ಪ್ರಸಕ್ತ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ; ಸಚಿವ ಡಾ.ಅಶ್ವತ್ಥ್ ನಾರಾಯಣ ಸ್ಪಷ್ಟನೆ

| Updated By: sandhya thejappa

Updated on: Sep 29, 2021 | 12:29 PM

ಹೆಚ್ಚುವರಿ ಶುಲ್ಕ ಪಡೆಯದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನಿಗಾ ವಹಿಸಬೇಕು ಅಂತ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪಗೆ ಡಾ.ಅಶ್ವತ್ಥ್ ನಾರಾಯಣ ಜವಾಬ್ದಾರಿ ನೀಡಿದ್ದಾರೆ.

ಪ್ರಸಕ್ತ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ; ಸಚಿವ ಡಾ.ಅಶ್ವತ್ಥ್ ನಾರಾಯಣ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ (Engineering) ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ. ಕೊರೊನಾ ಹಿನ್ನೆಲೆ ಪ್ರಸಕ್ತ ವರ್ಷ ಶುಲ್ಕ ಹೆಚ್ಚಳ ಮಾಡಲ್ಲ ಅಂತ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಸ್ಪಷ್ಟನೆ ನೀಡಿದ್ದಾರೆ. 20,000ಕ್ಕಿಂತ ಹೆಚ್ಚು ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ. ಇತರೆ ಶುಲ್ಕಗಳ ಮಿತಿ 20 ಸಾವಿರ ರೂಪಾಯಿಗೆ ನಿಗದಿ ಮಾಡಲಾಗಿದೆ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಹೆಚ್ಚುವರಿ ಶುಲ್ಕ ಪಡೆಯದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನಿಗಾ ವಹಿಸಬೇಕು ಅಂತ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪಗೆ ಡಾ.ಅಶ್ವತ್ಥ್ ನಾರಾಯಣ ಜವಾಬ್ದಾರಿ ನೀಡಿದ್ದಾರೆ.

ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶೇ.15ರಿಂದ 20ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ನೀಡಿದ್ದವು. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದೇನೆ. ಖಾಸಗಿ ಕಾಲೇಜುಗಳು ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿವೆ. ಸ್ಕಿಲ್ ಟ್ರೈನಿಂಗ್ ಫೀಸ್ ತೆಗೆದುಕೊಳ್ಳುವುದು ಕಡ್ಡಾಯ ಅಲ್ಲ. ವಿಟಿಯು ಭೇಟಿ ನೀಡಿ ಒಪ್ಪಿಗೆ ಕೊಟ್ಟ ಬಳಿಕ ಶುಲ್ಕ ಪಡೆಯಬೇಕು. ವಿಟಿಯು ಒಪ್ಪಿಗೆ ಇಲ್ಲದೆ ಸ್ಕಿಲ್‌ ಫೀ ಸಂಗ್ರಹಿಸುವಂತಿಲ್ಲ ಅಂತ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಶುಲ್ಕ ಹೆಚ್ಚಳ ಸಂಬಂಧ ಸಮಿತಿಯನ್ನು ರಚನೆ ಮಾಡಲಾಗಿದೆ. ಪ್ರೊ.ಕರಿಸಿದ್ದಪ್ಪ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದ ಉನ್ನತ ಶಿಕ್ಷಣ ಸಚಿವರು, ಈ ವರ್ಷ ಯಾವ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ ಅಂತ ಹೇಳಿದ್ದಾರೆ.

ಬೋಧನಾ ಶುಲ್ಕ ಹೊರತಾಗಿ ಇತರೆ ಶುಲ್ಕಕ್ಕೆ‌ ಮಿತಿ ಇರಲಿಲ್ಲ. ಮನಸ್ಸಿಗೆ ಬಂದ ಹಾಗೆ ಇತರೆ ಶುಲ್ಕ ಹಾಕಲಾಗುತ್ತಿತ್ತು. ಆದರೆ ಇನ್ನು ಮುಂದೆ 20ಸಾವಿರ ರೂ. ಇತರೆ ಶುಲ್ಕ ಮೀರುವಂತಿಲ್ಲ. ವಿ‌ವಿ ಶುಲ್ಕದ ಹೆಸರಿನಲ್ಲಿ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಪರೀಕ್ಷಾ ಪ್ರಾಧಿಕಾರದಿಂದಲೇ ಶುಲ್ಕ‌ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದರು.

ನಾಲ್ಕು ಕಾಲೇಜುಗಳಲ್ಲಿ ಕನ್ನಡದಲ್ಲಿ ವಿದ್ಯಾಭ್ಯಾಸ ಆರಂಭ
ರಾಜ್ಯದ ನಾಲ್ಕು ಕಾಲೇಜುಗಳಲ್ಲಿ ಕನ್ನಡದಲ್ಲೇ ಇಂಜಿನಿಯರಿಂಗ್ ವಿದ್ಯಾಭ್ಯಾಸ ಆರಂಭ ಮಾಡಲಾಗುವುದು. ಭಾಲ್ಕಿಯ ಭೀಮಣ್ಣ ಖಂಡ್ರೆ ಕಾಲೇಜು, ವಿಜಯಪುರದ ಬಿಎಲ್‌ಡಿಇ ಕಾಲೇಜು, ಎಸ್‌ಜೆಆರ್ ಚಿಕ್ಕಬಳ್ಳಾಪುರ ಹಾಗೂ ಮೈಸೂರಿನ‌ ಮಹಾರಾಜ ಕಾಲೇಜಿನಲ್ಲಿ ಈ ವರ್ಷದಿಂದ ಆರಂಭವಾಗುತ್ತದೆ ಕನ್ನಡದಲ್ಲೇ ಪಠ್ಯ ವಸ್ತು ಈಗಾಗಲೇ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲೇ ಇಂಜಿನಿಯರಿಂಗ್ ವಿದ್ಯಾಭ್ಯಾಸ ಸಂಖ್ಯೆ‌ ಹೆಚ್ಚಾಗಲಿದೆ ಎಂದು ಸುದ್ದಿಗೋಷ್ಠಿ ನಡೆಸಿದೆ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.

ಇದನ್ನೂ ಓದಿ

ಒನ್​​ಪ್ಲಸ್​ ನಾರ್ಡ್ 2 5ಜಿ ಫೋನ್ ಸ್ಟೋಟ ಪ್ರಕರಣ; ಫೋನ್‌ ನಂತರ ಈ ಬಾರಿ ಚಾರ್ಜರ್ ಬ್ಲಾಸ್ಟ್​; ಕಂಪನಿ ಪ್ರತಿಕ್ರಿಯೆ ಏನಿತ್ತು ಗೊತ್ತಾ?

ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ನೋಟಿಸ್

There is no fee increase for private engineering colleges in the current year; Minister Dr Ashwath Narayana clarified

Published On - 11:42 am, Wed, 29 September 21