ಶೈಕ್ಷಣಿಕ ವರ್ಷ (Academic Year) ಪ್ರಾರಂಭವಾಗುವ ಮೊದಲು ಪ್ರತಿ ವರ್ಷದಂತೆ, ವಿಶ್ವವಿದ್ಯಾಲಯ ಅನುದಾನ ಆಯೋಗ (UGC) “ನಕಲಿ” ಎಂದು ಹೆಸರಿಸಲಾದ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ, ಯಾವುದೇ ಪದವಿ ನೀಡಲು ಅಧಿಕಾರ ಹೊಂದಿರದ 20 ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿವೆ. ಎಲ್ಲಕ್ಕಿಂತ ಹೆಚ್ಚು (ಎಂಟು) ಇಂತಹ ಸಂಸ್ಥೆಗಳನ್ನು ದೆಹಲಿ ಹೊಂದಿದೆ.
“ಯುಜಿಸಿ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿ ಹಲವಾರು ಸಂಸ್ಥೆಗಳು ಪದವಿಗಳನ್ನು ನೀಡುತ್ತಿರುವುದು ಯುಜಿಸಿ ಗಮನಕ್ಕೆ ಬಂದಿದೆ. ಅಂತಹ ವಿಶ್ವವಿದ್ಯಾನಿಲಯಗಳು ನೀಡುವ ಪದವಿಗಳು ಉನ್ನತ ಶಿಕ್ಷಣ ಅಥವಾ ಉದ್ಯೋಗದ ಉದ್ದೇಶಕ್ಕಾಗಿ ಮಾನ್ಯತೆ ಹೊಂದಿರುವುದಿಲ್ಲ. ಈ ವಿಶ್ವವಿದ್ಯಾನಿಲಯಗಳು ಯಾವುದೇ ಪದವಿಯನ್ನು ನೀಡಲು ಅಧಿಕಾರ ಹೊಂದಿಲ್ಲ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ಸೊಸೆಯ ಶಿಕ್ಷಣಕ್ಕೆ ರೂ. 32 ಲಕ್ಷ ಖರ್ಚು ಮಾಡಿದ ಮಾವ; ಕೆನಡಾಗೆ ಓದಲೆಂದು ಹೋದ ಸೊಸೆ ಮಾಡಿದ್ದೇನು ಗೊತ್ತಾ?
ಮಹಾರಾಷ್ಟ್ರ, ಪುದುಚೇರಿ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿಯೂ ನಕಲಿ ವಿಶ್ವವಿದ್ಯಾಲಯಗಳಿವೆ ಎಂದು ಯುಜಿಸಿ ಹೇಳಿದೆ.
ಯುಜಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಪಟ್ಟಿ ಲಭ್ಯವಿದೆ
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Thu, 3 August 23