‘ಹೆಣ್ಮಕ್ಕಳು ಬಂದು ರಾವುಲ್ಲಾ ಅಲ್ಲಾಡ್ಸಪ್ಪ ಅಂತಾರೆ’: ಬೆಳ್ಳುಳ್ಳಿ ಕಬಾಬ್​ ಚಂದ್ರು ಬೇಸರದ ಮಾತು

‘ರಾವುಲ್ಲ ಈಗ ಕತ್ತಿಗೆ ಒಂದು ಚೈನ್​ ಹಾಕಿಕೊಂಡು ಶರ್ಟ್​ನ 2 ಬಟನ್​ ಬಿಚ್ಚಿಕೊಂಡಿದ್ದಾನೆ. ನಾಳೆ ನೋಡಿದವರಿಗೆ ಅವನು ಎಲ್ಲಾದರೂ ಕೆಟ್ಟು ಹೋಗುತ್ತಾನಾ ಅಂತ ಎನಿಸುತ್ತದೆ. ಸಾವಿರಾರು ಕಿಲೋಮೀಟರ್​ಯಿಂದ ಅವನು ಇಲ್ಲಿದೆ ಬಂದು ಎರಡೂವರೆ ವರ್ಷ ಆಯಿತು. ಅವನಿಗೆ ನಾನು ಒಂದು ಒಳ್ಳೆಯ ದಾರಿ ತೋರಿಸಬೇಕು. ಅಭಿಮಾನ ಇರಲಿ. ಆದರೆ..’ ಎಂದು ಅಸಲಿ ವಿಚಾರವನ್ನು ಚಂದ್ರು ಅವರು ತೆರೆದಿಟ್ಟಿದ್ದಾರೆ.

‘ಹೆಣ್ಮಕ್ಕಳು ಬಂದು ರಾವುಲ್ಲಾ ಅಲ್ಲಾಡ್ಸಪ್ಪ ಅಂತಾರೆ’: ಬೆಳ್ಳುಳ್ಳಿ ಕಬಾಬ್​ ಚಂದ್ರು ಬೇಸರದ ಮಾತು
ಬೆಳ್ಳುಳ್ಳಿ ಕಬಾಬ್​ ಚಂದ್ರು
Follow us
ಮದನ್​ ಕುಮಾರ್​
|

Updated on: Feb 11, 2024 | 8:46 AM

ಬೆಳ್ಳುಳ್ಳಿ ಕಬಾಬ್ (Bellulli Kabab)​ ವಿಡಿಯೋ ಮೂಲಕ ಚಂದ್ರು (Bellulli Kabab Chandru) ಮತ್ತು ಅವರ ಜೊತೆ ಇರುವ ಹುಡುಗ ರಾವುಲ್ಲಾ ಫೇಮಸ್​ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇವರದ್ದೇ ಟ್ರೆಂಡ್​. ಈ ಬೆಳವಣಿಗೆಯಿಂದ ಚಂದ್ರು ಮತ್ತು ರಾವುಲ್ಲಾ ಫೇಮಸ್​ ಆಗಿದ್ದಾರೆ ಎಂಬುದು ನಿಜವಾದರೂ ಅದರಿಂದ ಒಂದಷ್ಟು ತೊಂದರೆ ಆಗಿದೆ ಎಂಬುದು ಕೂಡ ಇಷ್ಟೇ ನಿಜ. ಆ ಬಗ್ಗೆ ಚಂದ್ರು ಅವರು ಮಾತನಾಡಿದ್ದಾರೆ. ‘ಈಗ ನಡೆಯುತ್ತಿರುವುದು ನೋಡಿದರೆ ಆ ಹುಡುಗನಿಗೆ ಎಲ್ಲಿ ಹೆಡ್​ ವೆಯ್ಟ್​ ಬಂದುಬಿಡುತ್ತೋ, ಅವನ ಲೈಫ್​ ಎಲ್ಲಿ ಹಾಳಾಗುತ್ತೋ ಅನಿಸುತ್ತಿದೆ’ ಎಂದು ಚಂದ್ರು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಆ ರೀತಿ ಹೇಳಿದ್ದಕ್ಕೂ ಕಾರಣ ಇದೆ.

‘ಒಳ್ಳೆಯ ಸಮಯದಲ್ಲಿ ಸಹಾಯಕ್ಕೆ ಬಂದ ಹುಡುಗ ಎಂಬ ಕಾರಣಕ್ಕೆ ಪ್ರತಿ ಬಾರಿ ನಾನು ಅವನ ಹೆಸರು ಹೇಳಿದ್ದೀನಿ. ಅವನು ಇನ್ನೂ ಚೆನ್ನಾಗಿ ಬಾಳಿ, ಬದುಕಬೇಕು. ನನ್ನ ಥರ ಅವನಿಗೂ ಒಂದು ಹೋಟೆಲ್​ ಮಾಡಿಕೊಡುತ್ತೇನೆ. ಪ್ರತಿ ಕೆಲಸದವರನ್ನು ನಾನು ಕುಟುಂಬದವರ ರೀತಿ ನೋಡಿಕೊಂಡಿದ್ದೇನೆ. ಈಗ ಎಲ್ಲಿ ನೋಡಿದರೂ ರಾವುಲ್ಲ ಅಂತಾರೆ. ಹುಡುಗಿಯರು ಬಂದು ರಾವುಲ್ಲ ಅಲ್ಲಾಡ್ಸಪ್ಪ ಅಂತಾರೆ. ಇವೆಲ್ಲ ಹೆಣ್ಮಕ್ಕಳು ಮಾತಾಡುವ ಮಾತಲ್ಲ. ಅದೆಲ್ಲ ನೋಡಿದರೆ ನಮಗೆ ಬೇಜಾರಾಗುತ್ತದೆ’ ಎಂದು ಚಂದ್ರು ಹೇಳಿದ್ದಾರೆ.

‘ಈಗ ಅವನು ಕತ್ತಿಗೆ ಒಂದು ಚೈನ್​ ಹಾಕಿಕೊಂಡು ಎರಡು ಬಟನ್​ ಬಿಚ್ಚಿಕೊಂಡಿದ್ದಾನೆ. ನೋಡಿದವರಿಗೆ ನಾಳೆ ಇವನು ಎಲ್ಲಾದರೂ ಕೆಟ್ಟು ಹೋಗುತ್ತಾನಾ ಅಂತ ಅನಿಸುತ್ತದೆ. ಸಾವಿರಾರು ಕಿಲೋಮೀಟರ್​ಯಿಂದ ಬಂದ. ಎರಡೂವರೆ ವರ್ಷ ಆಯಿತು. ನಾನು ಅವನಿಗೆ ಒಂದು ಒಳ್ಳೆಯ ದಾರಿ ತೋರಿಸಬೇಕು. ಅಭಿಮಾನ ಇರಲಿ. ಆದರೆ ಕೆಲಸ ಮಾಡುವಾಗ ಜನ ಬರ್ತಾರೆ, ಸೆಲ್ಫಿ ಕೇಳುತ್ತಾರೆ. ಕಸ್ಪಮರ್​ ಜಾಸ್ತಿ ಇದ್ದಾಗಲೂ ಸೆಲ್ಫಿ ಕೇಳಿದರೆ ಕೊಡೋಕೆ ಆಗುತ್ತಾ’ ಎಂದು ಚಂದ್ರು ಪ್ರಶ್ನಿಸಿದ್ದಾರೆ.

ಬಿಗ್​ಬಾಸ್​ಗೆ ಹೋಗ್ತಾರಾ ‘ಬೆಳ್ಳುಳ್ಳಿ ಕಬಾಬ್’ ಚಂದ್ರು

‘ನಮಗೂ ಟೈಮ್​ ಇರಬೇಕು. ಬಂದವರನ್ನು ಉಪಚರಿಸಬೇಕು. ತುಂಬ ತೊಂದರೆ ಆಗಿದೆ. ನಿಮ್ಮ ಖುಷಿಗೆ ನಾವು ಧಕ್ಕೆ ಮಾಡುವುದಿಲ್ಲ. ಅದು ಎಷ್ಟಕ್ಕೆ ಸೀಮಿತ ಆಗಿರುತ್ತದೋ ಅಷ್ಟಕ್ಕೆ ಉಪಯೋಗಿಸಿಕೊಂಡರೆ ಸಿಹಿಯಾಗಿ ಇರುತ್ತದೆ. ಇಲ್ಲದಿದ್ದರೆ, ಹೋಗ್ತಾ ಹೋಗ್ತಾ ಕಹಿ ಆಗುತ್ತದೆ, ಅವನ ಜೀವನ ಹಾಳಾಗುತ್ತದೆ’ ಎಂದು ಚಂದ್ರು ಹೇಳಿದ್ದಾರೆ.

‘ನಾವು ಬೆಳ್ಳುಳ್ಳಿ ಕಬಾಬ್​ ಅಂತ ಮಾಡಿದ್ದು ತಮಾಷೆಗೆ. ಅದು ಇವತ್ತು ನನ್ನನ್ನು ಬಾಳಿ ಬದುಕಿಸುತ್ತಿದೆ. ಇದಕ್ಕೆಲ್ಲ ನಾವು ಚಿರಋಣಿ. ರಸ್ತೆಯಲ್ಲಿ ಹೋಗುತ್ತಿದ್ದರೆ ರಾವುಲ್ಲಾ ರುಬ್ಬಿಕೊಡಪ್ಪ ಅಂತಾರೆ. ಟೇಬಲ್​ನಲ್ಲಿ ಬಂದು ಕುಳಿತುಕೊಂಡವರು ಮೊದಲು ಬೆಳುಳ್ಳಿ ಕಬಾಬ್​ ಕೇಳ್ತಾರೆ. ತುಂಬ ಜನ ಬರುತ್ತಿದ್ದಾರೆ. ಹಳೇ ಕಸ್ಟಮರ್​ಗಳಿಗೆ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾರಿಗೂ ಬೇಸರ ಆಗಬಾರದು. ಮಧ್ಯಾಹ್ನ ಒಂದು ಗಂಟೆ ಒಳಗೆ ಬನ್ನಿ ಅಥವಾ ಸಂಜೆ 6.30ರಿಂದ ರಾತ್ರಿ 11 ಗಂಟೆವರೆಗೆ ಖುಷಿಯಾಗಿ ತಿನ್ನಿ’ ಎಂದು ಚಂದ್ರು ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ