ಪ್ರಾಡಕ್ಟ್ ಮ್ಯಾನೇಜ್ಮೆಂಟ್ ವೃತ್ತಿಪರ ಪ್ರಮಾಣೀಕರಣ ಕೋರ್ಸ್ ಪ್ರಾರಂಭಿಸಿದ ಐಐಟಿ ರೂರ್ಕಿ
ಐದು ತಿಂಗಳ ಅವಧಿಯ ಕಾರ್ಯಕ್ರಮದ ಶುಲ್ಕ ರೂ 1,40,000 + GST. ಇದು ನವೆಂಬರ್ 11 ರಿಂದ ಪ್ರಾರಂಭವಾಗುತ್ತದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ರೂರ್ಕಿಯು ಪ್ರಾಡಕ್ಟ್ ನಿರ್ವಹಣೆಯಲ್ಲಿ (Product Management) ನವೀನ ವೃತ್ತಿಪರ ಪ್ರಮಾಣೀಕರಣ ಕೋರ್ಸ್ ಅನ್ನು ಪ್ರಾರಂಭಿಸಲು ಇಮಾರ್ಟಿಕಸ್ ಲರ್ನಿಂಗ್‌ನೊಂದಿಗೆ ಕೈಜೋಡಿಸಿದೆ. ಈ ಪ್ರೋಗ್ರಾಂ ವೃತ್ತಿಯಲ್ಲಿರುವ ಪ್ರಾಡಕ್ಟ್ ಮಾಲೀಕರು ಮತ್ತು ಮಹತ್ವಾಕಾಂಕ್ಷಿ ವೃತ್ತಿಪರರ ಕೌಶಲ್ಯಾಭಿವೃದ್ದಿಗೆ ಮತ್ತು ಸಮಗ್ರ ಕಲಿಕೆಯೊಂದಿಗೆ ವೃತ್ತಿಪರರಿಗೆ ಪ್ರಾಡಕ್ಟ್ ನಿರ್ವಹಣೆಯ ಬಗ್ಗೆ ಹೆಚ್ಚಿನ ಜ್ಞಾನವನ್ನು ನೀಡುವ ಗುರಿಯನ್ನು ಹೊಂದಿದೆ.
IIT-ರೂರ್ಕಿ ವಿನ್ಯಾಸಗೊಳಿಸಿದ ಈ ಕೋರ್ಸ್ ಆನ್‌ಲೈನ್ ತರಗತಿಗಳು, ಲೈವ್ ಸೆಷನ್‌ಗಳು ಮತ್ತು ಆನ್-ಕ್ಯಾಂಪಸ್ ತರಗತಿಗಳ ಮಿಶ್ರಣ ಕಲಿಕೆಯ ಅನುಭವವನ್ನು ನೀಡುತ್ತದೆ. IIT ರೂರ್ಕಿಯ ಹೆಸರಾಂತ ಅಧ್ಯಾಪಕರು ಮತ್ತು ಉದ್ಯಮ ತಜ್ಞರು ಕೋರ್ಸ್‌ಗಳನ್ನು ಮುನ್ನಡೆಸುತ್ತಾರೆ, ಭಾಗವಹಿಸುವವರಿಗೆ ಸಮಗ್ರ ಕಲಿಕೆಯ ಅನುಭವವನ್ನು ಒದಗಿಸುತ್ತಾರೆ.
ವಿವಿಧ ರೀತಿಯ ಕೌಶಲ್ಯಗಳನ್ನು ಒಳಗೊಂಡಿರುವ ಪಠ್ಯಕ್ರಮವು ಮಾರ್ಗಸೂಚಿ ರಚನೆ, ಬೆಳವಣಿಗೆಯ ತಂತ್ರಗಳು, ವಿಶ್ಲೇಷಣೆಗಳು ಮತ್ತು ಇತರ ಅತ್ಯಗತ್ಯ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಸ್ವಂತ ಪ್ರಾಡಕ್ಟ್ಗಳನ್ನು ರಚಿಸುವ ಮೂಲಕ, ಪ್ರಾಯೋಗಿಕ ಒಳನೋಟಗಳನ್ನು ಮತ್ತು ಪ್ರಾಡಕ್ಟ್ ಸುಧಾರಣೆಯಲ್ಲಿ ತಮ್ಮ ಕಲಿಕೆಯನ್ನು ಅನ್ವಯಿಸಲು ಅವಕಾಶವನ್ನು ಹೊಂದಿರುತ್ತಾರೆ. ತಮ್ಮ ನೆಚ್ಚಿನ ಪ್ರಾಡಕ್ಟ್ ಮತ್ತು ನಾವೀನ್ಯ ಬಗ್ಗೆ ಹೆಚ್ಚು ಗಮನ ಹರಿಸುವ ಮೂಲಕ ಅದರ ಮೇಲಿನ ಹೂಡಿಕೆಯ ಮತ್ತು ಲಾಭವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರಗಳನ್ನು ಈ ಕೋರ್ಸ್ ನೀಡುತ್ತದೆ.
ಐದು ತಿಂಗಳ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಭಾಗವಹಿಸುವವರಿಗೆ CEC, IIT ರೂರ್ಕಿಯಿಂದ ಪ್ರಮಾಣೀಕರಣವನ್ನು ನೀಡಲಾಗುತ್ತದೆ ಜೊತೆಗೆ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ.
ಕಾರ್ಯಕ್ರಮದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಡಿಪ್ಲೊಮಾ (10+2+3) ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ಕೋರ್ಸ್ ನವೆಂಬರ್ 11 ರಂದು ಪ್ರಾರಂಭವಾಗುತ್ತದೆ ಮತ್ತು ಪ್ರವೇಶವು 50 ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ.
ಉತ್ಪನ್ನ ನಿರ್ವಾಹಕರು ಮತ್ತು ತಮ್ಮ ವೃತ್ತಿಜೀವನವನ್ನು ಉನ್ನತೀಕರಿಸಲು ಬಯಸುವ ವೃತ್ತಿಪರರು imarticus.org/professional-certification-program-in-product-management-iit-roorkee ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
ಐಐಟಿ ರೂರ್ಕಿ ಮತ್ತು ಇಮಾರ್ಟಿಕಸ್ ಲರ್ನಿಂಗ್ ನಡುವಿನ ಈ ಸಹಯೋಗವು ಸಮರ್ಥ ಪ್ರಾಡಕ್ಟ್ ನಿರ್ವಾಹಕರನ್ನು ಪ್ರೋತ್ಸಾಹಿಸುವುದರ ಜೊತೆಗೆ ಪ್ರಾಡಕ್ಟ್ ನಿರ್ವಹಣಾ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿ ಹೊರ ಹೊಮ್ಮಿದೆ.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Thu, 3 August 23