ಸಾಮಾನ್ಯ ರೀತಿಯಲ್ಲಿ ಹೆಸರಿನಿಂದ ಕರೆಯಲು ಇಚ್ಛಿಸಿದರೆ, ಇನ್ನು ಕೆಲವು ಪೋಷಕರು ವಿಭಿನ್ನವಾಗಿ ಯೋಚಿಸುತ್ತಾರೆ. ತಮ್ಮ ಮಕ್ಕಳಿಗೆ ವಿಶೇಷ ಅರ್ಥವನ್ನು ನೀಡುವ ಹೆಸರನ್ನು ಇಡುವವರು ಇದ್ದಾರೆ. ಕೆಲವರು ದಂಪತಿಗಳ ಹೆಸರಿನ ಅಕ್ಷರಗಳಲ್ಲಿ ಕೆಲವು ಅಕ್ಷರಗಳನ್ನು ಜೋಡಿಸಿ ಮಕ್ಕಳಿಗೆ ಹೆಸರಿಡುತ್ತಾರೆ. ಛಾಯಾಗ್ರಾಹರು ಶಾಲೆಗೆ ಹೋದ ಸಂದರ್ಭದಲ್ಲಿ ಮಕ್ಕಳ ಜೊತೆಗೆ ಮಾತನಾಡಿಸಿದಾಗ ಅವರ ಹೆಸರನ್ನು ಕೇಳಿದ್ದಾರೆ.
ಇದನ್ನೂ ಓದಿ: ಖಾದ್ಯಗಳ ಪರಿಮಳ ಹೆಚ್ಚಿಸುವ ಓಮದ ಕಾಳಿನಲ್ಲಿ ಅಡಗಿದೆ ಔಷಧೀಯ ಗುಣ
ಶಾಲೆಯ ಮಕ್ಕಳನ್ನು ಮಾತನಾಡಿಸಿದ ವೇಳೆಯಲ್ಲಿ ಅವರ ಹೆಸರುಗಳನ್ನು ಕೇಳಿದ್ದಾರೆ. ಮಕ್ಕಳು ತಮ್ಮ ತಮ್ಮ ಹೆಸರುಗಳನ್ನು ಸಾಲಾಗಿ ಎಚ್, ಕೈಲಾ, ಕಾನಂದ, ಜೆನೀವಾ, ಲಿಲಿಯಾನಿ, ಕ್ರಿಯಾರಿಯಾ, ಏವಿಯನ್, ಅದ್ಭುತ, ನವೇಹ್, ಅಲೆಕ್ಸಾ, ಅನಾಕಿನ್, ರೇಜಾನ್, ಡ್ರೀಮ್, ಆಕ್ಸೆಲ್, ಜಾಸ್ತಿಸ್, ಮೌಡ್ಲೈನ್, ಪೈಲಟ್, ಸೈಮನ್, ಟೀ, ಲೌಡನ್, ಪ್ಯಾರಾ’ಡಿಸ್, ಪೆಶಾಂಟ್ಜ್, ಅಲಿವಿಯಾ, ಸಿನ್ಸಿರೆ, ಯೆಟರ್ನಿಟಿ, ಗಿಫ್ಟ್, ಕೈಜಾನ್, ಪಾಮರ್, ವಿಶೆಲ್ಸಿ, ಎಲಾರಾ, ವಿಕ್ಟೋರಿಯಾ, ಹೆಲೈನಾಹ್, ಟ್ಯಾಲೋನ್, ಕ್ವಿನ್, ಆಲ್ಫಾಬ್ರೈಟ್, ಝೆಡ್ , ಡ್ರಿಫ್ಟ್, ಡೇಸಿ, ಬಿರಿಯಾನಿ, ಮೈಯಾ, ಜಾಕಿಲಿನ್, ಅಜೇವಿಯರ್, ಐಶಯಾಃ ಎಂದು ಹೇಳುತ್ತಾ ಹೋಗಿದ್ದಾರೆ. ಮಕ್ಕಳ ವಿಚಿತ್ರ ಹೆಸರುಗಳನ್ನು ಕೇಳಿ ಫೋಟೋಗ್ರಾಫರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ