ಬೆಂಗಳೂರು: ನೀಟ್( NEET) ಪಿಜಿ ಸೀಟು ಹಂಚಿಕೆ ಆಪ್ಶನ್ ಎಂಟ್ರಿಗೆ ತಾಂತ್ರಿಕ ದೋಷ ಎದುರಾಗಿದೆ. ಹೀಗಿದ್ದರೂ ಕಾಲಾವಕಾಶ ವಿಸ್ತರಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examinations Authority) ವಿರುದ್ಧ ಸದ್ಯ ವಿದ್ಯಾರ್ಥಿಗಳು(Students) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಸ್, ಮೆಡಿಕಲ್ ಕಾಲೇಜು ಆಯ್ಕೆಗೆ ಕೆಇಎ ಕೇವಲ ಒಂದು ದಿನ ಮಾತ್ರ ಕಾಲಾವಕಾಶ ನೀಡಿದೆ. 24 ಗಂಟೆ ಅವಕಾಶ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಡೆಗೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅದರಂತೆ ಇಂದು ಬೆಳಿಗ್ಗೆ 11 ರಿಂದ ನಾಳೆ (ಜನವರಿ 25) ಬೆಳಗ್ಗೆ 11 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ.
ಕಾಲಾವಕಾಶ ವಿಸ್ತರಿಸುವಂತೆ ಕೆಇಎಗೆ ವಿದ್ಯಾರ್ಥಿಗಳ ಮನವಿ
ಪುನಃ ನಾಳೆ ಸಂಜೆಯಿಂದ ಅಣುಕು ಸೀಟು ಹಂಚಿಕೆಯ ಫಲಿತಾಂಶ ಬರಲಿದೆ. ಇದರಿಂದಾಗಿ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆಯ ಬದಲಾವಣೆಗೂ ಒಂದೇ ದಿನ ಅವಕಾಶ ಇರಲಿದೆ. ಜನವರಿ 27 ರಂದು ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ಪ್ರತಿ ವರ್ಷ ಕನಿಷ್ಠ 3 ದಿನಗಳ ಅಂತರ ಇರುತ್ತಿತ್ತು. ಈ ಬಾರಿ ಸರ್ವರ್ ಸಮಸ್ಯೆಯಿದ್ದರೂ ಕಾಲಾವಕಾಶ ನೀಡುತ್ತಿಲ್ಲ. ಹೀಗಾಗಿ ಅವಧಿ ವಿಸ್ತರಣೆ ಮಾಡುವಂತೆ ವೈದ್ಯಕೀಯ ವಿದ್ಯಾರ್ಥಿಗಳು ಪಟ್ಟು ಹಿಡಿದ್ದಾರೆ. ಆದರೆ ದಿನಾಂಕ ವಿಸ್ತರಣೆ ಸಾಧ್ಯವೇ ಇಲ್ಲ ಎಂದು ಕೆಇಎ ತಿಳಿಸಿದೆ. ಒಟ್ಟಾರೆ ಅತಂತ್ರ ಸ್ಥಿತಿಗೆ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ತಲುಪಿದೆ.
ಪಿಜಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪಿಜಿಸಿಇಟಿ ಫಲಿತಾಂಶ ಹಾಗೂ ಸೀಟು ಹಂಚಿಕೆಯನ್ನು ಪಿಜಿಸಿಇಟಿ ರ್ಯಾಂಕ್ ಆಧರಿಸಿ ನೀಡಲಾಗಿದೆ. ಹಾಗೂ ಆನ್ಲೈನ್ Karnataka PGCET round 1 counselling application ನಲ್ಲಿ ನೀಡಿರುವ ಆಯ್ಕೆಯ ಅನ್ವಯಿಸಿಯೂ ಸೀಟು ಹಂಚಿಕೆ ಆಗಿದೆ. ಮತ್ತು ನಿಗದಿತ ಶಿಕ್ಷಣ ಸಂಸ್ತೆಗಳ ಸೀಟು ಲಭ್ಯತೆ ಹಾಗೂ ಕೋರ್ಸ್ ಅವಕಾಶ ಆಧರಿಸಿ ಸೀಟ್ ಲಭಿಸಲಿದೆ.
ಇದನ್ನೂ ಓದಿ:
Karnataka PGCET Counseling 2021: ಪಿಜಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 10:09 pm, Mon, 24 January 22