Karnataka PGCET Counseling 2021: ಪಿಜಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ
PGCET: ಅರ್ಹ ವಿದ್ಯಾರ್ಥಿಗಳ ಆಪ್ಶನ್ ಎಂಟ್ರಿ ಜನವರಿ 21 ರಿಂದ ಜನವರಿ 23 ರ ವರೆಗೆ ನಡೆಯಲಿದೆ. ಆಪ್ಶನ್ ಎಂಟ್ರಿಯ ಲಿಂಕ್ ಜನವರಿ 21 ರಂದು ಬೆಳಗ್ಗೆ 11 ಗಂಟೆಗೆ ತೆರೆದುಕೊಳ್ಳಲಿದೆ. ಹಾಗೂ ಜನವರಿ 23 ರಂದು ಬೆಳಗ್ಗೆ 11 ಗಂಟೆಗೆ ಮುಚ್ಚಲಿದೆ.
ಕರ್ನಾಟಕ ಪರೀಕ್ಷಾ ಮಂಡಳಿ (Karnataka Examinations Authority, KEA) ಕರ್ನಾಟಕ ಪಿಜಿಸಿಇಟಿ ಕೌನ್ಸೆಲಿಂಗ್ 2021 ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ (Karnataka PGCET Counseling 2021 Round 1) ಬಿಡುಗಡೆಗೊಳಿಸಿದೆ. ರಿಜಿಸ್ಟರ್ ಮಾಡಿಕೊಂಡಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ಸೈಟ್ cetonline.karnataka.gov.in ನಲ್ಲಿ ಫಲಿತಾಂಶ ನೋಡಬಹುದಾಗಿದೆ.
ಅರ್ಹ ವಿದ್ಯಾರ್ಥಿಗಳ ಆಪ್ಶನ್ ಎಂಟ್ರಿ ಜನವರಿ 21 ರಿಂದ ಜನವರಿ 23 ರ ವರೆಗೆ ನಡೆಯಲಿದೆ. ಆಪ್ಶನ್ ಎಂಟ್ರಿಯ ಲಿಂಕ್ ಜನವರಿ 21 ರಂದು ಬೆಳಗ್ಗೆ 11 ಗಂಟೆಗೆ ತೆರೆದುಕೊಳ್ಳಲಿದೆ. ಹಾಗೂ ಜನವರಿ 23 ರಂದು ಬೆಳಗ್ಗೆ 11 ಗಂಟೆಗೆ ಮುಚ್ಚಲಿದೆ. ಅಭ್ಯರ್ಥಿಗಳ ಫಲಿತಾಂಶ ಪರಿಶೀಲಿಸಲು ಈ ಕೆಳಗಿನ ಸೂಚನೆಗಳನ್ನು ಪಾಲಿಸಬೇಕು:
Karnataka PGCET Counseling 2021: ಮೊದಲ ಸುತ್ತಿನ ಸೀಟ್ ಅಲಾಟ್ಮೆಂಟ್ ಫಲಿತಾಂಶ ನೋಡುವುದು ಹೇಗೆ?
- ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ – kea.kar.nic.in
- ಅಲ್ಲಿ ಲಭ್ಯವಿರುವ Karnataka PGCET Counseling 2021 Round 1 allotment result ಲಿಂಕ್ ಮೇಲೆ ಕ್ಲಿಕ್ ಮಾಡಿ
- ಲಾಗಿನ್ ವಿವರಗಳನ್ನು ಸಲ್ಲಿಸಿ ಸಬ್ಮಿಟ್ ಆಯ್ಕೆ ಕ್ಲಿಕ್ ಮಾಡಿ
- ನಿಮ್ಮ ಫಲಿತಾಂಶವು ಪ್ರದರ್ಶಿತಗೊಳ್ಳುತ್ತದೆ
- ಫಲಿತಾಂಶ ಪರಿಶೀಲಿಸಿ ಆ ಪುಟವನ್ನು ಡೌನ್ಲೋಡ್ ಮಾಡಿಕೊಳ್ಳಿ
- ಮುಂದಿನ ಹಂತಗಳಿಗಾಗಿ ಫಲಿತಾಂಶದ ಹಾರ್ಡ್ ಕಾಪಿ ಇಟ್ಟುಕೊಳ್ಳಿರಿ
ಪಿಜಿಸಿಇಟಿ ಫಲಿತಾಂಶ ಹಾಗೂ ಸೀಟು ಹಂಚಿಕೆಯನ್ನು ಪಿಜಿಸಿಇಟಿ ರ್ಯಾಂಕ್ ಆಧರಿಸಿ ನೀಡಲಾಗಿದೆ. ಹಾಗೂ ಆನ್ಲೈನ್ Karnataka PGCET round 1 counselling application ನಲ್ಲಿ ನೀಡಿರುವ ಆಯ್ಕೆಯ ಅನ್ವಯಿಸಿಯೂ ಸೀಟು ಹಂಚಿಕೆ ಆಗಿದೆ. ಮತ್ತು ನಿಗದಿತ ಶಿಕ್ಷಣ ಸಂಸ್ತೆಗಳ ಸೀಟು ಲಭ್ಯತೆ ಹಾಗೂ ಕೋರ್ಸ್ ಅವಕಾಶ ಆಧರಿಸಿ ಸೀಟ್ ಲಭಿಸಲಿದೆ.
ಇದನ್ನೂ ಓದಿ: ನೀಟ್ ಪಿಜಿ ಮತ್ತು ಯುಜಿ ಕೌನ್ಸೆಲಿಂಗ್ ಅಧಿಸೂಚನೆಗೆ ಅನುಗುಣವಾಗಿ ನಡೆಯಲಿದೆ: ಸುಪ್ರೀಂಕೋರ್ಟ್
ಇದನ್ನೂ ಓದಿ: ಕೌನ್ಸೆಲಿಂಗ್ ದಾಖಲೆ ಪರಿಶೀಲನೆ ದಿನಾಂಕ ದಿಢೀರ್ ಬದಲಾವಣೆ; ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಪ್ರತಿಭಟನೆ
Published On - 10:51 am, Thu, 20 January 22