ಕೆಸಿಇಟಿ (KCET) ಯಲ್ಲಿ ಉನ್ನತ ಅಂಕಗಳಿಸಿದ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕೆಂದು ಉನ್ನತ ಶಿಕ್ಷಣ ಇಲಾಖೆ 2023 ರ ಬಜೆಟ್‘ನಲ್ಲಿ ಮನವಿ ಮಾಡಿದೆ. ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮ (Kannada Medium) ಶಾಲೆಗಳಲ್ಲಿ ಕಲಿತು ಕೆಸಿಇಟಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಅಂಕ ಪಡೆದ ವಿದ್ಯಾರ್ಥಿಗಳು ಕಿಂಚಿತ್ತೂ ಹಣ ನೀಡದೆ ತಮ್ಮ ಉನ್ನತ ಶಿಕ್ಷಣ ಮುಂದುವರಿಸಲು ಇದೊಂದು ಸುವರ್ಣಾವಕಾಶವಾಗಲಿದೆ.
ಕೆಸಿಇಟಿ ರಾಂಕಿಂಗ್ ಮುಖ್ಯವಾಗಿ ವೃತ್ತಿವರ ಕೋರ್ಸ್ ಗಳಿಗೆ ಪ್ರವೇಶ ಮಾಡೆಯಲು ಸಹಕಾರಿ ಆಗುತ್ತದೆ. ಅಂದಾಜಿನ ಪ್ರಕಾರ, ಈ ಯೋಜನೆಯಿಂದ ಕನಿಷ್ಠ 100 ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಾರೆ. ಇದು ಎಂಜಿನಿಯರಿಂಗ್, ಕೃಷಿ, ವೈದ್ಯಕೀಯ ಇತ್ಯಾದಿ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸ್‌ಗಳಲ್ಲಿ 10 ಟಾಪರ್‌ಗಳಿಗೆ ಅನ್ವಯಿಸುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳನ್ನು ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಪ್ರೋತ್ಸಾಹಿಸುವುದು.
“ಇದು ಗ್ರಾಮೀಣ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಹಾಯ ಮಾಡುತ್ತದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಫೆ. 15ರಿಂದ ಸಿಬಿಎಸ್ಇ ಪರೀಕ್ಷೆಗಳು; ಅಡ್ಮಿಶನ್ ಕಾರ್ಡ್ ಬಿಡುಗಡೆ
ಉನ್ನತ ಶಿಕ್ಷಣ ಇಲಾಖೆಯು ಇಂತಹ ಯೋಜನೆಗಳ ಜೊತೆಗೆ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಪ್ರೇರೇಪಿಸುವ ಯೋಜನೆಗಳನ್ನು 2023 ಬಜೆಟ್‘ನಲ್ಲಿ ಪ್ರಸ್ತಾಪಿಸಿದೆ. ರಾಜ್ಯದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾದ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಯ ತರಬೇತಿ ನೀಡುವ ಯೋಜನೆಯನ್ನೂ ಹಮ್ಮಿಕೊಂಡಿದೆ. ಈ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಸಾರಿಗೆ ಭತ್ಯೆಯ ರೂಪದಲ್ಲಿ ಹಣವನ್ನು ನೀಡಿ ಪ್ರೋತ್ಸಾಹವ ಬಗ್ಗೆನೂ ಚಿಂತನೆ ನಡೆದಿದೆ.
ಇವೆಲ್ಲದರ ಜೊತೆ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು, ಬಿಸಿನೆಸ್ ಇಂಗ್ಲಿಷ್ ನಲ್ಲಿ ತರಬೇತಿ ನೀಡಲು, ಮಹಿಳೆಯರಿಗಾಗಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಬಲಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಬಹುಪಾಲು ಅನುದಾನ ವೇತನಕ್ಕೆ ಮೀಸಲಾಗಿರುವುದರಿಂದ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಇಲಾಖೆ ಮನವಿ ಮಾಡಿದೆ. 2022-23ರಲ್ಲಿ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ 5,746 ಕೋಟಿ ರೂ.ಗಳ ಬಜೆಟ್‌ನಲ್ಲಿ, 2,748 ಕೋಟಿ ರೂ.ಗಳನ್ನು ಕಾಲೇಜು ವಿಭಾಗದ ವೇತನ ಮತ್ತು ಆಡಳಿತಾತ್ಮಕ ವೆಚ್ಚಗಳಿಗಾಗಿ ಖರ್ಚು ಮಾಡಲಾಗಿದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ