Degree College Reopen: ಪದವಿ ಕಾಲೇಜು ಆರಂಭಕ್ಕೆ ಯುಜಿಸಿ ಮಾರ್ಗಸೂಚಿ; ಸೆಪ್ಟೆಂಬರ್ 30ರ ಒಳಗೆ ದಾಖಲಾತಿ, ಅಕ್ಟೋಬರ್ 1ರಿಂದ ತರಗತಿ

| Updated By: Skanda

Updated on: Jul 17, 2021 | 8:39 AM

ಸೆಪ್ಟೆಂಬರ್ ತಿಂಗಳ 30ನೇ ತಾರೀಖಿನ ಒಳಗೆ 2021-22ನೇ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಸಿ, ಅಕ್ಟೋಬರ್​ 1ರಿಂದ ಕಾಲೇಜು ಆರಂಭಿಸಿ ಎಂದು ಯುಜಿಸಿ ಸೂಚನೆ ನೀಡಿದೆ.

Degree College Reopen: ಪದವಿ ಕಾಲೇಜು ಆರಂಭಕ್ಕೆ ಯುಜಿಸಿ ಮಾರ್ಗಸೂಚಿ; ಸೆಪ್ಟೆಂಬರ್ 30ರ ಒಳಗೆ ದಾಖಲಾತಿ, ಅಕ್ಟೋಬರ್ 1ರಿಂದ ತರಗತಿ
ಸಾಂಕೇತಿಕ ಚಿತ್ರ
Follow us on

ದೆಹಲಿ: ಪದವಿ ಕಾಲೇಜುಗಳ ಆರಂಭದ ಬಗ್ಗೆ ಇದ್ದ ಗೊಂದಲಕ್ಕೆ ಯುಜಿಸಿ (UGC) ತೆರೆ ಎಳೆದಿದ್ದು, ಅಕ್ಟೋಬರ್ 1ರಿಂದ ಪದವಿ ಕಾಲೇಜುಗಳನ್ನು (Degree College) ತೆರೆಯಲು ಸೂಚನೆ ನೀಡಿದೆ. ಈ ಬಗ್ಗೆ ಮಾರ್ಗಸೂಚಿ (UGC Guidelines) ಹೊರಡಿಸಿರುವ ಯುಜಿಸಿ, ಎಲ್ಲ ವಿಶ್ವವಿದ್ಯಾಲಯಗಳಿಗೆ, ಕಾಲೇಜುಗಳಿಗೆ ಮಾಹಿತಿ ನೀಡಿದೆ. ಸೆಪ್ಟೆಂಬರ್ ತಿಂಗಳ 30ನೇ ತಾರೀಖಿನ ಒಳಗೆ 2021-22ನೇ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಸಿ, ಅಕ್ಟೋಬರ್​ 1ರಿಂದ ಕಾಲೇಜು ಆರಂಭಿಸಿ (Degree College Reopen) ಎಂದು ಸೂಚನೆ ನೀಡಿದೆ.

ಈ ಬಗ್ಗೆ ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಮಾತನಾಡಿದ್ದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ, ಅಗಸ್ಟ್ 1 ರಿಂದ ಪ್ರಥಮ ವರ್ಷದ ಪದವಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್ 1 ರಿಂದ ಪ್ರಥಮ ವರ್ಷದ ಪದವಿ‌ ವಿದ್ಯಾರ್ಥಿಗಳಿಗೆ ತರಗತಿ (Degree College Classes) ಆರಂಭವಾಗಲಿದೆ ಎಂದು ತಿಳಿಸಿದ್ದರು. ಈಗಾಗಲೇ ಕೆಲವು ವಿಶ್ವವಿದ್ಯಾಲಯಗಳು ಬೆಸ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಿದ್ದು, ಪರೀಕ್ಷೆ ನಡೆಸದ ಬೆಂಗಳೂರು ವಿವಿ, ಗುಲ್ಬರ್ಗ ವಿವಿ, ಕರ್ನಾಟಕ ವಿವಿಗಳಿಗೆ ಅಗಸ್ಟ್ 15 ರೊಳಗೆ ಬಾಕಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಪದವಿಯ ಸಮ ಸೆಮಿಸ್ಟರ್ ಪರೀಕ್ಷೆಗಳು ಅಕ್ಟೋಬರ್ 15 ರೊಳಗೆ ನಡೆಸಲು ಸೂಚನೆ ನೀಡಲಾಗಿದೆ. ಸದ್ಯ ವರ್ಚುವಲ್ ತರಗತಿಗಳನ್ನು ನಡೆಸಲಾಗುತ್ತಿದ್ದು, ಸಮ ಸೆಮಿಸ್ಟರ್ ತರಗತಿ ಮೇ ತಿಂಗಳಿಂದಲೇ ಆರಂಭವಾಗಿದೆ ಎಂದು ಅವರು ಹೇಳಿದ್ದರು.

ಜುಲೈ 26 ರಿಂದ 28ರವರೆಗೆ ಡಿಪ್ಲೊಮಾ ಪ್ರಾಕ್ಟಿಕಲ್ ಪರೀಕ್ಷೆ ನಡೆಯಲಿದ್ದು, ಅಗಸ್ಟ್ 2 ರಿಂದ ಅಗಸ್ಟ್ 21ರವರೆಗೆ ಥಿಯರಿ ಡಿಪ್ಲೊಮಾ ಪರೀಕ್ಷೆ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ಡಾ.ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದ್ದರು. ಇದೀಗ ಯುಜಿಸಿ ಅಧಿಕೃತವಾಗಿ ಸೂಚನೆ ನೀಡಿದ್ದು, ಅಕ್ಟೋಬರ್ 1 ರಿಂದ ಪದವಿ ಕಾಲೇಜಿನ ತರಗತಿಗಳು ಆರಂಭವಾಗಲಿವೆ. ಕರ್ನಾಟಕದಲ್ಲಿ ಜುಲೈ 20ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಲಭ್ಯವಾಗಲಿದ್ದು, ಮುಂದಿನ ವಿದ್ಯಾಭ್ಯಾಸಕ್ಕಾಗಿ ಪದವಿ ತರಗತಿಗಳಿಗೆ ಸೇರಲು ಅನುಕೂಲವಾಗಲಿದೆ.

ಇದನ್ನೂ ಓದಿ:
Degree College Classes: ಅಕ್ಟೋಬರ್1 ರಿಂದ ಪ್ರಥಮ ವರ್ಷದ ಪದವಿ‌ ವಿದ್ಯಾರ್ಥಿಗಳಿಗೆ ತರಗತಿ ಆರಂಭ: ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ಮಾಹಿತಿ

Published On - 8:39 am, Sat, 17 July 21